Home District “ಗಂಡ ಸತ್ತು ತಿಂಗಳು ಆಗಿಲ್ಲ, ಆಗಲೆ ರಾಜಕೀಯಕ್ಕೆ ಬಂದಿದ್ದಾರೆ”! ಸುಮಲತಾ ವಿರುದ್ಧ ನಾಲಗೆ ಹರಿಬಿಟ್ಟ ಸಚಿವ...

“ಗಂಡ ಸತ್ತು ತಿಂಗಳು ಆಗಿಲ್ಲ, ಆಗಲೆ ರಾಜಕೀಯಕ್ಕೆ ಬಂದಿದ್ದಾರೆ”! ಸುಮಲತಾ ವಿರುದ್ಧ ನಾಲಗೆ ಹರಿಬಿಟ್ಟ ಸಚಿವ H.D.ರೇವಣ್ಣ!

409
0
SHARE

ಸುಮಲತಾ ರಂಗಪ್ರವೇಶದಿಂದ ಮಂಡ್ಯ ಲೋಕಸಭಾ ಕ್ಷೇತ್ರ ರಂಗೇರಿದ್ದು, ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ನಿನ್ನೆ ಮದ್ದೂರಿನಲ್ಲಿ ಸಚಿವ ಡಿಸಿ ತಮ್ಮಣ್ಣ, ಸುಮಲತಾ ವಿರುದ್ಧ ಹರಿಹಾಯ್ದಿದ್ದರು..

ಮನೆಗೆ ಬಂದ ಎಷ್ಟು ಜನಕ್ಕೆ ಕುಡಿಯಲು ನೀರು ಕೊಟ್ಟಿದ್ದಾರೆ. ಅಂದು ಜನರ ಕಷ್ಟ-ಸುಖಗಳಿಗೆ ಸ್ಪಂದಿಸದವರು ಇವತ್ತು ಅಂಬರೀಶ್‌ ಹೆಸರೇಳಿಕೊಂಡು ಬಂದು, ನಾನೇನೋ ಉದ್ಧಾರ ಮಾಡ್ತೀನಿ ಅಂತಿದ್ದಾರೆ ಎಂದು ಕಿಡಿಕಾರಿದ್ದರು..

ಇಂದು ಸುಮಲತಾ ವಿರುದ್ಧ ಕಿಡಿಕಾರೋ ಸರದಿ ಸಚಿವ ಹೆಚ್ ಡಿ ರೇವಣ್ಣ ಅವರದ್ದು… ದೆಹಲಿಯಲ್ಲಿ ಮಾತನಾಡಿದ ರೇವಣ್ಣ ಅವಮಾನಕಾರಿ ಹೇಳಿಕೆ ನೀಡಿದ್ದಾರೆ…. ಗಂಡ ಸತ್ತು ತಿಂಗಳಾಗಿಲ್ಲ, ಆಗಲೇ ಸುಮಲತಾ ಅಂಬರೀಷ್ ರಾಜಕೀಯಕ್ಕೆ ಬಂದಿದ್ದಾರೆ ಎಂದು ಸಚಿವ ಎಚ್.ಡಿ ರೇವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾತು ಅವರ ಸಂಸ್ಕಾರ ತೋರುತ್ತದೆ:ಸಚಿವರಾದ ತಮ್ಮಣ್ಣ, ರೇವಣ್ಣ ಮಾತಿಗೆ ಸುಮಲತಾ ತಿರುಗೇಟು ನೀಡಿದ್ದಾರೆ… ಯಾರು ಏನೇ ಮಾತನಾಡಿದ್ರೂ ತಾವು ಅದಕ್ಕೆ ಪ್ರತಿಕ್ರಿಯೆ ನೀಡೋದಿಲ್ಲ.. ರೇವಣ್ಣ ಅವರ ಹೇಳಿಕೆಯಿಂದ ಅವರ ಸಂಸ್ಕಾರ ತಿಳಿಯುತ್ತದೆ..

ಜೆಡಿಎಸ್ ನಾಯಕರ ಮಾತುಗಳಿಂದ ಅವರಿಗೆ ಹಿನ್ನಡೆಯೇ ಹೊರತು ತಮಗಲ್ಲ ಎಂದು ಸುಮಲತಾ ಹೇಳಿದ್ದಾರೆ…ಇನ್ನೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿರೋ ಸುಮಲತಾ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದ್ರು…

 

LEAVE A REPLY

Please enter your comment!
Please enter your name here