ಆಕೆಗೆ ಮದುವೆಯಾಗಿ ಎರಡೂವರೆ ವರ್ಷವಾಗಿತ್ತು. ಒಂದೂವರೆ ವರ್ಷದ ಮಗುವೂ ಕೂಡ ಇದೆ. ಆದ್ರೆ, ನಿರಂತರ ಪೋನ್ ನಲ್ಲಿ ಮುಳುಗುತ್ತಿದ್ದ ಆಕೆಗೆ ಇನ್ಸ್ಟ್ರಾಗ್ರಾಂ ನಲ್ಲಿ ಯುವಕನೋರ್ವ ಪರಿಚಿತನಾಗಿದ್ದ. ಪರಿಚಯ ಸಲುಗೆಗೆ ಬೆಳೆದು, ಸಲುಗೆ ಪ್ರೇಮಕ್ಕೆ ತಿರುಗಿತ್ತು. ಕೊನೆಗೆ ಹೊಸ್ತಿಲು ದಾಟಿದ್ದಕ್ಕೆ ಆಕೆ ಕಂಡಿದ್ದು ನರಕ ದರ್ಶನ.
ಸಾಮಾಜಿಕ ತಾಣಗಳು ಅದೆಷ್ಟು ಸದುಪಯೋಗ ಆಗ್ತಿದಿಯೋ ಇಲ್ವೋ.. ಆದ್ರೆ ದುರ್ಬಳಕೆ ಆಗ್ತಿರೋದಂತೂ ಸತ್ಯ. ಇದಕ್ಕೊಂದು ಇನ್ ಸ್ಟಾಗ್ರಾಂ ನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ವಿವಾಹಿತೆಯೊಬ್ಬಳಿಗೆ ನರಕ ದರ್ಶನ ತೋರಿದ ಘಟನೆಗೆಯೇ ಸಾಕ್ಷಿ.ಗಂಡ ಮನೆ ಮಕ್ಕಳು ಅಂತ ಇರ್ಬೇಕಿದ್ದ ಅಮೃತ ಎಂಬ ಮಹಿಳೆಗೆ ಇನ್ ಸ್ಟಾಗ್ರಾಂ ನಲ್ಲಿ ಪರಿಚಿತನಾದವನೇ ಈ ಆದರ್ಶ ಎಂಬಾತ. ಪರಿಚಿತವಾಗಿದ್ದೇ ತಡ, ಪರಿಚಯ ಪ್ರೀತಿಗೆ ತಿರುಗಿದೆ. ಬಣ್ಣ ಬಣ್ಣದ ಮಾತುಗಳಿಂದ ಆಕೆಯನ್ನು ಪಟಾಯ್ಸಿದ್ದಾನೆ. ನಿನ್ನನ್ನು ಪ್ರೀತಿಸ್ತೀನಿ, ನಿನ್ನನ್ನು ನೋಡ್ಬೇಕು,, ಯಾವಾಗ ಸಿಗುಯಾ ಎಲ್ಲಿ ಸಿಗ್ತೀಯಾ ಅಂತ ಪದೇ ಪದೇ ಕೇಳಿದ್ದಾನೆ. ಆತನ ಮಾತು ನಂಬಿದ ಅಮೃತಾ ತಾನೊಬ್ಬ ವಿವಾಹಿತೆ, ಗಂಡ ಮನೆ ಮಕ್ಕಳು ಇದ್ದಾರೆ ಅನ್ನೋದನ್ನೂ ಮರೆತು ಹೊಸ್ತಿಲು ದಾಟಿದ್ದಾಳೆ.
ಆಕೆಯನ್ನು ಪ್ರಿಯಕರ ದೇವನಹಳ್ಳಿಯ ರಂಗನಾಥಪುರಕ್ಕೆ ಕರೆಸಿಕೊಂಡಿದ್ದಾನೆ.
ಅದೇನ್ ನಡೀತೋ ಗೊತ್ತಿಲ್ಲ. ಪ್ರಿಯಕರನೇ ಅಮೃತಾಳನ್ನು 100 ಅಡಿ ಪಾಳು ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾನೆ.ಇತ್ತ ಶನಿವಾರದಂದು ನಾಪತ್ತೆಯಾಗಿದ್ದ ಅಮೃತಳಿಗಾಗಿ ಹುಡುಕದ ಸ್ಥಳವಿಲ್ಲ. ಆದ್ರೆ, ಅಮೃತ ಮಾತ್ರ ಪತ್ತೆಯಾಗಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ಬಾವಿಯಲ್ಲೇ ಬಿದ್ದಿದ್ದ ಅಮೃತಾ, ಮೇಲೆ ಬರಲು ಆಗದೆ ಪರದಾಡಿದಳು. ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡಿದ್ದಾಳೆ. ಬಾವಿಯಿಂದ ನಿರಂತರ ಕೂಗಾಟದ ಶಬ್ದ ಕೇಳಿ ಅಕ್ಕಪಕ್ಕದ ತೋಟದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಜಯಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಬಾವಿಯಲ್ಲಿ ಬಿದ್ದಿದ್ದ ಅಮೃತಾಳನ್ನು ರಕ್ಷಣೆ ಮಾಡಿದ್ದಾರೆ.
ಇನ್ನೂ ಅಸ್ವಸ್ಥವಾಗಿರುವ ಅಮೃತಾಳನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾವಿಗೆ ತಳ್ಳಿದ್ದ ಆದರ್ಶನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲಿ ಕಟ್ಟಿಕೊಂಡ ಗಂಡ, ಮಗುವನ್ನ ಬಿಟ್ಟು ಬಂದು ಪ್ರಿಯಕರನ ಜೊತೆ ಹೋದ ಅಮೃತಾ ಳಿಗೆ ಸಿಕ್ಕಿದ್ದು ನರಕ ದರ್ಶನ.