Home District ಗಣಿನಾಡು ಬಳ್ಳಾರಿ ಕೋಟೆಯಲ್ಲಿ ಡಿಕೆಶಿ ಸಿಂಹ ಘರ್ಜನೆ..! ಕೈ- ತೆನೆ ಕಾರ್ಯಕರ್ತರ ಸಮಾವೇಶದಲ್ಲಿ ಭಿನ್ನಮತೀಯರಿಗೆ ವಾರ್ನಿಂಗ್..!

ಗಣಿನಾಡು ಬಳ್ಳಾರಿ ಕೋಟೆಯಲ್ಲಿ ಡಿಕೆಶಿ ಸಿಂಹ ಘರ್ಜನೆ..! ಕೈ- ತೆನೆ ಕಾರ್ಯಕರ್ತರ ಸಮಾವೇಶದಲ್ಲಿ ಭಿನ್ನಮತೀಯರಿಗೆ ವಾರ್ನಿಂಗ್..!

1162
0
SHARE

ಕಾಂಗ್ರೆಸ್ ನಲ್ಲಿ ಹೆಣಹೋರೊನು ನಾನೇ, ಪಲ್ಲಕ್ಕಿ ಹೊತ್ತು ತಿರುಗೋನು ನಾನೇ, ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದ್ರೇ ನಿಮ್ಮ ಆಶೀರ್ವಾದದಿಂದ ನಾನಿಲ್ಲಿಯೇ ಇದ್ದೇನೆ ಎಂದು ಡಿಕೆಶಿ ಹೇಳಿದ್ರೇ, ಇಷ್ಟ ಇದ್ರೇ, ಪಕ್ಷದಲ್ಲಿರಿ ಇಲ್ಲವಾದ್ರೇ ಹೊರಗೆ ಹೋಗಬಹುದು ಪಕ್ಷ ದ್ರೋಹ ಮಾಡಬೇಡಿ ಎಂದು ಅನಿಲ್ ಲಾಡ್ ಹೇಳಿದ್ರು.

ಈ ರೀತಿ ಒಂದರ ಹಿಂದೆ ಒಂದು ಬಾಣದಂತೆ ಮಾತನಾಡಿದ್ದು, ಮತ್ಯಾರು ಅಲ್ಲ. ಡಿಕೆ.ಶಿವಕುಮಾರ್ ಮತ್ತವರ ತಂಡ.ಉಪಚುನಾವಣೆ ಗೆದ್ದ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಇವತ್ತು ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಮಾಡಿಕೊಂಡಿತ್ತು. ಸಮ್ಮಿಶ್ರ ಸರ್ಕಾರದ ಅಭಿವೃ ದ್ಧಿಯನ್ನು ಹೇಳುತ್ತ ಶ್ರೀರಾಮುಲು ಮತ್ತು ಯಡಿಯೂರಪ್ಪ ಅವರಿಗೆ ಡಿಕೆಶಿ ಟಾಂಗ್ ನೀಡುತ್ತಲೇ ಹೋದ್ರು.

ನನ್ನನ್ನು ಜೈಲಿಗೆ ಕಳುಹಿಸುವ ಆಸೆ ಶ್ರೀರಾಮುಲು ಅಣ್ಣನಿಗ ಇತ್ತು ಆದ್ರೇ, ಅವರ ಆಶೀರ್ವಾದದೊಂದಿಗೆ ನಾನಿಲ್ಲಿಯೇ ಇದ್ದೇನೆ ಎಂದ್ರು.ಅಲ್ಲದೇ ಶಾಸಕ ನಾಗೇಂದ್ರ ನಮ್ಮ ಹುಡುಗ..ಕೆಲವೊಮ್ಮೆ ಮನುಷ್ಯ ತಪ್ಪು ಮಾಡೊದು ಸಹಜ ಆವರನ್ನು ನಾನೇ ಭೇಟಿಯಾಗ್ತೇನೆ. ಆದ್ರೇ, ಕಾಂಗ್ರೆಸ್ನಲ್ಲಿ ನಾಗೇಂದ್ರ ಅವರ ಪಲ್ಲಕ್ಕಿ ಹೊರೋದು ನಾನೇ ಹೆಣ ಹೋರೋದು ನಾನೇ ಎನ್ನುವ ಮೂಲಕ ನೇರವಾಗಿ ವೇದಿ ಕೆ ಮೇಲೆ ಎಚ್ಚರಿಕೆ ನೀಡಿದ್ರು.

ಮತ್ತೊಮ್ಮೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದು ಎಚ್ಚರಿಕೆ ಅಲ್ಲ ಅಣ್ಣತಮ್ಮಂದಿರು ಅಂದ ಮೇಲೆ ಭಿನ್ನಾಭಿಪ್ರಾಯ ಇರುತ್ತದೆ. ಅವರ ಸಹೋದರ ಬಿಜೆಪಿಗೆ ಹೋದ್ರೇ, ಅವರೇನು ಮಾಡ್ತಾರೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದ್ರು, ಅಲ್ಲದೇ ನಾನು ಪಕ್ಷದ ಶಿಸ್ತಿನ ಸಿಪಾಯಿ, ಮೋದಿ ವಿರುದ್ಧ ಸ್ಪರ್ಧೆ ಮಾಡುವಂತೆ ಸೂಚಿಸಿದ್ರೇ, ಸ್ಪರ್ಧೆ ಮಾಡುತ್ತೇನೆ ಎಂದರು.

ಇನ್ನೂ ಕಾರ್ಯಕ್ರಮದದ್ದೂಕ್ಕೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕರು ಕಾರ್ಯಕರ್ತರನ್ನು ಹುರಿದುಂಬಿಸಿದ್ರು, ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಪುಲ್ವಾಮ ಮತ್ತು ಏರ್ಸ್ಟ್ರೈಕ್ ದಾಳಿಯನ್ನು ಮೋದಿ ಚುನಾವಣೆಗೆ ಬಳಸಿಕೊಳ್ತಿದೆ ಎಂದು ಆರೋಪಿಸಿದ್ರು.

ಚುನಾವಣೆ ಘೋಷಣೆಯಾದ ಬಳಿಕ ನಡೆದ ಮೊದಲ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವ ಡಿ.ಕೆ.ಶಿವಕುಮಾರ ಅಬ್ಬರಿಸಿ ಬೊಬ್ಬಿರಿದ್ದಾರೆ. ಅಲ್ಲದೇ ಉಪಚು ನಾವಣೆ ಗೆಲವು ಕೂಡ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ.

 

LEAVE A REPLY

Please enter your comment!
Please enter your name here