Home Crime ಗರ್ಭಿಣಿ ಎಂದೂ ನೋಡದೆ ತನ್ನ ಕಾಮ ಪ್ರತಾಪ ತೋರಿಸಿದ ಸಮಾಜ ಕಾಯುವ ಪೊಲೀಸ್..?! ಅತಿಥಿ ಸತ್ಕಾರ...

ಗರ್ಭಿಣಿ ಎಂದೂ ನೋಡದೆ ತನ್ನ ಕಾಮ ಪ್ರತಾಪ ತೋರಿಸಿದ ಸಮಾಜ ಕಾಯುವ ಪೊಲೀಸ್..?! ಅತಿಥಿ ಸತ್ಕಾರ ಮಾಡಿದ ಗರ್ಭಿಣಿ ಮೇಲೆ ಅತ್ಯಾಚಾರ ಯತ್ನ..?!

1007
0
SHARE

ಆತ ಸಮಾಜ ಕಾಯುವ ಪೊಲೀಸ್, ನೀರು ಕೇಳುವ ನೇಪದಲ್ಲಿ ಗರ್ಬೀಣಿ ಮಹಿಳೆಯ ಮೇಲೆ ತನ್ನ ಕಾಮ ಪ್ರತಾಪ ತೋರಿಸಲು ಹೋಗಿ, ಹಿಗ್ಗಾ ಮುಗ್ಗಾ ಒದೆ ತಿಂದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಕಾಮುಕರ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ಕಳಹಿಸಬೇಕಾದ ಆ ಪೊಲೀಸ್ ಅಧಿಕಾರಿಯೇ ಕಾಮುಕ ನಾದ ಕಥೆಯಿದು. ಪೊಲಿಸರೇ ತಲೆ ತಗ್ಗಿಸುವಂತೆ ಮಾಡಿದ್ದಾನೆ ಆ ಮಹಾಶಯ ಪೊಲೀಸಪ್ಪ..

ಕಾಮಕ್ಕೆ ಕಣ್ಣಿಲ್ಲ ಎಂಬುದು ಮತ್ತೊಮ್ಮ ಸಾಬೀತಾಗಿದೆ. ಹೌದು ಕಾಮ ಎನ್ನೋದು ಮನಸ್ಸಲ್ಲಿ ಹುಟ್ಟಿದ್ರೆ ಮುಗೀತು ಕಣ್ಣ ಮುಂದೆ ಯಾರಿದ್ದಾರೆ ಯಾರಿಲ್ಲ ಎಂಬುದು ತಿಳಿಯುವುದಿಲ್ಲ, ಎಂಥವರ ಮೇಲೂ ಅತ್ಯಾಚಾರ ಮಾಡೋ ಮಟ್ಟಿಗೆ ಮುಂದಾಗಿರುತ್ತಾರೆ, ಅದೇ ರೀತಿ ಇಲ್ಲೊಬ್ಬ ಪೊಲೀಸ್ ಗರ್ಬಿಣಿ ಎಂದು ನೋಡದೇ ಮಹಿಳೆ ಮೇಲೆ ಎರಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಹೌದು ಇಂತಹದೊಂದು ಘಟನೆ ನಡೆದಿರುವುದು ಗಣಿನಾಡು ಬಳ್ಳಾರಿಯಲ್ಲಿ, ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸಪ್ಪನೇ ಈ ಕೃತ್ಯ ಎಸಗಿರುವುದು ಮತ್ತೊಂದು ದುರಾದೃಷ್ಟಕರವಾಗಿದೆ, ಮೊಹರಂ ರಜೆಗೆಂದು ಬಂದಿದ್ದ ಈ ಮರಿಸ್ಲಾಮಿ ಎಂಬ ಪೊಲೀಸ್ ಶಿವಮೊಗ್ಗದ ಕೆಎಸ್ಆರ್ ಪಿ ಬಟಾಲಿಯನ್‌ನಲ್ಲಿ ಜಮೇದಾರನಾಗಿ ಕೆಲಸ ಮಾಡುತ್ತಿದ್ದಾನೆ,

ರಜೆ ಹೇಳಿ ತನ್ನೂರಿಗೆ ಬಂದಿದ್ದ ಈತನಿಗೆ ಈ ಮೊದಲೇ ಪರಿಚಯವಿರುವ ಹಿನ್ನೆಲೆ ಪಕ್ಕದ ಮನೆಯವರು ಊಟಕ್ಕೆ ಕರೆದಿದ್ದಾರೆ. ಮನೆಯಲ್ಲಿ ಎಲ್ಲರೂ ಇದ್ದಾಗ ಊಟ ಮಾಡಿ ಹೊರ ನಡೆದ ಭೂಪ ನಂತರ ಮನೆಯಲ್ಲಿ ಯಾರು ಇಲ್ಲದ ವೇಳೆ ನೀರು ಕೇಳುವ ನೆಪದಲ್ಲಿ ಬಂದು ಗರ್ಭೀಣಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೂಗಾಡಿದ ಪರಿಣಾಮ ಮನೆಯಿಂದ ಓಡಿ ಹೋಗಿದ್ದಾನೆ.

ನಂತರ ಸಿಕ್ಕ ಕಾಮುಕನಿಗೆ ಸ್ಥಳೀಯರು ಸಕತ್ ಗೂಸಾ ನೀಡಿ ಬಳ್ಳಾರಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.ಸದ್ಯ ಬಳ್ಳಾರಿಯ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಕಾಮುಕ ಅಧಿಕಾರಿ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಇನ್ನೂ ಈ ಭೂಪ ತನ್ನ ಮೇಲೆ ಅನಾವಶ್ಯಕವಾಗಿ ಹಲ್ಲೆ ಮಾಡಿದ್ದಾರೆಂದು ಬ್ರೂಸ್ ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾನೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರೋಪ ಪ್ರತ್ಯಾರೋಪದ ಎರಡು ಪ್ರಕರಣಗಳು ಇದೀಗ ದಾಖಲಾಗಿದ್ದು, ನಿಷ್ಪಕ್ಷಪಾತದಿಂದ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಕೊಡಿಸುವುದಾಗಿ ಹೇಳಿದ್ದಾರೆ.ಒಟ್ಟಾರೇ ಕಾನೂನನ್ನು ಸಂರಕ್ಷಿಸಬೇಕಾದವರೇ ಈ ರೀತಿ ಕಾನೂನನ್ನು ಉಲ್ಲಂಘಿಸಿರುವುದು ದುರಾದೃಷ್ಠಕರ ವಿಚಾರವಾಗಿದೆ. ಅಲ್ಲದೇ ಇವರೊಬ್ಬರು ಮಾಡಿದ ಈ ದುಷ್ಕತ್ಯದಿಂದ ಇಡೀ ಪೊಲೀಸ್ ಸಮೂಹವೇ ತಲೆತಗ್ಗಿಸುವಂತಾ ಗಿರುವುದು ಸುಳ್ಳಲ್ಲ.

LEAVE A REPLY

Please enter your comment!
Please enter your name here