ಚೆನ್ನೈ: 52 ದಿನಗಳು MGM ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟದ ನಡುವೆಯೂ ಇಂದು ಎಸ್ ಪಿ ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದರು. ಸುದೀರ್ಘ ನಲವತ್ತು ವರ್ಷಗಳ ಕಾಲ ಭಾರತದ ೧೬ ಭಾಷೆಗಳಲ್ಲಿ ಸರಿಸುಮಾರು 45 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಗಾನ ಮಾಂತ್ರಿಕ ಸ್ವರ ನಿಲ್ಲಿಸಿದ್ದು ಕೋಟ್ಯಾಂತರ ಅಭಿಮಾನಿಗಳ ನೋವಿಗೆ ಕಾರಣವಾಯಿತು. SPB ಇನ್ನಿಲ್ಲ ಎಂಬ ಸುದ್ದಿ ಭಾರತದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ.
ಮೂಲತ: ಆಂಧ್ರಪ್ರದೇಶದ ನಲ್ಲೂರಿನವರಾದ ಬಾಲಸುಬ್ರಮಣ್ಯಂ ಕನ್ನಡದ “ನಕ್ಕರೆ ಅದೇ ಸ್ವರ್ಗ” ಎಂಬ ಚಿತ್ರದ ಮೂಲಕ ಹಾಡು ಆರಂಭಿಸಿದ ಬಾಲು ಇಲ್ಲಿಯವರೆಗೆ 16 ಭಾಷೆಗಳಲ್ಲಿ ತಮ್ಮ ಸುಮಧುರವಾದ ಕಂಠದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡ, ತಮಿಳು ,ತೆಲುಗು, ಮಲಯಾಳಂ, ಸೇರಿದಂತೆ ಭಾರತದ ಅಷ್ಟು ಭಾಷೆಗಳಲ್ಲಿ ಹಾಡಿದ ಏಕೈಕ ಗಾನ ಮಾಂತ್ರಿಕ. ಹಾಡುವುದರ ಜೊತೆಗೆ ನಟನೆಯಲ್ಲೂ ಸೈ ಎನಿಸಿಕೊಂಡ ಬಾಲಸುಬ್ರಹ್ಮಣ್ಯಂ ಬಹುಮುಖ ಪ್ರತಿಭೆ. ಪುತ್ರಿ ಪಲ್ಲವಿ, ಪುತ್ರ ಚರಣ್ ಹಾಗೂ ಪತ್ನಿಯನ್ನ ಅಗಲಿದ ಸುಬ್ರಹ್ಮಣ್ಯಂ ರವರಿಗೆ ಕೊನೆಗಳಿಗೆಯಲ್ಲಿ ಕೊರೋನಾ ನೆಗೆಟಿವ್ ಇತ್ತು. ಶಾಲಾ ದಿನಗಳಲ್ಲಿ ಉತ್ತಮ ವಿದ್ಯಾರ್ಥಿ ಎನಿಸಿಕೊಂಡಿದ್ದ ಬಾಲು.
ಇಂಜಿನಿಯರಿಂಗ್ ಓದಬೇಕೆಂಬ ಆಸೆ ಅವರಿಗೆ ಕೈಗೂಡಲಿಲ್ಲ. ಆದರೆ ಭಾರತದ ಸಂಗೀತ ಲೋಕ ಅವರಿಗೆ ಕೆಂಪು ಹಾಸಿಗೆಯನ್ನ ಹಾಕಿ ಬರಮಾಡಿಕೊಂಡಿತು. ಪದ್ಮಭೂಷಣ,ಡಾಕ್ಟರೇಟ್, ಪದ್ಮ ಶ್ರೀ ಸೇರಿದಂತೆ 4 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಭಾರತದ ಏಕೈಕ ಸಂಗೀತ ಕಲಾವಿದ. ಆಗಸ್ಟ್ ೫ದರಂದು ಕರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾದ ಬಾಲಸುಬ್ರಹ್ಮಣ್ಯಂ ಸತತ 52 ದಿನಗಳ ಸಾವು ಬದುಕಿನ ಹೋರಾಟದ ನಡುವೆ ಕೊನೆಉಸಿರೆಳೆದರು. ಅದ್ಭುತ ಹಾಡುಗಾರ ಗಾನ ಮಂತ್ರದಿಂದಲೇ ಭಾರತದ ಸಂಗೀತ ಲೋಕಕ್ಕೆ ದೊರೆಯಾಗಿ ಮೆರೆಯುತ್ತಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನೊಂದು ನೆನಪು ಮಾತ್ರ.