Home Cinema ಗಾಯದ ನೋವಿನ ನಡುವೆಯೂ ಕರ್ತವ್ಯ ಮೆರೆದ ದರ್ಶನ್..! ಬ್ಯಾಂಡೇಜ್ ತೆಗೆದು ಫೋಟೋಗ್ರಫಿ, ಪೋಟೋಸ್ ಸಿಕ್ಕಾಪಟ್ಟೆ ವೈರಲ್…

ಗಾಯದ ನೋವಿನ ನಡುವೆಯೂ ಕರ್ತವ್ಯ ಮೆರೆದ ದರ್ಶನ್..! ಬ್ಯಾಂಡೇಜ್ ತೆಗೆದು ಫೋಟೋಗ್ರಫಿ, ಪೋಟೋಸ್ ಸಿಕ್ಕಾಪಟ್ಟೆ ವೈರಲ್…

1316
0
SHARE

ದರ್ಶನ್. ಕನ್ನಡ ಚಿತ್ರರಂಗದ ಆರಡಿ ಕಟೌಟ್. ಅಪಘಾತದ ಬಳಿಕ..ಗಾಂಧಿನಗರದಿಂದ ದೂರವಿದ್ದ ದರ್ಶನ್, ಇದೀಗ ಮತ್ತೆ ಮೈ ಕೊಡವಿಕೊಂಡು ಎದ್ದು ನಿಂತಿದ್ದಾರೆ. ಯಸ್, ದರ್ಶನ್ ಮೊದಲಿನಂತೆ ಫಿಟ್ & ಫೈನ್ ಆಗಿದ್ದಾರೆ.ಅಸಲಿಗೆ, ದರ್ಶನ್ ಕಾರು ಅಪಘಾತಕ್ಕೀಡಾಗಿತ್ತಲ್ಲ. ಆಗ ಅಭಿಮಾನಿಗಳು ಕಂಗಾಲಾಗಿದ್ದರು. ವೈದ್ಯರು ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುವಂತೆನೂ ಅಂದು ಸೂಚಿಸಿದ್ದರು.

ಆಗ ದರ್ಶನ್ ದರ್ಶನ ಮಾಡಿದ್ದ ಅಭಿಮಾನಿಗಳು ಸಾರಥಿ ಮೊದಲಿನಂತೆ ಆಗಲು ತುಂಬಾ ಸಮಯ ಬೇಕಾಗುತ್ತೇ ಅಂಥನೇ ಭಾವಿಸಿದ್ದರು. ಆದ್ರೆ, ಅಭಿಮಾನಿಗಳನ್ನ ಇದೇ ಊಹೆಯನ್ನ ದರ್ಶನ್ ಸುಳ್ಳಾಗಿಸಿದ್ದಾರೆ. ದರ್ಶನ್ ರಿಕವರ್ ಆಗ್ತಿದ್ದಾರೆ. ಇದಕ್ಕೆ ಸಾಕ್ಷಿ ಅನ್ನುವಂತೀಗ ದರ್ಶನ್‌ಕೈಗೆ ಹಾಕಲಾಗಿದ್ದ ಬ್ಯಾಂಡೇಜ್ ತೆಗೆಯಲಾಗಿದೆ.ಹೌದು, ದರ್ಶನ್ ಕೈ ಬ್ಯಾಂಡೇಜ್ ಮುಕ್ತವಾಗಿದೆ. ಇದು, ಅಭಿಮಾನಿಗಳ ಸಂಭ್ರಮಕ್ಕೀಗ ಕಾರಣವಾಗಿದೆ.

ಮೊನ್ನೆ ಜ್ಯೂ, ದರ್ಶನ್ ಹುಟ್ಟುಹಬ್ಬದ ದಿನ ಬ್ಯಾಂಡೇಜ್‌ನಿಂದ ಮುಕ್ತಿ ಪಡೆದ ದರ್ಶನ್, ಪತ್ನಿ ವಿಜಯ್ ಲಕ್ಷ್ಮೀ ಹಾಗೂ ಸ್ನೇಹಿತರೊಂದಿಗೆ ನೆಮ್ಮದಿಯ ಕಾಲ ಕಳೆದಿದ್ದಾರೆ. ಇನ್ನೂ ಇದೆಲ್ಲದ್ರ ನಡುವೆ ದರ್ಶನ್ ತಮ್ಮ ಗಾಯದ ನೋವಿನ ನಡುವೆಯೂ ಕರ್ತ್ಯವ್ಯವನ್ನ ಮೆರೆದಿದ್ದಾರೆ.ಯಸ್, ದರ್ಶನ್ ಅರಣ್ಯ ವಿಭಾಗದ ರಾಯಭಾರಿ. ಹಾಗಾಗಿ, ದರ್ಶನ್ ಆಗಾಗ ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆ ಸಾರುವ ಕೆಲ್ಸ ದರ್ಶನ್ ಮಾಡಲೇಬೇಕು.

ಅರಣ್ಯಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲೇಬೇಕು. ಆದ್ರೇ ದರ್ಶನ್‌ಗಾದ ಕಾರು ಅಪಘಾತ ಇದಕ್ಕೆ ಬ್ರೇಕ್ ಹಾಕಿತ್ತು. ಹಾಗಂತ, ಕಾಡಿನಿಂದ ದೂರವಿರಲು ಹೇಗೆ ಸಾಧ್ಯ, ಅದು ಪ್ರಾಣಿಪ್ರಿಯನಾಗಿದ್ದಾಗ. ಬಹುಶ, ಇದೇ ಕಾರಣಕ್ಕೋ ಏನೋ ದರ್ಶನ್ ಗಾಯದ ನೋವಿನಲ್ಲೂ ಇತ್ತೀಚಿಗೆ ಕಾಡಿಗೆ ಹೋಗಿದ್ದರು.

ಅಷ್ಟೇ ಅಲ್ಲ ಕ್ಯಾಮೆರಾ ಹಿಡಿದು ಪ್ರಕೃತಿಯ ಸೊಬಗನ್ನೂ ಸೆರೆ ಹಿಡಿದ್ರು. ಖುಷಿ ಖುಷಿಯಾಗಿಯೇ ಅದೇ ಲವಲವಿಕೆನಿಂದ ಕಾಡನ್ನೂ ಸುತ್ತಾಡಿದ್ರು.ಸದ್ಯ, ದರ್ಶನ್ ಕಾಡು ಸುತ್ತಿದ, ಹಾಗೂ ಕುಟುಂಬದೊಂದಿಗೆ ತೆಗೆಸಿಕೊಂಡ ಫೋಟೊಗಳು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಭಿಮಾನಿಗಳ ಸಂಭ್ರಮವನ್ನೂ ಹೆಚ್ಚಿಸಿವೆ.

ಗಾಯದ ನಡುವೆಯೂ ಡಿ ಬಾಸ್ ಅರಣ್ಯ ರಾಯಭಾರಿಯಾಗಿ ವೀಕ್ಷಣೆ ಮಾಡುವ ಮೂಲಕ ತಮ್ಮ ಕರ್ತವ್ಯವನ್ನೂ ನಿಭಾಯಿಸಿದ್ದಾರೆ ಅನ್ನುವ ಮೆಚ್ಚುಗೆಯ ಅಭಿಮಾನದ ಮಾತುಗಳಿಗೂ ಇದೇ ಫೋಟೊಗಳು ಕಾರಣವಾಗಿವೆ. ಇಷ್ಟೇ ಅಲ್ಲ ದರ್ಶನ್ ವಿಲ್ ಫವರ್ ನಿರ್ಮಾಪಕರ ಮುಖದಲ್ಲೀನ ಮಂದಹಾಸಕ್ಕೂ ಕಾರಣವಾಗಿದೆ.

LEAVE A REPLY

Please enter your comment!
Please enter your name here