Home District ಗುಜರಾತಿನ ಸಿಂಹದ ಮುಂದೆ ಸರಿಯಾಗಿಯೇ ಪಟ್ಟು ಹಾಕಿದ ರಾಜಾಹುಲಿ.. ಮೋದಿಯವರಿಗೆ ಸರಿಯಾಗಿಯೇ ಬಿಸಿ ತಟ್ಟಿಸಿದ ಯಡಿಯೂರಪ್ಪ

ಗುಜರಾತಿನ ಸಿಂಹದ ಮುಂದೆ ಸರಿಯಾಗಿಯೇ ಪಟ್ಟು ಹಾಕಿದ ರಾಜಾಹುಲಿ.. ಮೋದಿಯವರಿಗೆ ಸರಿಯಾಗಿಯೇ ಬಿಸಿ ತಟ್ಟಿಸಿದ ಯಡಿಯೂರಪ್ಪ

3232
0
SHARE

ಸದಾ ಘರ್ಜಿಸುವ ಗುಜರಾತಿನ ಸಿಂಹದ ಮುಂದೆಯೇ ಕರ್ನಾಟಕದ ರಾಜಾಹುಲಿ ಭರ್ಜರಿಯಾಗಿ ಪಟ್ಟು ಹಾಕಿದೆ..ತುಮಕೂರಿನಲ್ಲಿ ಬಹಿರಂಗವಾಗಿಯೇ ಪ್ರಧಾನಿ ಮೋದಿಯವರನ್ನುದ್ದೇಶಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಸಖತ್ ಆಗಿಯೇ ಮಾತನಾಡಿದ್ದಾರೆ..ಕರ್ನಾಟಕದಲ್ಲಿ ನೆರೆ ಬಂದು ಸಾವಿರಾರು ಕೋಟಿ ನಷ್ಟವಾಗಿದ್ದರೂ ಹೆಚ್ಚು ಪರಿಹಾರ ಮಾಡದ ಕೇಂದ್ರ ಸರ್ಕಾರಕ್ಕೆ ಬಹಿರಂಗವಾಗಿಯೇ ಬಿಸಿ ಮುಟ್ಟಿಸಿದ್ದಾರೆ..ನೆರೆ ಪರಿಹಾರಕ್ಕೆ ಮನವಿ ಮಾಡಿದ್ದರೂ ಹೆಚ್ಚುವರಿ ಹಣ ಬಿಡುಗಡೆ ಆಗಿಲ್ಲ ಎಂದು ಗುಡುಗಿದ್ದಾರೆ..ಇದಲ್ಲದೆ, ನೀರಾವರಿ ಯೋಜನೆಗಳಿಗಾಗಿ 50 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಕೇಳಿದ್ದಾರೆ..

ಕರ್ನಾಟಕಕ್ಕೆ ಬಂದಿದ್ದ ಗುಜರಾತಿನ ಸಿಂಹಕ್ಕೆ ಕರ್ನಾಟಕದ ರಾಜಾಹುಲಿ ಭರ್ಜರಿಯಾಗಿಯೇ ಪಟ್ಟು ಹಾಕಿ ತೋರಿಸಿದೆ..ಇಷ್ಟು ದಿನ ಅದ್ಯಾಕೋ ಸುಮ್ಮನಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ನೈಜತನ,ಗಟ್ಟಿತನವನ್ನು ಮೋದಿಯವರಿಗೂ ತೋರಿಸಿ ಬೇಷ್ ಅನಿಸಿಕೊಂಡಿದ್ದಾರೆ..ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಅನ್ನೋ ಮಾತು ಇವತ್ತು ಮೋದಿಯವರಿಗೆ ಅಪ್ಲೈ ಆಗಿದೆ..ಇಷ್ಟು ದಿನ ತಾಳ್ಮೆಯಿಂದ ಇದ್ದ ಯಡಿಯೂರಪ್ಪ, ಕೊನೆಗೂ ಕೇಂದ್ರ ಸರ್ಕಾರದ ವಿರುದ್ಧ ಮೌನ ಮುರಿದಿದ್ದಷ್ಟೇ ಅಲ್ಲ, ಅಕ್ಷರಷಃ ಆರ್ಭಟಿಸಿಯೇ ಬಿಟ್ಟಿದ್ದಾರೆ..ಅತಿವೃಷ್ಠಿ,ಪ್ರವಾಹದಿಂದ ತತ್ತರಿಸಿದ್ದ ರಾಜ್ಯದಲ್ಲಿ 30 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ..ಮನೆ,ಹೊಲ ಕಳೆದುಕೊಂಡು ಸಹಸ್ರಾರು ಜನ ಸಂಕಷ್ಟದಲ್ಲಿದ್ದಾರೆ..35 ಸಾವಿರ ಕೋಟಿ ನಷ್ಟದ ಅಂದಾಜು ಮಾಡಿ ಕೇಂದ್ರಕ್ಕೆ ಮನವಿ ಮಾಡಿದ್ದರೂ ಈವರೆಗೆ ಕೇವಲ ಸಾವಿರದ ಇನ್ನೂರು ಕೋಟಿ ಬಿಡುಗಡೆ ಮಾಡಿ ಸುಮ್ಮನಾಗಿರುವ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ,ಈಗ ಗುದ್ದುಮರಿಗೆ ಹಾಕಿದ್ದಾರೆ..

ತುಮಕೂರಿನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲೇ ಯಡಿಯೂರಪ್ಪ ಗುಡುಗಿದ್ದಾರೆ..ನೆರೆಯಿಂದಾದ ನಷ್ಟದ ಬಗ್ಗೆ ಪರಿಹಾರ ಕೊಡುವಂತೆ ಮೂರ್ನಾಲ್ಕು ಮನವಿ ಮಾಡಿದರೂ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ..ಇಷ್ಟಕ್ಕೇ ಬಿಡದ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿಯವರ ಬಳಿ ಮತ್ತೊಮ್ಮೆ ಖುದ್ದು ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ..ಸಚಿವರು,ಅಧಿಕಾರಿಗಳೊಂದಿಗೆ ಭೇಟಿ ಮಾಡಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ವಿವರಿಸುವುದಾಗಿ ತಿಳಿಸಿದ್ದಾರೆ..ನೆರೆ ಪರಿಹಾರಕ್ಕೆ ಹೆಚ್ಚಿನ ನೆರವು ಮಾತ್ರವಲ್ಲ,ಕರ್ನಾಟಕದಲ್ಲಿ ಪೂರ್ಣಗೊಳ್ಳದೇ ಇರುವ ನೀರಾವರಿ ಯೋಜನೆಗಳಿಗಾಗಿ ಬರೋಬ್ಬರಿ 50 ಸಾವಿರ ಕೋಟಿ ಬೇಡಿಕೆ ಮುಂದಿಟ್ಟಿದ್ದಾರೆ..ನೀರಾವರಿ ಯೋಜನೆ ಪೂರ್ಣಗೊಳಿಸಲು 50 ಸಾವಿರ ಕೋಟಿ ವಿಶೇಷ ಅನುದಾನ ಕೊಡುವಂತೆ ಪ್ರಧಾನಮಂತ್ರಿಗಳನ್ನು ಒತ್ತಾಯಿಸಿದ್ದಾರೆ..

ಕರ್ನಾಟಕದ ಕಡೆಗಣನೆ ಬಗ್ಗೆ ಇಷ್ಟು ದಿನ ಪ್ರತಿಪಕ್ಷಗಳ ನಾಯಕರು ಹೋದಲ್ಲಿ ಬಂದಲ್ಲಿ ವಾಗ್ದಾಳಿ ನಡೆಸುತ್ತಿದ್ದರು..ಆದ್ರೆ ಈಗ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕೇಂದ್ರಕ್ಕೆ ಬಿಸಿ ಮುಟ್ಟಿಸಿ ಪ್ರಧಾನಿಗಳನ್ನು ಆಗ್ರಹ ಪೂರ್ವಕ ಮನವಿ ಮಾಡಿದ್ದಾರೆ..

 

LEAVE A REPLY

Please enter your comment!
Please enter your name here