Home District ಗುಬ್ಬಿ JDS ಶಾಸಕ ಮಗನ ಎಳೆ ಬಾಯಿಯ ಹುಳಿ ಹುಳಿ ಮಾತು…ಅಪ್ಪ ಆಯ್ತು ಈಗ ಮಗನ...

ಗುಬ್ಬಿ JDS ಶಾಸಕ ಮಗನ ಎಳೆ ಬಾಯಿಯ ಹುಳಿ ಹುಳಿ ಮಾತು…ಅಪ್ಪ ಆಯ್ತು ಈಗ ಮಗನ ಬಾಯಲ್ಲಿ ವಯಸ್ಸಿಗೆ ಮೀರಿದ ಮಾತು

1641
0
SHARE

ಸದಾ ಒಂದಿಲ್ಲೊಂದು ಅಸಂವಿಧಾನಿಕಪದಪ್ರಯೋಗ ಮಾಡಿ ಸುದ್ದಿಯಲ್ಲಿರುತಿದ್ದ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸರ ಸರದಿ ಆಯ್ತು.. ಈಗ ಮಗ ದುಶ್ಯಂತನ ಸರದಿ.

ಸುಮಾರು 24 ವರ್ಷದ ದುಶ್ಯಂತ್ ರಾಜಕೀಯ ವೇದಿಕೆಯಲ್ಲಿ ವಯಸ್ಸಿಗೆ ಮೀರಿದ ಮಾತನಾಡುತಿದ್ದಾನೆ. ವಿರೋಧ ಪಕ್ಷದ ಹಿರಿಯ ಮುಖಂಡರು ನಾಯಕರ ವಿರುದ್ದ ವಾಗ್ದಾಳಿ ನಡೆಸುತಿದ್ದಾನೆ.

ಮೊನ್ನೆ ಚಿಕ್ಕನಾಯಕನಹಳ್ಳಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಶಾಸಕ ಮಾಧುಸ್ವಾಮಿ ವಿರುದ್ದ ಲಘುವಾಗಿ ಮಾಗನಾಡಿ ಸ್ಥಳೀಯರ ವಿರೋಧಕ್ಕೆಕಾರಣರಾಗಿದ್ದಾನೆ..ನೀವು ಮೂರು ಭಾರಿ ಎಂ.ಎಲ್.ಎ ಆಗಿದ್ರಲ್ಲ ಅವಾಗ ಏನು ಕಿತ್ತಾಕಿದ್ರಿ.ಏನು ಕಿತ್ತು ದಬ್ಬಾಕಿದ್ರಿ,ಅವಾಗ ಏನು ಗೆಣಸು ಕೀಳಿತಿದ್ರಾ ಎಂದು ಥೇಟ್ ಅಪ್ಪ ಶ್ರೀನಿವಾಸನ ಶೈಲಿಯಲ್ಲೆ ವಯಸ್ಸಿಗೆ ಮೀರಿದ ಮಾತನಾಡಿದ್ದಾನೆ.

ವೇದಿಕೆಯಲ್ಲಿ ಘಟಾನುಘಟಿ ನಾಯಕರೆದುರೇ ತಾನು ರಾಜಕೀಯ ಪಂಡಿತನಂತೆ ಮಡಿ ಮೈಲಿಗೆ ಬಿಟ್ಟು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತಿದ್ದಾನೆ..ಈ ಎಳೆನಾಲಿಗೆಯ ಹುಳಿ ಹುಳಿ ಮಾತಿನ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿವೈರಲ್ ಆಗಿದೆ..

LEAVE A REPLY

Please enter your comment!
Please enter your name here