Home Cinema ಗುರುಪ್ರಸಾದ್ “ಪತಿವ್ರತೆ” ಹೇಳಿಕೆಗೆ ಪತ್ನಿಯೇ ವಿರೋಧ..!? ಮಧ್ಯರಾತ್ರಿಯೇ ಹೆಂಡ್ತಿ ಮಗಳನ್ನ ಹೊರಗಟ್ಟಿದ್ರಾ ಗುರು..?!

ಗುರುಪ್ರಸಾದ್ “ಪತಿವ್ರತೆ” ಹೇಳಿಕೆಗೆ ಪತ್ನಿಯೇ ವಿರೋಧ..!? ಮಧ್ಯರಾತ್ರಿಯೇ ಹೆಂಡ್ತಿ ಮಗಳನ್ನ ಹೊರಗಟ್ಟಿದ್ರಾ ಗುರು..?!

788
0
SHARE

ಮಠ ಗುರುಪ್ರಸಾದ್ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ನಾಯಕಿಯರು ಮಾಡ್ತಿರುವ ಆರೋಪ ಗಂಡು ಕುಲಕ್ಕೆ ಅವಮಾನ ಅಂತೇಳುವ ಮೂಲಕ ಅಭಿಯಾನದಡಿಯಲ್ಲಿ ಪ್ರಚಾರ ಪಡೆದುಕೊಳ್ಳುತ್ತಿರೋ ನಟಿಮಣಿಯರ ಮೇಲೆ ತಮ್ಮದೇ ಶೈಲಿಯಲ್ಲಿ ನಿನ್ನೆ ಗುರು ಗುರಾಣಿ ಎಸೆದಿದ್ದರು. ಕಣ್ಣೀರು, ಈರುಳ್ಳಿಗೂ ಇರುವ ಸಂಬಂಧ ಹೇಳಿದ್ದರು. ಇದೀಗ ಗುರು ಎಸೆದ ಗುರಾಣಿ, ಅವ್ರ ಸುತ್ತ ಮುತ್ತನೇ ಗಿರಕಿ ಹೊಡೆಯಲು ಶುರುವಿಟ್ಟುಕೊಂಡಿದೆ.

ಮೀಯೂ ಬಗ್ಗೆ ಆರೋಪ ಮಾಡಿದ್ದ ನಟಿಮಣಿಯರನ್ನು ಪತಿವೃತೆಯರಾ ಅನ್ನುವ ಮೂಲಕ ಮೀ ಟೂ ವಿವಾದಕ್ಕೆ ತನ್ನ ಕಾಣಿಕೆ ನೀಡಿದ್ದ ಗುರುಪ್ರಸಾದ್ ಮೇಲಿಗ ಹುಚ್ಚ ವೆಂಕಟ್ ಕಿಡಿ ಕಾರಿದ್ದಾರೆ. ಮಾತೆತ್ತಿದ್ದರೆ ಡಬಲ್ ಮೀನಿಂಗ್ ಗೀಚುವ ಡೈರೆಕ್ಟರೇ ನಿಮಗೆ ನಾಚಿಕೆ ಆಗಲ್ವಾ ಅಂದಿದ್ದಾರೆ. ಗುರುಪ್ರಸಾದ್‌ಗೆ ಛೀಮಾರಿ ಹಾಕಿದ್ದಾರೆ. ಅಷ್ಟೇ ಅಲ್ಲ ಗುರುಪ್ರಸಾದ್‌ರಂಥ ನಿರ್ದೇಶಕರಿಂದನೇ ಚಿತ್ರರಂಗಕ್ಕೆ ಬರಲು ಹೆಣ್ಣುಮಕ್ಕಳು ಭಯ ಪಡ್ತಾರೆ ಅಂದಿದ್ದಾರೆ…

ಇನ್ನೂ ಮೀ ಟೂ ಆರೋಪ ಮಾಡಿದವರು, ಯಾರೋ ಕಟ್ಟಿದ ವೇದಿಕೆಯಲ್ಲಿ ಡ್ಯಾನ್ಸ್ ಮಾಡುವವರು ಅಂತ ಗುರು ಹೇಳಿದ ಬೆನ್ನೇಟಿಗೆ, ಬರೀ ಹುಚ್ಚ ವೆಂಕಟ್ ರಕ್ತ ಅಷ್ಟೇ ಕೊತ ಕೊತ ಕುದಿಯುತ್ತಿಲ್ಲ. ಬದ್ಲಿಗೆ ಸ್ಪೆಷಲ್ ಡೈರೆಕ್ಟರ್ ಗುರುಪ್ರಸಾದ್ ಪತ್ನಿ ಆರತಿಯ ರಕ್ತನೂ ಕುದಿಯುತ್ತಿದೆ.

ಇನ್ನೂ ಎರಡನೇ ಸಲ ನಾಯಕಿ ಸಂಗೀತಾ ಭಟ್ ಇತ್ತೀಚಿಗೆ ಬದುಕಲು ಬಿಡಿ ಎಂದು ಅಂಗಲಾಚಿದ್ದರು. ಇದನ್ನೂ ನಿನ್ನೆ ಉಡಾಫೆ ಮಾಡಿದ್ದ ಗುರು, ಅದು ಅವರೇ ಈರುಳ್ಳಿ ಹೆಚ್ಚಿ ಬರಿಸಿಕೊಂಡ ಕಣ್ಣಿರು ಅಂದಿದ್ದರು. ಇದು, ಸಹಜವಾಗಿ ಸಂಗೀತಾ ಭಟ್ ಪತಿ ಸುದರ್ಶನ್‌ರನ್ನ ಕೆರಳಿಸಿದೆ. ಗುರುಪ್ರಸಾದ್ ತಲೆ ಖಾಲಿಯಾಗಿದೆ.

ಹಾಗಾಗೇ ಖಿನ್ನತೆಯಲ್ಲಿ ಬಾಯಿಗೆ ಬಂದ ಹಾಗೇ ಗುರುಪ್ರಸಾದ್ ಏನ್ನನ್ನೋ ಲೊಚ್ಚಗುಟ್ಟುತ್ತಿದ್ದಾರೆ ಅಂದಿದ್ದಾರೆ. ಸದಾ ಸಿಗರೇಟಿಗೆ ಬೆಂಕಿ ಇಟ್ಟು ಆಕಾಶ ದಿಟ್ಟಿಸುತ್ತಾ ಲೋಕದ ಬಗ್ಗೆ ಮಾತನಾಡುವ ಗುರುಪ್ರಸಾದ್‌ಗೆ ಅವರಾಡಿದ ಮಾತುಗಳೇ ತಿರುಗು ಬಾಣಗಳಾಗಿವೆ. ಸಿಗರೇಟಿಗೆ ಹಚ್ಚಿದ್ದ ಬೆಂಕಿ.. ಗುರು ಗಡ್ಡಕ್ಕೂ ತಗಲಿಕೊಳ್ಳುವ ಭೀತಿ ಶುರುವಾಗಿದೆ.

LEAVE A REPLY

Please enter your comment!
Please enter your name here