Home Cinema ಗೊತ್ತಾ..! ಕಿಚ್ಚನ “ಪರಾಕ್ರಮ”ಕ್ಕೆ ಏನಂದ್ರು “ಕುಮಾರ್ ಬಂಗಾರಪ್ಪ”..! ವಾಟ್. “ಚೋಟಾ ಪೈಲ್ವಾನ್”ಕಂಡು “ಹುಬ್ಬೇರಿಸಿದ್ರಂತೆ” ಸುದೀಪ..!

ಗೊತ್ತಾ..! ಕಿಚ್ಚನ “ಪರಾಕ್ರಮ”ಕ್ಕೆ ಏನಂದ್ರು “ಕುಮಾರ್ ಬಂಗಾರಪ್ಪ”..! ವಾಟ್. “ಚೋಟಾ ಪೈಲ್ವಾನ್”ಕಂಡು “ಹುಬ್ಬೇರಿಸಿದ್ರಂತೆ” ಸುದೀಪ..!

3211
0
SHARE

ಯಸ್.. ಪೈಲ್ವಾನ್ ಲುಕ್ ಮತ್ತು ಟೀಸರ್ ನೋಡಿ ಚಿತ್ರದ ಮೇಲಿನ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ. ಅಲ್ಲದೆ ದೊಡ್ಡವರಿಂದ ಹಿಡಿದು ಪುಟಾಣಿ ಫ್ಯಾನ್ಸ್ ಗಳು ಕೂಡ ತೊಡೆ ತಟ್ಟಿ ಅಖಾಡಕ್ಕಿಳಿದು ಪೈಲ್ವಾನ್ ಫೀವರ್ ಹೆಚ್ಚಿಸಿಕೊಂಡಿದ್ದಾರೆ. ಹಾಗೆ ಇಲ್ಲೊಬ್ಬ ಚೋಟಾ ಪೈಲ್ವಾನ್ ಥೇಟ್ ಸುದೀಪ ರೀತಿಯಲ್ಲಿ ಅಖಾಡಕ್ಕಿಳಿದು ಪೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಪುಟ್ಟ ಪೋರನ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು.

ಕಿಚ್ಚ ಟ್ವೀಟ್ ಮಾಡುವ ಮೂಲಕ ಪುಟಾಣಿ ಪೋಟೊಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ನಟ ಹಾಗೂ ಶಾಸಕ ಕುಮಾರ್ ಬಂಗಾರಪ್ಪ ಕೂಡ ನಲ್ಲನ ನಯಾ ಅವತಾರಕ್ಕೆ ಫಿದಾ ಆಗಿದ್ದಾರೆ. ಪೈಲ್ವಾನ್ ಸಿನಿಮಾದ ಬಗ್ಗೆ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿರುವ ಕುಮಾರ್ ಬಂಗಾರಪ್ಪ ಹೀಗಂಥ ಟ್ವೀಟ್ ಮಾಡಿದ್ದಾರೆ.

(ಕುಮಾರ್ ಬಂಗಾರಪ್ಪ ಟ್ವೀಟ್ ‘ಅದ್ಭುತ ಹಾಗೂ ಅದ್ಧೂರಿಯಾದ ಟೀಸರ್. ನಿಮ್ಮ ಡೆಡಿಕೇಷನ್‌ಗೆ ಬೆಲೆ ಸಿಕ್ಕಿದೆ. ನಿಮಗೆ ಹಾಗೂ ನಿಮ್ಮ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್. ಸಿನಿಮಾ ಯಶಸ್ವಿಯಾಗಲಿ’.)ಎಂದು ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದಾರೆ. ಕುಸ್ತಿ ಅಖಾಡದಲ್ಲಿ ಮೊದಲ ಬಾರಿಗೆ ಮಿಂಚಿರೋ ಕಿಚ್ಚನ ನೋಡೋದೆ ಚೆಂದ, ಸಖತ್ ಸ್ಟೈಲೀಶ್ ಆಗಿ, ಡಿಫ್ರೆಂಟ್ ಹೇರ್ ಸ್ಟೈಲ್‌ನಲ್ಲಿ ಮಿಂಚಿದ್ದಾರೆ. ಹರ್ಷ ಪೈಲ್ವಾನ್ ಅಖಾಡದಲ್ಲಿ ಬಿಂದಾಸಾಗಿ ಹೆಜ್ಜೆ ಹಾಕಿಸಿದ್ದಾರೆ.

ಅದು ಜಾನಪದ ಶೈಲಿಯಲ್ಲಿ ಅನ್ನೋದು ಇಲ್ಲಿನ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ. ಬೊಂಬೆ ಕುಣಿತ ಮತ್ತು ಡೊಳ್ಳು ಕುಣಿತ ಅಖಾಡದ ಮೆರೆಗನ್ನು ಹೆಚ್ಚಾಗುವಂತೆ ಮಾಡಿದೆ. ಕರುಣಾಕರ್ ಕ್ಯಾಮೆರಾ ವರ್ಕ್, ಶಿವಕುಮಾರ್ ಆರ್ಟ್ ವರ್ಕ್ ಅದ್ದೂರಿಯಾಗಿ ಮೂಡಿಬಂದಿದ್ದು, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

ಒಟ್ನಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿ ಸದ್ಯ ಚಿತ್ರಮಂದಿರಕ್ಕೆ ಎಂಟ್ರಿಕೊಡಲು ಸಿದ್ದವಾಗುತ್ತಿದೆ ಪೈಲ್ವಾನ್. ಭಾರಿ ಹೈಪ್ ಕ್ರಿಯೇಟ್ ಮಾಡಿರೋ ಪೈಲ್ವಾನ್ ಪರಾಕ್ರಮ ಹೇಗಿರಲಿ ಅನ್ನೊ ಕುತೂಹಕ್ಕೆ ಮಾರ್ಚ್ ಅಂತ್ಯದಲ್ಲಿ ಉತ್ತರ ಸಿಗಲಿದೆ.

LEAVE A REPLY

Please enter your comment!
Please enter your name here