Home Cinema ಗೊತ್ತಾ..! ‘ರಜಿನಿ’ ಅಭಿಮಾನಿಗಳಿಗೆ ಇವತ್ತೇ ‘ದೀಪಾವಳಿ’..! ಅಬ್ಬಬ್ಬಾ..! ಹೇಗಿದೆ ಗೊತ್ತೇ ‘2.O’ಅನ್ನುವ ಕಾಸ್ಟ್ಲೀ ತಳಿ..!

ಗೊತ್ತಾ..! ‘ರಜಿನಿ’ ಅಭಿಮಾನಿಗಳಿಗೆ ಇವತ್ತೇ ‘ದೀಪಾವಳಿ’..! ಅಬ್ಬಬ್ಬಾ..! ಹೇಗಿದೆ ಗೊತ್ತೇ ‘2.O’ಅನ್ನುವ ಕಾಸ್ಟ್ಲೀ ತಳಿ..!

3447
0
SHARE

2.o . ಸೆಟ್ಟೇರಿದಾಗ್ಲಿಂದಲೂ ಕಾಲಿವುಡ್‌ನಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಏಕೈಕ ಸಿನ್ಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರ. ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ, ತಲೈವಾ ರಜಿನಿಕಾಂತ್ ಮತ್ತು ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ ರೋಬೋ ೨.೦ ಸಿನಿಮಾದ ಎಲೆಕ್ಟ್ರೀಫೈರಿಂಗ್ ಟ್ರೇಲರ್ ರಿಲೀಸ್ ಔಟ್ ಆಗಿದೆ. ಈ ಮೂಲಕ ಚಿತ್ರದ ಮೇಲಿದ್ದ ನಿರೀಕ್ಷೆ & ಭರವಸೆ ಹೆಚ್ಚಾಗುವಂತೆ ಮಾಡಿದೆ.

ಯಸ್… ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮತ್ತು ಸೂಪರ್ ಸ್ಟಾರ್ ರಜಿನಿ ಕಾಂತ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಮೋಸ್ಟ್ ಅವೇಟ್ಡ್ ಸಿನಿಮಾ ೨.೦. ಸೌತ್ ಸಿನಿಮಾ ಇಂಡಸ್ಟ್ರೀಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಪೋಸ್ಟರ್ ಮತ್ತು ಟೀಸರ್ ನಿಂದ್ಲೇ ಚಿತ್ರಾಭಿಮಾನಿಗಳ ಚಿತ್ತ ಕದ್ದಿದ್ದ ಸಿನಿಮಾದ ಅದ್ದೂರಿ ಟ್ರೇಲರ್ ಯಾವಾಗ ರಿಲೀಸ್ ಆಗುತ್ತದೆ ಎಂದು ಕಾದುಕುಳಿತ್ತಿದ್ದ ರಜಿನಿ ಮತ್ತು ಅಕ್ಕಿ ಅಭಿಮಾನಿಗಳಿಗೆ ದೀಪಾವಳಿ ಮುನ್ನವೇ ಭರ್ಜರಿ ಚೆನ್ನೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಟ್ರೇಲರ್ ಗಿಫ್ಟ್ ಸಿಕ್ಕಿದೆ.

ಈ ಮೂಲಕ ಕಾಸ್ಟ್ರೀ ಮತ್ತು ಉತ್ತಮ ತಂತ್ರಜ್ಞಾನದೊಂದಿಗೆ ಮೂಡಿಬಂದಿರುವ ಟ್ರೇಲರ್ ಮತ್ತು ಲಿರಿಕಲ್ ವಿಡಿಯೋ ಎಲ್ಲರ ಕಣ್ಮ್‌ನ ಸೆಳೆಯುತ್ತಿದೆ.ಹೌದು, ಈ ಮೊದ್ಲೇ ಟೀಸರ್ ನೋಡಿದಾಗಲೇ ಚಿತ್ರಕ್ಕೆ ಭಾರೀ ತಂತ್ರಜ್ಞಾನವನ್ನು ಬಳಸಲಾಗಿದೆ ಎನ್ನುವುದು ಗೊತ್ತಾಗಿತ್ತು. ಇಂದು ರಿಲೀಸ್ ಆಗಿರುವ ಮೂರು ಭಾಷೆಯ ಟ್ರೇಲರ್‌ನಲ್ಲಿ ಅಕ್ಷಯ್ ಕುಮಾರ್ ಮತ್ತು ರಜಿನಿಕಾಂತ್ ಡೈಲಾಗ್‌ಗಳು ಅಭಿಮಾನಿಗಳು ಉಬ್ಬೇರಿಸುವಂತೆ ಮಾಡ್ತಿದ್ದೆ.

ಇತ್ತ ಇಡೀ ಪ್ರಪಂಚವನ್ನು ತನ್ನ ಕೈ ವಶ ಮಾಡಿಕೊಳ್ಳಲು ಪ್ರಯತ್ನಿಸುವ ಅಕ್ಷಯ್ ಕುಮಾರ್ ಎಂಬ ಖಳನಾಯಕನಿಗೆ ತಿರುಗೇಟು ನೀಡಲು ರೀ ಲೋಡೆಡ್ ಚಿಟ್ಟಿ ಹುಟ್ಟಿ ಬರುತ್ತಾನೆ ಎಂಬುದನ್ನು ಟ್ರೇಲರ್ ಸ್ಪಷ್ಟಪಡಿಸಿದೆ.ಇನ್ನು ಆಧುನಿಕ ತಂತ್ರಜ್ಞಾನದಿಂದ ಯಾವರೀತಿ ಪರಿಸರ ವಿನಾಶವಾಗ್ತಿದೆ, ಎಂಬುದರ ಅನಾವರಣ ಮಾಡುವ ಇರಾದೆ ಇಟ್ಟುಕೊಂಡಿದ್ದಾರಾ ನಿರ್ದೇಶಕ ಶಂಕರ್ ಎನ್ನುವುದು ಟ್ರೇಲರ್ ನೋಡಿದ್ರೆ ತಿಳಿಯುತ್ತದೆ. ಅಕ್ಷಯ್ ಎಂಟ್ರಿಯಲ್ಲಿಯಲ್ಲಿಯೇ ಎಲ್ಲಾ ಸೆಲ್ ಪೋನ್‌ಗಳು ಮಾಯವಾಗುವ ಪರಿ ನೋಡಿದ್ರೆ ಈಗೀನಿ ಯೂಥ್ಸ್‌ಗೆ ೨.೦ ಸಿನಿಮಾದಲ್ಲಿ ಭರ್ಜರಿ ಮೇಸೆಜ್ ಇರೋದು ಪಕ್ಕಾ ಆಗ್ತಿದೆ.

ಇನ್ನು ಅದ್ದೂರಿ ಗ್ರಾಫಿಕ್ಸ್‌ನಲ್ಲಿ ತಯಾರಾಗಿರುವ ಚಿತ್ರದಲ್ಲಿ ಸೌಂಡಿಂಗ್ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ರಝಲ್ ಪುಕುಟ್ಟಿ ಸೌಂಡ್ ಡಿಸೈನಿಂಗ್‌ನಲ್ಲಿ ಮೂಡಿಬಂದಿರುವ ನ್ಯೂ ಪಾಮ್ಯಾಟ್ ಆಫ್ ಸೌಂಡ್‌ಗೆ ಪ್ರೇಕ್ಷಕರು ಕ್ಲೀನ್ ಬ್ಲೋಡ್ ಆಗಿದ್ದಾರೆ. ೪ ಡಿ ಆಡಿಯೋ ಫಾಮ್ಯಾಟ್ ಟ್ರಾಕ್‌ನಲ್ಲಿ ಮೂಡಿಬಂದಿದ್ದು, ಸೀಟ್‌ನ ಕೆಳ ಭಾಗದಿಂದಲ್ಲೂ ಎಫೆಕ್ಟ್‌ಗಳು ಕೇಳುವ ತಂತ್ರಜ್ಞಾನ ಅಳವಡಿಸಲಾಗಿದೆ. ಈ ರೀತಿ ಆಧುನಿಕ ತಂತ್ರಜ್ಞಾನ ಅಳವಡಿಸಿರುವ ಮೊದಲ ಇಂಡಿಯನ್ ಸಿನಿಮಾ ಎನ್ನುವ ಖ್ಯಾತಿಗೆ ಸದ್ಯ ೨.೦ ಚಿತ್ರ ಪಾತ್ರವಾಗ್ತಿದೆ.

೨೦೧೦ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಎದಿರನ್ ಚಿತ್ರದ ಮುಂದುವರಿದ ಭಾಗ ಇದಾಗಿದೆ. ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಚಿತ್ರ ಮೂಡಿಬಂದಿದೆ. ಇನ್ನೂ ರೋಬೊ-೨.೦ ಚಿತ್ರದಲ್ಲಿ ರಜನಿಯವರು ಮೂರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ರೋಬೋ ಮೊದಲ ಆವೃತ್ತಿಯಲ್ಲಿ ವಿಜ್ಞಾನಿ ವಸೀಗರನ್ ಮತ್ತು ಚಿಟ್ಟಿ ಎರಡು ಪಾತ್ರಗಳಲ್ಲಿ ರಜನಿ ಅಭಿನಯಿಸಿದ್ರು. ಅದರ ಮುಂದುವರೆದ ಭಾಗದಲ್ಲಿ ಮತ್ತೊಂದು ಅವತಾರದಲ್ಲಿ ರಜನಿಕಾಂತ್ ಇನ್ನಷ್ಟು ರೋಚಕವಾಗಿ ಕಾಣಿಸಿಕೊಂಡಿದ್ದಾರೆ.

ನಾಲ್ಕು ವರ್ಷಗಳಿಂದ ಈ ಪ್ರಾಜೆಕ್ಟ್‌ಗಾಗಿ ಶಂಕರ್ ಅಗಲಿರುಳೆನ್ನದೆ ಶ್ರಮವಹಿಸಿದ ಫಲ ಟ್ರೇಲರ್‌ನಲ್ಲಿ ಅನಾವರಣವಾಗುತ್ತಿದೆ. ಭಾರಿ ಕುತೂಹಲ ಮೂಡಿಸಿರೋ ಕಾಲಿವುಡ್‌ನ ಈ ಬಿಗ್ ಬಜೆಟ್ ಚಿತ್ರದ ಎಲೆಕ್ಟ್ರೀ ಫೈಯಿಂಗ್ ಟ್ರೇಲರ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡ್ತಿದೆ..
ಇನ್ನು ಚಿತ್ರದಲ್ಲಿ ನಟ ರಜಿನಿಕಾಂತ್ ಮತ್ತು ನಟಿ ಅಮಿ ಜಾಕ್ಸನ್ ಅಭಿನಯಿಸಿದ್ದಾರೆ.
ವಿಶೇಷವೆಂದರೆ ೩ಡಿ ಯಲ್ಲಿ ನೇರವಾಗಿ ಚಿತ್ರೀಕರಿಸಿದ ಮೊದಲ ಭಾರತೀಯ ಚಿತ್ರ ಇದಾಗಿದೆ.

ಈ ಚಿತ್ರ ಬರೋಬ್ಬರು ೬೦೦ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಭಾರತೀಯ ಚಿತ್ರರಂಗದಲ್ಲೇ ಇಷ್ಟು ವಿಷೇಶತೆ ಮತ್ತು ದೊಡ್ಡ ಬಜೆಟ್‌ನಲ್ಲಿ ನಿಮಾಣಗೊಂಡ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆಗೆ ೨.೦ ಚಿತ್ರ ಪಾತ್ರವಾಗಿದೆ. ಚಿತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ.
ರಜನಿಕಾಂತ್ ವೈಜ್ಞಾನಿಕ ಆಕ್ಷನ್ ಸಿನಿಮಾ ನೋಡಲು ರಜನಿ ಮತ್ತು ಅಕ್ಷಯ್ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ಕುಳಿತ್ತಿದ್ದಾರೆ. ಇನ್ನು ಆಮ್ನಿಯ ಲುಕ್ ಮತ್ತು ಪರ್ಫಾಮೆನ್ಸ್‌ಗೆ ಅವರ ಡೈ ಹಾರ್ಟ್ ಫ್ಯಾನ್ಸ್‌ಗಳು ಸಹ ಫೀದಾ ಆಗಿದ್ದಾರೆ.

ಈಗೇ ಚಿತ್ರದಲ್ಲಿ ಸಾಕಷ್ಟು ಎಕ್ಸೈಟಿಂಗ್ ವಿಚಾರಗಳು ಟ್ರೇಲರ್‌ನಲ್ಲಿ ಅನಾವರಣ ಮಾಡಿದೆ ಚಿತ್ರತಂಡ.ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಜನಿಯ ಸಿನಿಮಾ ಬಹುನಿರೀಕ್ಷೀತ ಚಿತ್ತಕ್ಕೆ ಮೆಲೋಡಿ ಮಾಂತ್ರಿಕ, ಆಸ್ಕರ್ ಪ್ರಶಸ್ತಿ ವಿಜೇತ ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಮಧುರವಾದ ಹಾಡುಗಳು ತಯಾರಾಗಿದೆ. ಈ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ಸ್ವತಃ ರೆಹಮಾನ್ ಅವರಿಗೆ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದೆಯಂತೆ. ಟ್ರೇಲರ್ ಜೊತೆಗೆ ಚಿತ್ರದ ಲಿರಿಕಲ್ ಸಾಂಗ್ ಕೂಡ ಔಟ್ ಆಗಿದೆ.

ಈ ಒಂದು ಹಾಡಿನಲ್ಲಿ ನಟಿ ಆಮಿ ಜಾಕ್ಸನ್ ನಡುವಿನ ಡ್ಯೂಯೇಟ್ ಸಾಂಗ್ ಮೂಡಿಬಂದಿದ್ದು, ಲಿರಿಕಲ್ ವಿಡಿಯೋ ಮೂಲಕ ಕಾಲಿವುಡ್ ಮತ್ತು ಬಾಲಿವುಡ್ ಇಂಡಸ್ಟ್ರೀಯಲ್ಲಿ ಬ್ಯಾಂಗ್ ಮಾಡೋಕ್ಕೆ ಶುರುವಿಟ್ಟುಕೊಂಡಿದ್ದಾರೆ. ಇತ್ತ ಬ್ರಿಟನ್ ಚೆಲುವೆ ಆಮಿ ಜಾಕ್ಸನ್ ರೋಬೋ ಲುಕ್‌ನಲ್ಲಿ ಮತ್ತಷ್ಟು ಸುಂದರವಾಗಿ ಮಿಂಚಿದ್ದಾರೆ.ಇನ್ನು ಸಾಕಷ್ಟು ನಿರೀಕ್ಷೆಯಿಂದ ಕಾಯುವಂತೆ ಮಾಡಿರುವ ಚಿತ್ರ ಪೋಸ್ಟರ್‌ಗಳು ಸಂಗೀತ ಪ್ರಿಯರ ಮನಸ್ಸನ್ನು ಯಾವರೀತಿ ತಣಿಸಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿ ಈ ಸದ್ಯ ಕಾಡುತ್ತಿದೆ.

ಚಿತ್ರವು ಇದೇ ನವೆಂಬರ್ ೨೯ಕ್ಕೆ ಚೆನ್ನೈನ ಸತ್ಯಂ ಚಿತ್ರಮಂದಿರ ಸೇರಿ ಜಗತ್ತಿನಾದ್ಯಂತ ತೆರೆ ಕಾಣಲಿದೆ. ಅಲ್ಲದೆ ಜಗತ್ತಿನಾದ್ಯಂತ ೯ ಸಾವಿರಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಚಿತ್ರ ಪ್ರದ ರ್ಶನಗೊಳ್ಳಲಿದೆ. ಸದ್ಯ ಟ್ರೇಲರ್ ಮತ್ತು ಹಾಡಿನ ಮೂಲಕ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಸೃಷ್ಟಿಸಿರುವ ೨.೦ ಅಸಲಿ ಕಹಾನಿ ಏನಿರಲಿದೆ ಎಂಬುದಕ್ಕುತ್ತರ ಸದ್ಯದಲ್ಲೇ ತಿಳಿಯಲಿದೆ.

LEAVE A REPLY

Please enter your comment!
Please enter your name here