Home Cinema ಗೋಲ್ಡನ್ ಸ್ಟಾರ್ ಹೊಸ ಅವತಾರಕ್ಕೆ ಸ್ಯಾಂಡಲ್‌ವುಡ್ ಫಿದಾ..?! “ಆರೆಂಜ್”ನಲ್ಲಿ 2 ಗೆಟಪ್‌ನಲ್ಲಿ ಗಣಿ ಮಿಂಚು…

ಗೋಲ್ಡನ್ ಸ್ಟಾರ್ ಹೊಸ ಅವತಾರಕ್ಕೆ ಸ್ಯಾಂಡಲ್‌ವುಡ್ ಫಿದಾ..?! “ಆರೆಂಜ್”ನಲ್ಲಿ 2 ಗೆಟಪ್‌ನಲ್ಲಿ ಗಣಿ ಮಿಂಚು…

728
0
SHARE

ಆರೆಂಜ್. ಗೋಲ್ಡನ್ ಸ್ಟಾರ್ ಗಣೇಶ್ ಫ್ಲೇವರ್ ಇರುವ ನಯಾ ಸಿನಿಮಾ. ಮೊದಲಿಂದನೂ ಸಿಕ್ಕಾಪಟ್ಟೆ ಸದ್ದು ಮಾಡ್ತಾನೇ ಬಂದ ಆರೆಂಜ್ ಚಿತ್ರದ ಮೋಶನ್ ಪೋಸ್ಟರ್ ಇದೀಗ ರಿವೀಲಾಗಿದೆ.
ಮಾಸ್ & ಕ್ಲಾಸ್ ಎರಡು ವರ್ಗದ ಆಡಿಯನ್ಸ್‌ಗೆ ಇಷ್ಟವಾಗುವಂತಹ ಎಲಿಮೆಂಟ್ಸ್ ಹೊಂದಿರುವ ಸಿನಿಮಾ ಆರೆಂಜ್ ಅನ್ನುವ ಸಂದೇಶವನ್ನೊತ್ತು ಬಂದಂತಿದೆ ಚಿತ್ರದ ಮೋಶನ್ ಪೋಸ್ಟರ್.

ಒಂದ್ಕಡೆ ಖೈದಿ ಗೆಟಪ್ಪು.. ಇನ್ನೊಂದಡೆ ಸ್ಟೈಲಿಶ್ ಗೆಟಪ್ಪು.. ಎರಡು ಅವತಾರದಲ್ಲಿ ಗಣಿಯನ್ನ ನೋಡೋದೇ ಇಲ್ಲಿ ಚೆಂದ.ಪ್ರಶಾಂತ್ ರಾಜ್ ನಿರ್ದೇಶನದ ಸಿನಿಮಾ ಇದು. ಹಿಂದೆ.. ಇದೇ ಪ್ರಶಾಂತ್ ಹಾಗೂ ಗಣೇಶ್ ಜೂಮ್ ಮೂಲಕ ಮಾಡಿದ್ದ ಮೋಡಿ ನಿಮಗೆ ನೆನಪಿದ್ದರೆ, ಆರೆಂಜ್ ಮೇಲೀನ ಕೂತುಹಲ ಹಾಗೂ ಕೌತುಕ ದುಪ್ಪಟ್ಟಾಗೋದು ಖಾತ್ರಿ.

ಇನ್ನು. ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯಾಗಿ ರಾಜಕುಮಾರನ ರಾಜಕುಮಾರಿ ಪ್ರಿಯಾ ಆನಂದ್ ಕಾಣಸಿಗಲಿದ್ದಾರೆ. ಎಸ್.ಎಸ್.ತಮನ್ ಸಂಗೀತ ನಿರ್ದೇಶನ ಸಿನಿಮಾದ ಇನ್ನೊಂದು ಬೆನ್ನೆಲುಬು. ಸದ್ಯ ಮೋಶನ್ ಪೋಸ್ಟರ್ ಮೂಲಕ ಅಭಿಮಾನಿಗಳ ಅತೀವ ಸಂಭ್ರಮಕ್ಕೆ ಕಾರಣವಾಗಿರುವ ಆರೆಂಜ್ ಚಿತ್ರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here