Home District ಗೌಡರ ಕೋಟೆಯಲ್ಲಿ ನಡೆದಿದೆ ಕೋಟಿ ಕೋಟಿ ಲೂಟಿ..!? ನಿರ್ದೇಶಕರುಗಳ ಹಣಬಾಕತನಕ್ಕೆ ಸಂಘದಲ್ಲಿದ್ದ 100 ಕೋಟಿ ಮಂಗಮಾಯ..!?

ಗೌಡರ ಕೋಟೆಯಲ್ಲಿ ನಡೆದಿದೆ ಕೋಟಿ ಕೋಟಿ ಲೂಟಿ..!? ನಿರ್ದೇಶಕರುಗಳ ಹಣಬಾಕತನಕ್ಕೆ ಸಂಘದಲ್ಲಿದ್ದ 100 ಕೋಟಿ ಮಂಗಮಾಯ..!?

994
0
SHARE

ಒಕ್ಕಲಿಗರ ಸಂಘದಲ್ಲಿ ಬಿಲ ಕೊರಿಯೋ ಇಲಿ ಹೆಗ್ಗಣಗಳ ಕಾಟ..!ಗೌಡರ ಕೋಟೆಯಲ್ಲಿ ನಡಿತ್ತಿದೆ ಕೋಟಿ ಕೋಟಿ ಲೂಟಿ..!ರಾಜ್ಯ ಒಕ್ಕಲಿಗರ ಸಂಘದಲ್ಲಿ ಮತ್ತೆ ಕಚ್ಚಾಟ ಶುರುವಾಗಿದೆ.. ಅಕ್ರಮ ನೇಮಕಾತಿ ಮಾಡಿಕೊಂಡು, ಕೋಟ್ಯಾಂತರ ಹಣವನ್ನ ಗುಳುಂ ಮಾಡಲಾಗ್ತಿದೆ..ಒಕ್ಕಲುತನ ಹೆಸರಲ್ಲಿ ತಿಂದು ತೇಗುತ್ತಿರುವ ಸಂಘದ ಮಹಾನುಭಾವರು..!700 ಜನರ ನೇಮಕಾತಿಯಲ್ಲಿ ನಡೆದಿದೆ 70 ಕೋಟಿ ಅಕ್ರಮ…

ಇದರಿಂದ ಒಕ್ಕಲಿಗರ ಸಂಘಕ್ಕೆ ಪ್ರತೀ ತಿಂಗಳು ನಾಲ್ಕು ಕೋಟಿಯಷ್ಟು ಹೆಚ್ಚುವರಿ ಹಣ ಹೊರೆಯಾಗ್ತಿದ್ದು, ಹೆಚ್ಚುವರಿ ನೇಮಕಾತಿಯನ್ನ ತೆಗೆಯುವಂತೆ ಒಂದೆಡೆ ಪ್ರತಿಭಟನೆ ನಡೆಯುತ್ತಿದ್ರೆ..ಬೆಟ್ಟೇಗೌಡರ ಸಾಮ್ರಾಜ್ಯದಲ್ಲಿ ಕಟ್ತಿದ್ದಾರೆ ಒಕ್ಕಲಿಗರ ಸಂಘಕ್ಕೆ ಸಮಾಧಿ..!ಹತ್ತಿಪ್ಪತ್ತು ಲಕ್ಷ ಪೀಕಿ ಕೊಟ್ರಂತೆ 600 ಜನರಿಗೆ ಕೆಲಸ..!ಅವರನ್ನ ಉಳಿಸಿಕೊಳ್ಳೋ ಯತ್ನವನ್ನ ಸಂಘದ ಅಧ್ಯಕ್ಷ ಬೆಟ್ಟೇಗೌಡ ಮಾಡ್ತಿದ್ದಾರೆ…

ಎಕ್ಸಿಕ್ಯುಟೀವ್ ಮೀಟಿಂಗ್‌ನಲ್ಲಿ ಈ ತಿಂಗಳ ಎರಡನೇ ತಾರೀಖಿನಿಂದಲೇ, ಹೆಚ್ಚುವರಿ ನೇಮಕ ತೆಗೆಯುವಂತೆ ಸೂಚಿಸಲಾಗಿತ್ತು..ಒಕ್ಕಲಿಗರಿಗೆ ಕೊಡಬೇಕಾದ ಮೆಡಿಕಲ್ ಸೀಟಿಗೂ ಗುನ್ನಾ..!
ಒಕ್ಕಲಿಗರ ಹೆಸ್ರಲ್ಲಿ ಕೋಟಿ ಕೋಟಿಗೆ ಮೆಡಿಕಲ್ ಸೀಟ್ ಮಾರಾಟ ನಿರ್ದೇಶಕರುಗಳ ಹಣಬಾಕತನಕ್ಕೆ ಸಂಘದಲ್ಲಿದ್ದ 100 ಕೋಟಿ ಮಂಗಮಾಯ..!ಆದ್ರೆ, ಈವರೆಗೂ ತೆಗೆದಿಲ್ಲ ಅಂತ, ಮಾಜಿ ಅಧ್ಯಕ್ಷ ಅಪ್ಪಾಜಿಗೌಡ ಪ್ರತಿಭಟನೆ ಶುರು ಮಾಡಿದ್ದಾರೆ…

ಪ್ರತಿ ತಿಂಗಳು ಸಂಘಕ್ಕೆ 4 ಕೋಟಿ ಲಾಸ್ ಮಾಡ್ತಿದ್ದಾರೆ ಬೆಟ್ಟೇಗೌಡ್ರು.ಒಕ್ಕಲಿಗರ ಮೂಗಿಗೆ ತುಪ್ಪ ಸವರಿ ಬೇರೆ ಜಾತಿಯವರಿಗೆ ಮಣೆ..!ಹಳೇ ಆಡಳಿತ ಮಂಡಳಿಯಲ್ಲೂ ನಡೆದಿದೆ ನೂರಾರು ಕೋಟಿ ಗೋಲ್ಮಾಲ್..!ಈ ವಿಚಾರವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ಹಾಲಿ ಹಾಗೂ ಮಾಜಿ ಅಧ್ಯಕ್ಷರಿಬ್ಬರು, ವಯಕ್ತಿಕ ಕೆಸರೆರಚಾಟವನ್ನ ಶುರು ಮಾಡಿದ್ದಾರೆ.. ಆದ್ರೆ ಸಂಘವನ್ನ ಉಳಿಸಿ ಬೆಳಸಬೇಕಾದವರೇ ಹೀಗೆ, ಬಣಗಳನ್ನ ಮಾಡಿಕೊಂಡು ವಯಕ್ತಿಕ ಸಂಘರ್ಷ ಮಾಡಿಕೊಂಡಿರೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು…

ಈಗ ಎಲ್ಲಾ ಒಕ್ಕಲಿಗರು ಪ್ರಶ್ನೆ ಮಾಡಿಕೊಳ್ಳಬೇಕಿದೆ..ಸಂಘ ದಿವಾಳಿಯಾಗ್ತಿದ್ರೂ ಸುಮ್ಮನೆ ಯಾಕೆ ಕೂತಿದ್ದಾರೆ ಲಕ್ಷ ಲಕ್ಷ ಒಕ್ಕಲಿಗರು.ಒಕ್ಕಲಿಗರ ಸಂಘದಿಂದ ಯಾವ ಬಡ ಒಕ್ಕಲಿಗನಿಗೆ ಸಹಾಯವಾಗಿದ..?ತಿಂದು ತೇಗುವವರಿಗಾಗಿ ಬೆತ್ತಲಾಗುತ್ತಿದ್ದಾರೆ ಕೆಂಪೇಗೌಡರ ಕುಡಿಗಳುಜಾತಿ ಹೆಸರೇಳಿ ನಿರ್ದೇಶಕರುಗಳು ಮಾಡ್ಕೊಂಡಿರೋ ಆಸ್ತಿ ಎಷ್ಟು ಗೊತ್ತಾ..? ಒಕ್ಕಲಿಗರೇ ಇನ್ನಾದ್ರೂ ಎದ್ದೇಳಿ..ಸಂಘ ಬೆಳಸಿ…ಒಕ್ಕಲಿಗರನ್ನು ಉಳಿಸಿ…

LEAVE A REPLY

Please enter your comment!
Please enter your name here