Home Crime ಚಂಡಿ-ಚಾಮುಂಡಿಯ ಅವತಾರ ತಾಳಿದ ಮಹಿಳೆಯರು..! ಮುನಿದ ಮಹಿಳೆಯರ ಕಂಡು ಎದ್ದು ಬಿದ್ದು ಓಡಿದ ಕುಡುಕರು..!

ಚಂಡಿ-ಚಾಮುಂಡಿಯ ಅವತಾರ ತಾಳಿದ ಮಹಿಳೆಯರು..! ಮುನಿದ ಮಹಿಳೆಯರ ಕಂಡು ಎದ್ದು ಬಿದ್ದು ಓಡಿದ ಕುಡುಕರು..!

1673
0
SHARE

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಕಂಡ ಮಹಿಳೆಯರು ಓನಕೆ ಒಬ್ಬವ್ವನ ರೂಪವನ್ನು ತಾಳಿದ್ರು. ಮಹಿಳೆಯರ ರೋಷಾವೇಷ ಕಂಡ ಮದ್ಯ ಮಾರಾಟಗಾರರು ಸ್ಥಳದಿಂದ ಓಟ ಕಿತ್ತರು ಇನ್ನೂ ಸಾರಾಯಿ ಕುಡಿಯುತ್ತಿದ್ದವರು ಪೇರಿ ಕಿತ್ತು ಓಡಿ ಹೋದರು.

ಇನ್ನುಂದ ಸಲ ಮದ್ಯ ಮಾರಾಟ ಮಾಡುವುದು ಕಂಡು ಬಂದ್ರೆ ನಾವು ಸುಮ್ಮನೆ ಇರಲ್ಲ ಅಂತ ಎಚ್ಚರಿಕೆಯನ್ನು ನೀಡಿದ್ದರು.ಕಳೆದ ಹಲವಾರು ವರ್ಷಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಅಕ್ರಮವಾಗಿ ಸರಾಯಿಯನ್ನ ಮಾರಾಟ ಮಾಡಲಾಗ್ತಾ ಇತ್ತು ಇದರಿಂದಾಗಿ ಎಷ್ಟೋ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿತ್ತು.

ಯುವಕರು ಪುರುಷರು ಕಣ್ಣ ಮುಂದೆಯೆ ಕುಡಿತದ ದುಶ್ಚಟಕ್ಕೆ ದಾಸರಾಗುತ್ತಿರುವದನ್ನು ಕಂಡು ಮಹಿಳೆಯರು ಒಂದಾಗಿ ಹೋರಾಟಕ್ಕೆ ಇಳಿದ ಪರಿಣಾಮವಾಗಿ ಒಬ್ಬೊಬ್ಬ ಮಹಿಳೆಯಲ್ಲೂ ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ ,ಬೆಳವಡಿ ಮಲ್ಲಮ್ಮನಂತಹ ಅಪರಾವತಾರ ಕಂಡು ಕೆಲಹೊತ್ತು ಪುರುಷರು ತಬ್ಬಿಬ್ಬಾಗಿ ಓಡಾಡಿದ ಘಟನೆ ನಡೆದಿದೆ.

ಇನ್ನೂ ದುಡಿಮೆಯ ಹಣವನ್ನೆಲ್ಲಾ ವ್ಯಯಿಸಿ ನಿತ್ಯವೂ ಸರಾಯಿ ಕುಡಿದು ಬರುವ ಮನೆಯ ಗಂಡಸರಿಂದ ನೊಂದ ಮಹಿಳೆಯರು ಮತ್ತು ಸಮಾಜಸೇವಕರು ದಿಡೀರ್ ಚಂಡಿ-ಚಾಮುಂಡಿಯರಂತ ಅವತಾರ ತಾಳಿ ಕಟ್ಟಿಗೆ ಕಲ್ಲು ಹಿಡಿದು ಜಗಳಕ್ಕೆ ನಿಂತ ಪರಿಣಾಮವಾಗಿ ಮಹಿಳೆಯರಿಗೆ ಬೆಚ್ಚಿ ಬಿದ್ದ ಪುರುಷರು ಸ್ಥಳದಿಂದ ಜೂಟ್ ಆಗಿದ್ದಾರೆ.

ಅನಧಿಕೃತ ಮದ್ಯ ಮಾರಾಟ ಮಾಡದಂತೆ ಹಲವು ಬಾರಿ ಹಲ್ಯಾಳ ಗ್ರಾಮದ ಮಹಿಳೆಯರು ಮನವಿ ಮಾಡಿದ್ದರೂ ಕೂಡರ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನೊಂದ ಮಹಿಳೆಯರಿಂದ ಅಟ್ಯಾಕ್ ನಡೆದಿದೆ.ಕಿರಾಣಿ ಅಂಗಡಿಗಳು, ಗೂಡಂಗಡಿಗಳಲ್ಲಿ ಅಕ್ರಮವಾಗಿ ಅವ್ಯಾಹತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಮಹಿಳೆಯರ ದಿಡೀರ್ ದಾಳಿಯಿಂದ ಇನ್ನು ಕೈಗೆ ಸಿಕ್ಕರೆ ಏನಾಗುತ್ತೋ ಅಂತ ಭಯಬಿದ್ದು ದಿಕ್ಕಾಪಾಲಾಗಿ ಓಡಿದ ಕುಡುಕರು ಬಚಾವಾಗಿದ್ದಾರೆ..

ಅಕ್ರಮ ಮದ್ಯಮಾರಾಟ ವಿಷಯ ತಿಳಿದರು ಕೂಡ ಅದನ್ನು ತಡೆಯದೇ ಕಣ್ಣುಮುಚ್ಚಿ ಕುಳಿತ ಅಥಣಿ ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಒಟ್ಟಾರೆ ಆಗಿ ನಾರಿ ಮುನಿದರೆ ಮಾರಿ ಎನ್ನುವಂತ ಸ್ಥಿತಿ ನಿರ್ಮಾಣವಾಗಿದ್ದು ಅಕ್ರಮ ದಂಧೆಕೋರರಿಗೆ ಚಳಿಜ್ವರ ಶುರುವಾಗಿದ್ದರೆ ಸಂಪೂರ್ಣ ನಿಷೇಧ ಮಾಡುವವರೆಗೆ ಹೋರಾಟ ಮಾಡುವದಾಗಿ ಪ್ರತಿಭಟನೆ ನಡೆಸಿದ ಮಹಿಳೆಯರು ಹೇಳಿದ್ದಾರೆ…

ದೀಪಕ ಶಿಂಧೆ ಪ್ರಜಾ ಟೀವಿ ಚಿಕ್ಕೋಡಿಅಕ್ರಮ ಮದ್ಯ ಮಾರಾಟಗಾರರನ್ನು ಅಟ್ಟಾಡಿಸಿದ ಮಹಿಳೆಯರಿಂದಾಗಿ ಸಾರಾಯಿ ದಾಸರು ಸ್ಥಳದಿಂದ ಪೇರಿ ಕಿತ್ತು ಓಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.

LEAVE A REPLY

Please enter your comment!
Please enter your name here