Home Cinema ’ಚಂಬಲ್’ಗೆ ಹೊಸ ಸಂಕಷ್ಟ..! ಡಿ.ಕೆ.ರವಿ ತಾಯಿ ಗೌರಮ್ಮ ಸಿನಿಮಾದ ಬಗ್ಗೆ ಅಸಮಾಧಾನ..! “ಬಿಡುಗಡೆಗೂ ಮುಂಚೆ ನಾನು...

’ಚಂಬಲ್’ಗೆ ಹೊಸ ಸಂಕಷ್ಟ..! ಡಿ.ಕೆ.ರವಿ ತಾಯಿ ಗೌರಮ್ಮ ಸಿನಿಮಾದ ಬಗ್ಗೆ ಅಸಮಾಧಾನ..! “ಬಿಡುಗಡೆಗೂ ಮುಂಚೆ ನಾನು ಚಿತ್ರವನ್ನ ವೀಕ್ಷಿಸಬೇಕು” ಡಿ.ಕೆ.ರವಿ ತಾಯಿ ಎನ್ನಲು ಕಾರಣವೇನು..?

553
0
SHARE

ನೀನಾಸಂ ಸತೀಶ್ ಅಭಿನಯದ ಹೊಸ ಸಿನಿಮಾ ’ಚಂಬಲ್’ಗೆ ಹೊಸ ಸಂಕಷ್ಟವೊಂದು ಎದುರಾಗಿದೆ.

ಚಂಬಲ್ ಚಿತ್ರದಲ್ಲಿ ಡಿ.ಕೆ.ರವಿಯ ಜೀವನದ ಕಥೆ ಅಡಗಿದೆ ಎನ್ನುವ ವದಂತಿ ಕೆಲವು ದಿನಗಳಿಂದ ಹರಿದಾಡಿತ್ತು. ಈಗ ಖುದ್ದಾಗಿ ಡಿ.ಕೆ.ರವಿ ತಾಯಿ ಗೌರಮ್ಮ ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

’ಇತ್ತೀಚೆಗೆ ಬಿಡುಗಡೆಯಾದ ’ಚಂಬಲ್’ ಚಿತ್ರದ ಟ್ರೈಲರ್‌ನಲ್ಲಿ ನನ್ನ ಮಗ ರವಿಯ ಜೀವನವನ್ನೇ ಹೋಲುವ ಅಂಶಗಳಿವೆ. ಈ ಕಾರಣ ಬಿಡುಗಡೆಗೂ ಮುಂಚೆ ನಾನು ಚಿತ್ರವನ್ನ ವೀಕ್ಷಿಸಬೇಕು.

ಅಕಸ್ಮಾತ್ ಚಿತ್ರದಲ್ಲಿ ಸತ್ಯಕ್ಕೆ ದೂರವಾದ ಅಂಶಗಳಿದ್ದ ಪಕ್ಷದಲ್ಲಿ ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ.

LEAVE A REPLY

Please enter your comment!
Please enter your name here