Home District ಚಲುವರಾಯಸ್ವಾಮಿಯನ್ನು “ಸತ್ತ ಕುದುರೆ”ಗೆ ಹೋಲಿಸಿದ ಪುಟ್ಟರಾಜು..! ಪುಟ್ಟರಾಜು ಹೇಳಿಕೆಗೆ “ಅವನು ಯಾವ ರೀತಿ ಸಂಸದನಾದ ಅನ್ನೋದು...

ಚಲುವರಾಯಸ್ವಾಮಿಯನ್ನು “ಸತ್ತ ಕುದುರೆ”ಗೆ ಹೋಲಿಸಿದ ಪುಟ್ಟರಾಜು..! ಪುಟ್ಟರಾಜು ಹೇಳಿಕೆಗೆ “ಅವನು ಯಾವ ರೀತಿ ಸಂಸದನಾದ ಅನ್ನೋದು ಗೊತ್ತು” ಎಂದು ಚೆಲುವರಾಯಸ್ವಾಮಿ ಟಾಂಗ್

472
0
SHARE

ಲೋಕಸಭೆ ಉಪ ಚುನಾವಣೆ ಹಿನ್ನೆಲೆ, ಜೆಡಿಎಸ್-ಕಾಂಗ್ರೆಸ್ ನಾಯಕರ ವಾಕ್ಸಮರ ಮುಂದುವರೆದಿದೆ.ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಸಚಿವ ಸಿ.ಎಸ್.ಪುಟ್ಟರಾಜು ತಿರುಗೇಟು ನೀಡಿದ್ದಾರೆ. ನಾವು ಯಾರೂ ಮೈತ್ರಿ ಬೇಕು ಅಂತ ಗೋಗರಿಯುತ್ತಿಲ್ಲ. ಜನ ಕೊಟ್ಟ ತೀರ್ಪಿನಿಂದ ಅನಿವಾರ್ಯವಾಗಿ ರಾಜ್ಯದಲ್ಲಿ ಮೈತ್ರಿ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಸುಭದ್ರ ವಾಗಿದೆ ಎಂದಿದ್ದಾರೆ.

ಚೆಲುವರಾಯಸ್ವಾಮಿ ವಿರುದ್ಧ ಕೆಂಡಾಮಂಡಲರಾದ ಪುಟ್ಟರಾಜು, ಯಾರ ಹತ್ತಿರನೂ ಹೋಗಿ ಮೈತ್ರಿಗಾಗಿ ಅಂಗಲಾಚುವ ಸ್ಥಿತಿ ನಮಗಿಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯನ್ನ ಅಧಿಕಾರ ದಿಂದ ದೂರ ಹಿಡಲು ಮೈತ್ರಿ ಮಾಡಿ ಕೊಳ್ಳಲಾಗಿದೆ ಎಂದಿದ್ದಾರೆ. ಎರಡು ಪಕ್ಷದ ನಾಯಕರು ಹೇಳಿದಂಗೆ ನಾನೂ ಕೇಳ ಬೇಕಾಗುತ್ತದೆ, ಚಲುವರಾಯಸ್ವಾಮಿಯೂ ಕೇಳಬೇಕು ಎಂದ್ರು.

ಏಳಕ್ಕೆ ಏಳೂ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಮಾತ್ರಕ್ಕೆ ಲೋಕ ಸಭೆ ಚುನಾವಣೆ ಸುಲಭವಲ್ಲ ಎಂದಿದ್ದ ಚೆಲುವರಾಯಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿದ ಪುಟ್ಟರಾಜು, ಇದರಿಂದ ಅವರು ಬಂಡವಾಳ ಏನು ಅಂತ ಗೊತ್ತಾಗುತ್ತೆ ಅಂದಿದ್ದಾರೆ. ರೆಡ್ ಹಾರ್ಸ್ ಗಳು ಮಾತನಾಡೋದಕ್ಕೆ ಶುರುಮಾಡಿದ ಮೇಲೆ ಹೀಗಾಗಿದೆ ಅಂತ ಚೆಲುವರಾಯಸ್ವಾಮಿ ಅವರನ್ನು ಸತ್ತ ಕುದುರೆಗೆ ಹೋಲಿಸಿದ್ದಾರೆ.

ಸತ್ತ ಕುದುರೆ ಎಂಬ ಸಚಿವ ಪುಟ್ಟರಾಜು ಹೇಳಿಕೆಗೆ ಚೆಲುವರಾಯಸ್ವಾಮಿ ಗರಂ ಆಗಿದ್ದಾರೆ ಬೆಂಗಳೂರಿನಲ್ಲಿ ಪುಟ್ಟರಾಜುಗೆ ತಿರುಗೇಟು ನೀಡಿದ ಚೆಲುವರಾಯಸ್ವಾಮಿ ಏಕವಚನದಲ್ಲೇ ಪುಟ್ಟಸ್ವಾಮಿ ವಿರುದ್ಧ ಮಾತಿನ ಸಮರ ನಡೆಸಿದ್ದಾರೆ. ಅವನಷ್ಟು ಕೆಳಮಟ್ಟಕ್ಕೆ ಇಳಿದು ನಾನು ಮಾತನಾಡುವುದಿಲ್ಲ, ಅವನು ಯಾವ ರೀತಿ ಸಂಸದನಾದ ಎಂಬುದು ಅನ್ನೋದು ಗೊತ್ತು , ಪುಟ್ಟರಾಜುಗೆ ವೇಗೌಡರೇ ಹೇಳಿದ್ರು ನೀನು ಹೇಗೆ ಗೆದ್ದು ಬಂದಿದ್ದೀಯಾ ಅಂತಾ ಅನ್ನೋ ಮೂಲಕ ಗುಡುಗಿದ್ದಾರೆ.

ಹಿಂದೆ HDK ಚಿಕ್ಕಬಳ್ಳಾಪುರದಲ್ಲಿ ಎಷ್ಟು ಅಂತರದಿಂದ ಸೋತಿದ್ದರು?, ತಲೆಯಲ್ಲಿ ಮೆದುಳು ಇಟ್ಟುಕೊಂಡು ಮಾತನಾಡಬೇಕಿತ್ತು ಅಂತ ಪುಟ್ಟರಾಜು ವಿರುದ್ಧ ಗರಂ ಆಗಿದ್ದಾರೆ. ಸರ್ಕಾರದ ಪ್ರತಿಫಲ ಅನುಭವಿಸುತ್ತಾ ಇರೋರಿಗೆ ಕೃತಜ್ಞತೆ ಇರಬೇಕು. ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರ ಕೆಲಸಗಳು ನಡೆಯುತ್ತಿಲ್ಲ. ಆದ್ರೂ ವರಿಷ್ಠರ ನಿರ್ಧಾರದಂತೆ ನಾವು ಮೈತ್ರಿಗೆ ಬದ್ಧವಾಗಿದ್ದೇವೆ ಎಂದಿದ್ದಾರೆ. ನಾಗಮಂಗಲದಲ್ಲಿ ನಮ್ಮ ಹುಡುಗರು ಸುದ್ದಿಗೋಷ್ಠಿ ಕರೆದಿದ್ದಾರೆ, ನಾಳೆ ಅವನ ಬಗ್ಗೆ ಮಾತನಾಡುತ್ತೇನೆ ಎಂದು ಪುಟ್ಟರಾಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here