ಕಳೆದ ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಚಳಿ ಹೆಚ್ಚಳದಿಂದ ಜನರು ಗಡಗಡ ನಡುಗುವಂತಾಗಿ, ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಮನೆಯಿಂದ ಹೊರಬರಲು ಸಹ ಯೋಚಿಸುತ್ತಿದ್ದಾರೆ. ಆದ್ರೆ ಚಳಿಯ ಎಫೆಕ್ಟ್ ಕೇವಲ ಇಷ್ಟಕ್ಕೆ ಸೀಮಿತವಾಗಿಲ್ಲ… ಇದರ ಪರಿಣಾಮ ತರಕಾರಿಯ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದರೇ ನೀವು ನಂಬಲೇಬೇಕು.
ಸಂಕ್ರಮಣ ಹಬ್ಬ ಹತ್ತಿರವಾಗುತ್ತಿದಂತೆ ವಿವಿಧ ರೀತಿಯ ತರಕಾರಿಗಳು ಮಾರುಕಟ್ಟೆಗೆ ಬರುತ್ತವೆ. ಆದ್ರೆ ಈ ಬಾರಿ ಮಾರುಕಟ್ಟೆಗೆ ಬರಬೇಕಾದ ತರಕಾರಿಗಳ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇದಕ್ಕೆ ರಾಜ್ಯದಲ್ಲಿ ಹೆಚ್ಚಾಗಿರುವ ಚಳಿಯೇ ಕಾರಣವಂತೆ, ಜೊತೆಗೆ ಅದರಲ್ಲೂ ತಮಿಳುನಾಡಿನಲ್ಲಿ ಹುಗ್ಗಿ ಹಬ್ಬ ಇರೋ ಕಾರಣ ತಮಿಳುನಾಡಿನಿಂದ ಕರ್ನಾಟಕದ ತರಕಾರಿಗೆ ಹೆಚ್ಚಿನ ಬೇಡಿಕೆ ಬಂದಿದೆಯಂತೆ ಇದರಿಂದಾಗಿ ರಾಜ್ಯದಲ್ಲಿ ತರಕಾರಿಗಳ ಬೆಲೆಯಲ್ಲಿ ದಿಢೀರ ಹೆಚ್ಚಳವಾಗಿ ಜನರ ಕೈ ಸುಡುತ್ತಿದೆ.
ಹಾಪ್ ಕಾಮ್ಸ್ ಹಣ್ಣು-ತರಕಾರಿ ದರ ( ಕೆ.ಜಿ.ಗಳಲ್ಲಿ ),ಟೊಮೇಟೊ 60 ರೂ,ಬೀನ್ಸ್ 52 ರೂ,ಬದನೆ ಕಾಯಿ 52 ರೂ,ಹಸಿ ಮೆಣಸಿನಕಾಯಿ 56 ರೂ,ಕ್ಯಾಪ್ಸಿಕಾಂ 50 ರೂ.ಈ ಬಾರಿ ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ತರಕಾರಿಗಳು ಇಳುವರಿ ನೀಡುತ್ತಿಲ್ಲ. ಹೀಗಾಗಿ ಟೊಮೇಟೊ ಬೇಗ ಹಣ್ಣಾಗುತ್ತಿಲ್ಲ. ಹಣ್ಣಾದರೂ ಕೆಂಪು ಬಣ್ಣ ಇರುವದಿಲ್ಲ ಹೀಗಾಗಿ ಗುಣಮಟ್ಟದ ಮಾರುಕಟ್ಟೆಗೆ ಬಾರದ ಪರಿಣಾಮ ಕೆ.ಜ.ಗೆ 30-40 ಇದ್ದುದು ಇದೀಗ 50-70 ರೂ. ತಲುಪಿದೆ ಎನ್ನುತ್ತಾರೆ…ಹಾಪ್ ಕಾಮ್ಸ್ ನ ಡಾ.ಬಿ.ಎನ್.ಹರಿಪ್ರಸಾದ್…
ಒಟ್ಟಿನಲ್ಲಿ ಹುಗ್ಗಿ ಹಬ್ಬ ಹಾಗೂ ಚಳಿಯಿಂದಾಗಿ ತರಕಾರಿ ಬೆಲೆ ಹೆಚ್ಚಳದಿಂದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಸಂಕ್ರಾತಿ ಹಬ್ಬ ಮುಗಿದ ನಂತರವಾದರೂ ಬೆಲೆಯು ಇಳಿಕೆಯಾಗಲಿ ಎನ್ನುವುದು ಜನರ ಆಶಯವಾಗಿದೆ…