Home Cinema ಚಾಮುಂಡೇಶ್ವರಿಯಲ್ಲಿ ಸಿಎಂ ಪರ ಪ್ರಚಾರಕ್ಕೆ ಬಂದ ನಟಿ ಜಯಮಾಲಗೆ ತೀವ್ರ ಮುಖಭಂಗ..!!! ಕಾರ್ಮಿಕನ ತರಾಟೆಯಿಂದ ತಬ್ಬಿಬ್ಬಾದ...

ಚಾಮುಂಡೇಶ್ವರಿಯಲ್ಲಿ ಸಿಎಂ ಪರ ಪ್ರಚಾರಕ್ಕೆ ಬಂದ ನಟಿ ಜಯಮಾಲಗೆ ತೀವ್ರ ಮುಖಭಂಗ..!!! ಕಾರ್ಮಿಕನ ತರಾಟೆಯಿಂದ ತಬ್ಬಿಬ್ಬಾದ ತಾರೆಯರು…

5643
0
SHARE

ಇಷ್ಟು ದಿನ ಸೈಲೆಂಟಾಗಿದ್ದು ಇದೀಗ ಚುನಾವಣೆ ವೇಳೆ ಅಬ್ಬರದ ಪ್ರಚಾರ ನಡೆಸಲು ಹೋದ ರಾಜಕಾರಣಿಗಳಿಗೆ ಅಭಿವೃದ್ಧಿ ಕಾಣದೆ ನೊಂದ ಮತದಾರರು ಹಿಗ್ಗಾ ಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಮೈಸೂರಿನ ಚಾಮುಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ತೆರಳಿದ್ದ ಗಿರಿಕನ್ಯೆ ಜಯಮಾಲಾಗೆ ಮತದಾರರು ಮಂಗಳಾರತಿ ಮಾಡಿದ್ದಾರೆ.

ಫಾಲ್ಕನ್ ಕಾರ್ಖಾನೆಗೆ ನೆರವಾಗದಿದ್ದಕ್ಕೆ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಏಕಲವ್ಯ ನಗರದಲ್ಲಿ ಮತದಾರನೋರ್ವ ಜಯಮಾಲಾಗೆ ಮಂಗಳಾರತಿ ಮಾಡಿದ್ದಾರೆ. ನಾವು ಸಿದ್ದಾರಮಯ್ಯಗೆ ಮತ ನೀಡಲ್ಲ. ಜಿ.ಟಿ.ದೇವೇಗೌಡರಿಗೆ ಓಟು ಹಾಕುತ್ತೇವೆ. ಕುಮಾರಸ್ವಾಮಿ ಸಿಎಂ ಆದ್ರೆ ಫಾಲ್ಕನ್ ಕಾರ್ಖಾನೆಗೆ ನೆರವಾಗುತ್ತಾರೆಂದು ಹೇಳಿದ್ದಾನೆ. ಮತದಾರ ತರಾಟೆ ತೆಗೆದುಕೊಂಡಿದ್ದರಿಂದ ಪ್ರಚಾರಕ್ಕೆ ತೆರಳಿದ್ದ ತಾರೆಯರು ತಬ್ಬಿಬ್ಬಾಗಿದ್ದಾರೆ.

ಇನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಕೆರೆಯಾಗಳಹಳ್ಳಿಯಲ್ಲಿ ಬಹಿರಂಗ ಪ್ರಚಾರದ ವೇಳೆ ಸಚಿವ ಆಂಜನೇಯಗೆ ಮುಜುಗರ ಎದುರಾಗಿದೆ. ಹೆಚ್.ಆಂಜನೇಯ ತೆರೆದ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಾರ್ಯಕರ್ತರು ಜೆಡಿಎಸ್ ಬಾವುಟ ಪ್ರದರ್ಶಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಜಯವಾಗಲಿ, ಕುಮಾರಣ್ಣಗೆ ಜಯವಾಗಲಿ, ದೇವೇಗೌಡರಿಗೆ ಜಯವಾಗಲಿ ಎಂದು ಜೈಘೋಷ ಹಾಕಿದ್ದಾರೆ.

LEAVE A REPLY

Please enter your comment!
Please enter your name here