Home District ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂಗೆ ಟಾಂಗ್ ಕೊಟ್ಟ ಹೆಚ್‌ಡಿಕೆ..!ನನ್ನ ಕ್ಷೇತ್ರಕ್ಕೆ ಬಂದು ಒಂದು ವಾರ ಠಿಕಾಣಿ ಹೂಡಿದ್ರು...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂಗೆ ಟಾಂಗ್ ಕೊಟ್ಟ ಹೆಚ್‌ಡಿಕೆ..!ನನ್ನ ಕ್ಷೇತ್ರಕ್ಕೆ ಬಂದು ಒಂದು ವಾರ ಠಿಕಾಣಿ ಹೂಡಿದ್ರು ಗೆಲುವು ನನ್ನದೆ- ಸಿಎಂಗೆ ಹೆಚ್‌ಡಿಕೆ ಸವಾಲ್

636
0
SHARE

ಮೈಸೂರಿನ ಚಾಮುಂಡೇಶ್ವರಿ ಕದನ ಕಣ ರಂಗೇರುತ್ತಿದೆ. ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗುತ್ತಿದ್ದಂತೆ ಚಾಮುಂಡೇಶ್ವರಿ ಅಖಾಡಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಪ್ರಚಾರ ನಡೆಸುವ ಕುಮಾರಸ್ವಾಮಿ , ತಮ್ಮ ಪ್ರಚಾರವನ್ನು ಸಿಎಂ ಸಮುದಾಯದ ಗ್ರಾಮಗಳಿಂದಲೇ ಆರಂಭಿಸಿದ್ದಾರೆ.

ಕ್ಷೇತ್ರದ ಕೋಟೆಹುಂಡಿ ಗ್ರಾಮದಲ್ಲಿ ಕುಮಾರಸ್ವಾಮಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ಮಾಡಿದ್ದಾರೆ. ತೆರದ ವಾಹನದಲ್ಲಿ ಗ್ರಾಮದ ಬೀದಿಗಳಿಗೆ ತೆರೆಳಿದ ಕುಮಾರಸ್ವಾಮಿ, ಜಿಟಿ ದೇವೇಗೌಡರಿಗೆ ಮತ ಹಾಕುವಂತೆ ಮನವಿ ಮಾಡಿದ್ರು.

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ..ನನ್ನ ಕ್ಷೇತ್ರಕ್ಕೂ ಬಂದು ಪ್ರಚಾರ ಮಾಡುವಂತೆ ಸಿಎಂಗೆ ಸವಾಲು….

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸುವ ಮುನ್ನ ಹಿನಕಲ್ ಗ್ರಾಮದ ನನ್ನೇಶ್ವರ ದೇವಸ್ಥಾನದಲ್ಲಿ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದ್ರು. ಈ ವೇಳೆ ಚುನಾವಣೆಯಲ್ಲಿ ಗೆಲುವಿಗಾಗಿ ಸಂಕಲ್ಪ ಮಾಡಿದ್ರು.

ನಂತರ ವಿಕಾಶ ವಾಹಿನಿ ಬಸ್‌ನಲ್ಲಿ ಪ್ರಚಾರ ಕೈಗೊಂಡ ಹೆಚ್‌ಡಿಕೆಗೆ ಜೆಡಿಎಸ್ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ದೊರೆಯಿತು. ಮಹಿಳೆಯರು ಆರತಿ ಬೆಳಗುವ ಮೂಲಕ ಹೆಚ್‌ಡಿಕೆಗೆ ಶುಭ ಹಾರೈಸಿದ್ರು.

ಇದಕ್ಕೂ ಮುನ್ನ ಮೈಸೂರಿನ ಪುರಭವನ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಗೌರವ ನಮನ ಸಲ್ಲಿಸಿದ್ರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಸಮೀಕ್ಷೇಗಳು ಉಲ್ಟಾ ಆಗುತ್ತವೆ ಕಾದು ನೋಡಿ ಎಂದರು. ಅಲ್ಲದೆ, ತಮ್ಮ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಬಂದು ಒಂದು ವಾರ ಠಿಕಾಣಿ ಹೂಡಿದ್ರು ಗೆಲುವು ನನ್ನದೆ ಎಂದು ಸವಾಲು ಹಾಕಿದದ್ರು.

ಚಾಮುಂಡೇಶ್ವರಿ ಪ್ರಚಾರದ ಮಧ್ಯೆ ಹೆಚ್‌ಡಿ.ಕೋಟೆಗೆ ತೆರಳಿ ಕುಮಾರಪರ್ವ ಸಮಾವೇಶದಲ್ಲಿ ಪಾಲ್ಗೊಂಡಿದ್ರು. ನಂತರ ಸಂಜೆ ಮತ್ತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ಮುಂದುವರೆಸಿದ್ರು.

ಇದೇ ೧೬ ಹಾಗೂ ೧೮ ರಂದು ಸಿಎಂ ಸಿದ್ದರಾಮಯ್ಯ ಮೂರನೇ ಸುತ್ತಿನ ಪ್ರಚಾರಕ್ಕೆ ಆಗಮಿಸುತ್ತಿದ್ದು, ಈ ಘಟಾನುಘಟಿ ನಾಯಕರ ಭರ್ಜರಿ ಪ್ರಚಾರದಿಂದ ಕ್ಷೇತ್ರದ ಕದನ ಕಣ ರಂಗೇರಿದೆ.

LEAVE A REPLY

Please enter your comment!
Please enter your name here