Home District ಚಾಮುಂಡೇಶ್ವರಿ ಜೊತೆಗೆ ಬದಾಮಿಯಲ್ಲಿ ಸಿಎಂ ಕಣಕ್ಕೆ..! ಎರಡೂ ಕ್ಷೇತ್ರದಲ್ಲಿ ಸ್ಪರ್ಧೆಗೆ ಕೊನೆಗೂ ಸಿಎಂ ನಿರ್ಧಾರ..!

ಚಾಮುಂಡೇಶ್ವರಿ ಜೊತೆಗೆ ಬದಾಮಿಯಲ್ಲಿ ಸಿಎಂ ಕಣಕ್ಕೆ..! ಎರಡೂ ಕ್ಷೇತ್ರದಲ್ಲಿ ಸ್ಪರ್ಧೆಗೆ ಕೊನೆಗೂ ಸಿಎಂ ನಿರ್ಧಾರ..!

571
0
SHARE

ಮುಖ್ಯಮಂತ್ರಿ ಸಿದ್ದರಾಮಯ್ಯ ಬದಾಮಿಯಲ್ಲೂ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ..ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಈಗ ಬದಾಮಿಯಲ್ಲಿ ನಾಮಪತ್ರ ಸಲ್ಲಿಸಲು ಟೈಂ ಫಿಕ್ಸ್ ಆಗಿದೆ..ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಾಮಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ..

ಕಳೆದ ಹಲವು ದಿನಗಳಿಂದ ಸಿಎಂ ಎರಡು ಕ್ಷೇತ್ರಗಳ ಸ್ಪರ್ಧೆ ಬಗ್ಗೆ ಸಮಾಲೋಚನೆ ನಡೆಯುತ್ತಲೇ ಇತ್ತು..ಈ ವಿಚಾರ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು..ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಎರಡು ಕಡೆ ಸ್ಪರ್ಧೆ ಮಾಡುವ ಬಗ್ಗೆ ಗೊಂದಲದಲ್ಲೇ ಇದ್ದರು..ಆದ್ರೆ ಆ ಭಾಗದ ಮುಖಂಡರ ಒತ್ತಾಯ ಮತ್ತು ಹೈಕಮಾಂಡ್ ಸಮ್ಮತಿ ಮೇರೆಗೆ ಈಗ ಅಂತಿಮವಾಗಿ ನಿರ್ಧಾರ ಕೈಗೊಂಡಿದ್ದಾರೆ..
ಮಂಗಳವಾರ ಮಧ್ಯಾಹ್ನ 2ಗಂಟೆಯಿಂದ 3ಗಂಟೆಯೊಳಗೆ ಸಿಎಂ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಲಿದ್ದಾರೆ..ಸಿಎಂ ಸ್ವಾಗತಕ್ಕೆ ಬದಾಮಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ..ಅಂದು ಬದಾಮಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗುತ್ತಿದೆ..
ಈವರೆಗೆ ರಾಜ್ಯದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಎಲೆಕ್ಷನ್ ತೀವ್ರ ಕುತೂಹಲಕ್ಕೆ ಕಾರಣಾಗಿತ್ತು..ಈಗ ಸಿಎಂ ಸ್ಪರ್ಧೆಯಿಂದ ಬದಾಮಿಯೂ ವಿಶೇಷ ಗಮನಸೆಳೆಯುತ್ತಿದೆ..ಬದಾಮಿಯಲ್ಲಿ ಈಗಾಗಲೇ ಜೆಡಿಎಸ್ ಅಭ್ಯರ್ಥಿ ಹಣುಮಂತಪ್ಪ ಮಾವಿನಮರದ್ ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯಿಂದ ಯಾರು ಕಣಕ್ಕಿಳಿತಾರೆ ಎಂಬುದೇ ತೀವ್ರ ಕುತೂಹಲಕ್ಕೆ ಕಾರಣವಾಗಿದೆ..ಭಾನುವಾರ ಸಂಜೆಯೊಳಗೆ ಬಿಜೆಪಿ ಅಭ್ಯರ್ಥಿ ಫೈನಲ್ ಆಗುವ ಸಾಧ್ಯತೆ ಇದೆ..

LEAVE A REPLY

Please enter your comment!
Please enter your name here