Home District ಚಾಮುಂಡೇಶ್ವರಿ ಸೋಲನ್ನ ಮತ್ತೆ ನೆನೆದ ಸಿದ್ದರಾಮಯ್ಯ..! ಸಿದ್ದರಾಮಯ್ಯರನ್ನ ಧರ್ಮರಾಯರಿಗೆ ಹೋಲಿಸಿ ಹಾಡಿ ಹೊಗಳಿದ ಶಾಸಕ ಸುಧಾಕರ್…

ಚಾಮುಂಡೇಶ್ವರಿ ಸೋಲನ್ನ ಮತ್ತೆ ನೆನೆದ ಸಿದ್ದರಾಮಯ್ಯ..! ಸಿದ್ದರಾಮಯ್ಯರನ್ನ ಧರ್ಮರಾಯರಿಗೆ ಹೋಲಿಸಿ ಹಾಡಿ ಹೊಗಳಿದ ಶಾಸಕ ಸುಧಾಕರ್…

579
0
SHARE

ಕಳೆದ ವಿಧಾನಸಭಾ ಚುನಾವಣೆ ಸೋಲನ್ನು ಮಾಜಿ ಸಿಎಂ ಸಿದ್ದರಾಮಯ್ಯ ಇನ್ನೂ ಮರೆತಿಲ್ಲ. ಯಾವುದೇ ಕಾರ್ಯಕ್ರಮವಾದ್ರು ತಾವು ಸೋಲನ್ನು ಅನುಭವಿಸಿರುವುದನ್ನ ಪದೇ-ಪದೇ ಭಾಷಣದಲ್ಲಿ ಹೇಳಿ ಜನರ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಬಿಸಿಯೂಟ ಕಾರ್ಯಕ್ರಮ ನೀಡಿದೆ.. ರೈತರ ಸಾಲ ಮನ್ನಾ ಮಾಡಿದೆ.. ಎಲ್ಲಾ ಜಾತಿಯ ಬಡವರ ಹಸಿವು ನೀಗಿಸಲು ಅಕ್ಕಿ ನೀಡಿದೆ, ಆದ್ರೆ ಜಾತಿ ವಿರೋಧಿ ಅಂತಾ ಪಟ್ಟ ಕಟ್ಟಿ, ಹೊಟ್ಟೆಕಿಚ್ಚಿನಿಂದ ವಿರೋಧಿಗಳು ಒಗ್ಗಟ್ಟಾಗಿ ನನ್ನ ಸೋಲಿಸಿದ್ರು ಅಂತಾ ದೂರಿದ್ರು…

ಕಳೆದ ವಿಧಾನಸಭಾ ಚುನಾವಣೆ ಸೋಲನ್ನು ಮಾಜಿ ಸಿಎಂ ಸಿದ್ದರಾಮಯ್ಯ ಇನ್ನೂ ಮರೆತಿಲ್ಲ… ಹೋದೆಡೆ, ಬಂದೆಡೆಯಲ್ಲಿ ನನ್ನನ್ನು ವಿರೋಧಿಗಳು ಷಡ್ಯಂತ್ರ ಮಾಡಿ ಸೋಲಿಸಿದ್ರು ಅಂತಾ ಹೇಳುತ್ತಲೇ ಬರ್ತಿದ್ದಾರೆ… ಇಂದು ಚಿಕ್ಕಬಳ್ಳಾಪುರ ನಗರದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲೂ ಸಿದ್ದರಾಮಯ್ಯ ಭಾಷಣ ರಿಪೀಟ್ ಆಯ್ತು.. ಹಿಂದುಳಿದವರು, ಬಡವರು, ಅಲ್ಪಸಂಖ್ಯಾತರ ಏಳಿಗೆಗೆ ಕೆಲಸ ಮಾಡಿದ ನನ್ನ ವಿರುದ್ಧ ಪಟ್ಟಭದ್ರ ಹಿತಸಕ್ತಿಗಳು ಒಂದಾಗಿ ಚುನಾವಣೆಯಲ್ಲಿ ಸೋಲಿಸಿದವು ಅಂತಾ ಆರೋಪಿಸಿದ್ರು…

ಮಕ್ಕಳಿಗೆ ಬಿಸಿಯೂಟ ಕಾರ್ಯಕ್ರಮ ನೀಡಿದೆ.. ರೈತರ ಸಾಲ ಮನ್ನಾ ಮಾಡಿದೆ.. ಎಲ್ಲಾ ಜಾತಿಯ ಬಡವರ ಹಸಿವು ನೀಗಿಸಲು ಅಕ್ಕಿ ನೀಡಿದೆ… ಇಷ್ಟೆಲ್ಲಾ ಕೊಟ್ಟ ನನ್ನನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಲಾಯ್ತು.. ಜಾತಿ ವಿರೋಧಿ ಅಂತಾ ಪಟ್ಟ ಕಟ್ಟಿ, ಹೊಟ್ಟೆಕಿಚ್ಚಿನಿಂದ ವಿರೋಧಿಗಳು ಒಗ್ಗಟ್ಟಾಗಿ ನನ್ನ ಸೋಲಿಸಿದ್ರು ಅಂತಾ ದೂರಿದ್ರು..ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಕೆ.ಸುಧಾಕರ್, ಸಿದ್ದರಾಮಯ್ಯರನ್ನು ಧರ್ಮರಾಯನಿಗೆ ಹೊಲಿಸಿದ್ರು. ವಿರೋಧಿಗಳನ್ನು ಶಕುನಿಗೆ ಹೊಲಿಸಿ ಕುತಂತ್ರದಿಂದಲೇ ಸಿದ್ದರಾಮಯ್ಯರನ್ನ ಸೋಲಿಸಲಾಯ್ತು ಎಂದರು.

ಆದ್ರೆ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗ್ತಾರೆ ಅಂತ ಭವಿಷ್ಯ ನುಡಿದ್ರು.ಮತ್ತೊಂದೆಡೆ ಮಂಗಳೂರಿನಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದ ಪೂಜಾರಿ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು… ಕಾಂಗ್ರೆಸನ್ನು ಮುಗಿಸುವುದಕ್ಕಾಗಿಯೇ ಸಿದ್ದರಾಮಯ್ಯ ಪಕ್ಷಕ್ಕೆ ಬಂದಿದ್ದಾರೆ ಅಂತ ಜನಾರ್ದನ ಪೂಜಾರಿ ಟೀಕಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡರಿಂದಾಗಿ ಸರಕಾರ ಉಳಿದುಕೊಂಡಿದೆ ಅನ್ನುವ ಮೂಲಕ ಸರಕಾರದ ಅಸ್ಥಿರತೆಗೆ ಸಿದ್ದರಾಮಯ್ಯ ಕಾರಣ ಅನ್ನುವ ರೀತಿ ಟೀಕೆ ಮಾಡಿದ್ದಾರೆ.ಒಂದೆಡೆ ಸಿದ್ದರಾಮಯ್ಯ, ತಮ್ಮ ಸೋಲಿಗೆ ಕಾರಣರಾದ ಜೆಡಿಎಸ್ ಮುಖಂಡರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಾ ಬರ್ತಿದ್ದಾರೆ… ಇನ್ನೊಂದೆಡೆ ಕೆಲವು ಕೈ ನಾಯಕರು ಜೆಡಿಎಸ್ ನಾಯಕರನ್ನ ಒಲೈಸುತ್ತಿದ್ದಾರೆ.. ಕಾಂಗ್ರೆಸ್ ನಾಯಕರ ದ್ವಂದ್ವ ನೀತಿ ಪಕ್ಷಕ್ಕೆ ಮಾರಕ ಅನ್ನೋದನ್ನ ನಾಯಕರು ಮರೆತಂತೆ ಕಾಣುತ್ತಿದೆ…

LEAVE A REPLY

Please enter your comment!
Please enter your name here