Home Cinema ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿಗೆ ಲೋಕಲ್ ಲಾಂಗ್ವೇಜ್ ನಲ್ಲಿ ಅಶ್ಲೀಲ ಶಬ್ದಗಳಿಂದ ಫೇಸ್ ಬುಕ್ ನಲ್ಲಿ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿಗೆ ಲೋಕಲ್ ಲಾಂಗ್ವೇಜ್ ನಲ್ಲಿ ಅಶ್ಲೀಲ ಶಬ್ದಗಳಿಂದ ಫೇಸ್ ಬುಕ್ ನಲ್ಲಿ ಕಿರುಕುಳ..!? “ಕಿಡಿಗೇಡಿ’ಯ ಮಾನಗೇಡಿ ಕೆಲ್ಸಕ್ಕೆ ‘ವಿಜಯಲಕ್ಷ್ಮೀ’ ಕಣ್ಣೀರು..!

699
0
SHARE

ವಿಜಯಲಕ್ಷ್ಮೀ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಧರ್ಮ ಪತ್ನಿ. ದರ್ಶನ್ ಅಭಿಮಾನಿಗಳನ್ನು ಅತಿಯಾಗಿ ಪ್ರೀತಿಸುವ, ದರ್ಶನ್ ಅವರ ಚಿತ್ರಗಳನ್ನು ಗೌರವಿಸುವ, ಅವರ ಅಭಿಮಾನಿಗಳ ಅಭಿಮಾನಕ್ಕೆ ತಲೆಬಾಗುವ ವಿಜಯಲಕ್ಷ್ಮೀಗೆ, ಅಭಿಮಾನಿಯೊಬ್ಬನಿಂದ ಕುರುಕುಳ ಉಂಟಾಗಿದೆ. ಇದು ಸದ್ಯ ವಿಜಯಲಕ್ಷ್ಮೀ ಅವರ ಹೊಸದೊಂದು ತಲೆನೋವಿಗೆ ಕಾರಣವಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಸದಾ ಸಾಮಾಜಿಕ ಜಾಲತಾಣದಲ್ಲಿ
ತುಂಬಾನೇ ಆಕ್ಟೀವ್ ಆಗಿರುವ ಸ್ಟಾರ್ ಪತ್ನಿ. ದರ್ಶನ್ ಅವರ ಸಿನಿಮಾಗಳಿಗೆ ಸದಾ ಪ್ರೋತ್ಸಾಹ ನೀಡುವ ವಿಜಯಲಕ್ಷ್ಮೀಗೆ ಕಿಡಿಗೇಡಿಯೊಬ್ಬನಿಂದ ಕುರುಕುಳ ಉಂಟಾಗಿದೆ. ಆ ಮಾನಗೇಡಿ ಮಾಡಿರುವ ಕೆಲಸದಿಂದ ವಿಜಯಲಕ್ಷ್ಮಿ ಪೋಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.

ಹೌದು. ವಿಜಯಲಕ್ಷ್ಮಿಗೆ ಪುಂಡನೊಬ್ಬ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ವಿಜಯ್‌ಲಕ್ಷ್ಮೀ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಒಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಖಾತೆಯೊಂದನ್ನು ತೆರೆದಿದ್ದಾರೆ. ಫೇಸ್‌ಬುಕ್ ಖಾತೆಯಲ್ಲಿ ನಕಲಿ ಖಾತೆ ಸೃಷ್ಟಿಸಿದ್ದಾನೆ. ಆರೋಪಿ ತನ್ನ ಫೋಟೋ ಜೊತೆ ದರ್ಶನ್ ಪತ್ನಿ ಫೋಟೋ ಎಡಿಟ್ ಮಾಡಿ ‘ಮೈ ವೈಫ್’ ಎಂದು ಟ್ಯಾಗ್ ಮಾಡಿದ್ದಾನೆ.

ಈ ರೀತಿ ಕೆಲಸ ನಕಲಿ ಖಾತೆ ಮೂಲಕ ದರ್ಶನ್ ಪತ್ನಿ ಹಾಗೂ ಕುಟುಂಬಸ್ಥರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ವಿಜಯ್ ಲಕ್ಷ್ಮೀ ಆರೋಪಿಸಿದ್ದಾರೆ. ಈ ಮೂಲಕ ತನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಕಿಡಿಗೇಡಿ ವಿರುದ್ದ ದರ್ಶನ್ ಪತ್ನಿ ವಿಜಯ್ ಲಕ್ಷ್ಮಿ ಸೈಬರ್ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ರೀತಿ ದರ್ಶನ್ ಮತ್ತು ವಿಜಯ್ ಲಕ್ಷ್ಮೀ ಅವರ ಹೆಸರನ್ನು ಬಳಕೆ ಮಾಡಿಕೊಂಡಿರುವುದು ವಿಜಯಲಕ್ಷ್ಮೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೈಬರ್ ಪೋಲೀಸ್ ಠಾಣೆಯಲ್ಲಿ ವಿಜಯ ಲಕ್ಷ್ಮೀ ದೂರು ನೀಡಿದ್ದಾರೆ.

ಇನ್ನು ದೂರಿನ್ವಯ ಸೈಬರ್ ಪೋಲೀಸರು ಐಪಿಸಿ ಸೆಕ್ಷನ್ ಕಿಡಿಗೇಡಿಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದರ್ಶನ್ ಪತ್ನಿ ವಿಜಯ್‌ಲಕ್ಷ್ಮೀ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ೩೫೪(ಆ),೩೫೪ಂ(೧)(iv),(೫೦೫)(೫೦೭)(೪೨೦) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೋಧ ನಡೆಸಿದ್ದಾರೆ.

ಅದೇನೇ ಇದ್ರು.. ಸದ್ಯ ದರ್ಶನ್ ಮತ್ತು ವಿಜಯ್ ಲಕ್ಷ್ಮಿ ಅವರ ಹೆಸರಿನಲ್ಲಿ ನಕಲಿ ಖಾತೆ ಮೂಲಕ ಸಾಕಷ್ಟು ಪಾಲೋವರ‍್ಸ್‌ಗಳನ್ನು ಹೊಂದಬಹುದೆಂದು ಭ್ರಮೆಯಲ್ಲಿದ್ದ ವ್ಯಕ್ತಿಯ ವಿರುದ್ದ ಪ್ರಕರಣದಾಖಲಾಗಿದ್ದು, ಈ ರೀತಿ ನಕಲಿ ಖಾತೆ ತೆರೆಯುವ ಆಲೋಚನೆಯಲ್ಲಿದ್ದ ಪುಂಡರಿಗೆ ಇದೊಂದು ಪಾಠವಾಗಲಿದೆ.

LEAVE A REPLY

Please enter your comment!
Please enter your name here