Home Cinema ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಆಕ್ಷನ್-ಕಟ್ ಹೇಳ್ತಾರೆ ರಾಜಕುಮಾರ ನಿರ್ದೇಶಕ..!? ವಿಷಯ ಕೇಳಿ ದಚ್ಚು ಫ್ಯಾನ್ಸ್...

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಆಕ್ಷನ್-ಕಟ್ ಹೇಳ್ತಾರೆ ರಾಜಕುಮಾರ ನಿರ್ದೇಶಕ..!? ವಿಷಯ ಕೇಳಿ ದಚ್ಚು ಫ್ಯಾನ್ಸ್ ಕುಣಿದ್ರು ತಕತಕ..!

769
0
SHARE

ಆಂಕರ್- ಯಜಮಾನನ ಮನಸ್ಸು ಈಗ ರಾಜಕುಮಾರನಿಗೆ ಮಿಡಿಯುತ್ತಿದೆ. ರಾಮಾಚಾರಿಯ ಹೃದಯ ದಾಸನಿಗೆ ಹೊಡೆದುಕೊಳ್ಳುತಿದೆ. ಕನ್ನಡ ಚಿತ್ರರಂಗವೇ ತಿರುಗಿನೋಡುವಂತಹ ದೊಡ್ಡ ಮ್ಯಾಜಿಕ್ ಕ್ರಿಯೆಟ್ ಆಗ್ತಿದೆ. ಅರೇ ಅರ್ಥನೇ ಆಗ್ತಿಲ್ಲವಲ್ಲ ಅಂತ ತಲೆ ಕೆರೆದುಕೊ ಬೇಡಿ. ಕೇಳ್ರಪ್ಪೊ ಕೇಳ್ರಿ . ರಾಜಕುಮಾರ ಖ್ಯಾತಿಯ ಸಂತೋಷ್ ಆನಂದ್ರಾಮ್ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಒಂದು ಸಿನಿಮಾ ಮಾಡ್ತಾರಂತೆ.

ಈ ಸರ್‌ಪ್ರೈಸಿಂಗ್ ಸ್ವೀಟ್‌ನ್ಯೂಸ್ ಈಗ ಗಾಂದಿನಗರದ ಗಲ್ಲಿಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿಬಿಟ್ಟಿದೆ. ಚಾಲೆಂಜಿಂಗ್ ಸ್ಟಾರ್ ಸಿನಿಮಾ ಅಂದ್ರೇನೆ ಡಿ ಬಾಸ್ ಅಭಿಮಾನಿಗಳಿಗೆ ಹಬ್ಬದೂಟ. ಅದರಲ್ಲೂ ಸ್ಯಾಂಡಲ್‌ವುಡ್‌ನ ಎರಡು ರೆಕಾರ್ಡ್ ಬ್ರೇಕಿಂಗ್ ಸಿನಿಮಾಗಳನ್ನ ಕೊಟ್ಟಿರೋ ಸಂತೋಷ್ ಆನಂದ್ರಾಮ್ ದಚ್ಚುಗೆ ಆಕ್ಷನ್-ಕಟ್ ಹೇಳ್ತಾರೆ ಅಂದ್ರೇ ಮುಗಿತುಬಿಡಿ, ಆ ಸಿನಿಮಾ ಅಭಿಮಾನಿಗಳ ಪಾಲಿಗೆ ಮನರಂಜನೆಯ ಟೋಟಲ್ ಪ್ಯಾಕೇಜ್ ಆಗುತ್ತೆ ಎನ್ನುವುದ್ರಲ್ಲಿ ಡೌಟೇ ಬೇಡ. ಈ ಹ್ಯಾಪಿ ನ್ಯೂಸ್ ಕೇಳಿ ಇಬ್ಬರ ಫ್ಯಾನ್‌ಗಳು ಈಗ ಹಬ್ಬ ಮಾಡೋ ಮೂಡ್‌ನಲ್ಲಿದಾರೆ.

ಯಾವಾಗ ಸಂತೋಷ್ ನಿರ್ದೇಶನದ ರಾಜಕುಮಾರ ದಾಖಲೆಗಳ ಹರಿಕಾರ ಎನಿಸಿಕೊಳ್ತೊ ಆಗಿನಿಂದಲೇ ಕನ್ನಡದ ದೊಡ್ಡ ಸ್ಟಾರ್‌ಗಳು ಸಂತೋಷ್‌ಗೆ ನಮಗೂ ಸಿನಿಮಾ ಮಾಡಿಕೊಡಿ ಎನ್ನುವ ಇನ್ವಿಟೇಶನ್ ಇಟ್ಟುಬಿಟ್ಟಿದ್ರು. ಸಂತೋಷ್ ಯಾರ ಕರೆಗೂ ಕಿವಿಕೊಡದೇ ಪವರ್‌ಸ್ಟಾರ್ ಪುನೀತ್‌ಗೋಸ್ಕರ ಯುವರತ್ನ ಅನೌನ್ಸ್ ಮಾಡಿಯೇಬಿಟ್ರು. ಆದರೆ ಈಗ ಬಾಕ್ಸ್‌ಆಫೀಸ್ ಸುಲ್ತಾನನಿಗೆ ಸಂತೋಷ್ ಆನಂದ್‌ರಾಮ್ ಒಂದು ಸಿನಿಮಾ ಮಾಡೋದು ಬಹುತೇಕ ಫಿಕ್ಸ್ ಆಗಿದೆ.

ದರ್ಶನ್ ಅಭಿನಯದ ಯಜಮಾನ ಸಿನಿಮಾ ಪೋಸ್ಟರ್‌ನಲ್ಲಿ ಯಾವಾಗ ಸಂತೋಷ್ ಆನಂದ್‌ರಾಮ್ ಹೆಸರು ಕಾಣಿಸಿತೋ ಆಗಲೇ ಯಜಮಾನ ಚಿತ್ರದಲ್ಲಿ ಸಂತೋಷ್ ಒಂದು ಸ್ಪೆಷಲ್ ಸಾಂಗ್ ಬರೆದಿದ್ದಾರೆ ಎನ್ನುವ ಮ್ಯಾಟರ್ ಆಚೆ ಬಂದಿತ್ತು. ದರ್ಶನ್‌ಗೂ ಸಂತೋಷ್ ಕಾರ್ಯವೈಖರಿ ತುಂಬಾ ಇಷ್ಟವಾಗಿದೆಯಂತೆ. ಮುಂದೆ ಬಿಡುಗಡೆಯಾಗಲಿರುವ ಯಜಮಾನ ಸಿನಿಮಾದ ನಾಲ್ಕನೇ ಹಾಡನ್ನ ಸಂತೋಷ್ ಬರೆದಿದ್ದಾರೆ ಎಂಬ ಗುಸುಗುಸು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಇದರ ಬೆನ್ನಲ್ಲೇ ಇವರಿಬ್ಬರ ಸಿನಿಮಾ ಯಾವಾಗ ಸೆಟ್ಟೆರುತ್ತೆ ? ಅದರ ಕಥೆ ಹೇಗಿರುತ್ತೆ? ಬಜೆಟ್ ಎಷ್ಟರಬಹುದು ಎನ್ನುವ ಲೆಕ್ಕಚಾರ ಶುರುವಾಗಿದೆ. ಕೆಲವು ಮೂಲಗಳ ಪ್ರಕಾರ ಸಂತೋಷ್ ದರ್ಶನ್‌ಗೋಸ್ಕರ ಒಂದು ಮಾಸ್ ಆಕ್ಷನ್ ಥ್ರಿಲ್ಲರ್ ಮಾಡಲು ಸ್ಕೆಚ್ ಹಾಕಿದ್ದರಂತೆ. ಈ ವಿಚಾರವಾಗಿ ದರ್ಶನ್ ಕೂಡ ತುಟಿಬಿಚ್ಚದೆ ಗಪ್‌ಚುಪ್ ಆಗಿಬಿಟ್ಟಿದಾರೆ.

ಆದರೆ ಸಂತೋಷ್ ಈ ವಿಷಯವನ್ನ ನಾನೇ ಮುಂದೆ ಬಹಿರಂಗಪಡಿಸ್ತೀನಿ ಎಂದು ದರ್ಶನ್ ಅಭಿಮಾನಿಗಳಿಗೆ ಲೈಟಾಗಿ ಖುಷಿ ಕೊಟ್ಟಿದಾರೆ. ಅದರಲ್ಲೂ ಯುವರತ್ನ ಸಿನಿಮಾ ಕಂಪ್ಲಿಟ್ ಆಗೋವರೆಗೂ ಯಾವುದನ್ನೂ ಫೈನಲ್ ಮಾಡೋಕೆ ಸಾಧ್ಯವಿಲ್ಲದ ಕಾರಣ ದಚ್ಚುಗೆ ಪಕ್ಕಾ ಸಂತೋಷ್ ಸಿನಿಮಾ ಮಾಡ್ತಾರೆ ಅನ್ನೋದು ಮಾತ್ರ ಕನ್‌ಫರ್ಮ್ ಆಗಿದೆ. ಈಗ ಸದ್ಯಕ್ಕೆ ದಚ್ಚು ಫ್ಯಾನ್ಸ್ ಸಂತೋಷ್ ಯಜಮಾನ ಚಿತ್ರಕ್ಕೆ ಬರೆದಿರೋ ಆ ಸ್ಪೆಷಲ್ ಸಾಂಗ್ ಕೇಳಿ ಖುಷಿಪಟ್ಟುಕೊಳ್ಳಬೇಕಷ್ಟೆ.

LEAVE A REPLY

Please enter your comment!
Please enter your name here