Home Cinema ಚಾಲೆಂಜಿಂಗ್ ಸ್ಟಾರ್ ರಾಂಗ್ ಆಗಿದ್ದರ ಹಿಂದಿತ್ತು ಅದೊಂದೆ ಚಿಂತೆ..! “ಸಿನಿಮಾ ಪ್ರೀತಿಗೆ ತಪ್ಪು ಮಾಡ್ತಿರೋರಿಗೆ ಪ್ರಶ್ನೆ...

ಚಾಲೆಂಜಿಂಗ್ ಸ್ಟಾರ್ ರಾಂಗ್ ಆಗಿದ್ದರ ಹಿಂದಿತ್ತು ಅದೊಂದೆ ಚಿಂತೆ..! “ಸಿನಿಮಾ ಪ್ರೀತಿಗೆ ತಪ್ಪು ಮಾಡ್ತಿರೋರಿಗೆ ಪ್ರಶ್ನೆ ಕೇಳೋದೇ ತಪ್ಪೇ”..! {Darshan Is Rigth}…

545
0
SHARE

ದರ್ಶನ್. ಚಂದನವನದ ಚಕ್ರವರ್ತಿ. ಅಭಿಮಾನಿಗಳ ಅಭಿಮಾನಿ. ತನ್ನ ಸುತ್ತ ಮುತ್ತ ಇದ್ದವರನ್ನ ಬೆಳೆಸುತ್ತಾ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ.. ಹೊಸ ಪ್ರತಿಭೆಗಳ ಬೆನ್ನಿಗೆ ನಿಂತು ಪ್ರೋತ್ಸಾಹಿಸುತ್ತಾ ಬರ‍್ತಿರುವ ದರ್ಶನ್ ಮೇಲೆ ಇತ್ತೀಚಿಗೆ ಆರೋಪವೊಂದನ್ನ ಹೊರಿಸಲಾಯ್ತು. ಅದುವೇ ದರ್ಶನ್ ಯಜಮಾನ ಚಿತ್ರದ ಸೆಟ್‌ನಲ್ಲಿ ಸಹಕಲಾವಿದನ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋದು..

ದರ್ಶನ್ ಸಹಕಲಾವಿದ ಶಿವು ಮೇಲೆ ಹಲ್ಲೆ ಮಾಡಿದ್ದಾರೆ ಅನ್ನುವ ಆರೋಪವನ್ನ ಇತ್ತೀಚಿಗೆ ಮಾಡಲಾಯ್ತು. ಇದೇ ಆರೋಪ.. ಅಭಿಮಾನಿಗಳಲ್ಲೊಂದು ಆತಂಕಕ್ಕೂ ಕಾರಣವಾಗಿತ್ತು. ಗಾಂಧಿನಗರದಲ್ಲಿ ಸಂಚಲನವನ್ನೇ ಸೃಷ್ಠಿಸಿತ್ತು.ಹಾಗಿದ್ದರೆ, ದರ್ಶನ್ ನಿಜಕ್ಕೂ ಹಲ್ಲೆ ಮಾಡಿದ್ದಾರಾ, ಹೀಗೊಂದು.. ಪ್ರಶ್ನೆಯನಿಟ್ಟು ತಲಾಶೆ ಮಾಡಲು ಇಳಿದಾಗ, ಯಜಮಾನ ಚಿತ್ರದ ನಿರ್ಮಾಪಕಿ ಇಲ್ಲ ಅಂದರು. ಕೈ ಮಾಡಿರುವ ವಿಚಾರವನ್ನ ತಳ್ಳಿ ಹಾಕಿದ್ದರು.

ಆದ್ರೆ ದರ್ಶನ್ ಗದರಿದ್ದು ನಿಜ ಅಂದಿದ್ದರು. ಹೌದು, ನಿಮಗೆ ಗೊತ್ತಿರಲಿ ದರ್ಶನ್ ತುಂಬಾನೇ ಸಾಫ್ಟ್ ವ್ಯಕ್ತಿ. ಹಾಗಂತ, ಅತಿಯಾದ ತರ‍್ಲೆಗಳನ್ನೂ ಇವರು ಸಹಿಸಲ್ಲ. ಬಿಕೌಜ್ ದರ್ಶನ್ ಎಷ್ಟು ಶಾಂತವಾಗಿರ‍್ತಾರೋ, ಅಷ್ಟೇ ಕೋಪನೂ ಮಾಡ್ಕೊತಾರೆ. ಇದೇ ದರ್ಶನ್ ಕೋಪ ಹಬ್ಬಿಸಲಾಗಿದ್ದ ಸುದ್ದಿಯನ್ನ ಕೆಲವರನ್ನ ನಂಬುವಂತೆ ಮಾಡಿದ್ದು.ಅಷ್ಟಕ್ಕೂ ದರ್ಶನ್ ಸಹಕಲಾವಿದ ಶಿವುಗೆ ಅವಾಜ್ ಹಾಕಿದ್ದೇಕೆ, ಹೀಗೊಂದು ಪ್ರಶ್ನೆಗುತ್ತರವಾಗಿ ಕಣ್ಣೀಗೆ ಕಾಣೋದೇ ದರ್ಶನ್‌ಗೆ ಸಿನಿಮಾ ಮೇಲೆ ಇರುವ ಪ್ರೀತಿ ಹಾಗೂ ನಿರ್ಮಾಪಕರ ಮೇಲಿರುವ ಭಕ್ತಿ.

ಹೌದು, ನಿಮಗೆ ಗೊತ್ತಿರಲಿ ಸಿನಿಮಾ ರಾತ್ರೋ ರಾತ್ರಿ ಆಗುವಂತಹ ಮಿರ‍್ಯಾಕಲ್ ಅಂತೂ ಖಂಡಿತ ಅಲ್ವೇ ಅಲ್ಲ. ಒಂದು ಸಿನಿಮಾಗೆ ಅದೆಷ್ಟೋ ಜನ ಹಗಲಿರುಳು ಕಷ್ಟ ಪಡ್ತಿರ‍್ತಾರೆ. ಸಿಂಪಲ್ಲಾಗ್ ಹೇಳಬೇಕಂದ್ರೆ ಸಿನಿಮಾದ ಪ್ರತಿಯೊಂದು ಸನ್ನಿವೇಶದಲ್ಲೂ ಅದೆಷ್ಟೋ ಕಲಾವಿದರ, ತಂತ್ರಜ್ಞರ ಬೆವರಿನ ವಾಸನೆ ಇರುತ್ತೆ.ಇನ್ನು, ಒಂದು ಸಿನಿಮಾಗೆ ಬಂಡವಾಳ ಹೂಡುವ ನಿರ್ಮಾಪಕರ ಸ್ಥಿತಿ ಬಗ್ಗೆನೂ ಇಲ್ಲಿ ಯೋಚನೇ ಮಾಡಲೇಬೇಕಾಗುತ್ತೆ.

ಹೌದು, ಸಾಲ ಸೋಲ ಮಾಡಿ ಬಡ್ಡಿಗೆ ದುಡ್ಡು ಎತ್ತಿ ಚಿತ್ರಕ್ಕೆ ದುಡ್ಡು ಹೂಡುವ ನಿರ್ಮಾಪಕರ ಜೀವನವೇ ಸಿನಿಮಾದ ಸೋಲು ಗೆಲುವಿನ ಮೇಲಿರುತ್ತೆ. ಹೀಗಿರುವಾಗ.. ಅದ್ಯಾರೋ ತಮ್ಮ ಸಾಮಾಜಿಕ ಜಾಲತಾಣಗಳ ಪೇಜ್ ಲೈಕ್ಸ್‌ಗಳಿಗಾಗಿ, ಮೊಬೈಲ್‌ನಲ್ಲಿ ದೃಶ್ಯಗಳನ್ನ ಸೆರೆ ಹಿಡಿದ್ರೆ ಸಿನಿಮಾವನ್ನ ನೋಡಲು ಪ್ರೇಕ್ಷಕರು ಯಾಕೆ ಚಿತ್ರಮಂದಿರಕ್ಕೆ ಬರಬೇಕು. ಪ್ರೇಕ್ಷಕರು ಬಾರ‍್ದೇ ಇದ್ದಲ್ಲಿ ನಿರ್ಮಾಪಕರ ಪಾಡು ಏನಾಗಬೇಕು.

ಇವೆಲ್ಲಾ ಕಾರಣಗಳನ್ನ ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ, ದರ್ಶನ್ ಗದರಿದ್ದರಲ್ಲಿ ತಪ್ಪೇನಿದೆ ಅಂತ ಅನಿಸ್ದೇ ಇರಲ್ಲ. ಹೌದು, ಮೊಬೈಲ್‌ನಲ್ಲಿ ಚಿತ್ರದ ಚಿತ್ರೀಕರಣವನ್ನ ಸೆರೆಹಿಡಿದ್ರೆ.. ಅಫ್‌ಕೋರ್ಸ್ ಸಿನಿಮಾವನ್ನ ಪ್ರೀತಿಸುವವರು ಯಾರೇ ಆಗಿರ‍್ಲಿ ಅವ್ರಿಗೆ ಕೋಪ ಬಂದೇ ಬರುತ್ತೆ. ಅದು, ಸಿನಿಮಾದವ್ರ ಕಷ್ಟ ನಿರ್ಮಾಪಕರ ನಷ್ಟವನ್ನ ಅರಿತ ಸಿನಿಮಾದವ್ರೇ ಹೀಗೊಂದು ಹೀನ ಕೆಲ್ಸಕ್ಕೆ ಕೈ ಹಾಕಿದ್ರೆ ಪಿತ್ತ ನೆತ್ತಿಗೇರಿಯೇ ಏರುತ್ತೆ.

ಹಾಗಾಗೇ, ಸಹಜವಾಗಿಯೇ ದರ್ಶನ್‌ಗೂ ಕೋಪ ಬಂದಿದೆ. ನೀನೂ ಒಬ್ಬ ಚಿತ್ರ ತಂಡದವನಾಗಿ ನಿರ್ಮಾಪಕರ ಮೇಲೆ ಕಾಳಜಿ ಇರಬೇಡವೇ, ನೀನು ಈ ಥರ ಚಿತ್ರೀಕರಣದ ದೃಶ್ಯಾವಳಿಗಳನ್ನು ಫೇಸ್‌ಬುಕ್, ಇನ್ಸ್ಟಾಗ್ರಾಮ್‌ಗಳಲ್ಲಿ ಹಾಕಿಕೊಂಡರೆ ಚಿತ್ರದ ಮೇಲಿನ ಕುತೂಹಲ ಎಲ್ಲಿ ಉಳಿಯುತ್ತೆ. ನಿನ್ನಂಥವರಿಂದಲೇ ಸಿನಿಮಾಗಳ ಗುಟ್ಟು ಚಿತ್ರೀಕರಣಕ್ಕೆ ಮುನ್ನವೇ ಬಯಲಾಗುತ್ತೆ. ಇಂಥಾ ಕೆಲಸ ಮಾಡೋಕೆ ನಾಚಿಕೆ ಆಗೋದಿಲ್ವಾ’ ಅಂತೆಲ್ಲ ಬೈದಿದ್ದಾರೆ.ತಿಳಿ ಹೇಳಿದ್ದಾರೆ.

ಮತ್ತು ಸ್ವತಃ ತಾವೇ ಸಹಕಲಾವಿದ ಶಿವು ಮೊಬೈಲಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.ನಿಮಗೆ ಗೊತ್ತಿರಲಿ, ಒಂದು ಸಿನಿಮಾದ ಚಿತ್ರೀಕರಣ ಓಪನ್ ಪ್ಲೇಸಿನಲ್ಲಿ ನಡೆಯುವ ಸಂದರ್ಭದಲ್ಲಿ ಅಭಿಮಾನಿಗಳು ಅಭಿಮಾನದ ಉದ್ವೇಗದಲ್ಲಿ ಇಂಥಾದ್ದನ್ನು ಮಾಡುತ್ತಾರೆ. ಅದು, ಯಾರಿಂದನೂ ತಪ್ಪಿಸಲು ಆಗಲ್ಲ. ಆದರೆ ಸಂಬಳ ಪಡೆಯುವ ಓರ್ವ ಸಹ ಕಲಾವಿದನಾಗಿ ಇಂಥಾ ಕೆಲಸ ಮಾಡೋದು ಅಕ್ಷಮ್ಯವೇ.

ಇದು ನಮ್ಮ ಮಾತಲ್ಲ ಬದ್ಲಿಗೆ ಖುದ್ದು ಛಾಲೆಂಜಿಂಗ್ ಸ್ಟಾರ್ ದರ್ಶನ್ ಮಾತು.ಅದೇನೆ ಇರ‍್ಲಿ, ದರ್ಶನ್ ನಿರ್ಮಾಪಕ ಬಗ್ಗೆ ಕಾಳಜಿ ಹೊಂದಿರುವ ನಟ. ಇದೇ ಕಾಳಜಿನಿಂದನೇ ದರ್ಶನ್ ಚಿತ್ರೀಕರಣದ ದೃಶ್ಯಗಳನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುವದನ್ನ ಸಹಿಸಲ್ಲ. ಹಾಗಾಗೇ, ಗದರಿದ್ದಾರೆ. ಮುಂದಿನ ದಿನಗಳಲ್ಲಾದ್ರೂ ಮೊಬೈಲ್ ಪಿಡುಗು ಚಿತ್ರರಂಗದಿಂದ ತೊಲಗುತ್ತಾ, ಸಿನಿಮಾದವರ ಕಷ್ಟ ಹಾಗೂ ನಷ್ಟವನ್ನ ಜನಸಾಮಾನ್ಯರು ಬೇಡ ಅಟ್‌ಲಿಸ್ಟ್ ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿರುವವ್ರಾದ್ರೂ ಅರ್ಥ ಮಾಡ್ಕೋತಾರಾ, ಉತ್ತರ ಕಾಲವೇ ನೀಡಬೇಕು…

LEAVE A REPLY

Please enter your comment!
Please enter your name here