Home District “ಚಿಕ್ಕಂದಿನಿಂದಲೂ ಕುಮಾರಸ್ವಾಮಿಯನ್ನು ನೋಡಿದ್ದೇವೆ, ಅವರು ಭಾವನಾತ್ಮಕ ಜೀವಿ” ಸಿಎಂ ಪರ ನಿಂತ ಜಲಸಂಪನ್ಮೂಲ ಸಚಿವ ಡಿ...

“ಚಿಕ್ಕಂದಿನಿಂದಲೂ ಕುಮಾರಸ್ವಾಮಿಯನ್ನು ನೋಡಿದ್ದೇವೆ, ಅವರು ಭಾವನಾತ್ಮಕ ಜೀವಿ” ಸಿಎಂ ಪರ ನಿಂತ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್..!?

448
0
SHARE

ಸಿಎಂ ಎಚ್ ಡಿ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ನಾಯಕರ ಆರೋಪ ವಿಚಾರ.ಸಿಎಂ ಪರ ನಿಂತ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್.ಸಿಎಂಗೆ ಆಡಳಿತ ನಡೆಸಲು ನಾವೆಲ್ಲಾ ಬಿಡೋಣ.ಚಿಕ್ಕಂದಿನಿಂದ ಮುಖ್ಯಮಂತ್ರಿಗಳಿಗೆ ನೋಡಿದ್ದೇವೆ. ಅವ್ರು ಒಂಥರಾ ಭಾವನಾತ್ಮಕ ಜೀವಿ.
ಸಾಕಷ್ಟು ವಿಚಾರಗಳಲ್ಲಿ ಅವರು ಕಣ್ಣೀರು ಹಾಕಿದ್ದಿದೆ…

ಚುನಾವಣೆ ವೇಳೆ, ಯಾರೋ ಅಂಗವಿಕಲನನ್ನ ನೋಡಿ ಅವರು ಕಣ್ಣೀರು ಹಾಕಿದ್ದಿದೆ.ಅವರು ಸ್ವಲ್ಪ ಭಾವನಾತ್ಮಕ ಜೀವಿ..ಮುಖ್ಯಮಂತ್ರಿಗಳು ಸಂತೋಷವಾಗಿದ್ರೆ ರಾಜ್ಯ ಸಂತೋಷವಾಗಿರುತ್ತೆ.ನಾವೆಲ್ಲ ಸೇರಿ ಸರ್ಕಾರವನ್ನ ಬಲಪಡಿಸಬೇಕಿದೆ.ಕೋಳಿವಾಡ ಸೇರಿ ಇತರೆ ಕಾಂಗ್ರೆಸ್ ಮುಖಂಡರ ಹೇಳಿಕೆ ವಿಚಾರ…

ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡೋದು ಬೇಡ.ಈಗ ಹೇಳಿಕೆ ನೀಡಿದ್ದಾಗಿದೆ. ಮುಂದೆ ಯಾರೂ ನೀಡೋದು ಬೇಡ.ಬಿಜೆಪಿ ಅವ್ರು ಸ್ವಲ್ಪ ಅರ್ಜೆಂಟ್ ನಲ್ಲಿದ್ದಾರೆ.ಅಷ್ಟೊಂದು ಆತುರ ಬೇಡ. ದಕ್ಷಿಣ ಭಾರತದ ಯಾವುದೋ ಮೂಲೆಯಲ್ಲಿ ಆಡಳಿತ ಮಾಡ್ತಿದ್ದೇವೆ.ಸ್ವಲ್ಪ ದಿನ ನಮ್ಮ ಆಡಳಿತ ನೋಡಿ, ಆತುರ ಪಡಬೇಡಿ.ಇಂದು ರಾತ್ರಿ ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ಭೇಟಿ ಬಗ್ಗೆ ನಿರ್ಧಾರವಿಲ್ಲ..

ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ.ಇನ್ನು, ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ರಾಜ್ಯ ಬಿಜೆಪಿ ಮತ್ತೆ ವ್ಯಂಗ್ಯವಾಡಿದೆ. ಕಣ್ಣೀರು ಹಾಕೋ ಬದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಕೊಟ್ಟ ಭರವಸೆ ಈಡೇರಿಸಲಾಗದೇ ಹೆಚ್ಡಿಕೆ ಕಣ್ಣೀರು ಹಾಕ್ತಿದ್ದಾರೆ. ಸಿಎಂ ಸ್ಥಾನಕ್ಕೆ ಅಸಮರ್ಥರಾದರೆ ಕಣ್ಣೀರು ಹಾಕೋದು ಬೇಕಿಲ್ಲ.ಬದಲಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಂತ ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ..

LEAVE A REPLY

Please enter your comment!
Please enter your name here