Home District ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ಹಣದ ಹೊಳೆಯದ್ದೇ ಚರ್ಚೆ..! ಚಿನ್ನದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ‌ ನಿಂತಿರುವ ಜನ

ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ಹಣದ ಹೊಳೆಯದ್ದೇ ಚರ್ಚೆ..! ಚಿನ್ನದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ‌ ನಿಂತಿರುವ ಜನ

5281
0
SHARE

ಆ ಕ್ಷೇತ್ರದಲ್ಲಿ ಉಪಚುನಾವಣೆ ಮುಗಿದು ಫಲಿತಾಂಶ ಹೊರಬೀಳುತ್ತಿದ್ದಂತೆ ಅತ್ತ ಗೆಲುವು ಸಾಧಿಸಿದ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಸಂಭ್ರಮದಲ್ಲಿ ಬ್ಯುಜಿಯಾಗಿದ್ರೆ, ಇತ್ತ ಕ್ಷೇತ್ರದ ಜನ ಚಿನ್ನಾಭರಣ ಕೊಂಡುಕೊಳ್ಳುವಲ್ಲಿ ಬ್ಯುಜಿಯಾಗಿದ್ದಾರೆ. ಅರೆ ಅದೇನು ಜನ ಚಿನ್ನಾಭರಣ ಕೊಂಡುಕೊಳ್ಳೋಕೂ ಚುನಾವಣೆಗೂ ಅದೇನು ಸಂಬಂದ ಅಂತ ಅಚ್ಚರಿಯಾದ್ರಾ.. ಹಾಗಾದ್ರೆ ನೀವು ಈ ಸ್ಟೋರಿ ಓದಲೇಬೇಕು

ಚಿಕ್ಕಬಳ್ಳಾಪುರ ವಿದಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಫಲಿತಾಂಶ ಹೊರಬಿದ್ದು ಸಂಭ್ರಮವನ್ನು ಆಚರಿಸಿ ಆಯ್ತು.ಈಗ ಏನಿಂದ್ರು ಯಾವ ಪಕ್ಷದ ಅಭ್ಯರ್ಥಿಗಳು ಎಷ್ಟು ಹಣ ಹರಿಸಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ ಯಾಕೆಂದ್ರೆ ಇನ್ನೂ ಮೂರು ಪಕ್ಷದ ಘಟಾನುಘಟಿ ನಾಯಕರು ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಪ್ರತಿಷ್ಟೆಯಾಗಿ ತೆಗೆದುಕೊಂಡು ಹಣದ ಹೊಳೆಯನ್ನೇ ಹರಿಸಿದ್ದರು. ಇದ್ರ ಪರಿಣಾಮವಾಗಿ ಕ್ಷೇತ್ರದ ಜನ ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿರಸ್ತೆಯ ಚಿನ್ನದಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಚಿನ್ನಾಭರಣ ಖರೀದಿಯಲ್ಲಿ ಬ್ಯುಜಿಯಾಗಿದ್ದಾರೆ.. ಗ್ರಾಹಕರಿಲ್ಲದೆ ಸದಾ ಖಾಲಿ ಖಾಲಿ ಹೊಡೆಯುತ್ತಿದ್ದ ಚಿನ್ನದಂಗಡಿಗಳಿಗೆ ಚುನಾವಣೆಯಿಂದ ಈಗ ಶುಕ್ರದೆಸೆ ಬಂದಂತಾಗಿದೆ.

ಮತದಾನಕ್ಕೂ ಮುನ್ನ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮಗೆ ಮತ ನೀಡುವಂತೆ ಮತದಾರರಿಗೆ ಕಂತೆ ಕಂತೆ ಹಣ, ಮದ್ಯ, ಮಾಂಸ ಸೇರಿದಂತೆ ಆಕರ್ಷಕ ಗಿಫ್ಟ್ ಗಳನ್ನು ನೀಡಿ ಇನ್ನಿಲ್ಲದ ಆಮಿಷಗಳನ್ನ ಒಡ್ಡಿದ್ದರು ಎನ್ನುವ ಮಾತುಗಳು ಕೇಳಿಬಂದಿವೆ. ಇನ್ನೂ ಚುನಾವಣೆ ವೇಳೆ ಬಂದ ಹಣದಿಂದ ಮತದಾರರು ಶಾಪಿಂಗ್ ಹಾಗೂ ಚಿನ್ನಾಭರಣವನ್ನು ಕೊಳ್ತಿದ್ದಾರೆ. ಇದೆಲ್ಲವನ್ನು ನೋಡಿದ ಸಾಮಾಜಿಕ ಹೋರಾಟಗಾರ ಕೃಷ್ಣನ್ ಈ ರೀತಿ ಮತದಾರರು ಹಣ, ಗಿಫ್ಟ್ ಗಳನ್ನ ಪಡೆದು ತಮ್ಮ ಮತಗಳನ್ನ ಮಾರಿಕೊಳ್ಳೋದ್ರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದಂತೆ ಎಂದಿದ್ದಾರೆ.

ಚಿಕ್ಕಬಳ್ಳಾಪುರ ಉಪಚುನಾವಣೆಯ ಜಾತ್ರೆಯಲ್ಲಿ ಅಭ್ಯರ್ಥಿಗಳು ಮತದಾರರಿಗೆ ಹಣದ ಹೊಳೆ ಹರಿಸಿದ್ದಾರೋ ಇಲ್ವೋ ಗೊತ್ತಿಲ್ಲ.. !! ಆದ್ರೆ ಉಪಚುನಾವಣೆ ಮುಗಿಯುತ್ತಿದ್ದಂತೆ ಜನ ಚಿನ್ನಾಭರಣ ಕೊಳ್ಳೋದ್ರಲ್ಲಿ, ವಿಪರೀತ ಶಾಪಿಂಗ್ ಮಾಡಲು ಮುಗಿಬಿದ್ದಿರೋದು ಹತ್ತು ಹಲವು ಅನುಮಾನಗಳನ್ನ ಹುಟ್ಟಿಹಾಕಿರೋದಂತೂ ಸತ್ಯ.. ಒಟ್ಟಿನಲ್ಲಿ “ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ” ಅಂತಾರಲ್ಲಾ ಹಾಗೆ ಇಲ್ಲಿ ಮತದಾರರು ಜಾಣರಾದ್ರಾ.. ಅಥವಾ ಗೆದ್ದ ಅಭ್ಯರ್ಥಿಗಳು ಜಾಣರಾದ್ರಾ ಅನ್ನೋದೆ ಸಧ್ಯಕ್ಕಿರುವ ಪ್ರಶ್ನೆ..

LEAVE A REPLY

Please enter your comment!
Please enter your name here