Home District ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನೀಫಾ ವೈರಸ್‌ಗೆ ಪ್ರತಿಭಾನ್ವಿತ ವಿಧ್ಯಾರ್ಥಿನಿಯೋರ್ವಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ..

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನೀಫಾ ವೈರಸ್‌ಗೆ ಪ್ರತಿಭಾನ್ವಿತ ವಿಧ್ಯಾರ್ಥಿನಿಯೋರ್ವಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ..

2251
0
SHARE

ಕೇರಳದಲ್ಲಿ ಮರಣಮೃದಂಗ ಬಾರಿಸಿದ ನಿಫಾ ವೈರಸ್ ಇದೀಗ ರಾಜ್ಯದಲ್ಲೂ ಆತಂಕ ಮನೆ ಮಾಡಿದೆ.. ಇದಕ್ಕೆ ಪುಷ್ಟಿ ನೀಡುವಂತೆ ಪ್ರತಿಭಾನ್ವಿತ ವಿಧ್ಯಾರ್ಥಿನಿಯೋರ್ವಳು ನಿಗೂಢ ಕಾಯಿಲೆಗೆ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದಲ್ಲಿ ನಡೆದಿದೆ…

ಹೌದು ಇದೇ ತಿಂಗಳ 10 ರಂದು .. ಜ್ವರ, ತಲೆನೋವು, ವಾಂತಿ, ಬೇದಿ ಅಂತ ಸ್ಥಳೀಯ ಆಸ್ಪತ್ರೆಗೆ ಸೇರಿದ್ದ ವಿಧ್ಯಾರ್ಥಿನಿ ವರ್ಷಿಣಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಎಚ್ಚೆತ್ತ ಆಕೆಯ ತಂದೆ ಗೋಪಾಲಕೃಷ್ಣ ಬಾಬು ಪೋಷಕರು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ…

ಚಿಕಿತ್ಸೆ ಫಲಕಾರಿಯಾಗದೆ ಮೊನ್ನೆ ಸೋಮವಾರದಂದು ಸಾವನ್ನಪ್ಪಿದ್ದಾಳೆ.. ಅಷ್ಟಕ್ಕೂ ವರ್ಷಿಣಿಗೆ ಬಂದಿದ್ದ ಕಾಯಿಲೆ ಯಾವುದು ಅಂತ ಕಂಡುಹಿಡಿಯಲು ಇದುವರೆಗೂ ವೈಧ್ಯರಿಂದ ಇದುವರೆಗೂ ಸಾಧ್ಯವಾಗಿಲ್ಲ…

ಮೊನ್ನೆಯಷ್ಟೇ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೇ 8ನೇ ರ್ಯಾಂಕ್ ಬಂದಿದ್ದ ವರ್ಷಿಣಿ ಸಾವನ್ನಪ್ಪಿದ್ದಾಳೆ. ಇನ್ನೂ ವರ್ಷಿಣಿ ನಿಫಾ ಸೋಂಕಿನಿಂದ ಮೃತಪಟ್ಟಿರುವ ಶಂಕೆಯನ್ನ ಆಕೆ ಪೋಷಕರು ವ್ಯಕ್ತಪಡಿಸಿದ್ದಾರೆ…

ಇತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ವರ್ಷಿಣಿಗೆ ನಿಗೂಢ ಜ್ವರ ತಗುಲಿರುವ ಶಂಕೆ ವ್ಯಕ್ತಪಡಿಸಿ ಪೂನಾ ಲ್ಯಾಬ್ ನತ್ತ ಮುಖ ಮಾಡಿ ವರದಿಗಾಗಿ ಕಾಯುತ್ತಿದ್ದಾರೆ…

LEAVE A REPLY

Please enter your comment!
Please enter your name here