Home Crime ಚಿತೆಯ ಮೇಲಿದ್ದ ಕಟ್ಟಿಗೆಯಲ್ಲಿ ಹೊಡೆದು ಕೊಂದರು ಅಳಿಯನ, ಎರಡೇ ವರ್ಷಕ್ಕೆ ಸರ್ವನಾಶವಾಯ್ತು ಅವರಿಬ್ಬರ ಜೀವನ..!

ಚಿತೆಯ ಮೇಲಿದ್ದ ಕಟ್ಟಿಗೆಯಲ್ಲಿ ಹೊಡೆದು ಕೊಂದರು ಅಳಿಯನ, ಎರಡೇ ವರ್ಷಕ್ಕೆ ಸರ್ವನಾಶವಾಯ್ತು ಅವರಿಬ್ಬರ ಜೀವನ..!

2113
0
SHARE

ಇವತ್ತು ಗಂಡ ಹೆಂಡತಿ ಇಬ್ಬರು ಕಿತ್ತಾಡಿಕೊಂಡು ಕೋರ್ಟ್ ಮೆಟ್ಟಿಲವರೆಗೆ ಬರೋದು ಹಾಗೆ ನೆಮ್ಮದಿ ಕಳ್ಕೊಂಡು ಜೀವನ ಹಾಳು ಮಾಡಿಕೊಂಡವರನ್ನ ಒಮ್ಮೆ ಕೇಳಿ ಯಾಕೆ ಹೀಗಾಯ್ತು ಅಂತ. ಅವರಿಗೆ ತಮ್ಮ ಸಮಸ್ಯೆಗಳನ್ನ ತಾಳ್ಮೆಯಿಂದ ಬಗೆಹರಿಸಿಕೊಳ್ಳುವ ಜಾಣ್ಮೆ ಇರೋದಿಲ್ಲ. ಹೀಗಾಗಿ ಅವ್ರ ಸಂಸಾರದ ಗುಟ್ಟು ಊರ ತುಂಬಾ ರಟ್ಟಾಗಿ ಹೋಗಿರುತ್ತೆ.

ಗಂಡು ಹೆಣ್ಣು ಕಾಯ,ವಾಚ, ಮನಸ ಬದುಕ್ತೀವಿ ಅಂತ ಅಗ್ನಿ ಸಾಕ್ಷಿಯಾಗಿ ಒಂದಾಗಿರ್ತಾರೆ. ಸಪ್ತಪದಿಯನ್ನ ತುಳಿದಿರ್ತಾರೆ.ಆದ್ರೆ ಮದುವೆಯಾದ ನಂತ್ರ ತಾವು ಅಗ್ನಿ ದೇವನ ಮುಂದೆ ಮಾಡಿರೋ ಪ್ರಮಾಣವನ್ನ ಮರೆತುಬಿಡ್ತಾರೆ. ಹೀಗಾಗಿ ನೋಡಿ ಸಂಸಾರಗಳು ಹಾಳಾಗೋದು. ಇಂತಹದ್ದೇ ಒಂದು ಘಟನೆ ಬಿಜಾಪುರದಲ್ಲಿ ನಡೆದಿದೆ. ಇಲ್ಲೂ ಅಷ್ಟೇ ಅವರಿಬ್ಬರು ಶಾಂತವಾಗಿ ಒಂದೈದು ನಿಮಿಷ ಕೂತು ಮಾತನಾಡಿಕೊಂಡು ಒಬ್ಬರಿಗೊಬ್ಬರು ಸಾರಿ ಕೇಳ್ಕೊಂಡು ಬಿಟ್ಟಿದ್ರೆ ಇವತ್ತು ನಾವು ನಿಮಗೆ ಅವರ ಕಥೆ ಹೇಳೋ ಸ್ಥಿತಿ ಬರ್ತಿರಲಿಲ್ಲ. ಆ ಮನೆಯಲ್ಲಿ ಸೂತಕದ ವಾತಾವರಣವು ಕಂಡು ಬರ್ತಿರಲಿಲ್ಲ.

ಅನಾಹುತವಾದ ಮನೆಯೊಂದರ ಕಥೆ,ವ್ಯಥೆಯಿದು. ಬಿಜಾಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಿಲಾರಹಟ್ಟಿಯಲ್ಲಿ ಕಂಡುಬಂದ ದೃಶ್ಯವಿದು. ಇಡೀ ಊರಿಗೆ ಊರೇ ಸ್ಮಶಾನ ಮೌನವಿದೆ. ಅಲ್ಲಿ ಕಾಣ್ತಿರೋದು ಒಂದೇ ಅದು ಕಣ್ಣೀರು. ಅದು ಒಬ್ಬರದ್ದೋ ಇಬ್ಬರದ್ದೋ ಅಲ್ಲ. ಇಡೀ ಊರಿಗೆ ಊರೇ ಕಣ್ಣೀರು ಹಾಕ್ತಿದೆ. ಹೆಂಗಸರ ಗೋಳಂತು ಕೇಳೋದಕ್ಕೆ ಆಗ್ತಿಲ್ಲ. ಒಬ್ಬ ತಾಯಿಯಂತು ಮಣ್ಣ ಮೇಲೆ ಬಿದ್ದು ಗೋಳಾಡ್ತಿರೋದನ್ನ ನೋಡಿದ್ರೆ ಎಂತಹವರ ಎದೆಯಲ್ಲಾದ್ರು ಕುರಣೆ ಉಕ್ಕದೇ ಇರೋದಿಲ್ಲ. ಅಂತಹ ದೃಶ್ಯವಿದು. ಯಾವ ಸಾವಿನ ಮನೆಯಲ್ಲೂ ಸಂಭ್ರಮವಿರೋದಿಲ್ಲ. ಯಾವ ಸಾವಿಗೂ ಒಂದು ಮುನ್ಸೂಚನೆಯೂ ಇರೋದಿಲ್ಲ. ಸಾವು ಅನ್ನೋದು ಹಾಗೆ ಏಕಾಏಕಿ ಬಂದು ಮನೆಯೊಳಗೆ ಕೂತುಬಿಡುತ್ತೆ.

ಕಿಲಾರ ಹಟ್ಟಿಯಲ್ಲಿ ಆಗಿದ್ದು ಅದೇ ಅಲ್ಲಿ ಒಂದು ಹೆಣವನ್ನ ಬೂದಿ ಮಾಡೋದಕ್ಕೆ ತಂದಿದ್ರು. ಆದ್ರೆ ಅವ್ರಿಗೆ ಸುಮ್ಮನೆ ಒಂದು ಹೆಣವನ್ನ ಸುಟ್ಟು ಹೋಗೋದಕ್ಕೆ ಆಗಿರಲಿಲ್ಲ. ಅವರಲ್ಲೂ ಒಂದು ಆಕ್ರೋಶವಿತ್ತು. ಅವರಿಗೆ ಅಲ್ಲಿ ಸತ್ತವಳ ಸಾವಿಗೆ ಸೇಡು ತೀರಿಸಿಕೊಳ್ಳಬೇಕಾಗಿತ್ತು. ಹೀಗಾಗಿ ಆ ಸ್ಮಶಾನದಲ್ಲಿ ನಡೆಯಬಾರದ್ದು ನಡೆದು ಹೋಗೋದಕ್ಕೆ ತಯಾರಿ ನಡೆದಿತ್ತು. ಅಲ್ಲಿ ಬಂದಿದ್ದವರ್ಯಾರಿಗೂ ತಾಳ್ಮೆಯೇ ಇರಲಿಲ್ಲ. ಮನಸ್ಸಲ್ಲಿ ಇದ್ದಿದ್ದು ಒಂದೇ ಅದು ಸೇಡು. ಸಾವಿಗೆ ಸಾವೇ ಉತ್ತರ ಅನ್ನೋ ನಿರ್ಧಾರದಲ್ಲಿ ಅವ್ರು ಅಂತ್ಯಕ್ರಿಯೆಗೆ ಬಂದಿದ್ರು. ತಮ್ಮ ಮನೆಯಲ್ಲಿ ಆದ ಸಾವು ಮತ್ತು ನೋವು ಆ ಮನೆಯಲ್ಲೂ ಆಗಬೇಕು ಅನ್ನೋದು ಅವರ ಹಠವಾಗಿತ್ತು.

ಹೀಗಾಗಿ ಮನಸ್ಸಲ್ಲಿ ಜ್ವಾಲಾಮುಖಿಯನ್ನ ಕುದಿಸಿಕೊಳ್ಳುತ್ತಲೇ ಸ್ಮಶಾನಕ್ಕೆ ಬಂದಿದ್ರು. ಕೇವಲ ಅಲ್ಲಿ ಬಂದಿದ್ದವರು ಅಂತ್ಯ ಸಂಸ್ಕಾರವನ್ನ ನಡೆಸಿ ಅಲ್ಲಿಂದ ಹೊರಟು ಹೋಗಿದ್ರೆ ಮುಂದೆ ಎಲ್ಲವನ್ನ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳಬಹುದಾಗಿತ್ತು. ಆದ್ರೆ ಅಲ್ಲಿ ಹಾಗಾಗಿರಲಿಲ್ಲ, ಅವ್ರಿಗೆ ಆ ಸಾವಿನಿಂದ ಚೇತರಿಸಿಕೊಳ್ಳೋದಕ್ಕೆ ಆಗಿರಲಿಲ್ಲ. ಅವರ ಬುದ್ಧಿಯನ್ನ ಕೋಪವೇ ನಿಯಂತ್ರಿಸ್ತಾ ಇತ್ತು ಬಿಟ್ರೆ ಮತ್ತಿನ್ನೇನು ಅಲ್ಲ. ಹೀಗಾಗಿ ಅಲ್ಲಿ ಒಂದು ಕಡೆ ಗೋಳಾಟ ಕಂಡುಬಂದ್ರೆ ಇನ್ನೊಂದು ಕಡೆ ಹಗೆ ತೀರಿಸಿಕೊಳ್ಳೋದಕ್ಕೆ ಸಿದ್ಧತೆ ನಡೆಯುತ್ತಿತ್ತು.

ಕಿಲಾರ ಹಟ್ಟಿಯಲ್ಲಿ ಎರಡು ವರ್ಷಗಳ ಹಿಂದೆ ಒಂದು ಮದುವೆ ನಡೆದಿತ್ತು. ಅದು ರಾಜು ಮತ್ತು ಕಾಜಲ್ ಅವರದ್ದಾಗಿತ್ತು. ಇಬ್ಬರು ಒಂದೇ ಒಂದೇ ಊರಿನವರು ಆಗಿನ್ನು 21ವರ್ಷ ವಯಸ್ಸಾಗಿದ್ದ ರಾಜುಗೆ ಕಾಜಲ್ ನನ್ನ ಮನೆಯವರೇ ನೋಡಿ ಮದುವೆ ಮಾಡಿದ್ರು. ಆಕೆ ಈಗಿನ್ನು ವೋಟು ಹಾಕೋ ವಯಸ್ಸಿನವಳಾಗಿದ್ಲು. ಆಕೆಗೂ ರಾಜು ಇಷ್ಟವಾಗಿದ್ರಿಂದ ಮನೆಯರೆಲ್ಲೂ ಕೂತು ಮಾತುಕತೆ ನಡೆಸಿ ಸಂಬಂಧ ಗಟ್ಟಿ ಮಾಡ್ಕೊಂಡಿದ್ರು. ನಂತ್ರ 2017ರ ಮೇ ತಿಂಗಳಿನಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟಿದ್ರು. ನಂತ್ರ ಅವರಿಬ್ಬರು ಕಿಲಾರ ಹಟ್ಟಿಯಲ್ಲೇ ಸಂಸಾರ ಶುರುಮಾಡಿದ್ರು. ಹೊಸ ಸಂಸಾರ ಎಲ್ಲವೂ ಮೊದಲಿಗೆ ಚೆನ್ನಾಗಿಯೇ ಇತ್ತು.

ಗಂಡ ಹೆಂಡತಿ ಇಬ್ಬರು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳೋದಕ್ಕೆ ಶುರುಮಾಡಿದ್ರು. ಮದುವೆಯ ನಂತರವೇ ಅವರಿಬ್ಬರು ಹೆಚ್ಚು ಹತ್ತಿರವಾದ ಕಾರಣ ಇಬ್ಬರನ್ನ ಅರ್ಥ ಮಾಡಿಕೊಳ್ಳೋದಕ್ಕೆ ಸ್ವಲ್ಪ ಜಾಸ್ತಿಯೇ ಸಮಯ ಹಿಡಿಯಿತು.ರಾಜು ಮನೆಯಲ್ಲಿ ಟ್ರ್ಯಾಕ್ಟರ್ ಮತ್ತು ಜೆಸಿಬಿಯಿತ್ತು. ಅದೇ ಅವರ ಆದಾಯದ ಮೂಲವು ಆಗಿತ್ತು. ಹಾಗೂ ಹೀಗೂ ಅವನು ಸಂಸಾರವನ್ನ ನಡೆಸಿಕೊಂಡು ಹೋಗ್ತಿದ್ದ. ಮೂರು ಹೊತ್ತಿನ ಊಟಕ್ಕೆ ಯಾವುದೇ ತೊಂದರೆ ಇರಲಿಲ್ಲ. ಆದ್ರೆ ಕಾಜಲ್ ಹಾಗಲ್ಲ. ಆಗಿನ್ನು ವಯಸ್ಸಿಗೆ ಬಂದವಳು ಅದ್ರಲ್ಲೂ ಮನೆಯಲ್ಲಿ ಹೀಗೆಯೇ ಬದುಕಬೇಕು, ಗಂಡನ ಮನೆಯಲ್ಲಿ ಹೇಗಿರಬೇಕು ಅನ್ನೋ ಶಿಸ್ತನ್ನ ಕಲಿಸಿರಲಿಲ್ಲ.

ಹೀಗಾಗಿ ಆಕೆ ಆ ಹೊಸ ಸಂಸಾರಕ್ಕೆ ಹೊಂದಿಕೊಳ್ಳೋದಕ್ಕೆ ಸ್ವಲ್ಪ ಜಾಸ್ತಿಯೇ ಸಮಯ ತೆಗೆದುಕೊಳ್ತು. ಅಷ್ಟೇ ಅಲ್ಲದೆ ಆಕೆ ಅದ್ಯಾಕೋ ಆ ಮನೆಯಲ್ಲಿ ಏನು ಕೆಲಸವನ್ನೇ ಮಾಡ್ತಿರಲಿಲ್ಲ. ಹೇಗೂ ರಾಜು ಅತ್ತಿಗೆ ಮನೆಯ ನಿರ್ವಹಣೆ ಮಾಡ್ತಿದ್ದರಿಂದ ಸಂಸಾರ ನಡ್ಕೊಂಡು ಹೋಗ್ತಿತ್ತು. ಇವತ್ತಲ್ಲ ನಾಳೆ ಸರಿಯಾಗ್ತಳೆ ಅವಳಿಗೂ ಜವಾಬ್ದಾರಿ ಬರುತ್ತೆ ಅಂತ ಅವರೆಲ್ಲಾ ಅಂದುಕೊಂಡಿದ್ರು. ಕೆಲವು ಸಾರಿ ಸಂಸಾರಗಳು ಹಾಳಾಗೋದಕ್ಕೂ ಪ್ರಕೃತಿ ಕಾರಣವಾಗುತ್ತೆ. ಈ ಸಂಸಾರದಲ್ಲಿ ಬಿರುಕು ಮೂಡೋದಕ್ಕೂ ಪ್ರಕೃತಿ ವಿಕೋಪ ಕಾರಣವಾಗಿತ್ತು. ಯಾಕಂದ್ರೆ ಬಿಜಾಪುರ ಜಿಲ್ಲೆಯಲ್ಲಿ ಭೀಕರ ಬರಗಾಲ ಶುರುವಾಗಿತ್ತು. ಅಲ್ಲಿದ್ದವರಿಗೆ ಮೂರು ಹೊತ್ತಿನ ಅನ್ನ ಹುಟ್ಟಿಸಿಕೊಳ್ಳೋದಕ್ಕೂ ಕೆಲಸ ಸಿಗ್ತಿರಲಿಲ್ಲ. ದಿನೇ ದಿನೇ ಈ ಸಮಸ್ಯೆ ಜಾಸ್ತಿಯಾಗತೊಡಗಿತು.

ಅದ್ರಲ್ಲೂ ರಾಜುಗೆ ಇದರ ಹೊಡೆತ ಜಾಸ್ತಿಯಾಗಿತ್ತು. ಇನ್ನು ಹುಟ್ಟೂರು ಅಂತ ಇಲ್ಲೇ ಇದ್ರೆ ನಾವು ಹೊಟ್ಟೆ ಹಸಿವಿನಿಂದ ಸಾಯಬೇಕಾಗುತ್ತೆ. ಹೀಗಾಗಿ ಎಲ್ಲಾದ್ರೂ ಗುಳೇ ಹೋಗಿ ಕೆಲಸ ಹುಡ್ಕೋಬೇಕು ಅಂತ ಆತ ತೀರ್ಮಾನಿಸಿದ. ಅಲ್ಲದೆ ತನ್ನ ಹೆಂಡತಿ ಹತ್ತಿರ ನಾವು ಮಹಾರಾಷ್ಟ್ರದ ಸಿಂದದುರ್ಗಕ್ಕೆ ಹೋಗಿ ಕೆಲಸ ಹುಡುಕೋಣ ಇಲ್ಲಿದ್ರೆ ಬದುಕೋದು ಕಷ್ಟವಾಗುತ್ತೆ ಅಂತ ಹೇಳಿದ್ದ. ಆದ್ರೆ ಅವನ ಮಾತು ಕಾಜಲ್ ಗೆ ಹಿಡಿಸಲಿಲ್ಲ. ಹುಟ್ಟೂರನ್ನ ಬಿಟ್ಟು ಇನ್ನೆಲ್ಲೋ ಹೋಗಿ ಕೂಲಿ ಕೆಲಸ ಮಾಡೋದಕ್ಕೆ ಅವಳ ಮನಸ್ಸು ಒಪ್ಪಲಿಲ್ಲ.ಗಂಡ ಅದ್ಯಾವಾಗ ಸಿಂದದುರ್ಗಕ್ಕೆ ಹೋಗೋಣ ಅಂದನೋ ಆಗ ಕಾಜಲ್ ತನ್ನ ವರಸೆ ತೆಗೆದ್ವು, ನಾನು ಅಲ್ಲಿಗೆ ಬರವಲ್ಲೇ ಅಂತ ಕೂತ್ಲು. ಆದ್ರೂ ಮನೆಯವರೆಲ್ಲಾ ಹೇಳಿ ಗಂಡನ ಜೊತೆಗೆ ಅವಳನ್ನ ಕಳಿಸಿಕೊಟ್ರು.

ಆದ್ರೆ ಅಲ್ಲಿ ಹೋದ ಮೇಲೆ ದಿನಕ್ಕೊಂದು ಬಾರಿ ಜಗಳ ಮಾಡೋದಕ್ಕೆ ಶುರುಮಾಡಿದ್ಲು. ರಾಜು ಹಾಗೂ ಹೀಗೂ ಮಾಡಿ ಅವಳನ್ನ ಸಮಾಧಾನ ಮಾಡ್ತಿದ್ದ. ಆದ್ರೆ ಅದ್ಯಾವಾಗ ಇವಳ ಕಾಟ ಜಾಸ್ತಿ ಆಯ್ತೋ ಆಗ ವಾಪಸ್ ಕರ್ಕೊಂಡು ಬಂದು ತವರು ಮನೆಗೆ ಬಿಟ್ಟ. ಸಂತೋಷದಲ್ಲಿ ಮಾತ್ರ ಅಲ್ಲ ಹೆಂಡತಿ ಇರೋದು ಕಷ್ಟದಲ್ಲೂ ಆಕೆ ಜೊತೆಗಿರಬೇಕು ಅಂತ ಅವರ ಮನೆಯಲ್ಲಿ ಕೂಗಾಡಿದ್ದ. ನಂತ್ರ ಆಕೆಯ ಮನೆಯವರು ರಾಜಿ ಪಂಚಾಯ್ತಿ ಮಾಡಿ ಇನ್ನು ಹೀಗೆ ಮಾಡಬೇಡ ಅಂತ ಬುದ್ಧಿ ಹೇಳಿ ವಾಪಸ್ ಕಳುಹಿಸಿ ಕೊಟ್ಟಿದ್ರು. ಒಂದಿಷ್ಟು ದಿನ ಇಬ್ಬರು ಮತ್ತೆ ಚೆನ್ನಾಗಿಯೇ ಇದ್ರು. ಆದ್ರೆ ಅದ್ಯಾಕೋ ಅವಳ ಮತ್ತೆ ಮೊದಲಿನ ರೀತಿ ಜಗಳ ಮಾಡೋದಕ್ಕೆ ಶುರುಮಾಡಿದ್ಲು. ಆಗಲೂ ಆತ ಅವಳ ಪೋಷಕರಿಗೆ ಹೇಳಿ ಸಮಾಧಾನ ಮಾಡಿಸಿದ್ದ.

ಇತ್ತೀಚೆಗೆ ಕಾಜಲ್ ರಾತ್ರಿ ಇದ್ದಕ್ಕಿದ್ದ ಹಾಗೆ ಮನೆ ಬಿಟ್ಟು ಹೋಗೋದು ರಂಪಾಟ ಮಾಡೋದನ್ನ ಮಾಡ್ತಿದ್ಲು. ಅವನಿಗೂ ಅವಳ ಸುಧಾರಿಸಿ ಸಾಕಾಗಿ ಹೋಗಿತ್ತು. ಮಾನಸಿಕ ಸ್ಥೀಮಿತ ಕಳೆದುಕೊಂಡ ಹಾಗೆ ಆಕೆ ಆಡ್ತಿದ್ಲು. ಹೀಗಾಗಿ ಇವನಿಗೆ ಏನು ಮಾಡಬೇಕು ಅನ್ನೋದು ಗೊತ್ತೇ ಆಗಲಿಲ್ಲ. ಇತ್ತೀಚೆಗೆ ಮತ್ತೆ ಗಂಡ ಹೆಂಡತಿ ನಡುವೆ ಜಗಳ ನಡೆದಿತ್ತು. ಆಗ ಆಕೆ ಗಂಡ ಮೇಲೆ ಸಿಟ್ಟು ಮಾಡ್ಕೊಂಡು ನಾನೂ ಊಟ ಮಾಡೋದಿಲ್ಲ ಅಂತ ಹಠ ಹಿಡಿದು ಕೂತಿದ್ಲು. ಆದಕ್ಕೆ ರಾಜು ಕೆನ್ನೆಗೆ ಎರಡು ಬಾರಿಸಿ ಊಟ ಮಾಡ್ಕೊಂಡು ಹೋಗಿ ಮಲ್ಕೋ ಅಂತ ಹೇಳಿದ್ದ. ಅಲ್ಲಗೆ ಜಗಳ ತಣ್ಣಗೆ ಆಗುತ್ತೆ ಅಂತ ಅಂದುಕೊಂಡಿದ್ರು. ಆದ್ರೆ ಜಗಳ ಅಲ್ಲಿಗೆ ಮುಗಿಯಲೇ ಇಲ್ಲ.

ಗಂಡ ಹೆಂಡತಿ ಜಗಳ ಅವತ್ತು ಊಟ ಮಾಡಿ ಮಲಗಿದ್ರೆ ಸರಿಯಾಗ್ತಿತ್ತೇನೋ ಆದ್ರೆ ಅವಳು ಅವತ್ತು ಬೇರೆಯದ್ದೇ ನಿರ್ಧಾರ ಮಾಡಿದ್ಲು. ನನಗೆ ಗಂಡ ಹೊಡಿತಾನೆ ಇನ್ನು ಇವನ ಜೊತೆ ಹೇಗೆ ಬದುಕೋದು. ಜಾಸ್ತಿ ಗಲಾಟೆ ಮಾಡಿದ್ರೆ ತವರು ಮನೇಲಿ ಕಂಪ್ಲೇಂಟ್ ಮಾಡ್ತಾನೆ ಅಂತ ಅಂದುಕೊಂಡು ರಾತ್ರಿಯೆಲ್ಲಾ ಅಳ್ತಾ ಕೂತು ಬಿಟ್ಲು. ಅತ್ತ ರಾಜು ಸ್ವಲ್ಪ ಹೊತ್ತು ಅತ್ತು ಆಮೇಲೆ ಸರಿಯಾಗ್ತಾಳೆ ಅಂತ ಅಂದುಕೊಂಡಿದ್ದ. ಆದ್ರೆ ಅವತ್ತು ರಾತ್ರಿ ಇವನು ಅಂದುಕೊಂಡ ಹಾಗೆ ಆಗಲಿಲ್ಲ. ಪ್ರತಿ ದಿನ ರೀತಿಯ ಜಗಳ ಅದಾಗಿರಲಿಲ್ಲ. ಅವನು ಬೆಳಗ್ಗೆ ಎಲ್ಲಾ ಸರಿ ಮಾಡಿಕೊಳ್ಳೋಣ ಅಂತ ಹೋಗಿ ಮಲಕ್ಕೊಂಡ ಆದ್ರೆ ಅದೇ ಅವನು ಮಾಡಿದ ತಪ್ಪಾಗಿತ್ತು.

ರಾಜು ಅವತ್ತು ತನ್ನ ಪತ್ನಿಯ ಮೇಲೆ ಕೈ ಮಾಡಿ ತಪ್ಪು ಮಾಡಿದ್ದ. ರಾತ್ರಿ ಕೋಪದಲ್ಲಿ ಎರಡು ಏಟು ಹಾಕಿ ರಾಜು ಮಲ್ಕೊಂಡುಬಿಟ್ಟಿದ್ದ. ಆದ್ರೆ ಕಾಜಲ್ ಮಾತ್ರ ಅವತ್ತು ನಿದ್ದೆಯನ್ನ ಮಾಡಲೇ ಇಲ್ಲ. ಇವನ ಜೊತೆ ಇನ್ನು ಬದುಕೋದಕ್ಕೆ ಆಗೋದಿಲ್ಲ. ಇವನು ನಾನು ಹೇಳಿದ ಹಾಗೆ ಏನು ಕೇಳೋದಿಲ್ಲ. ಇನ್ನು ಇವನ ಜೊತೆ ಸಂಸಾರ ಮಾಡೋದ್ರಲ್ಲಿ ಅರ್ಥವಿಲ್ಲ ಅಂತ ಅಂದುಕೊಂಡಿದ್ಲು. ಅದಕ್ಕೆ ಮನೆಯಲ್ಲಿ ತಂದಿಟ್ಟಿದ್ದ ಜೆಸಿಬಿಗೆ ಹಾಕುವ ಡೀಸೆಲ್ ಅನ್ನ ತಗೊಂಡು ಮನೆಯಿಂದ ಹೊರಗೆ ಬಂದಿದ್ದಾಳೆ. ಗಂಡ ಮಲಗಿದ್ದಾನೆ ಅನ್ನೋದು ಕನ್ಫರ್ಮ್ ಆದ ಮೇಲೆ ಡೀಸೆಲ್ ಅನ್ನ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.

ಮನೆಯ ಎದುರಿಗೆ ಧಗಧಗ ಅಂತ ಹೆಂಡತಿ ಹೊತ್ತಿ ಉರಿತಾ ಇದ್ರು ಆತನಿಗೆ ಗೊತ್ತೇ ಆಗಲಿಲ್ಲ. ಗಾಢ ನಿದ್ರೆಯಲ್ಲಿದ್ದವನಿಗೆ ಹೆಂಡತಿಯ ಕೂಗು ಕೇಳಿಸಲಿಲ್ಲ. ಅಷ್ಟೊತ್ತಿಗೆ ಈ ಚೀರಾಟ ಕೇಳಿ ಅಕ್ಕಪಕ್ಕದವರು ಎದ್ದು ಓಡಿ ಬಂದು ಬೆಂಕಿ ಆರಿಸಿ ಆತನ್ನ ಎಬ್ಬಿಸಿದ್ದಾರೆ.ತಕ್ಷಣವೇ ರಾಜು ಬೆಂಕಿಯನ್ನ ನಂದಿಸಿ ಆಕೆಯನ್ನ ಆಸ್ಪತ್ರೆ ಎತ್ಕೊಂಡು ಓಡಿದ್ದಾನೆ. ಆದ್ರೆ ಆಕೆಯ ದೇಹ ಶೇಕಡಾ 80ರಷ್ಟು ಸುಟ್ಟು ಹೋಗಿತ್ತು. ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಆಕೆಗೆ ಚಿಕಿತ್ಸೆ ಕೊಡಿಸಿದ್ರು ಆಕೆ ಬದುಕುಳಿಯಲಿಲ್ಲ. ಆಸ್ಪತ್ರೆಯಲ್ಲಿ ಮೃತಪಟ್ಟ ಕಾಜಲ್ ಮೃತದೇಹವನ್ನ ಅನ್ನ ಕಿಲಾರ ಹಟ್ಟಿಗೆ ಅಂತ್ಯ ಸಂಸ್ಕಾರಕ್ಕಾಗಿ ಕರೆತರಲಾಗಿತ್ತು. ಅಲ್ಲದೆ ಈ ವಿಚಾರವನ್ನ ಆಕೆಯ ತಂದೆ ತಾಯಿಗೂ ತಿಳಿಸಲಾಗಿತ್ತು. ಮಗಳು ಸತ್ತ ಸುದ್ದಿ ಕೇಳ್ತಿದ್ದ ಹಾಗೆ ಆ ಮನೆಯಲ್ಲಿ ನಿಶ್ಯಬ್ದ ಆವರಿಸಿತ್ತು. ಅವರಿಗೆ ಅದು ಕನಸೋ ನನಸೋ ಅನ್ನೋದು ಗೊತ್ತಾಗಲಿಲ್ಲ.

ಮಗಳ ಸಾವಿನ ಸುದ್ದಿಯನ್ನ ಅವರಿಗೆ ಅರಗಿಸಿಕೊಳ್ಳೋದಕ್ಕೆ ಸಾಧ್ಯವೇ ಆಗಿಲಿಲ್ಲ. ನಂತ್ರ ಅವರ ಸಂಬಂಧಿಕರೆಲ್ಲಾ ಓಡೋಡಿ ಬಂದಿದ್ದಾರೆ. ಆಗ ಸಾವಿನ ಮನೆಯಲ್ಲಿ ಈ ಸಾವಿಗೆ ರಾಜುನೆ ಕಾರಣ ಒಂದಿಷ್ಟು ಗಲಾಟೆ ನಡೆದಿದೆ. ಆತ ಘಟನೆಗೆ ಕಾರಣ ಏನು ಅನ್ನೋದನ್ನ ಹೇಳಿದ್ದಾನೆ. ಅಲ್ಲದೆ ಆಕೆ ನನ್ನ ಮಾತು ಯಾವತ್ತು ಕೇಳೇ ಇಲ್ಲ. ಮೊನ್ನೆ ಕೂಡಾ ಅವಳು ಸಾಯುವಂತಹ ಯಾವುದೇ ಘಟನೆ ನಡೆದಿರಲಿಲ್ಲ ಅಂತ ಬಿಡಿಸಿ ಹೇಳಿದ್ದ. ಆದ್ರೆ ಮಗಳನ್ನ ಕಳೆದುಕೊಂಡು ದುಖಃದಲ್ಲಿದ್ದವರಿಗೆ ಅದ್ಯಾವುದು ಅರ್ಥವೇ ಆಗಲಿಲ್ಲ.ನಂತ್ರ ಎಲ್ಲಾ ಗಲಾಟೆ ಮುಗಿದು ಅವರ ಹೊಲದಲ್ಲಿ ಅಂತ್ಯಸಂಸ್ಕಾರಕ್ಕೆ ಕಾಜಲ್ ಶವವನ್ನ ತಗೊಂಡು ಹೋಗಲಾಗಿತ್ತು.ಅಲ್ಲಿ ಎರಡು ಕಡೆಯ ಸಂಬಧಿಕರು ನೆರೆದಿದ್ರು. ಕಟ್ಟಿಗೆಗಳನ್ನ ಒಟ್ಟು ಮಾಡಿ ಚಿತೆ ರೆಡಿ ಮಾಡಿ ಅದ್ರ ಮೇಲೆ ಆಕೆಯ ಶವವಿಟ್ಟು ಅಗ್ನಿ ಸ್ಪರ್ಶಕ್ಕೆ ರೆಡಿಮಾಡ್ಕೊಂಡಿದ್ರು. ಇನ್ನೇನು ಅಗ್ನಿಸ್ಪರ್ಶವಾಗಬೇಕು ಅನ್ನೋ ಸಮಯದಲ್ಲಿ ಮತ್ತೆ ದುಖಃದಲ್ಲಿ ಹುಡುಗಿ ಕಡೆಯವರು ಗಲಾಟೆ ಶುರುಮಾಡಿದ್ರು.

ಪತ್ನಿಯ ಶವಕ್ಕೆ ಸಂಸ್ಕಾರ ಮಾಡೋದಕ್ಕೆ ಬಂದಿದ್ದ ರಾಜು ವಿರುದ್ಧ ಎಲ್ಲಾ ತಿರುಗಿ ಬಿದ್ದಿದ್ರು. ಹೆಣ ಮಲಗಿದ್ದ ಚಿತೆಯಲ್ಲಿದ್ದ ಕಟ್ಟಿಗೆಯನ್ನ ಹುಡುಗಿಯ ಮನೆಯವರು ಒಬ್ಬೊಬ್ಬರು ಒಂದೊಂದನ್ನ ತಗೊಂಡಿದ್ರು. ಅಲ್ಲಿಗೆ ಬಂದಿದ್ದ. ಹುಡುಗಿಯ ಸಂಬಂಧಿಗಳಾದ ದೇವುಬಾ, ರಾವುಬಾ, ರೇವಣಸಿದ್ಧ, ಶಿವಾಜಿ, ಬಾಜಿರಾವ್, ಮತ್ತು ಲಕ್ಷ್ಮಣ್ ಪಾಂಡೆ ಕಟ್ಟಿಗೆಯನ್ನ ತಗೊಂಡವರೇ ರಾಜು ಮೇಲೆ ದಾಳಿ ನಡೆಸೋದಕ್ಕೆ ಶುರುಮಾಡಿದ್ರು. ಆತ ಏಕಾಏಕಿ ನಡೆದ ದಾಳಿಗೆ ನಲುಗಿ ಹೋಗಿದ್ದ. ಇನ್ನೇನು ಅಂತ್ಯಸಂಸ್ಕಾರ ನಡೆಸಬೇಕು ಅನ್ನೋ ಸಮಯದಲ್ಲಿ ರಾಜು ತಲೆ ಮೇಲೆ ಕಟ್ಟಿಗೆಗಳಿಂದ ಹಲ್ಲೆ ನಡೆಸಿದ್ರು. ಅವರ ಹೊಡೆತದ ರಭಸಕ್ಕೆ ರಾಜು ಅಲ್ಲೇ ಕುಸಿದು ಬಿದ್ದು ಸತ್ತೇ ಹೋಗಿದ್ದ. ಇನ್ನೊಂದು ಕಡೆ ಅವರನ್ನ ತಡೆಯೋದಕ್ಕೆ ಬಂದ ಸಂಜಯ್ ಮೇಲೆ ಕೂಡಾ ಹಲ್ಲೆ ನಡೆಸಿದ್ದಾರೆ.

ರಾಜುಗೆ ಕಟ್ಟಿಗೆಯಿಂದ ಹಲ್ಲೆ ಮಾಡ್ತಿದ್ದ ಹಾಗೆ ಆತ ಅಲ್ಲೇ ಮೃತಪಟ್ಟಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಸಂಜಯ್ ನನ್ನ ಆಸ್ಪತ್ರೆ ದಾಖಲಿಸಲಾಯ್ತು. ಅದ್ಯಾವಾಗ ರಾಜು ಮೃತಪಟ್ಟನೋ ಆಗ ಎಲ್ಲರಿಗೂ ಹೆದರಿಕೆ ಶುರುವಾಗಿದೆ. ತಕ್ಷಣವೇ ಅವ್ರೆಲ್ಲಾ ಸೇರಿ ಕಾಜಲ್ ಶವಕ್ಕೆ ತರಾತುರಿಯಲ್ಲಿ ಬೆಂಕಿಯಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಹೆಣ ಸುಡೋದಕ್ಕೆ ಬಂದವರು ಇನ್ನೊಂದು ಹೆಡ ಕೆಡವಿ ಸಂಸ್ಕಾರ ಮಾಡಿ ಹೋಗಿದ್ರು. ಆ ಘಟನೆ ಕೆಲವೇ ಕ್ಷಣಗಳಲ್ಲಿ ನಡೆದು ಹೋಗಿತ್ತು. ಅವರಿಗೆ ತಮ್ಮ ಮಗಳ ಸಾವಿಗೊಂದು ಪ್ರತೀಕಾರ ಸಿಗಬೇಕಿತ್ತು, ಅದನ್ನ ತೀರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ರು. ಇತ್ತ ಯಾವುದೇ ತಪ್ಪು ಇಲ್ಲದಿದ್ರು ರಾಜು ಅನ್ಯಾಯವಾಗಿ ಮೃತಪಟ್ಟಿದ್ದಾನೆ. ಆತನ ಸಾವಿಗೆ ಇಡೀ ಊರಿಗೆ ಊರಿಗೆ ಕಣ್ಣೀರು ಹಾಕಿತ್ತು. ಆದ್ರೆ ಆತ ವಾಪಸ್ ಬರೋದಕ್ಕೆ ಆಗದ ಲೋಕಕ್ಕೆ ಹೋಗಿದ್ದ. ನಂತ್ರ ಆತನ ಶವವನ್ನ ಆಕೆಯನ್ನ ಸಂಸ್ಕಾರ ಮಾಡಿದ್ದ ಸುಡುಗಾಡಿನಲ್ಲೇ ಮುಗಿಸಿದ್ದಾರೆ.

LEAVE A REPLY

Please enter your comment!
Please enter your name here