Home Cinema ಚಿತ್ರತಂಡದ ಪಾಲಿಗೆ ‘ಅಮಾವಾಸ್ಯೆ’ಯಾದ ಚಿತ್ರವಿತರಕ..!!! ಒಂದೇ ದಿನಕ್ಕೆ ಚಿತ್ರ ಎತ್ತಂಗಡಿ ಮಾಡಿದ ಡಿಸ್ಟ್ರಿಬ್ಯೂಟರ್…

ಚಿತ್ರತಂಡದ ಪಾಲಿಗೆ ‘ಅಮಾವಾಸ್ಯೆ’ಯಾದ ಚಿತ್ರವಿತರಕ..!!! ಒಂದೇ ದಿನಕ್ಕೆ ಚಿತ್ರ ಎತ್ತಂಗಡಿ ಮಾಡಿದ ಡಿಸ್ಟ್ರಿಬ್ಯೂಟರ್…

2474
0
SHARE

ಚಿತ್ರತಂಡದ ಪಾಲಿಗೆ ‘ಅಮಾವಾಸ್ಯೆ’ಯಾದ ಚಿತ್ರವಿತರಕ.ಒಂದೇ ದಿನಕ್ಕೆ ಚಿತ್ರ ಎತ್ತಂಗಡಿ ಮಾಡಿದ ಡಿಸ್ಟ್ರಿಬ್ಯೂಟರ್.ಫಿಲ್ಮ್ ಚೇಂಬರ್‌ಗೆ ಅಮಾವಾಸ್ಯೆ ಚಿತ್ರ ತಂಡ ದೂರು.ವಿತರಕ ನವರತ್ರ ಪ್ರಸಾದ್ ವಿರುದ್ಧ ದೂರು.ಹೊಸಬರ ಸಿನಿಮಾ ಅಂದ್ರೆ ಗಾಂಧೀನಗರದ ಮಂದಿ ಅಸಡ್ಡೆ ಮಾಡೋದು ತೀರಾ ಸಾಮಾನ್ಯ.

ಕೊನೆಗೆ 70ಕ್ಕಿಂತ ಕಡಿಮೆ ಚಿತ್ರಮಂದಿರಗಳಲ್ಲಿ ಬಿಡುಗಡೆ.ಪ್ರಚಾರ ನೀಡದೇ ಸಿನಿಮಾವನ್ನೇ ಎತ್ತಂಗಡಿ ಮಾಡಿದ್ರು.ವಿತರಕರ ವಿರುದ್ಧ ‘ಅಮಾವಾಸ್ಯೆ’ ಚಿತ್ರತಂಡ ಆರೋಪ.ನ್ಯಾಯ ಕೊಡಿಸುವಂತೆ ನಿರ್ದೇಶಕ ಪ್ರಶಾಂತ್ ಮನವಿ.ಕಳೆದ ಶುಕ್ರವಾರ ಬಿಡುಗಡೆಯಾಗಿದ್ದ ‘ಅಮಾವಾಸ್ಯೆ’ ಚಿತ್ರ.120 ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡೋದಾಗಿ ಹೇಳಿಕೆ.

ಅದ್ರಲ್ಲಿ ಹೊಸ ಸಿನಿಮಾ ನಿರ್ದೆಶನ ಮಾಡಿ ರಿಲೀಸ್ ಮಾಡೋಕೆ ಹೋದ್ರೆ ಸಿನಿಮಾ ವಿತರಕರು ಟೋಪಿ ಹಾಕಿ ಕಳಿಸ್ತಾರೆ.ಈಗ ಇದೇ ಪರಿಸ್ಥಿತಿ ಎದುರಿಸ್ತಿದೆ ಅಮವಾಸ್ಯೆ ಚಿತ್ರತಂಡ. ಕಳೆದ ಶುಕ್ರವಾರ ಅಮವಾಸ್ಯೆ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿತ್ತು.. ರಿಲೀಸ್ ಆದ ಒಂದೇ ದಿನಕ್ಕೆ ಚಿತ್ರಮಂದಿರದಿಂದ ತೆಗೆದಿದ್ದಾರೆ.

ಇದ್ಕೆಲ್ಲ ಕಾರಣ ಸಿನಿಮಾ ವಿತರಕ ನವರತ್ನ ಪ್ರಸಾದ್ ಅನ್ನೋದು ಚಿತ್ರದ ನಿರ್ದೇಶಕ ಪ್ರಶಾಂತ್ ಆರೋಪ. ಮೊದಲು ಅವರ ಜೊತೆ ಮಾತುಕತೆ ನಡೆಸಿದಾಗ 120 ಚಿತ್ರಮಂದಿರದಲ್ಲಿ ಚಿತ್ರ ರಿಲೀಸ್ ಮಾಡೋದಾಗಿ ತಿಳಿಸಿದ್ರು. ಆದ್ರೆ 70 ಚಿತ್ರಮಂದರದಲ್ಲೂ ಚಿತ್ರ ತೆರೆಕಂಡಿಲ್ಲ. ಜೊತೆಗೆ ಚಿತ್ರದ ಪೋಸ್ಟರ್ ಕೂಡ ಎಲ್ಲೂ ಹಾಕಿಲ್ಲ.

ಹೀಗಾಗಿ ನಮ್ಮ ಸಿನಿಮಾದ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲದೆ ಚಿತ್ರಮಂದಿರಕ್ಕೆ ಬಂದಿಲ್ಲ ಅನ್ನೋದು ಚಿತ್ರತಂಡದ ಆರೋಪ. ಇನ್ನು ಈ ಸಂಬಂಧ ನಿರ್ದೆಶಕ ಪ್ರಶಾಂತ್ ಫಿಲ್ಮ್ ಚೇಂಬರ್‌ಗೆ ದೂರು ದಾಖಲು ಮಾಡಿದ್ದು, ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ.

LEAVE A REPLY

Please enter your comment!
Please enter your name here