ಗಾಂಧಿನಗರದಲ್ಲಿ ಚಿತ್ರ ಗೆಲುವು ಕಾಣಬೇಕೆಂದ್ರೆ ಇತ್ತೀಚೆಗೆ ಗಿಮಿಕ್ ಮಾಡೋದು ಕಾಮನ್ ಆಗಿ ಬಿಟ್ಟಿದೆ….ಆದ್ರೆ ಹೊಸಬರ ಚಿತ್ರತಂಡ ಒಂದು ಹೆಜ್ಜೆ ಮುಂದೆ ಹೋಗಿ ಚೀಪ್ ಗಿಮಿಕ್ ಮಾಡುವ ಮೂಲಕ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ತಂತ್ರಕ್ಕೆ ಮುಂದಾಗಿದೆ.
ರೌಡಿ ಸುಬ್ಬು ಎನ್ನುವ ಚಿತ್ರತಂಡ ಈ ರೀತಿಯ ಚೀಪ್ ಗಿಮಿಕ್ಗೆ ಮುಂದಾಗಿದೆ. ಇಂದು ಮುಹೂರ್ತ ಕಂಡ ಸಿನಿಮಾದ ಮೊದಲ ಶಾಟ್ ಸೆರೆಹಿಡಿದಿರುವ ಚಿತ್ರತಂಡ, ಖೈದಿಯನ್ನು ಬೆತ್ತಲು ಮಾಡಿ ತೋರಿಸುವ ಮೂಲಕ ಚೀಪ್ ಪಬ್ಲಿಸಿಟಿಗೆ ಮುಂದಾಗಿದೆ.
ಪೋಲೀಸ್ ಸ್ಟೇಷನ್ನಿಂದ ಆಚೆ ಬರುವ ಸೀನ್ ಇದಾಗಿದೆ.
ಪ್ರಸಾದ್ ಎಂಬುವವರು ಚಿತ್ರಕ್ಕೆ ಈ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದು. ಇದು ಇವರಿಗೆ ಮೊದಲ ಸಿನಿಮಾ..ಮೊದಲ ಪ್ರಯತ್ನದಲ್ಲೇ ಈ ರೀತಿಯ ಗಿಮಿಕ್ನ ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ.
ವರ್ಧನ್ ಎನ್ನುವ ಕಲಾವಿದ ಖೈದಿ ಪಾತ್ರದಲ್ಲಿ ನಟಿಸಿದ್ದಾರೆ…