Home Cinema ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ದೇಶ ಬಿಡ್ತಾರಂತೆ ಶ್ರುತಿ ಹರಿಹರನ್..!? #Metoo ಮೂಲಕ ತಾನೇ ಎಸೆದ ಬಾಂಬು...

ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ದೇಶ ಬಿಡ್ತಾರಂತೆ ಶ್ರುತಿ ಹರಿಹರನ್..!? #Metoo ಮೂಲಕ ತಾನೇ ಎಸೆದ ಬಾಂಬು ತನ್ನ ಸುತ್ತಲೇ ಆಸ್ಫೋಟಗೊಳ್ಳೋದನ್ನು ಕಂಡು ಕಂಗಾಲಾಗಿರೋ ಶ್ರುತಿ..!?

3106
0
SHARE

ಶ್ರುತಿ ಹರಿಹರನ್.. ಕಳೆದ ಹದಿನೈದು ದಿನಗಳ ಹಿಂದೆ ಗಾಂಧಿನಗರದಲ್ಲಿ ಡಿಮ್ಯಾಂಡ್ ಹೊಂದಿದ್ದ ನಟಿ. ಕನ್ನಡ, ತಮಿಳು, ಮಲಯಾಳಂ ಅಂಥ ಒಂದಷ್ಟು ಬ್ಯುಸಿಯಾಗಿದ್ದ, ವಾರಕ್ಕೆರಡು ಸಲ ಫ್ಲೈಟ್ ಹತ್ತಿ.. ತಮಿಳುನಾಡು, ಕೇರಳ, ಕರ್ನಾಟಕ ಅಂಥ ಓಡಾಡಿಕೊಂಡಿದ್ದ ಶ್ರುತಿ ಹರಿಹರನ್, ಅದ್ಯಾವಾಗ.. ಅರ್ಜುನ್ ಸರ್ಜಾಗೆ ಮೀ ಟೂ ಅಂದ್ರೋ, ಆಗಿನಿಂದ ಸೌಥ್ ಸಿನಿದುನಿಯಾದಲ್ಲಿ ಕೋಲಾಹಲವೇ ಎದ್ದಿದೆ.

ಶ್ರುತಿ ವಿರುದ್ಧ ಅಪಶ್ರುತಿಗಳು ಕೇಳಿ ಬರ‍್ತಿವೆಪ್ಲೊಶ್ರುತಿ ವಿರುದ್ಧ ಅಪಶ್ರುತಿಯ ಮಾತುಗಳನ್ನಾಡ್ತಿರೋದು ಬರೀ ಅಭಿಮಾನಿಗಳಿಗಷ್ಟೇ ಅಲ್ಲ, ಗಾಂಧಿನಗರದ ಅನೇಕರು ಇದ್ದಾರೆ. ಇದಕ್ಕೆ ಕೈಗನ್ನಡಿ ಅನ್ನುವಂತೆ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿರುವ ಶ್ರತಿ ಹರಿಹರನ್ ಇದ್ದ ಒಂದಷ್ಟು ಅವಕಾಶಗಳನ್ನೂ ಕಳೆದುಕೊಳ್ಳುತ್ತಿದ್ದಾರಾ..?

ಅನ್ನುವ ಚರ್ಚೆ ಗಾಂಧಿನಗರದ ಗ್ರೀನ್ ಹೌಸ್ ಅಂಗಳದಲ್ಲಿ ನಡೆಯುತ್ತಿದೆ.  ಪ್ಲೊಹೌದು, ಸದ್ಯ ಗಾಂಧಿನಗರದಲ್ಲಾಗುತ್ತಿರೋ ಕೆಲ ಬೆಳವಣಿಗೆಗಳು ಕನ್ನಡ ಚಿತ್ರರಂಗ ಶ್ರುತಿಯನ್ನ ದೂರವಿಡುತ್ತಿದೆ ಅನ್ನೋದಕ್ಕೆ ಸಾಕ್ಷಿಯಾಗಿ ಕಣ್ಮುಂದೆ ಕಾಣಸಿಗುತ್ತಿವೆ. ನಿಮಗೆ ಗೊತ್ತಿರಲಿ, ನಾನು ಅವನಲ್ಲ ಅವಳು ಖ್ಯಾತಿಯ ನಿರ್ದೇಶಕ ಬಿ.ಎಸ್.ಲಿಂಗದೇವರು ಹಿಂದೆ ದಾರಿ ತಪ್ಪಿಸು ದೇವರೇ ಅನ್ನುವ ಸಿನಿಮಾ ನಿರ್ದೇಶನ ಮಾಡುವದಾಗಿ ಹೇಳಿಕೊಂಡಿದ್ದರು.

ಈ ಮೂಲಕ ಚಿತ್ರ ಒಂದಷ್ಟು ಸುದ್ದಿಯಾಗುವಂತೆನೂ ನೋಡಿಕೊಂಡಿದ್ದರು. ಚಿತ್ರದ ನಾಯಕನಾಗಿ ಆಪರೇಶನ್ ಅಲಮೇಲಮ್ಮ ಖ್ಯಾತಿಯ ರಿಶಿ ಕಾಣಿಸಿಕೊಳ್ಳಲಿರುವ ವಿಚಾರವನ್ನೂ ಹೇಳಿದ್ದ ಲಿಂಗದೇವರು, ಅಂದು.. ಚಿತ್ರಕ್ಕೆ ನಾಯಕಿಯಾಗಿ ಶ್ರುತಿ ಹರಿಹರನ್ ಕಾಣಸಿಗಲಿದ್ದಾರೆ ಅಂಥನೂ ಹೇಳಿಕೊಂಡಿದ್ದರು.ಆದ್ರೀಗ, ದಾರಿ ತಪ್ಪಿಸು ದೇವರೇ ಚಿತ್ರದಿಂದ, ಶ್ರುತಿಯನ್ನ ಕೈ ಬಿಟ್ಟಿದ್ದಾರೆ ಅನ್ನುವ ಸುದ್ದಿಯೊಂದು, ಗಾಂಧಿನಗರದ ಗಲ್ಲಿಗಳಿಂದ ತೇಲಿ ಬಂದಿದೆ.

ಇದ್ರ ಬಗ್ಗೆ ಚಿತ್ರದ ನಿರ್ದೇಶಕ ಲಿಂಗದೇವರು, ನಾಜೂಕಿನಿಂದಲೇ ನುಣುಚಿಕೊಳ್ಳಲಾರಂಭಿಸಿದ್ದಾರೆ. ಒಂದೆಡೆ ಶ್ರುತಿ ಈ ಚಿತ್ರಕ್ಕೆ ನಾಯಕಿಯಾಗಿ ಅಧಿಕೃತವಾಗಿ ಫಿಕ್ಸಾಗಿರಲಿಲ್ಲ ಅಂತ ರಾಗ ತೆಗೆಯುತ್ತಲೇ ಮತ್ತೊಂದೆಡೆ ಡೇಟ್ಸ್ ಪ್ರಾಬಮ್ ಇದ್ದುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬರ್ಥದಲ್ಲಿಯೂ ಮಾತಾಡಿದ್ದಾರೆ. ಆದರೆ ಈ ಬೆಳವಣಿಗೆಯ ಹಿಂದೆ ಶ್ರುತಿ ಹರಿಹರನ್ ಮುಂದಿನ ನಡೆಗಳ ಬಗ್ಗೆಯೂ ಒಂದು ಸುಳಿವು ಜಾಹೀರಾಗಿದೆ.

ಹೌದು, ಒಂದು ಮೂಲದ ಪ್ರಕಾರ ಅರ್ಜುನ್ ಸರ್ಜಾ ಯಾವ ಸಂಧಾನಕ್ಕೂ ಮಣಿಯದೆ ಕಾಲೂರಿ ನಿಂತು ಕಾನೂನು ಸಮರ ಸಾರಿದ್ದರಿಂದ ಶ್ರುತಿಗೆ ನಡುಕ ಉಂಟಾಗಿದೆ. ಸುತ್ತಲಿಂದ ಕೇಳಿ ಬರುತ್ತಿರೋ ಮೂದಲಿಕೆ, ವಿವಾದಗಳಿಂದ ಬೇಸತ್ತಿರುವ ಶ್ರುತಿ ಮೆತ್ತಗೆ ಅಮೆರಿಕಾಗೆ ಹಾರಿ ಅಲ್ಲಿಯೇ ಸೆಟಲ್ ಆಗುವ ಆಲೋಚನೆಯನ್ನೂ ಹೊಂದಿದ್ದಾರಂತೆ. ಸದ್ಯ, ಶ್ರುತಿ ಮನೆ ಅಂಗಳದಿಂದ ಹಿಡ್ದು ಗಾಂಧಿನಗರದ ಕಾನಿಷ್ಕ ಅಂಗಳದವರೆಗೂ ಕೇಳಿ ಬರ‍್ತಿರುವ ಸುದ್ದಿಗಳ ಪ್ರಕಾರ, ಶ್ರುತಿ ಜನವರಿ ಹೊತ್ತಿಗೆಲ್ಲ ಅಮೆರಿಕೆಗೆ ಹಾರಲಿದ್ದಾರಂತೆ.

ಇನ್ನೂ, ಅರ್ಜುನ್ ಸರ್ಜಾ ಹಾಗೂ ಶ್ರುತಿ ವಿವಾದದ ನಡುವೆಯೂ, ಇನ್ನೊಂದು ಫೈರ್ ಹಚ್ಚಿದ್ದ ಚೇತನ್ ಮೂಲವೂ ಹೇಳಿ ಕೇಳಿ ಅಮೆರಿಕಾನೇ. ಹಾಗಾಗೇ, ಬಹುಶಃ ಚೇತನ್ ಹಾಗೂ ಶ್ರುತಿ  ಒಟ್ಟಾಗಿ ಅಮೆರಿಕಾದಲ್ಲಿ ಸಮಾಜಸುಧಾರಣಾ ಕೆಲಸ ಮಾಡೋ ಪ್ಲಾನು ಇದ್ದರೂ ಇರಬಹುದು ಅನ್ನೋದು ಅನೇಕರ ಗುಮಾನಿ. ಪ್ಲೊಇನ್ನು ಇದೆಲ್ಲದ್ರ ನಡುವೆ, ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೊಪ ಮಾಡಿದ್ದ ಶ್ರುತಿ ಈಗ ತನ್ನ ವಿರುದ್ಧ ಕೆಟ್ಟದಾಗಿ ಮಾತನಾಡಿದವರ ವಿರುದ್ಧವೂ ಸಮರಕ್ಕೆ ನಿಂತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಟೀಕಿಸಿದವರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ ಶ್ರುತಿ.

ಒಟ್ನಲ್ಲಿ ಮೀ ಟೂ ಮೂಲಕ ತಾನೇ ಎಸೆದ ಬಾಂಬು ತನ್ನ ಸುತ್ತಲೇ ಆಸ್ಫೋಟಗೊಳ್ಳೋದನ್ನು ಕಂಡು ಕಂಗಾಲಾಗಿರೋ ಶ್ರುತಿಗೆ ಅಕ್ಷರಶಃ ದಾರಿ ಕಾಣದಂತಾಗಿದೆ, ಅನ್ನೋದು ಅನೇಕರ ಒಕ್ಕೂರಿಲಿನ ಅಭಿಪ್ರಾಯ. ಅದೇನೆ ಇರ‍್ಲಿ, ಮೀ ಟೂ ಎಫೆಕ್ಟ್‌ನಿಂದಾಗಿ, ಶ್ರುತಿ ಅಮೆರಿಕಾದ ದಾರಿಯತ್ತ ಕಣ್ಣು ನೆಟ್ಟ ಕ್ಷಣದಲ್ಲಿಯೇ ದಾರಿ ತಪ್ಪಿಸು ದೇವರೇ ಚಿತ್ರದಿಂದಲೂ ಹೊರ ಬಿದ್ದಿದ್ದಾರೆ. ಅಲ್ಲಿಗೆ ಶ್ರುತಿ ಹರಿಹರನ್ ಸ್ಯಾಂಡಲ್‌ವುಡ್ಡಿನಿಂದ ದೂರ ಸರಿಯುವ ಲಕ್ಷಣಗಳೇ ಕಾಣಿಸಲಾರಂಭಿಸಿದೆ.

LEAVE A REPLY

Please enter your comment!
Please enter your name here