Home District ಚಿತ್ರ-ವಿಚಿತ್ರತೆಯಿಂದ ದಾಖಲೆ ಬರೆಯುತ್ತಿದೆ ಈ ಬಾರಿಯ “ಭಾರತ್ ಬಂದ್”.! ಗೊತ್ತಾ ರಾಜ್ಯದೆಲ್ಲೆಡೆ ಹೇಗಿದೆ ಬಂದ್ ಹವಾ.?!

ಚಿತ್ರ-ವಿಚಿತ್ರತೆಯಿಂದ ದಾಖಲೆ ಬರೆಯುತ್ತಿದೆ ಈ ಬಾರಿಯ “ಭಾರತ್ ಬಂದ್”.! ಗೊತ್ತಾ ರಾಜ್ಯದೆಲ್ಲೆಡೆ ಹೇಗಿದೆ ಬಂದ್ ಹವಾ.?!

426
0
SHARE

ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ರು. ದಾವಣಗೆರೆಯಲ್ಲಿ ಜೆಡಿಎಸ್ ಕಾರ್ಯಕರ್ತರು, ಕನ್ನಡ ಪರ ಸಂಘಟನೆಗಳು ರಸ್ತೆಗಳಲ್ಲಿ ಟೀ ಮಾರಿ ವಿನೂತನ ಪ್ರತಿಭಟನೆ ನಡೆಸಿದ್ರೆ, ಮೈಸೂರು, ವಿಜಯಪುರ ಜಿಲ್ಲೆಗಳಲ್ಲಿ ಕನ್ನಡ ಪರ ಸಂಘಟನೆಗಳು ಗೂಲಾಬಿ ಹೂ ಕೊಡೋದ್ರ ಮೂಕಾಂತರ ಪ್ರತಿಭಟನೆ ನಡೆಸಿದ್ರು.

ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕ ನಾಗೇಂದ್ರ ಕುದುರೆಯನ್ನೇರಿ ಪ್ರತಿಭಟನೆ ನಡೆಸಿದ್ರು. ತುಮಕೂರಿನಲ್ಲಿ ಕೈ ಕಾರ್ಯಕರ್ತರು ಕುದುರೆ ಗಾಡಿಯನ್ನೇರಿ ಪ್ರತಿಭಟನೆ ನಡಸಿದ್ರು…ಭಾರತ್ ಬಂದ್ ಹಿನ್ನಲೆಯಲ್ಲಿ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಬಿಕೋ ಅನ್ನೋತಿದೆ. ಬಂದ್ ಬಿಸಿ ನಡುವೆಯೂ ಪ್ರೈವೇಟ್ ಬಸ್ ಗಳಲ್ಲಿ ತರಕಾರಿ, ಹೂ ತುಂಬಿಕೊಂಡು ಬಂದ ರೈತರು ಮಾರ್ಕೆಟ್ ನಲ್ಲೀಗ ಬಸ್ ಇಲ್ಲದೇ ಒದ್ದಾಡುತ್ತಿದ್ದಾರೆ.

ಇನ್ನೂ ಹೂ , ತರಕಾರಿ ಮಾರ್ಕೆಟ್ ಸಂಪೂರ್ಣವಾಗಿ ಸ್ಥಬ್ದವಾಗಿದ್ದೂ ಎಲ್ಲೋ ಒಂದೋ ಎರಡೋ ಅಂಗಡಿಗಳಷ್ಟೆ ತೆರೆದಿವೆ. ಕೆಲವು ಕಡೆ ಪೊಲೀಸರೇ ಗಲಾಟೆ ಆಗೋ ಸಾಧ್ಯತೆ ಇರೋದ್ರಿಂದ ಅಂಗಡಿಗಳನ್ನು ಮುಚ್ಚಿಸ್ತಿದ್ದಾರೆ.ಭಾರತ್ ಬಂದ್‌ಗೆ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ರು.ಪ್ರಮುಖ ರಸ್ತೆಗಳಲ್ಲಿ ಎತ್ತಿನ ಗಾಡಿಯಲ್ಲಿ ಪ್ರಯಾಣ ಮಾಡಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.ಭಾರತ್ ಬಂದ್ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರು ಧಾರವಾಡದ ಜ್ಯೋತಿ ಪೆಟ್ರೋಲ್ ಬಂಕ್ ನಲ್ಲಿ ತಮ್ಮ ದರ್ಪ ತೋರಿದ್ದಾರೆ…

ಹಾವಳು ಬಂಕ್ ನಲ್ಲಿರುವ ಕ್ಯಾಲ್ಕುಲೇಟರ್ ಬಿಲ್ಲ್ ಮಷಿನ್ ಸೇರಿದಂತೆ ಅನೇಕ ವಸ್ತುಗಳ ಜಖಂಗೊಂಡಿದ್ದೆ.. ಇನ್ನು ಹೋಟೆಲ್ ಅಂಗಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಗೂಂಡಾಗಿರಿ ತೋರಿದ್ದಾರೆ…

LEAVE A REPLY

Please enter your comment!
Please enter your name here