Home Crime ಚಿನ್ನದ ಸರಕ್ಕಾಗಿ ಸೋದರಿಯಂತಿದ್ದವಳ ಕುತ್ತಿಗೆ ಹಿಸುಕಿದ್ದ..!! ಹಣ ಕೈಸೇರೋದಕ್ಕೂ ಮೊದಲೇ ಪೊಲೀಸ್ರಿಗೆ ಸಿಕ್ಕಿ ಬಿದ್ದ..!!

ಚಿನ್ನದ ಸರಕ್ಕಾಗಿ ಸೋದರಿಯಂತಿದ್ದವಳ ಕುತ್ತಿಗೆ ಹಿಸುಕಿದ್ದ..!! ಹಣ ಕೈಸೇರೋದಕ್ಕೂ ಮೊದಲೇ ಪೊಲೀಸ್ರಿಗೆ ಸಿಕ್ಕಿ ಬಿದ್ದ..!!

562
0
SHARE

ಆತ ಕುಡಿತ ಚಟಕ್ಕೆ ಬಿದ್ದು, ಸಿಕ್ಕಾ ಪಟ್ಟೆ ಕೈ ಸಾಲ ಮಾಡಿಕೊಂಡಿದ್ದ. ಸಾಲಗಾರರ ಟಾರ್ಚರ್ ತಡೆಯಲಾರದೇ ಹೇಗಾದ್ರೂ ಮಾಡಿ ಸಾಲ ತೀರಿಸ್ಬೇಕು ಅನ್ನೋ ತೀರ್ಮಾನಕ್ಕೆ ಬಂದಿದ್ದ ಆತ. ಕಣ್ಣಿಗೆ ಬಿದ್ದ ಸರ ಎಗರಿಸೋದಕ್ಕೆ ಪ್ರಾಣ ಸ್ನೇಹಿತನ ಸೋದರಿಯ ಕಥೆ ಮುಗಿಸಿದ್ದ. ..
ಏಪ್ರಿಲ್ 19ರಂದು ಬೆಂಗಳೂರಿನ ಹುಣಸಮಾರನಹಳ್ಳಿ ಒಂಟಿ ಮಹಿಳೆ ಚಂದ್ರಕಲಾ ಎಂಬಾಕೆಯ ಹತ್ಯೆಯಾಗಿತ್ತು. ಚಂದ್ರಕಲಾ ಪತಿ ಶ್ರೀನಿವಾಸ್ ಕೆಲ್ಸಕ್ಕೆ ಹೋದ ಕೂಡ್ಲೇ ಮನೆಗೆ ಎಂಟ್ರಿಕೊಟ್ಟಿದ್ದ ಹಂತಕ ಚಂದ್ರಕಲಾಳ ಉಸಿರುನಿಲ್ಲಿಸಿ, ಆಕೆಯ ಕೊರಳಲ್ಲಿದ್ದ 75 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನ ಕಸಿದು ಎಸ್ಕೇಪ್ ಆಗಿದ್ದ…
ಒಂಟಿ ಮಹಿಳೆ ಮರ್ಡರ್ ಕೇಸ್ ನ್ನ ಸೀರಿಯಸ್ಸಾಗಿ ತೆಗೆದುಕೊಂಡ ಚಿಕ್ಕಜಾಲ ಪೊಲೀಸ್ ಇನ್ಸ್ ಪೆಕ್ಟರ್ ಮುತ್ತುರಾಜ್ ಅಂಡ್ ಕ್ರೈಂ ಸ್ಟಾಪ್ ಸ್ಥಳದಲ್ಲಿ ಸಿಕ್ಕ ಕೆಲ ಮಾಹಿತಿಗಳ ಆಧಾರದ ಮೇಲೆ ಇನ್ವೆಸ್ಟೀಗೇಷನ್ ಸ್ಟಾರ್ಟ್ ಮಾಡಿ, ಕೆಲವೇ ಗಂಟೆಗಳಲ್ಲಿ ಚಂದ್ರಕಲಾಳ ಪ್ರಾಣ ತೆಗೆದ ಹಂತಕನ ಕೈಗೆ ಕೋಳ ಹಾಕುವಲ್ಲಿ ಸಕ್ಸಸ್ ಆಗಿದ್ದಾರೆ. ಅವ್ನೇ ಈ ರಮೇಶ್ ಅಲಿಯಾಸ್ ಚೊಟ್ಟ…

ಭಾರತೀನಗರ ನಿವಾಸಿಯಾಗಿದ್ದ ರಮೇಶ ಕೆಲ ವರ್ಷಗಳ ಹಿಂದೆ ದೊಡ್ಡಬಳ್ಳಾಪುರಕ್ಕೆ ತೆರಳಿ ಅಡುಗೆ ಭಟ್ಟನ ಕೆಲಸ ಮಾಡ್ತಿದ್ದ. ಆದ್ರೆ, ಕುಡಿತ ಚಟ ಮೈಗೂಡಿಸಿಕೊಂಡಿದ್ದ ರಮೇಶ ಸಿಕ್ಕ ಸಿಕ್ಕವ್ರ ಬಳಿ ಕೈ ಸಾಲ ಮಾಡಿಕೊಂಡು ಸಾಲಗಾರರ ಟಾರ್ಚರ್ ಗೆ ತುತ್ತಾಗಿದ್ದ. ಹೇಗಾದ್ರೂ ಮಾಡಿ ನಿಮ್ಮ ಸಾಲ ತೀರಿಸ್ತೀನಿ ಅಂತ ಟೈಮ್ ತೆಗೆದುಕೊಂಡಿದ್ದ ರಮೇಶ ತನ್ನ ಸ್ನೇಹಿತ ಜಗದೀಶನ ಮನೆಗೆ ಬಂದು ಹೋಗೋದು ಮಾಡ್ತಿದ್ದ…

ಆ ವೇಳೆ ಸ್ನೇಹಿತನ ಸೋದರಿ ಈ ಚಂದ್ರಕಲಾಳ ಕೊರಳಲ್ಲಿದ್ದ ಮಾಂಗಲ್ಯ ಸರ ಎಗರಿಸೋ ಪ್ಲಾನ್ ಮಾಡಿದ್ದ. ಅದರಂತೆ ಮೊನ್ನೆ ಏಪ್ರಿಲ್ 19 ರಂದು ಮನೆ ಬಳಿ ಬಂದ ರಮೇಶ ಚಂದ್ರಕಲಾಳ ಪತಿ ಶ್ರೀನಿವಾಸ್ ಕೆಲ್ಸಕ್ಕೆ ಹೋಗ್ತಿದ್ದಾಗೆ ಮನೆ ಪ್ರವೇಶ ಮಾಡಿದ್ದಾನೆ. ಆ ವೇಳೆ ಪರಿಚಯಸ್ಥ ಮನೆಗೆ ಬಂದ ಅಂತ ಚಂದ್ರಕಲಾ ಕುಡಿಯಲು ನೀರು ಕೊಟ್ಟಿದ್ದು, ವಾಪಸ್ಸೋಗ್ತಿದ್ದ ವೇಳೆ ಆಕೆಯ ಮೇಲೆ ದಾಳಿ ಮಾಡಿದ ರಮೇಶ ಚಂದ್ರಕಲಾಳ ಉಸಿರು ನಿಲ್ಲಿಸಿ, ಮಾಂಗಲ್ಯ ಸರದೊಂದಿಗೆ ಎಸ್ಕೇಪ್ ಆಗಿದ್ದ…

ಅಷ್ಟೇ ಅಲ್ಲದೇ ಕದ್ದ ಸರವನ್ನ ಅಡವಿಡೋದಕ್ಕೆ ತನ್ನ ಸ್ನೇಹಿತೆಯೊಬ್ಬಳ ಸಹಾಯ ಪಡೆದು ದೇವನಹಳ್ಳಿ ಮಣಪ್ಪುರಂ ಗೋಲ್ಡ್ ನಲ್ಲಿ ಅಡವಿಟ್ಟು ದುಡ್ ತೆಗೆದುಕೊಂಡಿದ್ದ. ಅಷ್ಟರಲ್ಲಾಗ್ಲೇ ಆರೋಪಿಯ ಹಿಂದೆ ಬಿದ್ದಿದ್ದ ಚಿಕ್ಕಜಾಲ ಪೊಲೀಸ್ರು ಆರೋಪಿಯನ್ನ ರೌಂಡಪ್ ಮಾಡಿಕೊಂಡು ಹೆಡೆಮುರಿ ಕಟ್ಟುವಲ್ಲಿ ಸಕ್ಸಸ್ ಆಗಿದ್ದು, ಕಳವಾಗಿದ್ದ ಬಂಗಾರದ ಸರವನ್ನ ವಶಪಡಿಸಿಕೊಂಡಿದ್ದಾರೆ…

LEAVE A REPLY

Please enter your comment!
Please enter your name here