Home District ಚುನಾವಣಾ ಅಖಾಡಕ್ಕೆ ಧುಮುಕಿದ ಸಿದ್ದರಾಮಯ್ಯ..!? ಹೂವಿನ ಹಡಗಲಿಯಲ್ಲಿ ಮಾಜಿ ಸಿಎಂ ಬಿರುಸಿನ ಪ್ರಚಾರ…

ಚುನಾವಣಾ ಅಖಾಡಕ್ಕೆ ಧುಮುಕಿದ ಸಿದ್ದರಾಮಯ್ಯ..!? ಹೂವಿನ ಹಡಗಲಿಯಲ್ಲಿ ಮಾಜಿ ಸಿಎಂ ಬಿರುಸಿನ ಪ್ರಚಾರ…

549
0
SHARE

ಬಳ್ಳಾರಿ ಲೋಕಸಭೆ ಉಪಚುನಾವಣೆ ಕದನ ಕಣ ರಂಗೇರುತ್ತಿದೆ. ಇಂದು ಜಿಲ್ಲೆಯಲ್ಲಿ ಘಟಾನುಘಟಿ ನಾಯಕರುಗಳಿಂದ ಅಬ್ಬರದ ಪ್ರಚಾರ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹೂವಿನ ಹಡಗಲಿ ತಾಲೂಕಿನ, ಹಂಪಸಾಗರ, ಸೋಗಿ ಗ್ರಾಮಗಳು ಸೇರಿದಂತೆ ನಾನಾ ಹಳ್ಳಿಗಳಲ್ಲಿ ಕೈ ಅಭ್ಯರ್ಥಿ ಉಗ್ರಪ್ಪ ಪರ ಪ್ರಚಾರ ನಡೆಸಿ ಮತಯಾಚನೆ ನಡೆಸಲಿದ್ದಾರೆ.

ಇತ್ತ ಬಳ್ಳಾರಿ ನಗರದಲ್ಲಿ ಸಚಿವ ಕೃಷ್ಣಭೈರೇಗೌಡ ನೇತೃತ್ವದಲ್ಲಿ ಪ್ರಚಾರ ಸಭೆ ಹಾಗೂ ಸುದ್ದಿಗೋಷ್ಠಿ ನಡೆಸಿ, ಉಗ್ರಪ್ಪ ಪರ ಮತಯಾಚನೆ ನಡೆಸಲಿದ್ದಾರೆ. ಬಿಜೆಪಿಯ ಶ್ರೀ ರಾಮುಲು ಸಂಡೂರು ಹಾಗೂ ಹೊಸಪೇಟೆಯಲ್ಲಿ ರ್ಯಾಲಿ ನಡೆಸಿ, ಜೆ.ಶಾಂತ ಪರ ಮತಯಾಚನೆ ನಡೆಸಲಿದ್ದಾರೆ.

ಇನ್ನೂ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ, ನಗರದಲ್ಲಿ ಪ್ರಚಾರ ನಡೆಸಿ, ಮತಯಾಚನೆ ನಡೆಸುತ್ತಿದ್ದಾರೆ. ಇನ್ನೂ ಜೆ.ಶಾಂತ ಕೂಡ ಕೂಡ್ಲಿಗಿ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ.ಇಂದು ಜಮಖಂಡಿ ಅಖಾಡದಲ್ಲಿ ಕಾಂಗ್ರೆಸ್ ನಾಯಕರು ಚುನಾವಣಾ ಚಕ್ರವ್ಯೂಹ ರಚಿಸುತ್ತಿದ್ದಾರೆ ಡಿಸಿಎಮ್ ಜಿ ಪರಮೇಶ್ವರ ನೇತೃತ್ವದಲ್ಲಿ ಜಮಖಂಡಿ ಚುನಾವಣಾ ರಣರಂಗ ಸಿದ್ದವಾಗುತ್ತಿದೆ.

ಜಿ ಪರಮೇಶ್ವರ ಅಧೀನದಲ್ಲಿ ಹಾಲಿ ಮಾಜಿ ಸಚಿವರು, ಶಾಸಕರ ಪಡೆ ಸಜ್ಜಾಗಿದ್ದು,ಪ್ರಮುಖ ಮುಖಂಡರು ಕ್ಷೇತ್ರದ ಗ್ರಾಪಂವಾರು ಪ್ರಚಾರ ನಡೆಸಿ ಮತ ಭೇಟೆಯಾಡಲಿದ್ದಾರೆ.ಈ ಹಿನ್ನೆಲೆ ಜಮಖಂಡಿ ಚುನಾವಣೆ ಸಮಗ್ರ ಉಸ್ತುವಾರಿ ಜಿ ಪರಮೇಶ್ವರ ನೇತೃತ್ವದಲ್ಲಿ ಪ್ರಚಾರದ ಜವಾಬ್ದಾರಿ ಹಂಚಿಕೆಗಾಗಿ ಕೈಮುಖಂಡರ ಸಭೆ ನಡೆಯುತ್ತಿದೆ.

ಜಮಖಂಡಿ ಹೊರವಲಯದ ಬಾಗಲಕೋಟೆ ರೆಸಾರ್ಟ್‌ನಲ್ಲಿ ಮಧ್ಯಾಹ್ನ ೧೨ ಗಂಟೆಗೆ ಸಭೆ ನಡೆಯುತ್ತಿದೆ.ಜಮಖಂಡಿ ಚುನಾವಣಾ ಜಂಟಿ ಉಸ್ತುವಾರಿಗಳಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ,ಬಾಗಲಕೋಟೆ ಉಸ್ತುವಾರಿ ಸಚಿವ ಶಿವಾನಂದ ಪಾಟಿಲ್,ಮಾಜಿ ಸಚಿವ ಎಮ್ ಬಿ ಪಾಟಿಲ್,ಮಾಜಿ ಸಚಿವ ಎಸ್ ಆರ್ ಪಾಟೀಲ್ ಸೇರಿದಂತೆ 35 ಮಂದಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ ಪ್ರಚಾರದ ರೂಪರೇಷೆ,ಜವಾಬ್ದಾರು ಬಗ್ಗೆ ಚರ್ಚಿಸಿ,ಆಯಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಪ್ರಚಾರ ಜವಾಬ್ದಾರಿ ಹಂಚಲಿದ್ದಾರೆ.,ಕೋಆರ್ಡಿನೇಟರ್ ಗಳಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಾರಸ್ ಮಲ್ ಜೈನ್,ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಮ್ ಬಿ ಸೌದಾಗರ
,ಉಸ್ತುವಾರಿ ನಾಯಕರಾದ ಸಚಿವ ಸಿ ಪುಟ್ಟರಂಗಶೆಟ್ಟಿ ಮಾಜಿ ಸಚಿವೆ ಉಮಾಶ್ರಿ,ಮಾಜಿ ಸಚಿವರಾದ ಆರ್ ಬಿ ತಿಮ್ಮಾಪುರ,

ಹೆಚ್ ವೈ ಮೇಟಿ,ವಿನಯ ಕುಲಕರ್ಣಿ,ಶಾಸಕ ಬಿಸಿ ಪಾಟಿಲ್,ಸಿ ಎಸ್ ಶಿವಳ್ಳಿ,ಶಾಸಕಿ ಲಕ್ಷ್ಮಿ ಹೆಬ್ಬಾಳಕರ್,ಅಂಜಲಿ ನಿಂಬಾಳ್ಕರ್,ಯಶವಂತರಾಯಗೌಡ ಪಾಟಿಲ್,ಗಣೇಶ್ ಹುಕ್ಕೇರಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಾಗಲಕೋಟೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಸೇರಿದಂತೆ ಹಾಲಿ ಮಾಜಿ ಸಚಿವ, ಶಾಸಕರು ಸೇರಿ ಉತ್ತರಕರ್ನಾಟಕದ ಪ್ರಮುಖ ಕಾಂಗ್ರೆಸ್ ನ ಒಟ್ಟು ೩೫ ಜನ ಕೈ ಮುಖಂಡರು ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ.

LEAVE A REPLY

Please enter your comment!
Please enter your name here