Home District ಚುನಾವಣಾ ನಿವೃತ್ತಿ ಘೋಷಿಸಿದ ಮಾಜಿ CM ಸಿದ್ದರಾಮಯ್ಯ..! ಈ 5 ವರ್ಷ ಪೂರೈಸಿ ಇನ್ನು‌ ಮುಂದೆ...

ಚುನಾವಣಾ ನಿವೃತ್ತಿ ಘೋಷಿಸಿದ ಮಾಜಿ CM ಸಿದ್ದರಾಮಯ್ಯ..! ಈ 5 ವರ್ಷ ಪೂರೈಸಿ ಇನ್ನು‌ ಮುಂದೆ ಚುನಾವಣೆಗೆ ನಿಲ್ಲೋದಿಲ್ಲ…

741
0
SHARE

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ನನಗೆ 71 ವರ್ಷ ವಯಸ್ಸಾಗಿದೆ. ಹಾಗಾಗಿ ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಹೊಸ ಬಾಂಬ್ ಸಿಡಿಸುತ್ತೇನೆ ಎಂದಿದ್ದ ಯಡಿಯೂರಪ್ಪ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಚುನಾವಣಾ ರಾಜಕೀಯದಿಂದ ನಿವೃತ್ತಿ – ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ- ಜನರ ಸೇವೆ, ಅಭಿವೃದ್ಧಿ ಕಾರ್ಯಕ್ಕೆ ಎಲೆಕ್ಷನ್‌ನಲ್ಲಿ ನಿಲ್ಲಬೇಕೆಂದಿಲ್ಲ ಎಂದ ಕಾಂಗ್ರೆಸ್ ನಾಯಕ.ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪುರಸಭೆ ನೂತನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸದಸ್ಯರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ನಾನು ಈಗಾಗಲೇ 13 ಚುನಾವಣೆ ಎದುರಿಸಿದ್ದೇನೆ. ಈ ಐದು ವರ್ಷ ಪೂರೈಸಿ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಘೋಷಣೆ ಮಾಡಿದರು. ನನಗೆ 71 ವರ್ಷ ವಯಸ್ಸಾಗಿದೆ.

ಹಾಗಾಗಿ ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ. ಜನರ ಸೇವೆ, ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಚುನಾವಣೆಗೆ ನಿಲ್ಲಬೇಕು ಅಂತಿಲ್ಲ ಎಂದರು.ಹೊಸ ಬಾಂಬ್ ಸಿಡಿಸುತ್ತೇನೆ ಎಂದಿದ್ದ ಯಡಿಯೂರಪ್ಪ ಬಗ್ಗೆ ವ್ಯಂಗ್ಯವಾಡಿದರು. ಯಡಿಯೂರಪ್ಪ ಹತ್ತಿರ ಬಾಂಬೇ ಇಲ್ಲ..ಇನ್ನು ಠುಸ್ ಎನ್ನೋದು ಎಲ್ಲಿಂದ ಬಂತು.

ಯಡಿಯೂರಪ್ಪ ಕೇವಲ ಸುಳ್ಳು ಹೇಳ್ತಾರೆ ಎಂದು ಲೇವಡಿಮಾಡಿದರು. ಅಕ್ಟೋಬರ್ 20 ರಂದು ದೇವೇಗೌಡ, ಕುಮಾರಸ್ವಾಮಿ ಜೊತೆ ಸಭೆ ನಡೆಸುತ್ತೇವೆ. ಉಪಚುನಾವಣೆಯ ರಣತಂತ್ರ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.ಹಲ್ಲಿಲ್ಲದ ಹಾವಾಗಿರೋ ಸಿದ್ದರಾಮಯ್ಯ ಅವರಿಗೆ ಯಾರೂ ಹಾಲು ಎರೆಯುವುದಿಲ್ಲ ಎಂಬ ಶೋಭಾ ಕರಂದ್ಲಾಜೆ ವ್ಯಂಗ್ಯಕ್ಕೆ ತಿರುಗೇಟು ನೀಡಿದರು.

ಶೋಭಾ ಕರಂದ್ಲಾಜೆ ಸ್ನೇಕ್ ಫ್ಯಾಮಿಲಿಗೆ ಸೇರಿರಬೇಕೆನೋ ನನಗೆ ಗೊತ್ತಿಲ್ಲ. ಆ ಹೆಣ್ಣು‌ಮಗಳು ಜಬಾಬ್ದಾರಿಯಿಂದ ಮಾತನಾಡಬೇಕು , ನಾನು ಹಾವಲ್ಲಾ,ಹ್ಯೂಮನ್ ಬಿಯಿಂಗ್ ಎಂದರು.ಇದಕ್ಕೂ ಮೊದಲು ನಾಸ್ತಿಕ ಎಂದು ಹೆಸರಾದ ಸಿದ್ದರಾಮಯ್ಯ ಗುಳೇದಗುಡ್ಡದ ದೇವಾಲಯಗಳಿಗೆ ಭೇಟಿ ನೀಡಿದರು. ಅಬಾಭವಾನಿ,ಮೂಕೇಶ್ವರಿ ಹಾಗೂ ಹರದಾಳ ಮಾರುತೇಶ್ವರ ಸೇರಿ ಮೂರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಅಚ್ಚರಿ ಮೂಡಿಸಿದರು.

LEAVE A REPLY

Please enter your comment!
Please enter your name here