Home District ಚುನಾವಣಾ ರಾಜಕೀಯಕ್ಕೆ ದೇವೇಗೌಡರು ಗುಡ್ ಬೈ.! ತಮ್ಮ ಉತ್ತರಾಧಿಕಾರಿ ಪಟ್ಟ ನೀಡಿದ್ರು ಮೊಮ್ಮಗನಿಗೆ.!?

ಚುನಾವಣಾ ರಾಜಕೀಯಕ್ಕೆ ದೇವೇಗೌಡರು ಗುಡ್ ಬೈ.! ತಮ್ಮ ಉತ್ತರಾಧಿಕಾರಿ ಪಟ್ಟ ನೀಡಿದ್ರು ಮೊಮ್ಮಗನಿಗೆ.!?

140
0
SHARE

ಕಳೆದ 6 ದಶಕಗಳಿಂದ ಸುದೀರ್ಘ ರಾಜಕೀಯದಲ್ಲಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಚುನಾವಣಾ ರಾಜಕೀಯದಿಂದ ದೂರ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಸನದಲ್ಲಿ ಈ ವಿಷಯ ತಿಳಿಸಿದ ಗೌಡರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ನನಗೀಗ 85 ವರ್ಷ. 2019ರಲ್ಲೂ ಚುನಾವಣೆಗೆ ನಿಂತು, ಗೆದ್ದ ನಂತರ ವ್ಹೀಲ್ ಚೇರ್ ನಲ್ಲಿ ಲೋಕಸಭೆ ಪ್ರವೇಶ ಮಾಡೋದು ನನಗೆ ಇಷ್ಟ ಇಲ್ಲ. ಇಳಿವಯಸ್ಸಿನಲ್ಲೂ ನನಗೆ ಹೋರಾಡುವ ಛಲ ಇದೆ. ಆದ್ರೆ ನನ್ನ ಆರೋಗ್ಯ ಇದಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ..

ಪ್ರಜ್ವಲ್ ರೇವಣ್ಣ ಕನಸು ನುಚ್ಚುನೂರು…

ಇದೇ ವೇಳೆ ಹಾಸನ ಲೋಕಸಭಾ ಕ್ಷೇತ್ರದಿಂದ ತಮ್ಮ ಬದಲು ಪ್ರಜ್ವಲ್ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂದು ದೇವೇಗೌಡ್ರು ಘೋಷಿಸಿದ್ದಾರೆ…ಪ್ರಜ್ವಲ್ ಕೊಂಚ ಸಿಡುಕುತ್ತಾನೆ. ಅಷ್ಟು ಬಿಟ್ಟರೆ ಆತ ವಿದ್ಯಾವಂತ. ಲೋಕಸಭೆ ಹೋಗುವ ಎಲ್ಲಾ ಅರ್ಹತೆ ಅವನಿಗಿದೆ ಎನ್ನುವ ಮೂಲಕ ತವರಲ್ಲಿ ನನ್ನ ನಂತರ ಅವನೇ ಉತ್ತರಾಧಿಕಾರಿ ಎಂಬ ಸುಳಿವು ನೀಡಿದರು. ಇದರಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ರೆಡಿಯಾಗಿದ್ದ ಪ್ರಜ್ವಲ್ ರೇವಣ್ಣನಿಗೆ ತೀವ್ರ ನಿರಾಸೆಯಾಗಿದೆ… ಪ್ರಜ್ವಲ್ ರೇವಣ್ಣ ವಿಧಾನಸಭೆ ಚುನಾವಣೆ ಸ್ಪರ್ಧಿಸಿದ್ರೆ ಕುಟುಂಬದಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಅದನ್ನು ತಡೆಯಲು ದೇವೇಗೌಡ್ರು ಇಂತಹ ಒಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ…ಇನ್ನೂ 1962ರಿಂದ ದೇವೇಗೌಡರು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಒಟ್ಟು 7 ಬಾರಿ ಸ್ಪರ್ಧೆ ಮಾಡಿ, ಒಮ್ಮೆಯಷ್ಟೇ ಸೋಲು ಕಂಡಿದ್ದಾರೆ. ಹಾಗೆಯೇ 1991 ರಿಂದ 2014ರವರೆಗೆ 7 ಬಾರಿ ಲೋಕಸಭೆಗೆ ಸ್ಪರ್ಧೆ ಮಾಡಿ ಒಮ್ಮೆಯಷ್ಟೇ ಸೋತಿದ್ದಾರೆ. 2004ರಲ್ಲಿ ಹಾಸನ ಮತ್ತು ಕನಕಪುರ, ಎರಡೂ ಕಡೆ ಸ್ಪರ್ಧೆ ಮಾಡಿದ ದೇವೇಗೌಡರು ತವರು ಜಿಲ್ಲೆಯಲ್ಲಿ ಗೆದ್ದು, ಕನಕಪುರದಲ್ಲಿ ಪರಾಭವಗೊಂಡಿದ್ದರು..

ಒಟ್ಟಾರೆ ದೇವೇಗೌಡರು, ಶಾಸಕ, ಸಂಸದ, ಮುಖ್ಯಮಂತ್ರಿ, ಪ್ರಧಾನಿಯಾಗಿ ಕರ್ನಾಟಕ ಹಾಗೂ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವುದರ ಜೊತೆಗೆ ಸದಾ ರೈತರು, ಬಡವರು, ನೊಂದವರ ಗಟ್ಟಿ ದನಿಯಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

LEAVE A REPLY

Please enter your comment!
Please enter your name here