Home Crime ಚುನಾವಣೆಗೋಸ್ಕರ ಪೊಲೀಸ್ರನ್ನ ಛೂ ಬಿಟ್ಟು ಬಡ ಕ್ಯಾಬ್ ಡ್ರೈವರಗಳಿಗೆ ಧಮ್ಕಿ ಹಾಕಿ ಕ್ಯಾಬ್ ಗಳನ್ನು ವಶ…ಎತ್ತಿಗೆ...

ಚುನಾವಣೆಗೋಸ್ಕರ ಪೊಲೀಸ್ರನ್ನ ಛೂ ಬಿಟ್ಟು ಬಡ ಕ್ಯಾಬ್ ಡ್ರೈವರಗಳಿಗೆ ಧಮ್ಕಿ ಹಾಕಿ ಕ್ಯಾಬ್ ಗಳನ್ನು ವಶ…ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ |

998
0
SHARE


ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದಂಗೆ…ಇವ್ರ ಚುನಾವಣೆಗೋಸ್ಕರ ಬಡವರ ಹೊಟ್ಟೆಗೆ ಕಲ್ಲು ಹಾಕ್ತಿದ್ದಾರೆ. ಪೋಲಿಸರನ್ನ ಛೂ ಬಿಟ್ಟು ಬಡ ಕ್ಯಾಬ್ ಡ್ರೈವರಗಳಿಗೆ ಧಮ್ಕಿ ಹಾಕಿ,ಹೆದರಿಸಿ ಬೆದರಿಸಿ ಕ್ಯಾಬ್ ಗಳನ್ನು ವಶಕ್ಕೆ ಪಡೆದುಕೊಳ್ತಿದ್ದಾರೆ…ಪ್ರತಿಬಾರಿ ಎಲೆಕ್ಷನ್ ಬಂದಾಗಲ್ಲೂ ಕ್ಯಾಬ್ ಡ್ರೈವರ್ ಗಳಿಗೆ ಪ್ರಾಣ ಸಂಕಟ..ಅದ್ರಲ್ಲೂ ಎಲ್ಲೋ ಬೋರ್ಡ್ ಗಾಡಿ ಸಿಕ್ಕಿದ್ರೆ ಸಾಕು ಎಲೆಕ್ಷನ್ ಗೋಸ್ಕರ ಪೋಲಿಸರನ್ನ ಛೂ ಬಿಟ್ಟು ಚಿತ್ರಹಿಂಸೆ ನೀಡೋತರ ಮಾಡುತ್ತೆ ಚುನಾವಣಾ ಆಯೋಗ..

ಇವ್ರ ಬೆಳೆ ಬೇಯಿಸಕ್ಕೋಸ್ಕರ ಬಡವರ ಹೊಟ್ಟೆಗೆ ಹೊಡೀತಾರೆ..ಪ್ರತಿನಿತ್ಯ ಸುಮಾರು 700ಕ್ಕೂ ಹೆಚ್ಚು ಗಾಡಿ ಹಿಡ್ಕೋತಾರೆ..ಅದಾಯಿತು ಬಿಡಿ ಹಿಡ್ಕೊಂಡ ಗಾಡಿ ಡ್ರೈವರ್ ಗೆ ಮಾತ್ರ ಒಂದು ರೂಪಾಯಿ ಹಣ ನೀಡಲ್ಲ..ಬದಲಿಗೆ ಅವನ ಗಾಡಿಗೆ ಪೆಟ್ರೋಲ್,ಡಿಸೇಲ್ ಹಾಕಿಸ್ತಾರೆ…ಯಾಕ್ರೀ ಸ್ವಾಮಿ ನಿಮಗೆ ಗಾಡಿ ಹಿಡ್ಕೊಂಡ್ ಮೇಲೆ ಡ್ರೈವರ್ ಗೆ ಹಣ ನೀಡಿ ಅವನ ಖರ್ಚುವೆಚ್ಚ ನೋಡ್ಕೋಳೋ ಯೋಗ್ಯತೆ ಇಲ್ಲಂದ್ಮೆಲೆ ಗಾಡಿಗಳನ್ನ ಯಾಕ್ರೀ ಹಿಡ್ಕೋತಿರಾ…

ಚುನಾವಣೆ ಕೆಲಸ ಮಾಡೋಕೆ ಸಾಧ್ಯನೇಯಿಲ್ಲ ಅಂದ್ರೆ ಪೋಲಿಸರಲ್ಲಿ ಡ್ರೈವರ್ಸಗೆ ಧಮ್ಕಿ ಹಾಕಿಸಿ ,ಬೆದರಿಸ್ತಿರಲ್ಲರ್ರಿ ಇಂತಹ ಕಿತ್ತೋಗಿರೋ ಕೆಲಸಕ್ಕೆ ಬಡ ಡ್ರೈವರ್ಸೇ ಬಲಿಪಶುವಾಗಬೇಕಾ..ತಲೆತುಂಬಾ ಲೋನ್ ಮಾಡಿ ಗಾಡಿ ತಗೋತಾರೆ,ಪ್ರತಿನಿತ್ಯ ಬರೋ ಹಣದಲ್ಲಿ ಲೋನ್ ಕಟ್ತಾರೆ..ಸಂಸಾರದ ನೊಗ ಸಾಗಿಸ್ತಾರೆ..ಅಂತಹ ಬಡ ಕ್ಯಾಬ್ ಚಾಲಕರ ಮೇಲೆ ಚುನಾವಣಾ ಆಯೋಗದ ಕಣ್ಣು ಬಿದ್ದಿದ್ದು, ಕ್ಯಾಬ್ ಚಾಲಕರು ಚುನಾವಣಾ ಆಯೋಗದ ನಿರ್ಧಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ.

ಇಂತಹ ರಾಜ್ಯ ಸರ್ಕಾರಕ್ಕೆ ವೋಟ್ ಮಾಡುದೆಯಿಲ್ಲ ನಮ್ಮ ಅಸೋಸಿಯೇಷನ್ ದೊಡ್ಡದಿದೆ,ಎಲೆಕ್ಷನ್ ಗೆ ಇವ್ರಿಗೆ ಬುದ್ದಿಕಲಿಸ್ತೀವಿ ಅಂಥಾ ಕೂತಿದ್ದಾರೆ…

LEAVE A REPLY

Please enter your comment!
Please enter your name here