Home Elections 2018 ಚುನಾವನಾ ಪೂರ್ವ ಸಮೀಕ್ಷೆಯಲ್ಲಿ ಸಿದ್ದು ಕಿಂಗ್ ಆದ್ರಾ..!?? ಹೇಗಿದೆ ಗೊತ್ತಾ ಬಿಜೆಪಿ-ಜೆಡಿಎಸ್ ಪರಿಸ್ಥಿತಿ..!!??

ಚುನಾವನಾ ಪೂರ್ವ ಸಮೀಕ್ಷೆಯಲ್ಲಿ ಸಿದ್ದು ಕಿಂಗ್ ಆದ್ರಾ..!?? ಹೇಗಿದೆ ಗೊತ್ತಾ ಬಿಜೆಪಿ-ಜೆಡಿಎಸ್ ಪರಿಸ್ಥಿತಿ..!!??

2339
0
SHARE

ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತಂತೆ ಸಿ-ಫೋರ್ ಸಂಸ್ಥೆ ತನ್ನ 3ನೇ ಸಮೀಕ್ಷೆ ಬಿಡುಗಡೆ ಮಾಡಿದೆ. ಈ ಸಮೀಕ್ಷೆಯಲ್ಲೂ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ಸ್ಪಷ್ಟವಾಗಿ ಹೇಳಿದೆ.
ರಾಜ್ಯದ 224 ಕ್ಷೇತ್ರಗಳ ಪೈಕಿ 61 ಕ್ಷೇತ್ರಗಳಲ್ಲಿ ಸಂಗ್ರಹಿಸಿದ 1647 ಮಾದರಿ ಅಭಿಪ್ರಾಯದಿಂದ ಈ ಫಲಿತಾಂಶ ಬಂದಿದೆ ಎಂದು ಸಮೀಕ್ಷೆ ಹೇಳುತ್ತಿದೆ.ಏಪ್ರಿಲ್ 20 ರಿಂದ 30 ರ ವರಗೆ ಸಮೀಕ್ಷೆ ನಡೆಸಲಾಗಿದೆ ಎಂದು ವರದಿಯಲ್ಲೇ ಉಲ್ಲೇಖಿಸಲಾಗಿದೆ.

ಕಾಂಗ್ರೆಸ್ ಪಕ್ಷ ಬರೋಬ್ಬರಿ 118-128 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಅಂದಾಜಿಸಿದ್ದು, ಬಿಜೆಪಿಗೆ 63-73 ಸ್ಥಾನಗಳನ್ನು ನೀಡಿದೆ. ಜೆಡಿಎಸ್ 29-36 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಕಾಂಗ್ರೆಸ್ 118 ರಿಂದ 128 ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ಯಂತೆ…ಇತರರು 2-7 ಸ್ಥಾನಗಳನ್ನು ಗೆಲ್ಲಬಹುದು ಎಂದು ತನ್ನ ಮೂರನೇ ಸಮೀಕ್ಷೆಯಲ್ಲಿ ಸಿ-ಪೋರ್ ಅಂದಾಜಿಸಿದೆ. ಹೈದರಾಬಾದ್ ಕರ್ನಾಟಕ ಭಾಗದ ಐದು ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷಕ್ಕೆ 3ಸ್ಥಾನ ಬರಲಿದೆ ಎಂದು ಈ ಸಮೀಕ್ಷೆ ಹೇಳುತ್ತಿದೆ…
ಅಂದರೆ, ಈ ಸಮೀಕ್ಷೆ ಅವಧಿ ಮುಗಿಯಲು ಇಂದು ರಾತ್ರಿ 12ರ ವರೆಗೆ ಕಾಯಬೇಕು. ಆದರೆ ನಿನ್ನೆ ರಾತ್ರಿಗೆ… ಅಂದರೆ, ಸಮೀಕ್ಷಾ ಅವಧಿ ಮುಗಿಯಲು ಇನ್ನೂ ಎರಡು ದಿನ ಬಾಕಿ ಇರುವಾಗಲೇ ವರದಿ ಬಿಡುಗಡೆಯಾಗಿದೆ. ಇದರಲ್ಲಿ ಸಮೀಕ್ಷೆ ಮಾಡಿದವರ, ಮಾಡಿಸಿದವರ, ಕಾಂಗ್ರೆಸ್ ಪಕ್ಷದ ಮೂರ್ಖತನ ಜಗಜ್ಜಾಹೀರಾಗಿದೆ. …

ಸಮೀಕ್ಷೆ ಮಾಡಿಸಿದವರು ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಜಗತ್ತಿನಲ್ಲಿ ಯಾವುದನ್ನು ಬೇಕಾದರೂ ಮುಂಚಿತವಾಗಿ… ಅಂದರೆ ಪ್ರೀಪೋನ್ ಮಾಡಬಹುದು. ಆದರೆ ದಿನವನ್ನೇನಾದರೂ ಪ್ರೀಪೋನ್ ಮಾಡಲು ಸಾಧ್ಯವೇ. ಭೂಮಿ ತಿರುಗುವುದನ್ನು ಪ್ರೀಪೋನ್ ಮಾಡಲು ಸಾಧ್ಯವೇ? ಕುತೂಹಲ ತಡೆಯಲು ಆಗುತ್ತಿಲ್ಲ ಎಂದು ಚುನಾವಣಾ ಫಲಿತಾಂಶದ ದಿನವನ್ನೇ ನಾವು ಹದಿನೈದು ದಿನ ಮುಂಚಿತವಾಗಿ ಬರಮಾಡಿಕೊಳ್ಳಲು ಸಾಧ್ಯವೇ?

ಸಮೀಕ್ಷೆ ಮಾಡಿದವರು, ಮಾಡಿಸಿದವರು ಮತ್ತು ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಎಷ್ಟು ಆತುರತನ ತೋರುತ್ತಿದೆ ಎಂಬುದನ್ನು ಈ ಸಮೀಕ್ಷೆ ಬಟಾಬಯಲು ಮಾಡಿದೆ…ಸಿ ಫೋರ್ ಸರ್ವೇ ರಿಪೋರ್ಟ್ ಮೂಲಕ ಸಿಎಂ ಸಿದ್ದರಾಮಯ್ಯನವರು ಜನರಿಗೆ ಟೋಪಿ ಹಾಕ್ತಿದ್ದಾರೆ, ಸಿಎಂ ಮನೆಯಲ್ಲೇ ಇರೋ ಸಿ ಫೋರ್ ಸರ್ವೇ ಇಂದು ಬಹಿರಂಗವಾಗಲಿದೆ ಎಂದು ಹೆಚ್ಡಿಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here