Home District “ಚೆಲುವರಾಯಸ್ವಾಮಿ ಒಬ್ಬ ರಾಜಕೀಯ ವ್ಯಭಿಚಾರಿ” ಚೆಲುವರಾಯಸ್ವಾಮಿಗೆ ಟಾಂಗ್ ಕೊಟ್ಟ ಸುರೇಶ್ ಗೌಡ..?!

“ಚೆಲುವರಾಯಸ್ವಾಮಿ ಒಬ್ಬ ರಾಜಕೀಯ ವ್ಯಭಿಚಾರಿ” ಚೆಲುವರಾಯಸ್ವಾಮಿಗೆ ಟಾಂಗ್ ಕೊಟ್ಟ ಸುರೇಶ್ ಗೌಡ..?!

1064
0
SHARE

ಮಂಡ್ಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಮಾತಿನ ಸಮರ ತಾರಕಕ್ಕೇರಿದ್ದು, ಇದು ಸದ್ಯಕ್ಕೆ ನಿಲ್ಲುವ ಹಾಗೆ ಕಾಣ್ತಿಲ್ಲ. ಒಂದು ಕಡೆ ಚಲುವರಾಯಸ್ವಾಮಿ ಒಬ್ಬ ರಾಜಕೀಯ ವ್ಯಭಿಚಾರಿ ಅಂತ ನಾಗಮಂಗಲ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ.. ಮತ್ತೊಂದು ಕಡೆ ಚಲುವರಾಯ ಸ್ವಾಮಿ ಆಪ್ತ ಜಗದೀಶ್, ಪುಟ್ಟರಾಜು ರಹಸ್ಯ ಬಯಲು ಮಾಡ್ತಿನಿ ಅಂತ ಗುಡುಗಿದ್ದಾರೆ.ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹಾಗೂ ಮಾಜಿ ಸಚಿವ ಚೆ‌ಲುವರಾಯಸ್ವಾಮಿ ನಡುವೆ ಮಾತಿನ ಜಟಾಪಟಿ ಅಕ್ಷರಶಃ ಬೀದಿ ಬಂದು ಉಭಯ ನಾಯಕರ ಮಾನ ಹರಾಜಾಗುತ್ತಿದೆ..

ಮಂಡ್ಯದಲ್ಲಿ ಮಾತನಾಡಿದ್ದ ಸಚಿವ ಸಿ.ಎಸ್‌.ಪುಟ್ಟರಾಜು, ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು ಡೆಡ್‌ ಹಾರ್ಸ್ ಇದ್ದಂತೆ. ನಾಗಮಂಗಲ ಕ್ಷೇತ್ರದ ಇತಿಹಾಸದಲ್ಲಿ 52 ಸಾವಿರ ಮತಗಳ ಅಂತರದಿಂದ ಯಾರಾದರೂ ಸೋತಿರುವುದನ್ನು ಕಂಡಿದ್ದೀರಾ? ಎಂದು ವ್ಯಂಗ್ಯವಾಡಿದ್ದರು…ಇದಕ್ಕೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಮಾಜಿ ಸಚಿವ ಚಲುವರಾಯಸ್ವಾಮಿ, ಸಚಿವ ಪುಟ್ಟರಾಜು ತಲೆಯಲ್ಲಿ ಮೆದುಳು ಇಟ್ಟುಕೊಂಡು ಮಾತನಾಡಲಿ ಎಂದು ಏಕವಚನದಲ್ಲಿ ತಿರುಗೇಟು ನೀಡಿದ್ದರು..

ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಎಷ್ಟು ಅಂತರದಲ್ಲಿ ಸೋತಿದ್ದರು ಅನ್ನುವುದು ಗೊತ್ತಿಲ್ಲವಾ? ಅವನು ಚುನಾವಣೆಯಲ್ಲಿ ಸೋತಿಲ್ಲವೇನೊ ಗೊತ್ತಿಲ್ಲ. ಆದರೆ, ಅವನು ಯಾವ ರೀತಿ ಸಂಸದನಾದ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು…
ಇದೀಗ ಪುಟ್ಟರಾಜು-ಚಲುವರಾಯಸ್ವಾಮಿ ನಡುವಿನ ಗುದ್ದಾಟದಲ್ಲಿ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಎಂಟ್ರಿ ಕೊಟ್ಟಿದ್ದಾರೆ…

ಚಲುವರಾಯಸ್ವಾಮಿ ಒಬ್ಬ ರಾಜಕೀಯ ವ್ಯಭಿಚಾರಿ.. ಚೆಲುವರಾಯಸ್ವಾಮಿ ಡೆಡ್ ಹಾರ್ಸ್ ಅಲ್ಲ, ಕ್ಲೋಸ್ಡ್ ಹಾರ್ಸ್ ಎಂದು ಕಿಡಿಕಾರಿದ್ದಾರೆ. ೨೦೧೩ರ ಲೋಕಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡು ರಮ್ಯಾರನ್ನ ಗೆಲ್ಲಿಸುವ ಮೂಲಕ ಪುಟ್ಟರಾಜುಗೆ ದ್ರೋಹ ಬಗೆದಿದ್ದರು ಎಂದು ಸುರೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ..ಇನ್ನೊಂದೆಡೆ, ಚಲುವರಾಯಸ್ವಾಮಿ ಬೆಂಬಲಕ್ಕೆ ಅವರ ಆಪ್ತರೂ ಆದ ಕಾಂಗ್ರೆಸ್ ಮುಖಂಡ ಜಗದೀಶ್ ದೌಡಾಯಿಸಿದ್ದಾರೆ..

ಮಂಡ್ಯದಲ್ಲಿ ಮಾತನಾಡಿದ ಜಗದೀಶ್, ೨೦೧೩ರ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಯಲ್ಲಿ ಪುಟ್ಟರಾಜು ಸೋತ ಬಳಿಕ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ರಹಸ್ಯವಾಗಿ ಭೇಟಿ ಮಾಡಿದ್ದರು.. ಆಗ ನಿಮ್ಮ ಬಳಿ ನಾಯಿಯಂತೆ ಇರ್ತೀನಿ ಅಂತ ಹೇಳಿದ್ದನ್ನ ಮರೆತುಬಿಟ್ಟರಾ ಪುಟ್ಟರಾಜು ಅಂತ ಪ್ರಶ್ನೆ ಮಾಡಿದರು.

ಒಂದು ವೇಳೆ ಸುಳ್ಳು ಅನ್ನೋದಾದರೆ ನಿಮ್ಮ ಮನೆ ದೇವರು ತಿಬ್ಬಾದೇವಿ ಬಳಿ ಪ್ರಮಾಣ ಮಾಡುವಂತೆ ಆಹ್ವಾನ ನೀಡಿದರು. ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಚೆನ್ನಾಗಿದೆ ಅಂತಾ ಎರಡು ಪಕ್ಷದ ವರಿಷ್ಠರು ಬೀಗ್ತಿದ್ರೆ ಇತ್ತ ಮಂಡ್ಯದಲ್ಲಿ ಮಾತ್ರ ಒಬ್ಬರಿಗೊಬ್ಬರು ಮೂಗುಮುರಿಯುತ್ತಿದ್ದಾರೆ. ಇಬ್ಬರ ಜಗಳದಿಂದ ಜನಸಾಮಾನ್ಯರಿಗೆ ಪುಕ್ಕಟೆ ಮನರಂಜನೆ ಸಿಗುತ್ತಿದೆ.. ಜೊತೆಗೆ ಹಲವಾರು ರಹಸ್ಯಗಳು ಬಹಿರಂಗವಾಗುತ್ತಿದೆ…

LEAVE A REPLY

Please enter your comment!
Please enter your name here