Home Crime ಚೋರ್ ದಂಪತಿ ನಾಪತ್ತೆ..! ಮಗ-ಸೊಸೆಗಾಗಿ ತಾಯಿ ಕಣ್ಣೀರು..! ಜೊತೇಲಿದ್ದ ಸಹೋದರ ತೊಡಿದ್ದ ಇಬ್ಬರಿಗೂ ಗುಂಡಿ..!

ಚೋರ್ ದಂಪತಿ ನಾಪತ್ತೆ..! ಮಗ-ಸೊಸೆಗಾಗಿ ತಾಯಿ ಕಣ್ಣೀರು..! ಜೊತೇಲಿದ್ದ ಸಹೋದರ ತೊಡಿದ್ದ ಇಬ್ಬರಿಗೂ ಗುಂಡಿ..!

458
0
SHARE

ಈ ತಾಯಿಯ ಹೆಸ್ರು ಮಂಗಳಾ ಪಾದ್ರಿ. ಇಳಿವಯಸ್ಸಿನ ಈಕೆ ಕಳೆದ ಒಂದು ತಿಂಗಳಿಂದ ಕೈಯಲ್ಲೊಂದು ಫೋಟೋ ಹಿಡ್ಕೊಂಡು ಪೊಲೀಸ್ ಸ್ಟೇಷನ್ ಸುತ್ತಿ ಸುತ್ತಿ ಸಾಕಾಗಿ ಕಡೆಗೆ ಕಲಬುರ್ಗಿ ಪೊಲೀಸ್ ಸೂರಿಡೆಂಟ್ ಅಂದ್ರೆ ಎಸ್ಪಿ ಆಫೀಸ್ ಕದ ತಟ್ಟಿದ್ದಳು. ಈ ತಾಯಿಯ ಮಂಜು ಮಂಜಾಗಿರೋ ಕಣ್ಣಲ್ಲಿ ಕಣೀರಿತ್ತು, ಆ ಕಣ್ಣೀರು ಸುಕ್ಕುಗಟ್ಟಿರೋ ಕೆನ್ನೆ ಮೇಲೆ ಹನಿಗೂಡಿ ಆಗಾಗ ಜಾರಿ ಹೋಗ್ತಿತ್ತು. ಜಾರ್ತಿದ್ದ ಕಂಬಿಯನ್ನ ಒರೆಸ್ತಿದ್ದ ಸೋತು ಹೋಗಿರೋ ಕೈಗಳು ಸಮಾಧಾನ ಹೇಳ್ತಿದ್ವು. ಅದೆಲ್ಲಕ್ಕಿಂತ ಮುಖ್ಯವಾಗಿ ಈ ಹಿರಿ ಜೀವದ ಮನಸ್ಸಲ್ಲಿ ಭಾರವಾದ ನೋವು ತುಂಬಿತ್ತು. ಒಂದು ರೀತಿ ಆತಂಕ, ಎಲ್ಲೋ ಒಂದು ಕಡೆ ಸಣ್ಣ ಆಶಾಭಾವನೆ ಇತ್ತು.

ಆದ್ರೂ ದಿನಗಳು ಉರುಳುತ್ತಾ ಹೋಗ್ತಿದ್ರೆ ಹೋಪ್ ಕಳೆದುಕೊಳ್ತಿದ್ದ ಈ ತಾಯಿ , ಮತ್ತೆ ದುಃಖದ ಮಡುವಿಗೆ ಜಾರುತ್ತಿದ್ದಳು.ಪೊಲೀಸ್ ಸ್ಟೇಷನ್ನು, ಎಸ್ಪಿ ಆಫೀಸಿಗೆ ಅಲೆದಾಡಿ.. ಸಾರ್ ನನಗೆ ಈ ಒಂದು ಕೆಲಸ ಮಾಡಿಕೊಡಿ ನಿಮಗೆ ಪುಣ್ಯ ಬರುತ್ತೆ.ಒಂದೊಂದು ಕ್ಷಣ ಒಂದೊಂದು ದಿನ ಕಳೀತಾ ಇದ್ರೆ ಮನಸ್ಸು ಯಾಕೆ ಕತ್ತಲೆಯಲ್ಲಿ ಒಂಟಿಯಾದಂತೆ ಆಗ್ತಿದೆ. ಯಾವಾಗ ಅದೇನ್ ಕೇಳ್ಬೇಕೋ ಅಂತ ಭಯದಿಂದ ಗುಂಡಿಗೆ ಸದ್ದು ಜಾಸ್ತಿ ಆಗ್ತಿದೆ. ಅದೆಲ್ಲವನ್ನೂ ತಡ್ಕೊಂಡು ಗುಂಡಿಗೆ ಗಟ್ಟಿ ಮಾಡ್ಕೊಂಡು ಏನೋ ಆ ಆಸೆಯಿಂದ ಬದುಕಿದ್ದೀನಿ.. ದಯವಿಟ್ಟು ನನ್ನನ್ನ ನಿಮ್ಮ ತಾಯಿ ಅಂತ ತಿಳ್ಕೊಂಡು ನನ್ನ ದುಃಖ ದೂರ ಮಾಡಿ ಅಂತ ಪರಿಪರಿಯಾಗಿ ಅಂಗಲಾಚುತ್ತಿದ್ಳು. ಅಂದ ಹಾಗೆ.. ಈ ತಾಯಿಯ ದುಃಖ, ನೋವು ದಿಗಿಲಿಗೆ ಕಾರಣವೇನು ಗೊತ್ತಾ.. ಈ ಫೋಟೋ.

ಅಯ್ಯೋ ನನ್ನ ಮಗಾ ನನ್ನ ಸೊಸೆ  ಅಂತ ಗೋಳಾಡ್ತಾ ಅವರಿಗಾಗಿ ಕಣ್ಣೀರಿಡ್ತಾ ಪೊಲೀಸ್ರ ಎದುರು ಗೋಳಾಡ್ತಾ ತಾಯಿ ಮಗ ಸೊಸೆಗಾಗಿ ನೂರುಗಣ್ಣಿಂದ ಎದರು ನೋಡ್ತಾ ಇದ್ದ ಮಂಗಳಮ್ಮ ಕಿಡ್ನಾಪ್ ಆರೋಪ ಮಾಡಿದ್ಳು. ಅದೂ ಕೂಡ ಸೊಸೆಯ ಅಣ್ಣಮ್ಮಂದಿರ ಮೇಲೆನೆ. ಆದ್ರೆ.. ಇದ್ಯಾವುದೋ ಫ್ಯಾಮಿಲಿ ಗಲಾಟೆ ಅಂತ ಪೊಲೀಸ್ರೂ ಕೂಡ ಒಂಚೂರು ಕಾದುನೋಡೋ ಕೆಲಸ ಮಾಡಿದ್ರು. ನಿಜ ಹೇಳ್ಬೇಕು ಅಂದ್ರೆ ಸೂಲ್ ಪೇಟ್ ಪೊಲೀಸ್ರು ಮಿಸ್ಸಿಂಗ್ ಕಂಪ್ಲೆಂಟ್ ರಿಜಿಸ್ಟರ್ ಮಾಡ್ಕೊಂಡು ಸೈಲೆಂಟಾಗಿ ಬಿಟ್ಟಿದ್ರು. ಇತ್ತ ಮಂಗಳ ಪಾದ್ರಿ ಮಾತ್ರ ಮಗ ಸೊಸೆಗಾಗಿ ಕಾದು ಕುಳಿತೇ ಇದ್ಳು. ಸೆಚುಯೇಷನ್ ಹೀಗಿರ್ಬೇಕಾದ್ರೆ  ಅದೊಂದು ಸುದ್ದಿ ಪೊಲೀಸ್ರ ಕಿವಿಗೆ ಬಿದ್ದು ಬಂದಿತ್ತು . ಆ ಸುದ್ದಿಯ  ಜಾಡಿಡಿದು ಹೋದ ಪೊಲೀಸರಿಗೆ ಕಂಡಿದ್ದು ಸೇಡಂ ಹೊರವಲಯದ ತೊಗರಿ ಹೊಲವೊಂದರಲ್ಲಿ ಬೆಂಕಿಯಿಂದ ಸುಟ್ಟು ಬೂದಿಯಾಗಿದ್ದ ಅದೊಂದು ಸ್ಥಳ.

ಹೌದು ಸೇಡಂ ಹೊರವಲಯದ ತೊಗರಿ ಹೊಲವೊಂದರಲ್ಲಿ ಸುಟ್ಟು ಬೂದಿಯಾಗಿದ್ದ ಸ್ಥಳವದು. ಆ ಸ್ಪಾಟಿಗೆ ಹೋಗಿದ್ದ ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರಿಗೆ ಬಂದಿದ್ದ ಮಾಹಿತಿ ನಿಜವೇ ಆಗಿತ್ತು. ಆ ಮಾಹಿತಿಗೆ ಸಾಕ್ಷಿಯಾಗಿ ಆ ಬೂದಿಯಲ್ಲಿ ಕಂಡಿದ್ದು ತಲೆ ಬುರುಡೆ , ಉರಿದು ಉಳಿದಿರೋ ಮೂಳೆ. ಅಂದ ಹಾಗೆ ಅಲ್ಲಿ ಸುಟ್ಟು ಬೂದಿಯಾಗಿ ಉಳಿದಿರೋ ಪಳಯುಳಿಕೆ ಮನುಷ್ಯರದ್ದು ಯಾರನ್ನೋ ಕೊಂದು ಇಲ್ಲಿ ತಂದು ಸುಟ್ಟಿರೋ ಕುರುಹುಗಳು ಸ್ಟಷ್ಟವಾಗಿ ಕಾಣ್ತಿದ್ವು. ಅಷ್ಟು ಮಾತ್ರವಲ್ಲಾ ಅದೊಂದು ನಿಗೂಢ ಕೊಲೆಯಾಗಿತ್ತು. ಅದು ಬರೀ ಒಂದು ಕೊಲೆ ಅಲ್ಲಾ ಬದಲಾಗಿ ಜೋಡಿ ಕೊಲೆ. ನಿಮಗೆ ಮತ್ತೊಂದು ಶಾಕ್ ಆಗೋ ವಿಚಾರವನ್ನ ಹೇಳ್ತೀನಿ  ಕರೆಕ್ಟಾಗಿ ಕೇಳಿಸ್ಕೊಳ್ಳಿ. ಅಲ್ಲಿ ಸುಟ್ಟು ಬುದಿಯಾಗಿದ್ದು ಮತ್ತಾರೂ ಅಲ್ಲಾ..

ನಿಗೂಢವಾಗಿ ನಾಪತ್ತೆಯಾಗಿದ್ದ ಅಜಯ್ ಹಾಗೂ ಜ್ಯೋತಿ.ಎಸ್ಪಿ ಸಾಹೇಬ್ರು ಹೇಳಿದ್ದು ಸರಿಯಾಗೇ ಇದೆ. ತಾಯಿ ಮಂಗಳ ಪಾದ್ರಿ ನೂರುಗಣ್ಣಿಂದ ಯಾರಿಗಾಗಿ ಎದರು ನೋಡ್ತಾ ಇದ್ಳೋ .. ಯಾರು ನಿಗೂಢ ವಾಗಿ ಕಣ್ಮರೆಯಗಿದ್ರೂ ಆ ಗಂಡ ಹೆಂಡ್ತಿಯೇ ಅಲ್ಲಿ ಅವಶೇಷವೂ ಸಿಗದೆ ಸುಟ್ಟು ಬೂದಿಯಾಗಿರೋದು. ಮಗ ಸೊಸೆಗಾಗಿ ಕಾದು ಕಾದು ಕಣ್ಣೀರಿಡ್ತಿದ್ದ  ತಾಯಿಗೆ ಇದೀಗ ಉಳಿದಿರೋದು ಬರೀ ಕಣ್ಣೀರು ಮಾತ್ರವೇ.ಕಳೆದ ತಿಂಗಳ ಎರಡನೇ ತಾರೀಕಿನಿಂದ ನಾಪತ್ತೆಯಾಗಿದ್ದ ಅಜಯ್ ಹಾಗೂ ಜ್ಯೋತಿ ಸುಟ್ಟು ಬೂದಿಯಾಗಿದ್ರು. ಅದೂ ಕೂಡ ಕೊಲೆಯಾಗಿ. ಈ ವಿಚಾರ ತಿಳಿದ ಪೊಲೀಸರು ಸ್ಪಾಟಿಗೆ ಬಂದು ನೋಡಿ, ಪರಿಶೀಲಿಸಿದಾಗ ಅದು ಸತ್ಯವೇ ಆಗಿತ್ತು. ಅಂದ ಹಾಗೆ..ಸೋಲ್ ಪೇಟ್ ಪೊಲೀಸ್ ಸ್ಟೇಷನ್ನಲ್ಲಿ ಗಂಡ ಹೆಂಡ್ತಿ ಮಿಸ್ಸಿಂಗ್ ಕೇಸ್ ದಾಖಲಾಗಿದ್ದೇನೋ ಸರಿ.

ಆದ್ರೆ ಕೆಲ ದಿನಗಳ ಹಿಂದೆ ಸೇಡಂ ಸ್ಟೇಷನ್ ಲಿಮಿಟ್ಸಲ್ಲಿ ಒಂದು ಹೆಣ್ಣಿನ ಶವ ಪತ್ತೆಯಾಗಿತ್ತು. ಅದು ಗುರುತು ಹಿಡಿಯೋಕೆ ಆಗದಷ್ಟು ಅರೆಬರೆಯಾಗಿ ಸುಟ್ಟಿತ್ತು. ಹೀಗಾಗಿ ಯಾರಾದ್ರೂ ಹೆಂಗಸು ನಾಪತ್ತೆಯಾಗಿದ್ದಾಳಾ ಅಂತ ಸುತ್ತಮುತ್ತಲ ಠಾಣೆಗಳಲ್ಲಿ ವಿಚಾರಿಸಿದ್ರು ಪೊಲೀಸರು.  ಆಗ ತಿಂಗಳ ಹಿಂದೆ ಸೋಲ್ ಪೇಟ್ ಠಾಣೆಯಲ್ಲಿ ಗಂಡ ಹೆಂಡ್ತಿ ಮಿಸ್ಸಿಂಗ್ ಕೇಸ್ ದಾಖಲಾಗಿದ್ದನ್ನ ತಿಳಿದುಕೊಂಡಿದ್ರು. ಅದು ಕಿಡ್ನಾಪ್ ಎಂದು ಆರೋಪಿಸಿದ್ದ ಮಂಗಳ ಪಾದ್ರಿಯ ಮಾತಂತೆ.  ಆರೋಪ ಹೊತ್ತಿದ್ದ ಜ್ಯೋತಿಯ ಅಣ್ತಮ್ಮಂದಿರ ಪೈಕಿ ಒಬ್ಬನನ್ನ ಎತ್ತಾಕೊಂಡು ಬಂದು ಬೆಂಡೆತ್ತಿದ್ರು. ಆದ್ರೆ ಅಲ್ಲಿ ಸಿಕ್ಕ ಹೆಣ್ಣಿನ ಶವಕ್ಕೂ ಆರೋಪಿತನಿಗೂ ಯಾವುದೇ ಸಂಬಂಧ ಇಲ್ಲ ಅಂತ ಗೊತ್ತಾಗಿತ್ತು. ಬಟ್… ಪೊಲೀಸ್ರ ವಿಚಾರಣೆ ವೇಳೆ.. ಆ ಆಸಾಮಿ ಅಜಯ್ ಹಾಗೂ ಜ್ಯೋತಿಯ ಜೋಡಿ ಕೊಲೆಯ ಸ್ಟೋಟಕ ವಿಚಾರವನ್ನ ಬಾಯಿಬಿಟ್ಟೇಬಿಟ್ಟಿದ್ದ.ಆಗ್ಲೇ ಪೊಲೀಸ್ರಿಗೆ ಗೊತ್ತಾಗಿದ್ದು.. ಗಂಡ ಹೆಂಡ್ತಿಯ ದುರಂತ ಕಥೆ. ಅಂದ ಹಾಗೆ.. ಈ ಅಜಯ್ ಹಾಗೂ ಜ್ಯೋತಿ .. ಅಂತಿಂತಾ ಗಂಡ ಹೆಂಡ್ತಿ ಅಲ್ಲಾ.. ಇವ್ರು ಖತರ್ನಾಕ್ ಕಳ್ಳ ದಂಪತಿ ಅಂತೆ ಕಣ್ರೀ.

ನಾಪತ್ತೆಯಾಗಿದ್ದ ಅಜಯ್ ಜ್ಯೋತಿ ದಂಪತಿ ಕೊಲೆಯಾಗಿ ಹೋಗಿದ್ರು. ಆ ಗಂಡ ಹೆಂಡತಿಯನ್ನ ಕಿರಾತಕರು ತೊಗರಿ ಬಣವೆಯಲ್ಲಿ ಹಾಕಿ ಸುಟ್ಟು ಬೂದಿ ಮಾಡಿಬಿಟ್ಟಿದ್ರು. ಈ ಆಘಾತಕಾರಿ ವಿಚಾರವನ್ನ ಖುದ್ದು ಜ್ಯೋತಿಯ ತಮ್ಮನೇ ಬಾಯಿಬಿಟ್ಟಿದ್ದು. ಆದ್ರೆ ಇನ್ನೂ ಆರೋಪಿ ಹಂತಕರು ಸಿಕ್ಕಿಲ್ಲವಾದ್ರೂ ಜ್ಯೋತಿಯ ಅಣ್ತಮ್ಮಂದಿರೇ ಆ ಜೋಡಿ ಹತ್ಯೆ ಮಾಡಿದ್ದಾರೆ ಅನ್ನೋದು ಪೊಲೀಸ್ರಿಗೆ ಬಂದಿರೋ ಅನುಮಾನ. ಅಂದ ಹಾಗೆ.. ಅಜಯ್ ಹಾಗೂ ಜ್ಯೋತಿ ಅಂತಿಂತಾ ಗಂಡ ಹೆಂಡ್ತಿ ಅಲ್ಲಾ.. ಇವ್ರು ಕಳ್ಳ ದಂಪತಿ.ಅಜಯ್ ಹಾಗೂ ಜ್ಯೋತಿಯದು ವಿಚಿತ್ರ ಲವ್ ಸ್ಟೋರಿ ವೀಕ್ಷಕರೇ. ಈ ಹುಡುಗಿಗೆ ಈಗಾಗಲೇ ಮದ್ವೆಯಾಗಿದೆ. ಆದ್ರೆ ಗಂಡನನ್ನ ಬಿಟ್ಟಿದ್ದವಳು. ಇನ್ನಾ ಈ ಆಸಾಮಿಗೂ ಈ ಹಿಂದೆಯೇ ಮದ್ವೆ ಆಗಿದ್ರೂ ಅದ್ಯಾಕೋ ಹೆಂಡ್ತಿಯನ್ನ ನೆಟ್ಟಗೆ ಬಾಳಿಸಲಿಲ್ಲ.

ಹೀಗಿದ್ದವರು ಈ ಹಿಂದೆ ಮುಂಬೈ ನಲ್ಲಿ ಒಬ್ಬರಿಗೊಬ್ಬರು ಪರಿಚಯ ಆಗಿದ್ರು. ಈ ಅಜಯ್ ಮೂಲತಃ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋಳ್ಕಿ ಅನ್ನೋ ಗ್ರಾಮದ  ನಿವಾಸಿ. ಮುಂಬೈನಲ್ಲಿ ಜ್ಯೋತಿ ಪರಿಚಯ ಆಗಿದ್ಳು. ಪರಿಚಯ ಕ್ರಮೇಣ ಪ್ರೀತಿ ಪ್ರೇಮವಾಗಿ ಬದಲಾಗಿತ್ತು. ಇಬ್ರೂ ಮದ್ವೆಯಾದ್ರು. ಒಂದಷ್ಟು ತಿಂಗಳು ಕಾಲ ಮುಂಬೈ ಮಹಾನಗರದ ಕೊಳಗೇರಿಯೊಂದರಲ್ಲಿ ಜೀವನ ಮಾಡಿದ್ರು. ನಂತರ..  ಜ್ಯೋತಿಯ ಸಂಬಂಧಿಗಳಿದ್ದ ಕಲಬುರ್ಗಿಯ ಸೇಡಂ ತಾಲೀಕಿನ ನಿಡಗುಂದಾ ಗ್ರಾಮಕ್ಕೆ ಬಂದು ನೆಲೆ ಕಂಡುಕೊಳ್ತಾರೆ.  ಇವರಿಬ್ಬರದೂ ಪಾದ್ರಿ ಅನ್ನೋ ಸಮೂಹಕ್ಕೆ ಸೇರಿದವ್ರು. ಈ ಸಮೂಹದಲ್ಲಿ ವರದಕ್ಷಣೆ ಇಲ್ಲ ಬದಲಾಗಿ ವಧುದಕ್ಷಣೆ. ಆದ್ರೆ ಲವ್ ಮಾಡಿ ಮದ್ವೆಯಾದ ಕಾರಣಕ್ಕೆ.. ಜ್ಯೋತಿ ಮನೆಯವರಿಗೆ ಅಜಯ್ ಕೊಡಬೇಕಾಗಿದ್ದ ಎರಡು ಲಕ್ಷ ಕೊಟ್ಟಿರಲಿಲ್ಲ. ಇದೇ ವಿಚಾರವಾಗಿ ಜಗಳ ನಡೆದಿತ್ತು. ಹೀಗಾಗಿ ಅದೇ ಕಾರಣಕ್ಕೆ ನನ್ನ ಮಗ ಹಾಗೂ ಸೊಸೆಯನ್ನ ಕಿಡ್ನಾಪ್ ಮಾಡಿದ್ದಾರೆ ಅಂತ ಮಂಗಳಾ ಪಾದ್ರಿ ಆರೋಪಿಸಿದ್ದಳು. ಆದ್ರೆ ಕಾರಣ ಅದೊಂದೆ ಆಗಿರಲಿಲ್ಲ. ಬದಲಾಗಿ ಜ್ಯೋತಿಯ ಮಲತಾಯಿ ಮಗ ದತ್ತು ಅನ್ನೋನಿಗೂ ಇವರಿಗೂ ಒಂದು ಗಲಾಟೆ ನಡೆದಿತ್ತು. ಅದೇನಪ್ಪಾ ಅಂದ್ರೆ ಕಳ್ಳತನದ ವಿಚಾರವಾಗಿ.

ಅಜಯ್ ಮತ್ತು ಜ್ಯೋತಿ ದತ್ತು ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಕಳ್ಳತನ ಮಾಡಿರ್ತಾರೆ. ಅದು 80ಗ್ರಾಂ ಚಿನ್ನವನ್ನ ಕಳ್ಳತನ ಮಾಡಿರ್ತಾರೆ. ಆದ್ರೆ ಇದ್ರಲ್ಲಿ ದತ್ತುಗೆ ಬರಬೇಕಿದ್ದ ಪಾಲನ್ನ ಅವರಿಬ್ಬರು ಕೊಟ್ಟಿರೋದಿಲ್ಲ. ಆದ್ರೆ ಇವರ ಕಳ್ಳತನದ ನಿಯಮದ ಪ್ರಕಾರ ಅದು ಸಲ್ಲಿಕೆಯಾಗಬೇಕಿತ್ತು. ಆದ್ರೆ ಅದನ್ನ ಇವ್ರು ಮರೆತು ಬಿಟ್ಟಿದ್ರು. ಹೀಗಾಗಿ ದತ್ತು ಇವರ ಮೇಲೆ ಗರಂ ಆಗಿದ್ದ. ಅಲ್ಲದೆ ಆತ ವಧು ದಕ್ಷಿಣೆಯನ್ನು ಕೊಟ್ಟಿಲ್ಲ, ಇತ್ತ ಕೆಲಸದಲ್ಲಿ ಪಾಲು ಕೊಡ್ತಿಲ್ಲ ಅಂತ ಅವರಿಬ್ಬರ ಮೇಲೆ ಕೆಂಡಮಂಡಲವಾಗಿದ್ದ. ಅಲ್ಲದೆ ಇವರಿಬ್ಬರನ್ನ ಸುಮ್ಮನೆ ಬಿಡಬಾರದು ಅಂತ ತೀರ್ಮಾನಿಸಿಬಿಟ್ಟಿದ್ದ. ಹೀಗೆ ಅಜಯ್ ಮತ್ತು ಜ್ಯೋತಿ ಸರ್ಕಾರಿ ಉರ್ದು ಶಾಲೆಯಲ್ಲಿ ಮಲಗಿಕೊಂಡಿರೋವಾಗ ದತ್ತು ತನ್ನ ಚಿಕ್ಕಪ್ಪನ ಜೊತೆ ಅಲ್ಲಿಗೆ ಬಂದಿದ್ದ. ಅಲ್ಲಿಗೆ ಬಂದವನೇ ಕಬ್ಬಿಣದ ರಾಡ್ ನಿಂದ ಆತನ ತಲೆಗೆ ಹೊಡೆದು ಕೊಂದಿದ್ದಾನೆ. ನಂತ್ರ ಜ್ಯೋತಿಗೂ ಎಚ್ಚರವಾಗಿದೆ.

ಇನ್ನೆಲ್ಲಿ ಇವಳು ಬಾಯಿ ಬಿಡ್ತಾಳೋ ಅನ್ನೋ ಕಾರಣಕ್ಕೆ ದತ್ತು ಆಕೆಯ ಮೇಲೂ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ನಂತ್ರ ತನ್ನ ಚಿಕ್ಕಪ್ಪನ ಸಹಾಯದಿಂದ ಇಬ್ಬರ ಡೆಡ್ ಬಾಡಿಯನ್ನ ತೊಗರಿ ಬಣವೆಗೆ ತಗೊಂಡು ಹೋಗಿ ಸುಟ್ಟುಹಾಕಿದ್ದಾರೆ. ಸಹೋದರಿಯ ಮದುವೆಯಾಗಿ ಒಂದು ಲಕ್ಷ ವಧುದಕ್ಷಿಣೆ ಕೊಡದ ಹಾಗೂ ಕಳ್ಳತನದಲ್ಲಿ ಪಾಲು ಕೊಡದ ಅಜಯ್ ಮೇಲೆ ದತ್ತು ಸೇಡು ತೀರಿಸಿಕೊಂಡಿದ್ದ. ಹೀಗೆ ಒಂದು ತಿಂಗಳಿನಿಂದ ನಿಗೂಢವಾಗಿಯೇ ಉಳಿದಿದ್ದ ಪ್ರಕರಣವನ್ನ ಪೊಲೀಸ್ರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪಾದ್ರಿ ಜನಾಂಗ ಕಳ್ಳತನ ಮಾಡೋದಕ್ಕೆ ಫೇಮಸ್. ಅಷ್ಟೇ ಅವರ ಸಂಪ್ರದಾಯವು ಕೂಡಾ ವಿಶಿಷ್ಠವಾಗಿದೆ. ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಪಾದ್ರಿ ಕಳ್ಳರನ್ನ ಮಟ್ಟ ಹಾಕೋದಕ್ಕೆ ಪೊಲೀಸ್ರು ತಿಣುಕಾಡ್ತಿದ್ದಾರೆ ಅಷ್ಟರ ಮಟ್ಟಿಗೆ ಇವ್ರು ಅಲ್ಲಿ ಕಾಟ ಕೊಟ್ಟಿದ್ದಾರೆ. ಇದೀಗ ಇವ್ರು ಕೊಲೆ ಮಾಡೋದಕ್ಕು ಶುರುಮಾಡ್ಕೊಂಡಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದಿಂದ ಮಹಾರಾಷ್ಟ್ರದವರೆಗೂ ಒಂದು ಕಡೆ ನಿಂತಲ್ಲಿ ನಿಲ್ಲದೆ ಟ್ರಾವೆಲ್ ಮಾಡೋ ಇವರನ್ನ ಮಟ್ಟ ಹಾಕೋದು ಪೊಲೀಸ್ರಿಗು ಕಷ್ಟವಾಗಿದೆ.

LEAVE A REPLY

Please enter your comment!
Please enter your name here