Home Cinema ಛೀ..ಥೂ.. ಜನ ಕಲಾವಿದರಿಗೆ ಛೀಮಾರಿ ಹಾಕ್ತಿರೋದ್ಯಾಕೇ..? ಮಾಜಿ ನೀಲಿರಾಣಿ ಸನ್ನಿ ಇಟ್ಟಿದ್ದು ಅದೆಂಥಾ ವಿಚಿತ್ರ ಬೇಡಿಕೆ..!...

ಛೀ..ಥೂ.. ಜನ ಕಲಾವಿದರಿಗೆ ಛೀಮಾರಿ ಹಾಕ್ತಿರೋದ್ಯಾಕೇ..? ಮಾಜಿ ನೀಲಿರಾಣಿ ಸನ್ನಿ ಇಟ್ಟಿದ್ದು ಅದೆಂಥಾ ವಿಚಿತ್ರ ಬೇಡಿಕೆ..! ಬಟಾಬಯಲಾಯ್ತು ಬಣ್ಣದ ದುನಿಯಾದವ್ರ ಅಸಲಿ ಬಣ್ಣ.! ಪ್ರಚಾರಕ್ಕೆ ಬರಬೇಕು ಅಂದ್ರೆ ದುಡ್ಡು ಕೊಡಲೇಬೇಕಣ್ಣ..!ಕಪ್ಪು ಹಣಕ್ಕೂ ಕೈ ಚಾಚುವ ಇವ್ರಿಗಿಲ್ಲ ಸ್ವಲ್ಪನೂ ನಾಚಿಕೆ..!

8775
0
SHARE

ದುಡ್ಡಿನ ಮುಂದೆ ಸ್ವಾಭಿಮಾನ, ಆತ್ಮಸಾಕ್ಷಿ ಎಲ್ಲವೂ ಗೌಣ ಎನ್ನುವುದು ಬಾಲಿವುಡ್‌ನ ಕೆಲವು ತಾರೆಯರ ವಿಚಾರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಯಸ್, ಜನಪ್ರಿಯ ಮೀಡಿಯಾ ಕೋಬ್ರಾ ಪೋಸ್ಟ್ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ೩೦ಕ್ಕೂ ಹೆಚ್ಚು ಬಾಲಿವುಡ್ ಮಂದಿ ಅಕ್ಷರಶ ಬೆತ್ತಲಾಗಿದ್ದಾರೆ.

ಹೌದು, ದುಡ್ಡು ಕೊಟ್ಟರೆ ಯಾವುದೇ ಪಕ್ಷದ ಪರ ತಮ್ಮ ಸೊಶೀಯಲ್ ಮೀಡಿಯಾದಲ್ಲಿ ಪ್ರಚಾರ ಮಾಡ್ತೀವಿ ಅನ್ನುವ ಮೂಲಕ, ತಮ್ಮ ಕೀಳು ಮನಸ್ಥಿತಿಯ ಪ್ರದರ್ಶನವನ್ನ ಮಾಡಿದ್ದಾರೆ ಹಿಂದಿ ಚಿತ್ರರಂಗದ ಜನಪ್ರಿಯ ತಾರೆಯರು.ಯಸ್, ಇದು.. ಅರಗಿಸಿಕೊಳ್ಳಲಾಗದಿದ್ದರೂ ಅರಗಿಸಿಕೊಳ್ಳಬೇಕಾದ ಸತ್ಯ. ನಿಮಗೆ ಗೊತ್ತಿರಲಿ ಇನ್ನೇನೂ ೨೦೧೯ರ ಲೋಕಸಭಾ ಚುನಾವಣಾ ಸಮೀಪಿಸುತ್ತಿದೆ. ಚಿತ್ರರಂಗದ ತಾರೆಯರೂ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರ-ವಿರೋಧದ ಮಾತುಗಳನ್ನೂ ಆಡುತ್ತಿದ್ದಾರೆ. ಪ್ರಚಾರಕ್ಕೂ ಸನ್ನದ್ಧರಾಗ್ತಿದ್ದಾರೆ. ಆದ್ರೆ ಇವ್ರ ಅಭಿಪ್ರಾಯಗಳೂ ಎಷ್ಟರ ಮಟ್ಟಿಗೆ ಪ್ರಾಮಾಣಿಕತೆಯಿಂದ ಕೂಡಿವೆ, ಅನ್ನೋದನ್ನ ಬಯಲಿಗೆಳೆಯಲು ಅಂಥನೇ ಇತ್ತೀಚಿಗೆ ಕೋಬ್ರಾ ಪೋಸ್ಟ್ ಚುಟುಕು ಕಾರ್ಯಾಚರಣೆಯನ್ನೂ ನಡೆಸಿದೆ.

ಕೋಬ್ರಾ ಪೋಸ್ಟ್ ನಡೆಸಿದ ಇದೇ ಕಾರ್ಯಾಚರಣೆಯಲ್ಲಿ ಸನ್ನಿ ಲಿಯೋನ್, ಜಾಕಿ ಶ್ರಾಫ್, ವಿವೇಕ್ ಒಬೆರಾಯ್, ಸೋನು ಸೂದ್, ಅಮಿಶಾ ಪಟೇಲ್, ಶ್ರೇಯಸ್ ತಲ್ಪಾಡೆ, ಶಕ್ತಿ ಕಪೂರ್, ಟಿಸ್ಕಾ ಚೋಪ್ರಾ, ರಾಖಿ ಸಾವಂತ್, ಪಂಕಜ್ ಧೀರ್, ಪುನೀತ್ ಇಸ್ಸಾರ್, ಕೊಯಿನಾ ಮಿತ್ರಾ, ರಾಜು ಶ್ರೀವಾತ್ಸವ್, ಮಿನಿಶಾ ಲಂಬಾ, ಮಹಿಮಾ ಚೌಧರಿ, ರೋಹಿತ್ ರಾಯ್, ರಾಹುಲ್ ಭಟ್, ಉಪಾಸನಾ ಸಿಂಗ್, ಪೂನಂ ಪಾಂಡೆ ಸೇರಿದಂತೆ ಬರೋಬ್ಬರಿ, ೩೬ಕ್ಕೂ ಹೆಚ್ಚಿನ ಸೋ ಕಾಲ್ಡ್ ಸೆಲೆಬ್ರೀಟಿಗಳೂ ಬೆತ್ತಲಾಗಿದ್ದಾರೆ.ಅಸಲಿಗೆ ಕೋಬ್ರಾ ಪೋಸ್ಟ್ ವರದಿಗಾರರು, ತಾವು ಬಿ.ಜೆ.ಪಿ. ಕಾಂಗ್ರೆಸ್, ಹಾಗೂ ಆಮ್ ಆದ್ಮಿ ಪಕ್ಷದ ಸಾರ್ವಜನಿಕ ಸಂಪರ್ಕ ಪ್ರತಿನಿಧಿಗಳಾಗಿ, ಬಿಟೌನ್ ನಾಯಕ, ನಾಯಕಿಯರನ್ನ ಭೇಟಿಯಾಗಿದ್ದಾರೆ.

ಹೀಗೆ ಭೇಟಿ ನಡೆಸಿ.. ರಾಜಕೀಯ ಪಕ್ಷಗಳಿಗೆ ತಮ್ಮ ಬೆಂಬಲ ನೀಡಬೇಕು ಮತ್ತು ಪಕ್ಷದ ಪರ ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಬೇಕು ಅಂದಿದ್ದಾರೆ. ಹೀಗೆ.. ಕೋಬ್ರಾ ಪೋಸ್ಟ್‌ನವರು ಅಪ್ರೋಚ್ ಮಾಡ್ತಿದ್ದಂತೆ, ೩೬ಜನರ ಬಾಯಲ್ಲಿ ಬಂದಿದ್ದು ಡೀಲ್ ವಿಚಾರನೇ ಅನ್ನೋದೇ ಇಲ್ಲಿನ ವಿಪರ್ಯಾಸ ಹಾಗೂ ದುರಂತ.ಹೌದು ಡೀಲ್.. ನಿಮ್ಮ ಪಕ್ಷಕ್ಕೆ, ನೀವ್ ಹೇಳಿದಂತೆ ನಾವ್ ಪ್ರಚಾರ ಮಾಡ್ತೀವಿ, ನಮಗೆಷ್ಟು ಕೊಡ್ತೀರಾ ಅನ್ನುವ ಪ್ರಶ್ನೆಯನ್ನ, ಒಂದಷ್ಟು ಅಳುಕಿಲ್ಲದೇ ಇಲ್ಲಿ ಸೆಲೆಬ್ರೀಟಿಗಳೂ ಕೇಳಿದ್ದಾರೆ. ನಮ್ಮ ಅಭಿಮಾನಿಗಳೂ ನಾವ್ ಏನು ಹೇಳ್ತೀವಿ ಅದನ್ನೇ ನಂಬುತ್ತಾರೆ, ಅದನ್ನೇ ಫಾಲೋ ಮಾಡ್ತಾರೆ, ಇದು.. ನಿಮ್ಮ ಪಕ್ಷಕ್ಕೆ ಇನ್ನಷ್ಟು ಅಡ್ವೆಂಟೆಜ್ ಆಗುತ್ತೆ. ಹಾಗಾಗಿ, ದುಡ್ಡು ಕೊಡಿ ಅನ್ನುವ ಬೇಡಿಕೆಯನ್ನಿಟ್ಟಿರುವ ಸೆಲೆಬ್ರೀಟಿಗಳೂ ೨ರಿಂದ ೫೦ಲಕ್ಷದವರೆಗೂ ಬೇಡಿಕೆ ಇಟ್ಟಿದ್ದಾರೆ. ಅಷ್ಟೇ ಅಲ್ಲ ೮ ತಿಂಗಳೂ ಗುತ್ತಿಗೆ ಆಧಾರದ ಮೇಲೆ ಆಯಾ ಪಕ್ಷಗಳ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ.

ವಿವೇಕ್ ಓಬೆರಾಯ್. ಕರ್ನಾಟಕದ ಅಳಿಯ. ಸದ್ಯ ನರೇಂದ್ರ ಮೋದಿಯವ್ರ ಜೀವನಾಧಾರಿತ ಸಿನಿಮಾದಲ್ಲಿ ಕಾಣಸಿಗಲಿರುವ ಇದೇ ವಿವೇಕ್ ಓಬೆರಾಯ್, ಮೋದಿಯವ್ರನ್ನ ಮತ್ತೆ ಗೆಲ್ಲಿಸಲು ದುಡ್ಡು ಕೇಳಿದ್ದಾರೆ. ಹೌದು, ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ವಿವೇಕ್ ಮೋದಿಗಾಗಿನೇ ದುಡ್ಡು ಕೇಳಿದ್ದಾರೆ. ಇದು, ಇಲ್ಲಿನ ಇನ್ನೊಂದು ದುರಂತ. ಯಸ್, ಹೀಗೆ ಮುಂದುವರೆಯುವ ಮಾತುಕಥೆಯಲ್ಲಿ ನಂತ್ರ ವಿವೇಕ್ ಓಬೆರಾಯ್ ಮ್ಯಾನೇಜರ್ ಕೇಧಾರ್‌ನ ಎಂಟ್ರಿಯಾಗುತ್ತೆ. ಹಣದ ವ್ಯವಹಾರ ಮಾಡಲು ಮುಂದಾಗುವ ಕೇಧಾರ್, ಪ್ರತಿ ತಿಂಗಳಿಗೆ ೯೦ ಲಕ್ಷ ಕೊಡುವಂತೆ ಬೇಡಿಕೆ ಇಡುತ್ತಾನೆ. ಇದಕ್ಕೆ ಒಪ್ಪದ ಕೋಬ್ರಾ ಪೋಸ್ಟ್‌ನವರು ೭೫ ಲಕ್ಷ ಕೊಡುವ ಮಾತುಗಳನ್ನಾಡುತ್ತಾರೆ. ಕೊನೆಗೆ ಒಂದಷ್ಟು ಚೌಕಾಸಿ ಬಳಿಕ ವ್ಯವಹಾರ ೮೦ಲಕ್ಷಕ್ಕೆ ಮುಗಿಯುತ್ತೆ. ಅದು, ಒಂಭತ್ತು ತಿಂಗಳು ಒಪ್ಪಂದದ ಜೊತೆಗೆ ಅಂದ್ರೆ ನೀವ್ ನಂಬಲೇಬೇಕು.

ಬರೀ ವಿವೇಕ್ ಓಬೆರಾಯ್ ಅಷ್ಟೇ ಅಲ್ಲ, ಸಿಕ್ಕಿ ಬಿದ್ದ ೩೬ಕ್ಕೂ ಅಧಿಕ ತಾರೆಯರದ್ದೆಲ್ಲಾ ಇದೇ ವರಸೆ. ಇನ್ನೂ ಇದೇ ಕುಟುಕು ಕಾರ್ಯಾಚರಣೆಯಲ್ಲಿ ಗಾಯಕರಾದ ಕೈಲಾಶ್ ಖೇರ್, ಅಮಿತಾಭ್ ಭಟ್ಟಾಚಾರ್ಯ, ಬಾಬಾ ಸೈಗಲ್ ಕೂಡಾ ಸಿಕ್ಕಿ ಬಿದ್ದಿದ್ದಾರೆ. ಇನ್ನೂ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯನೂ ತನ್ನ ಒಂದು ವಿಡಿಯೋ ದಶಲಕ್ಷ ಜನಕ್ಕೆ ತಲುಪುತ್ತೆ ಅನ್ನುವ ಮಾತುಗಳನ್ನಾಡ್ತಾನೇ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇನ್ನೂ ಇದೆಲ್ಲದ್ರ ನಡುವೆ, ಇನ್ನೂ ಒಂದು ಹೆಜ್ಜೆ ಮುಂದಕ್ಕೋಗಿರುವ ತಾರೆಯರು ಬರೀ ಸೊಶಿಯಲ್ ಮೀಡಿಯಾ ಫ್ಲ್ಯಾಟಫಾರ್ಮ್‌ನಲ್ಲಷ್ಟೇ ಅಲ್ಲ, ಹೋದಲ್ಲಿ ಬಂದಲ್ಲಿ.. ಕುಂತ್ರೂ, ನಿಂತ್ರೂ.. ಪಕ್ಷದ ಪ್ರಚಾರ ಮಾಡ್ತೀನಿ ಅನ್ನುವ ಉತ್ಸಾಹನೂ ತೋರಿಸಿದ್ದಾರೆ. ಇದಕ್ಕಿಂತ ಇನ್ನೊಂದು ದುರಂತ ಇನ್ನೊಂದೆಲ್ಲಿದೆ.

ಸನ್ನಿ ಲಿಯೋನ್.. ಮಾಜಿ ನೀಲಿ ತಾರೆ. ಸದ್ಯ.. ಹಿಂದಿ ಚಿತ್ರರಂಗದಲ್ಲೇ ಠಿಕಾಣಿ ಹೂಡಿರುವ ಇದೇ ಮಾದಕನಟಿಗೂ, ದುಡ್ಡೆ ಮುಖ್ಯ. ಹೌದು, ಕೋಬ್ರಾ ಪೋಸ್ಟ್ ನಡೆಸಿದ ಚುಟುಕು ಕಾರ್ಯಾಚರಣೆಯಲ್ಲಿ ಸನ್ನಿಯ ಮಾತುಗಳೂ ಶೇಮ್ ಶೇಮ್ ಅನ್ನುವಂತಿವೆ. ಅದ್ರಲ್ಲೂ ಸನ್ನಿ ಮೋದಿ ಮುಂದೆ ಇಟ್ಟ ಬೇಡಿಕೆಯನ್ನ ಕೇಳಿದ್ರಂತೂ, ಸನ್ನಿಯ ನಿಜವಾದ ಬಣ್ಣಕ್ಕೆ ನೀವೇ ಹೈರಾಣಾಗಿ ಹೋಗ್ತೀರಾ. ಪಾಪಾ.. ಸನ್ನಿ ಲೀಯೋನ್‌ಗೇನು ಗೊತ್ತಿತ್ತು. ಬಂದಿರೋದು ಮೋದಿ ಕಡೆಯ ಹುಡುಗರಲ್ಲ ಬದ್ಲಿಗೆ ತನ್ನನ್ನ ಖೆಡ್ಡಾಗೆ ಬೀಳಿಸಲು ಬಂದಿರುವ ಹುಡುಗರು ಅನ್ನೋದು. ಹಾಗಾಗಿ, ನಗು ನಗುತ್ತಾನೇ ಬಿ.ಜೆ.ಪಿ ಪರ ಪ್ರಚಾರಕ್ಕೆ ಜೈ ಅಂದ ಸನ್ನಿ, ಒಪ್ಪಿಕೊಂಡ ಮೊತ್ತ ಬರೋಬ್ಬರಿ ೭೫ಲಕ್ಷ ಅನ್ನೋದು ನಿಮ್ಮ ಗಮನಕ್ಕಿರಲಿ.

ಇನ್ನೂ ಕೋಬ್ರಾ ಪೋಸ್ಟ್ ನಡೆಸಿದ ಇದೇ ಸ್ಟಿಂಗ್ ಆಪರೇಶನ್‌ನಲ್ಲಿ ರಾಕಿ ಸಾವಂತ್, ಮತ್ತೊಂದಷ್ಟು ಭಯಾನಕ ಸಂಗತಿಗಳನ್ನೂ ಹಂಚಿಕೊಂಡಿದ್ದಾಳೆ. ಹೌದು, ಕೋಬ್ರಾ ಪೋಸ್ಟ್‌ನವರು ಭೇಟಿ ಮಾಡುವ ಮುನ್ನವೇ ರಾಕಿಗೆ ಯಾವ ಕೆಲ್ಸ ಮಾಡಬೇಕೆನ್ನುವದು ಅರ್ಥವಾಗಿತ್ತು. ಹಾಗಾಗಿ, ಕೋಬ್ರಾ ಪೋಸ್ಟ್‌ನವರು ಡೀಲ್ ಮಾಡಲು ಬಂದ ಬೆನ್ನೇಟಿಗೆ ರಾಕಿ, ತಾನು.. ಇತರಹದ ಪ್ರಚಾರ ಮೊದಲು ಮಾಡಿದ್ದೇನೆ ಅನ್ನುವ ಮಾತುಗಳನ್ನಾಡಿ ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದಾಳೆ. ನೀವ್ ಏನ್ ಹೇಳ್ತೀರಾ ಹಾಗೇ ಮಾಡ್ತೀನಿ ಅಂದಿದ್ದಾಳೆ. ಬಿ.ಜೆ.ಪಿ ಗೆಲ್ಲಿಸಲು ನಾನೋಬ್ಬಳೇ ಸಾಕು ಅನ್ನುವ ಅರ್ಥದಲ್ಲೂ ಮಾತನಾಡಿದ್ದಾಳೆ.ಕೋಬ್ರಾ ಪೋಸ್ಟ್ ನಡೆಸಿದ ಇದೇ ಚುಟುಕು ಕಾರ್ಯಾಚರಣೆಯಲ್ಲಿ, ಸೆಲೆಬ್ರೀಟಿಗಳ ನಿಯತ್ತು ಕೂಡಾ ಬದಲಾಗಿರೋದು ಮತ್ತೊಂದು ದುರಂತ.

ಹೌದು, ಸಿನಿಮಾಗಳಲ್ಲಿ.. ಮಾಧ್ಯಮದ ಎದುರು ತೆರಿಗೆ ಪಾವತಿ ಹಾಗೂ ಕಪ್ಪು ಹಣದ ಬಗ್ಗೆ ಪುಖಾಂನುಪುಂಖವಾಗಿ ಪುಂಗುವ ಇದೇ ಸೆಲೆಬ್ರೀಟಿಗಳೂ, ಕೋಬ್ರಾ ಪೋಸ್ಟ್‌ನ ಇದೇ ಸ್ಟಿಂಗ್‌ನಲ್ಲಿ ಸಂಭಾವನೆಯನ್ನ ಹಣದ ರೂಪದಲ್ಲಿ ಪಡೆಯಲು ಮುಂದಾಗಿದ್ದಾರೆ. ಇದ್ರ ಹಿಂದೆ ತೆರಿಗೆ ಪಾವತಿ ತಪ್ಪಿಸಿ, ಸರ್ಕಾರದ ಕಣ್ಣಿಗೆ ಮಣ್ಣೇರಚುವ ಉದ್ದೇಶವಷ್ಟೇ.ಹೌದು, ಅಸಲಿಗೆ ಕುಟುಕು ಕಾರ್ಯಾಚರಣೆ ಮಾಡಿದ ಕೋಬ್ರಾ ಪೋಸ್ಟ್, ಮಾತುಕಥೆಯ ನಡುವೆ ಒಂದು ಷರತ್ತು ಕೂಡಾ ಹಾಕಿದೆ. ಅದುವೇ ಶೇ ೮೦ರಷ್ಟು ಕಪ್ಪು ಹಣವನ್ನ ಕೈಗೆ ನೀಡುವದಾಗಿ ಹೇಳಿದೆ. ಶೇ ೨೦ರಷ್ಟು ಮಾತ್ರ ಹಣವನ್ನ ಬ್ಯಾಂಕಿಗೆ ವರ್ಗಾಯಿಸುವ ಮಾತುಗಳನ್ನಾಡಿದೆ. ದುರಂತ ಅಂದ್ರೆ ಕೋಬ್ರಾ ಪೋಸ್ಟ್‌ನ ಇದೇ ಷರತ್ತನ್ನ ಎಲ್ಲರೂ ಒಪ್ಪಿಕೊಂಡಿದ್ದಾರೆ. ತಲೆ ಅಲ್ಲಾಡಿಸಿ ದುಡ್ಡು ಯಾವಾಗ ಕೊಡ್ತೀರಾ ಅನ್ನುವ ಮರುಪ್ರಶ್ನೆಯನ್ನ ಉತ್ಸಾಹದಿಂದನೇ ಕೇಳಿದ್ದಾರೆ. ಅದ್ರಲ್ಲೂ ನಟಿ ಮಿನಿಶಾ ಲಾಂಬಾ ಶೇ ೨೦ರಷ್ಟು ಹಣ, ಬ್ಯಾಂಕಿಗೆ ಕೊಡುವ ಮಾತುಗಳನ್ನ ಆಡಿದಾಗ ಬೇಸರವನ್ನೇ ಮಾಡಿಕೊಂಡಿದ್ದಾರೆ.

ಆ ೨೦ರಷ್ಟು ಹಣವನ್ನೂ ನಗದು ರೂಪದಲ್ಲಿ ನೀಡಿ ಅಂದಿದ್ದಾರೆ. ಇನ್ನೂ ನೋಟು ರದ್ದತಿಯನ್ನ ಐತಿಹಾಸಿಕ ನಡೆ ಎಂದು ಹೇಳಿದ್ದ ಶಕ್ತಿ ಕಪೂರ್ ಇಲ್ಲಿ ಕಪ್ಪು ಹಣಕ್ಕಾಗಿ ಕೈ ಒಡ್ಡಿರೋದು ಮತ್ತೊಂದು ದುರಂತ.ಹಾಗಂತ, ಕೋಬ್ರಾ ಪೋಸ್ಟನ್ ಇದೇ ಚುಟುಕು ಕಾರ್ಯಾಚರಣೆಯಲ್ಲಿ ಎಲ್ಲರೂ ತಮ್ಮ ಆತ್ಮಸಾಕ್ಷಿಯನ್ನ ಮಾರಿಕೊಂಡಿದ್ದಾರೆ ಅಂತೇನಿಲ್ಲ. ಕೆಲವರು ನೇರಾ ನೇರವಾಗಿಯೇ ಬಂದಿರುವ ಆಫರ್‌ನ್ನ ತಿರಸ್ಕರಿಸಿದ್ದಾರೆ. ಆದ್ರೆ ಹೀಗೆ ತಿರಸ್ಕರಿಸಿರುವ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ. ಹೌದು, ನಟಿ ವಿದ್ಯಾ ಬಾಲನ್, ನಟ ಅರ್ಷದ್ ವಾರ್ಸಿ, ಭಾಬಿ ಘರ್ ಪೇ ಹೈ ಖ್ಯಾತಿಯ ಕಿರುತೆರೆಯ ನಟಿ ಸೌಮ್ಯ ಟಂಡನ್, ರಜಾ ಮುರಾದ್, ಕೋಬ್ರಾ ಪೋಸ್ಟ್‌ನ ಆಫರ್‌ನ್ನ ತಿರಸ್ಕರಿಸಿದ್ದಾರೆ. ಹಣದ ಆಮೀಶಕ್ಕೆ ಬಲಿಯಾಗದೇ ಯಾವ ರಾಜಕೀಯ ಪಕ್ಷದ ಪ್ರಚಾರವನ್ನೂ ನಾವ್ ಮಾಡಲ್ಲ ಅನ್ನುವ ಮಾತುಗಳನ್ನಾಡಿದ್ದಾರೆ.

ಇದೆಲ್ಲದ್ರ ನಡುವೆ.. ಕೋಬ್ರಾ ಪೋಸ್ಟನ್ ಇದೇ ಕುಟುಕು ಕಾರ್ಯಾಚರಣೆ ಬಯಲಿಗೆ ಬರ‍್ತಿದ್ದಂತೆ, ಅನೇಕರು.. ಕಾರ್ಯಾಚರಣೆಯಲ್ಲಿ ಸಿಲುಕಿದ ನಟ ಹಾಗೂ ನಟಿಯರ ರಾಷ್ಟ್ರಪ್ರೇಮವನ್ನ ಪ್ರಶ್ನೆ ಮಾಡುತ್ತಿದ್ದಾರೆ. ಈ ರೀತಿಯ ಪ್ರಚಾರಗಳಿಗೆ ಚುನಾವಣಾ ಆಯೋಗ ನಿಯಂತ್ರಣ ಹೇರಬೇಕೆನ್ನುವ ಒತ್ತಾಯವನ್ನೂ ಮಾಡ್ತಿದ್ದಾರೆ. ಅದೇನೆ ಇರ‍್ಲಿ.. ಸೆಲೆಬ್ರೀಟಿಯಾಗಿ ಸಾಮಾಜಿಕ ಜೀವನದಲ್ಲಿರುವ ನಟ, ನಟಿ, ಹಾಗೂ ಗಾಯಕರಿಗೆ, ತಮ್ಮ ಒಂದು ಕೆಟ್ಟ ನಿರ್ಧಾರ ತಮ್ಮ ಅಭಿಮಾನಿಗಳ ಮೇಲೂ ಪರಿಣಾಮ ಬೀರುತ್ತೆ ಅನ್ನುವ ಯಕಚ್ಚಿತ ಧ್ಯಾನನೂ ಇಲ್ಲದಂತಾಗಿರೋದು, ನೋಟಿಗೋಸ್ಕರ ತನ್ನ ಆತ್ಮಸಾಕ್ಷಿಯನ್ನೇ ಇವ್ರೆಲ್ಲಾ ಮಾರಿಕೊಂಡಿರೋದು ಮಾತ್ರ, ಕ್ಷಮಿಸಲು ಅಸಾಧ್ಯವಾದದ್ದು.

LEAVE A REPLY

Please enter your comment!
Please enter your name here