Home Cinema ಛೇ..ಛೇ..! ಗೂಂಡಾಗಿರಿ ನಡೆಸಿದ್ದ ನಲಪಾಡ್ಗೆ ಯಶ್ ಕುಚಿಕೂ ಸ್ನೇಹಿತ..! ಅದ್ಯಾವ ಸಂದೇಶ ಕೊಡಲು ಹೊರಟಿದ್ದಾರೆ ಯಶ್...

ಛೇ..ಛೇ..! ಗೂಂಡಾಗಿರಿ ನಡೆಸಿದ್ದ ನಲಪಾಡ್ಗೆ ಯಶ್ ಕುಚಿಕೂ ಸ್ನೇಹಿತ..! ಅದ್ಯಾವ ಸಂದೇಶ ಕೊಡಲು ಹೊರಟಿದ್ದಾರೆ ಯಶ್ ತಮ್ಮ ಭಕ್ತಗಣಕ್ಕೆ..?

2275
0
SHARE

ಯಶ್, ಸದ್ಯಕ್ಕೆ.. ಕೆ.ಜಿ.ಎಫ್ ಚಿತ್ರದ ಗೆಲುವಿನ ಸಂಭ್ರಮದಲ್ಲಿರುವ ನಟ. ಕುಂತ್ರೂ.. ನಿಂತ್ರೂ.. ಕೆ.ಜಿ.ಎಫ್‌ನ ಧ್ಯಾನವನ್ನೇ ಮಾಡ್ತಿರುವ ಯಶ್, ತಮ್ಮ ಅಭಿಮಾನಿ ಬಳಗಕ್ಕೆ.. ಹಾಗೂ ಸಮಾಜಕ್ಕೆ.. ಕೊಡಲು ಹೊರಟಿರುವ ಸಂದೇಶವಾದ್ರೂ ಏನು ಅನ್ನುವ ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡ್ತಿದೆ.

ಕಾರಣ ಯಶ್ ನಡೆ. ಹಾಗೂ ಯಶ್ ಬೆಳೆಸಿಕೊಂಡಿರುವ ಸ್ನೇಹಿತರ ಬಳಗ.ಹೌದು, ಯಶ್.. ಸುಮಾರು ಸ್ನೇಹಿತರನ್ನ ಹೊಂದಿರುವ ನಟ. ಇದು ಯಾವ ಅಪರಾಧನೂ ಅಲ್ಲ. ಆದ್ರೆ ಹೀಗೆ ಇರುವ ಸ್ನೇಹಿತರ ಪಟ್ಟಿಯಲ್ಲಿ ಪ್ರಾಮಾಣಿಕವಾಗಿ ಇರುವ, ಸಮಾಜಕ್ಕೆ ಸಹಾಯದ ಹಸ್ತ ಚಾಚುವ ಸ್ನೇಹಿತರು ಇದ್ದಾರಾ ಅಂದ್ರೆ ಅಲ್ಲಿ ಮೊದಲು ಕಾಣ್ಸೋದೇ ಶಾಂತಿನಗರದ ಶಾಸಕ ಹ್ಯಾರಿಸ್ ಪುತ್ರ ನಲಪಾಡ್. ಯಸ್, ನಲಪಾಡ್.. ಯಶ್ ಅತ್ಯಾಪ್ತ ಗೆಳೆಯ.

ಎಷ್ಟರ ಮಟ್ಟಿಗೆ ಅಂದ್ರೆ ನಲಪಾಡ್ ಹುಟ್ಟುಹಬ್ಬದ ದಿನ ಯಶ್, ತಮ್ಮ ಎಲ್ಲ ಕೆಲ್ಸಗಳನ್ನೂ ಬದಿಗೊತ್ತಿ ನಲಪಾಡ್ ಮನೆಗೆ ಹೋಗಿದ್ದಾರೆ. ಶುಭ ಕೋರಿದ್ದಾರೆ. ಸಾಲದಕ್ಕೆ ದುಬಾರಿ ಉಡುಗೊರೆಯೊಂದನ್ನೂ ಕೊಟ್ಟಿದ್ದಾರೆ. ಇದು ಇದೀಗ ಪ್ರಜ್ಞಾವಂತರ ಕಣ್ಣನ್ನೂ ಕೆಂಪಗಾಗಿಸಿದೆ.ಹೌದು, ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಬರ್ತಡೇ ವೈಭವ ಮತ್ತು ಅದಕ್ಕೆ ಸಾಥ್ ನೀಡಿದ ಯಶ್ ಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ರಂಗುರಂಗಿನ ಸುದ್ದಿಗಳೇ ಹರಿದಾಡುತ್ತಿವೆ.

ವಿದ್ವತ್ ಎಂಬಾತನ ಮೇಲೆ ಸತ್ತೇ ಹೋಗುವಂತೆ ಹಲ್ಲೆ ನಡೆಸಿ ತಿಂಗಳುಗಳ ಕಾಲ ಕಂಬಿ ಎಣಿಸಿ ಬಂದಾತ ನಲಪಾಡ್. ಈತ ಹೊರ ಬಂದಿರೋದು ಜಾಮೀನಿನ ಮೇಲೆ. ವಿದ್ವತ್ ಮೇಲಿನ ಪ್ರಕರಣವಿನ್ನೂ ವಿಚಾರಣೆಯ ಹಂತದಲ್ಲಿದೆ. ಈ ನಿಟ್ಟಿನಲ್ಲಿ ನೋಡ ಹೋದರೆ ನಲಪಾಡ್ ಈ ಪ್ರಕರಣದ ಆರೋಪಿ. ಇಂಥಾ ಆಸಾಮಿಗೆ ಬರ್ತಡೇ ವಿಶ್ ಮಾಡಿ, ದುಬಾರಿ ಗಿಫ್ಟು ಕೊಟ್ಟು ಹಾರ ತುರಾಯಿ ಹಾಕಿಸಿಕೊಂಡು ಸಂಭ್ರಮಿಸಿದ ಯಶ್ ಇದೀಗ್ ಹಲವಾರು ಪ್ರಶ್ನೆಗಳನ್ನ ಎದುರಿಸುವಂತಾಗಿದೆ.

ನಲಪಾಡ್ ಮನೆಗೇ ತೆರಳಿ ಬರ್ತಡೇ ವಿಶ್ ಮಾಡಿದ್ದಲ್ಲದೇ ದುಬಾರಿ ಬೆಲೆಯ ಮ್ಯಾಕ್ ಬುಕ್ ಅನ್ನೂ ಕೂಡಾ ಯಶ್ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದರ ಫೋಟೋಗಳೀಗ ಎಲ್ಲೆಡೆ ಇಟ್ಟಾಡುತ್ತಿದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗ ಹೊಂದಿರೋ, ಯುವ ಸಮುದಾಯಕ್ಕೆ ಮಾದರಿಯಾಗಿರಬೇಕಾದ ಯಶ್ ಈ ವರ್ತನೆ ಎಷ್ಟು ಸರಿ ಅಂತ ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ. ಓರ್ವ ಅಮಾಯಕನ ಮೇಲೆ ಸಾಯುವಂತೆ ಹಲ್ಲೆ ಮಾಡಿದ ಆರೋಪಿಯೊಬ್ಬನನ್ನು ಆಲಂಗಿಸಿಕೊಂಡ ಯಶ್ ಈ ಸಮಾಜಕ್ಕೆ, ಯುವ ಸಮುದಾಯಕ್ಕೆ ಯಾವ ಸಂದೇಶ ರವಾನಿಸುತ್ತಿದ್ದಾರೆಂಬಂಥಾ ಚರ್ಚೆಗಳೂ ನಡೆಯುತ್ತಿವೆ.

ಅದಕ್ಕೆ ಕಾರಣವಾಗಿರೋದು ನಲಪಾಡನ ನಟೋರಿಟಿ.ಈ ನಲಪಾಡ್ ಎಂಬಾತನ ಅಸಲೀ ಪ್ರವರಗಳನ್ನೊಮ್ಮೆ ಕೇಳಿದ ಮೇಲೂ ನಿಮಗೆ ಯಶ್ ಮಾಡಿದ್ದು ಸರಿ ಅನ್ನಿಸಿದರೆ ಯಾರ ಅಭ್ಯಂತರವೂ ಇಲ್ಲ. ಅದಕ್ಕೂ ಮೊದಲು ಈ ನಲಪಾಡನ ಪ್ರವರಗಳನ್ನೊಮ್ಮೆ ನೋಡಿ. ಕೇಳಿ. ಒಂದು ಕಾಲಕ್ಕೆ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಮಜ್ಜಿಗೆ ಮಾರುತ್ತಾ ನಂತರ ನಾನಾ ದಿಕ್ಕುಗಳಲ್ಲಿ ಉದ್ದಾರವಾದ ಫ್ಯಾಮಿಲಿ ಹ್ಯಾರಿಸ್ ಅವರದ್ದು.

ಇಂಥಾ ಮಜ್ಜಿಗೆ ಬೇಸಿನ ಸಾಮ್ರಾಜ್ಯದ ಮರಿ ವಾರಸೂದಾರನಾಗಿರುವ ನಲಪಾಡನ ಗೊಂಡಾಗಿರಿ ಶಾಂತಿನಗರ ಏರಿಯಾದಲ್ಲಿ ಹೊಸತೇನೂ ಅಲ್ಲ.ಅರಾಜಕತೆಯನ್ನೇ ಆಂತರ್ಯವಾಗಿಸಿಕೊಂಡು ಸಾಗಿ ಬಂದ ಹ್ಯಾರಿಸ್ ತಮ್ಮ ಮಕ್ಕಳು ಹಾದಿ ತಪ್ಪುತ್ತಿದ್ದರೂ ಅದು ತನ್ನ ಶ್ರೀಮಂತಿಕೆಯ ಟ್ರೇಡ್‌ಮಾರ್ಕು ಎಂಬಂತೆಯೇ ಸಂಭ್ರಮಿಸಿದ್ದರು.

ಶಾಂತಿನಗರ ಏರಿಯಾದಲ್ಲಿ ಪಡ್ಡೆ ಹುಡುಗರನ್ನು ಜೊತೆಯಾಗಿಸಿಕೊಂಡ ನಲಪಾಡನಿಗೆ ನಡುವಿಗೊದ್ದು ಬುದ್ಧಿ ಹೇಳಿದ್ದರೆ ಖಂಡಿತಾ ಡ್ರಗ್ಸ್ ಮಾಫಿಯಾದ ಕಿಂಗ್‌ಪಿನ್ ಆಗುವುದರಿಂದ, ಸ್ವತಃ ತಾನೇ ಡ್ರಗ್ ಅಡಿಕ್ಷನ್ನಿನ ಪರಾಕಾಷ್ಠೆ ತಲುಪೋದರಿಂದ ಖಂಡಿತಾ ಪಾರು ಮಾಡ ಬಹುದಿತ್ತು. ಈವತ್ತಿಗೆ ಶಾಂತಿನಗರ ಏರಿಯಾದಲ್ಲಿನ ಜನ ಕಂಗಾಲಾಗಿ ನಿಂತಿದ್ದಾರಲಾ..? ಅದರಿಂದಲಾದರೂ ಅವರನ್ನು ಪಾರುಗಾಣಿಸಿದ ಪುಣ್ಯ ಖಂಡಿತಾ ಹ್ಯಾರಿಸ್‌ಗೆ ಬರುತ್ತಿತ್ತು.

ಹೀಗಂತ ಖುದ್ದು ಶಾಂತಿನಗರದ ಜನರೇ ಮಾತನಾಡಿಕೊಳ್ತಾರೆ.ಇಂಥಾ ಘನ ವೃತ್ತಾಂತ ಹೊಂದಿರೋ ನಲಪಾಡನೊಂದಿಗೆ ಯಶ್ ಅವರದ್ದು ಎಂಥಾ ಸ್ನೇಹವೋ ಗೊತ್ತಿಲ್ಲ. ಅದು ಅವರ ಪರ್ಸನಲ್ ಮ್ಯಾಟರ್. ಆದರೆ ಇಂಥವರ ಜೊತೆಗಿನ ಖುಲ್ಲಂಖುಲ್ಲಾ ಸ್ನೇಹ ಯುವ ಅಭಿಮಾನಿ ಬಳಗಕ್ಕೆ ಯಾವ ಸಂದೇಶವನ್ನ ರವಾನಿಸಬಹುದೆಂಬುದು ಮಾತ್ರ ಎಲ್ಲರನ್ನೂ ಕಾಡುತ್ತಿರೋ ಧಾವಂತ.

LEAVE A REPLY

Please enter your comment!
Please enter your name here