Home Health ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲ ಇಂಥ ಸ್ಥಳ..! ಭಾರತದ ಈ ನಗರದಲ್ಲಿ ಎಲ್ಲವೂ ಅವಳಿ ಎಲ್ಲರೂ...

ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲ ಇಂಥ ಸ್ಥಳ..! ಭಾರತದ ಈ ನಗರದಲ್ಲಿ ಎಲ್ಲವೂ ಅವಳಿ ಎಲ್ಲರೂ ತ್ರಿವಳಿ..! ಇದು ವರವೋ ಶಾಪವೋ ಪ್ರಮಾದವೋ..? ಅವಳಿ- ಜವಳಿ .!

3691
0
SHARE

ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲ ಇಂಥ ಸ್ಥಳ. ಇಲ್ಲಿ   ನಡೆಯುತ್ತಿರುವ  ವೈಪರಿತ್ಯ  ಕಂಡವರು  ಶಾಕ್ ಆಗದೇ ಇರಲ್ಲ.  ಎಲ್ಲವೂ ಅವಳಿ ಎಲ್ಲರೂ ತ್ರಿವಳಿ. ನಾವು  ನೋಡುತ್ತಿರುವುದು  ಕಲ್ಪನೆಯೋ  ವಾಸ್ತವವೋ ಎನ್ನುವಷ್ಟು ಗೊಂದಲವನ್ನು   ಉಂಟು  ಮಾಡುತ್ತದೆ ಈ ಸ್ಥಳ.ಈ  ಊರಿನಲ್ಲಿ ನಂಬೋದಕ್ಕೆ ಅಸಾಧ್ಯವಾದಂತಹ ಘಟನೆಗಳು ನಡೆದಿದೆ. ಈ ಊರಿನಲ್ಲಿ ಒಬ್ಬರಂತೆ ಇನ್ನೊಬ್ಬರು ಇದ್ದಾರಂತೆ! ನಂಬೋದಕ್ಕೆ ಆಗ್ತೀಲ್ವಾ? ನಂಬಲೇ ಬೇಕು. ಯಾಕಂದ್ರೆ ಒಂದು ಮನೆಯಲ್ಲಿ ಅವಳಿ-ಜವಳಿ ನೋಡಿದ್ರೆಯೇ  ಒಂದು ರೀತಿಯ ಕೂತುಹಲವಾಗುತ್ತದೆ. ಆದ್ರೆ  ಹೀಗೆ  ಹುಡುಕಿದ್ರೆ ಈ ಊರಿನಲ್ಲಿ ಇಡೀ  ಊರಿಗೆ ಊರೇ ಈ ರೀತಿ ಅವಳಿಗಳಿಂದ ಕೂಡಿದ್ದಾರೆ.

ಇನ್ನು  ಈ ಊರಿನಲ್ಲಿ  ಜನರು ಮಾತ್ರವಲ್ಲದೇ ಇಲ್ಲಿರುವಂತಹ ಪ್ರಾಣಿಯ ಮಕ್ಕಳು ಕೂಡ ಅವಳಿ-ಜವಳಿಗಳಿವೆ. ಹೌದು ಈ ಊರಿನಲ್ಲಿರುವ ಆಕಳು ಕರು ಹಾಕಿದ್ರೂ ಅವೆಲ್ಲವೂ ಅವಳಿ-ಜವಳಿಗಳಾಗುತ್ತವೆ. ಅಷ್ಟೆಯೇಕೆ  ಈ ಊರಿಗೆ ಒಮ್ಮೆ  ಭೇಟಿ ನೀಡಲು  ಬಂದವರಿಗೆ … ಬೇರೆ ಊರಿನಿಂದ ನಲೆಕೊಂಡು ಕೊಳ್ಳುಳಲು ಬಂದವರಿಗೂ ಅವಳಿ-ಜವಳಿ ಮಕ್ಕಳಾಗಿವೆಯಂತೆ! ಎಷ್ಟೋ ಕಡೆ ಮಕ್ಕಳಿಲ್ಲ ಅಂತಾ ಅನೇಕರು ಆ ದೇವರು, ಈ ದೇವರು ಅಂತಾ ವರ್ಷಪೂರ್ತಿ ಹರಕೆ ಹೊತ್ತುಕೊಳ್ಳತ್ತಾರೆ. ಯಾವುದೇ ದೇವರ ಸನ್ನಿಧಾನವಿರಲಿ ಒಂದೂ ಬಿಡದೇ ಪೂಜಾಕೈಂಕರ್ಯ ಗೈದ್ರೂ ಕೆಲವೊಬ್ಬರಿಗೆ ಮಕ್ಕಳಾಗಲ್ಲ ! ಆದ್ರೆ ಇಲ್ಲಿ  ಮಾತ್ರ  ತದ್ವಿರುದ್ಧ.

ಬರೀ ರೂಪದಲ್ಲಷ್ಟೇ ಅಲ್ಲ,  ಹಾವ-ಭಾವದಲ್ಲಿ  , ಮಾತನಾಡುವ ಶೈಲಿಯಲ್ಲಿ   ಎಲ್ಲವೂ ಒಂದೇ ಆಗುತ್ತದೆ.  ಇಡೀ ವೈಜ್ಞಾನಿಕ ಲೋಕವೇ  ಸವಾಲ್ ಎಸೆಯುವಂತಹ ಪ್ರಸಂಗ ಇಲ್ಲಿ ನಡೆಯುತ್ತಿದೆ. ಈ ಬಗ್ಗೆ ಇಲ್ಲಿನವರೆಗೆ ಕೇಳಿದ್ರೆ ಎಲ್ಲವೂ ಆ  ದೇವರ ಲೀಲೆ  ಅನ್ತಿದ್ದಾರೆ.ಈ ವಿಚಿತ್ರ ನಡೆಯುತ್ತಿರೋದು ಯಾಕೆ ಗೊತ್ತಾಗ್ತಿಲ್ಲ.  ಇಲ್ಲಿನ ನೀರಿನಲ್ಲಿರುವ ಅಂಶವೇ ? ಹಾಲಿನಲ್ಲಿರುವ  ಅಂಶವೇ ?  ಇಲ್ಲಾ ಹವಾಗುಣದಲ್ಲಿದೆಯಾ? ಯಾಕೆ ಅವಳಿ-ಜವಳಿ ಅನ್ನೋದನ್ನು  ಆ  ದೇವರೇ ಹೇಳಬೇಕು.ಈ  ಊರು  ತುಂಬಾ  ವಿಚಿತ್ರವಾಗಿದೆ,  ಅಚ್ಚರಿಗೆ ಕಾರಣವಾಗಿದೆ.  ಇದು ದೇವರಲೀಲೆಯೇ ಅಂತಾ ಎಲ್ಲರೂ  ನಂಬಿದ್ದಾರೆ.

ಈ ಊರಿಗೆ ಹಲವು ವೈದ್ಯರು ಬಂದ್ರು, ಅನೇಕ ತತ್ಞರು ಬಂದ್ರು. ಅಷ್ಟೇಯೆಕೆ ದೂರದ ವಿದೇಶದಿಂದ ಬಂದಂತಹ ವಿಶೇಷ ತಂಡ ಇಲ್ಲಿರುವ ಜನರ ಬಗ್ಗೆ ಪರೀಕ್ಷೆ ಮಾಡಿದ್ರು ಆದ್ರೆ ಇಲ್ಲಿರುವಂತಹ ನಿಗೂಢತೆಯನ್ನ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಾಗಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂದು  ಹೇಳಿ ವಾಪಾಸ್ಸಾದ್ರು . ಮೊದಲೇ ಅವಳಿ –ಜವಳಿಯಂದ್ರೆನೇ ಕುತೂಹಲ ಅಂತಹದ್ರಲ್ಲಿ ಈ ಊರಿಗೆ ಊರೆ ಅವಳಿಗಳೆಂದ್ರೆ ನಿಜಕ್ಕೂ ವಿಶೇಷ.ಅಲಾಹಾಬಾದನನಲ್ಲಿ ಅವಳಿಮಕ್ಕಳು ಇರುವಂತೆ ಕೇರಳದಲ್ಲಿಯೂ ಅವಳಿಗಳ ಟ್ವೀನ್ಸ್ ಸಿಟಿ ಇದೆ. ಇಲ್ಲಿ ಯಾರನ್ನಾದ್ರೂ ನೋಡಿ ಅವರೆಲ್ಲರೂ ಅವಳಿಗಳಾಗಿಯೇ ಕಂಡು ಬರ್ತಾರೆ. ಆದ್ರೆ ಈ ಊರಿನಲ್ಲಿ ಒಂದು ಆತಂಕ ಎದುರಾಗಿದೆಯಂತೆ! ಇಷ್ಟೊಂದು ಅವಳಿಗಳಿಗೆ- ಅವಳಿ ಜವಳಿ ಮಕ್ಕಳಿಗೆ ಮದುವೆ ಮಾಡೋದು ಹೇಗೆ ಅನ್ನೋದು.

ಈ ಊರಿನ ಹೆಸರು ಕೇಳಿದ್ರೆ ಸಾಕು,  ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕೆಂಬ  ತುಡಿತ  ಮನದಲ್ಲಿ ಮೂಡುತ್ತದೆ. ಇಲ್ಲಿನ  ಪ್ರಕೃತಿ ಸೌಂದರ್ಯದ ಮುಂದೆ ವಿದೇಶಗಳಲ್ಲಿನ ಆಡಂಬರ ಸಪ್ಪೆ ಎನ್ನಿಸುತ್ತದೆ. ಇಲ್ಲಿನ  ಜುಳುಜುಳು ಹರಿಯುವ ನದಿ, ಎಲ್ಲಿ ನೋಡಿದ್ರಲ್ಲಿ ಹಸಿರು ತೋರಣಗಳಂತೆ ಸ್ವಾಗತ ಕೋರುವ ದಟ್ಟವಾದ ಕಾನನ ನೋಡಿದವರಲ್ಲಿ ಎಲ್ಲಿಲ್ಲದ ಆನಂದ  ತರುತ್ತದೆ. ಮದುಚಂದಿರಕ್ಕೆ ಹೋಗುವುದಾದರೂ ಇದೇ ಸ್ಥಳವನ್ನು ಜನರು ಹೆಚ್ಚು ಇಷ್ಟಪಡ್ತಾರೆ. ಇಲ್ಲಿರುವ ಗಾಳಿ, ಇಲ್ಲಿನ ಕಾಮನ ಬಿಲ್ಲಿನ ಚೆಲ್ಲಾಟವನ್ನೂ ನೋಡುತ್ತಲೇ ಇರಬೇಕೆನ್ನಿಸುತ್ತದೆ.  ಇಂತಹ ಊರಿನಲ್ಲಿ ಅವಳಿಜವಳಿಗಳ ಮಹಾಸಾಗರವೇ ಇದೆ.

ಈ ಊರಿನಲ್ಲಿ ಹೆಣ್ಣನ್ನು ಮದುವೆ ಮಾಡಿಕೊಡಲು ಜನರು ಹಿಂದೆ ಮುಂದೆ ನೋಡ್ತಾರೆ.  ಹಿಗೇಕೆ ಅಂದ್ರೆ  ಇಷ್ಟೊಂದು ಅವಳಿ-ಜವಳಿಗಳಿಗೆ ವಧುಗಳನ್ನಾ  ಎಲ್ಲಿಂದ ತರೋದು ಎಂಬ ಆಲೋಚನೆ ಇಲ್ಲಿನವರಲ್ಲಿ ಕಾಡ್ತಿದೆಯಂತೆ! ಇಲ್ಲಿಗೆ ವಿವಾಹವಾಗಿ ಬಂದವರಿಗೆ ಎದುರಾಗುವ ಮೊದಲ ಸಮಸ್ಯೆಯಂದ್ರೆ ಮಕ್ಕಳಿಗೆ ಜನ್ಮ ನೀಡೋದು.  ಅರ್ರೆ , ಮಕ್ಕಳಿಗೆ ಜನ್ಮ ನೀಡಿದ್ರೆ ಸಂತೋಷ ಪಡಬೇಕಾದ ಸಂಗತಿ. ಆದ್ರೆ ಇದು ಸಮಸ್ಯೆ ಅಂತಾ ಹೇಳ್ತೀದ್ದಾರಲ್ಲ  ಅಂತಾ ಕನಫ್ಯೂಸ್ ಆಗಬೇಡಿ. ಏಕೆಂದ್ರೆ ಇಲ್ಲಿಗೆ ಮದುವೆಯಾಗಿ ಬರುವ ದಂಪತಿಗಳಿಗೆ ಗಂಡು ಹುಟ್ಟಿತ್ತಂದ್ರೆ ಅದೇ ರೀತಿಯ ಇನ್ನೊಂದು ಮಗು ಹುಟ್ಟುತ್ತದೆ. ಹೆಣ್ಣು ಜನಿಸಿದ್ರೆ ಆ ಮಗುವಿಗೆ ಹೋಲುವಂತಹ ಹೆಣ್ಣೆ ಇಲ್ಲಿ ಜನಿಸುತ್ತದೆ.

ಹೀಗಾಗಿ  ಅವಳಿ-ಜವಳಿ  ಸಂತಾನದ ಗ್ರಾಮವೆಂದೇ ಫೆಮಸ್ ಆಗಿದೆ. ಯಾವುದೇ ಮಗುವನ್ನು ನೋಡಿದ್ರೂ ಒಂದೆ ತೆರನಾಗಿ ಕಾಣುತ್ತದೆ. ಇಲ್ಲಿನ ಜನರಿಗೆ ಇದ್ಯಾವದು ಹೊಸದು ಅನ್ನಿಸಲಾರದು. ಆದ್ರೆ ಹೊರಗಿನಿಂದ ಬರೋರಿಗೆ ಮಾತ್ರ ವಿಚಿತ್ರ ಅನ್ನಿಸದೇ ಇರಲಾರದು. ಇಡಿ ಊರಿಗೆ ಊರೆ ಅವಳಿ ಜವಳಿ ಇರೋವ ಟ್ವೀನ್ಸ್ ವಿಲೇಜ್ ನಮ್ಮ ಭಾರತದಲ್ಲಿದೆ. ಅಲಹಾಬಾದ್ ಬಿಟ್ರೆ  ಇಷ್ಟೊಂದು ಅವಳಿ ಜವಳಿಗಳು ಒಂದೆ ಕಡೆ ನೋಡಲು ಸಿಗೋದು ಈ ಟ್ವೀನ್ಸ್ ವಿಲೇಜ್ ನಲ್ಲಿ ಮಾತ್ರ.ಈ ಊರಿನ ಹೆಸರು ಕ್ಯಾಲೀಕಟ್. ಕೇರಳದಿಂದ 50 ಕೀ. ಮೀಟರ್ ಅಂತರದಲ್ಲಿದೆ. ಈ  ಊರಿನಲ್ಲಿ ಅವಳಿ-ಜವಳಿ ವಿಸ್ಮಯ ವಿಜ್ಞಾನಕ್ಕೂ ಸವಾಲಾಗಿ ಕಾಡಿದ್ದಿದೆ. ಆರತಿಗೊಬ್ಬಳು  ಮಗಳು, ಕೀರ್ತಿಗೊಬ್ಬ ಮಗ ಇರಬೇಕು ಅಂತಾರೆ.

ಆದ್ರೆ ಇಲ್ಲಿ  ಒಮ್ಮೆ  ಗಂಡು ಶಿಶು ಆದ್ರೆ, ಮುಂದಿನ ಮಕ್ಕಳೆಲ್ಲಾ  ಗಂಡಾಗಿಯೇ ಜನ್ಮಿಸತೊಡಗಿದವು. ಹೆಣ್ಣಾದ್ರೆ ಹೆಣ್ಣುಗಳದ್ದೆ ಜನನ  ಆರಂಭವಾಯ್ತು. ನಾವ್ ಇಬ್ಬರು ನಮಗೊಂದು ಎಂಬ  ಜನಸಂಖ್ಯಾ  ಸಮತೋಲನ  ಕಾನ್ಸೆಫ್ಟ್ ಗೆ ತದ್ಧವಿರುದ್ಧ  ನಡಾವಳಿ ನಡೆಯಲಾರಂಭಿಸಿತು. ಇದರಿಂದ ಕುಟುಂಬದ ಹೊಣೆಯನ್ನು  ಹೊರುವುದೇ ಬಹುದೊಡ್ಡ ವಿಷಯವಾಯಿತು . ಈ ಬಗ್ಗೆ ಪೋಷಕರಲ್ಲಿ ಅಸಮಾಧಾನ ಕಾಡಲಾರಂಭಿಸಿತು.ಇದರಿಂದ ಆತಂಕಗೊಂಡ ಕೇರಳ ಸರ್ಕಾರ, ದೇಶವಿದೇಶಗಳಿಂದ ವಿಜ್ಞಾನಿಗಳ ತಂಡವೊಂದನ್ನು ಕರೆಸಿ ಇಲ್ಲಿ ನಡೆಯುತ್ತಿರುವ ವಿಸ್ಮಯಗಳಿಗೆ ಪರಿಹಾರ ಹುಡಕಲು ಆರಂಭ ಮಾಡಿತು. ಅದಕ್ಕಾಗಿಯೇ ಇಲ್ಲಿನ ಮಣ್ಣು, ಇಲ್ಲಿನ ಗಾಳಿ, ನೀರುಗಳ  ಅಧ್ಯಯನ  ಮಾಡಲಾರಂಭಿಸಿತು. ಆದ್ರೆ ದೈವಿಶಕ್ತಿ ಮುಂದೆ ವಿಜ್ಞಾನ ತಲೆಕೆಳಗಾಯಿತು. ಯಾಕೆಂದ್ರೆ ಇಲ್ಲಿ ನಡೆಯುತ್ತಿರುವ ಅಚ್ಚರಿ ಮಾತ್ರ ವಿಜ್ಞಾನಕ್ಕೂ ಸವಾಲೇಸೆಯಿತು.

ಏನಿದೆ ಅಂತಹದ್ದು ಇಲ್ಲಿ ಅನ್ನೋದು ಮರಿಚಿಕೆಯಾದ್ರೂ ಪ್ರತಿ ತಿಂಗಳು ಮಕ್ಕಳ  ಜನನ  ಅಂಕಿ ಅಂಶಗಳು ಹೆಚ್ಚುತ್ತಲೇ ಹೊರಟಿದೆ.  ಆದ್ರೆ  ಈ ವಿಚಿತ್ರವನ್ನು ಶೋಧಿಸಲು ಯಾರೇ ಬಂದ್ರೂ ಅವರೆಲ್ಲಾ  ಕಂಡುಕೊಂಡ ಉತ್ತರ ಮಾತ್ರ ಬರೀ ಶೂನ್ಯ.ಕೇವಲ ಭಾರತ ಮಾತ್ರವಲ್ಲ ಬ್ರಾಜಿಲ್ ನಲ್ಲಿಯೂ ಇಂಥದ್ದೇ ಒಂದು ಟ್ವಿನ್ಸ್ ಟೌನ್ ಅಂತಾ ಊರಿ ಇದೆ. ಇಲ್ಲಿ 5 ಮಕ್ಕಳಲ್ಲಿ ಒಂದು ಅವಳಿಯಾಗಿರುತ್ತದೆ. ಅದೇ ಅಮೇರಿಕಾದಲ್ಲಿ  80ರಲ್ಲಿ ಒಂದು ಅವಳಿ ಮಗು ಹುಟ್ಟುತ್ತದೆ. ನೈಜೇರಿಯಾದಲ್ಲೂ ಅವಳಿಗಳ ಊರೆ ಇದೆ. ಇನ್ನೂ ಬ್ರಾಜೀನ್ ನಲ್ಲಿ ಅವಳಿ ಮಕ್ಕಳು ಹುಟ್ಟೋದಕ್ಕೆ ಜಿನ್ ನಲ್ಲಾಗುವ ವ್ಯತ್ಯಸಗಳು ಕಾರಣ ಅಂತಾ ಹೇಳ್ತಾರೆ. ಇನ್ನು ನೈಜಿರಿಯಾದಲ್ಲಿ ಆಹಾರಪದ್ಧತಿಯಿಂದ ಹೀಗೆ ಅವಳಿ ಆಗ್ತಾವೆ ಎಂದು ಹೇಳಲಾಗುತ್ತದೆ.

ಒಟ್ಟಿನಲ್ಲಿ ನೈಜೇರಿಯಾ, ಅಮೇರಿಕಾ, ಬ್ರಾಜಿಲ್, ಭಾರತದ ಇಲಹಾಬಾದ್, ಕೇರಳದಲ್ಲಿ  ಈ ರೀತಿ ಅವಳಿ-ಜವಳಿ ಕಂಡು ಬರ್ತಿರೋದು ಮಾತ್ರ ನಿಜಕ್ಕೂ ಯಾವ ಕಾರಣಕ್ಕೆ ಅನ್ನೋದು ಸ್ವಪ್ಟವಾಗಿ ತತ್ಞರಿಂದು ಹೇಳಲು ಸಾಧ್ಯವಾಗ್ತೀಲ್ಲ! ಇದಕ್ಕೆಲ್ಲಾ ದೈವಿ ಕಾರಣ ನೀಡಬೇಕಾ ಅಥವಾ ವೈಜ್ಞಾನಿಕ ನೆಲೆಗಟ್ಟಲಲ್ಲಿ ಅಧ್ಯಯನ ನಡೆಸಬೇಕಾ ಅನ್ನೊದು ಈಗಲೂ ತಿಳಿಯದಾದ ಸಂಗತಿ. ಅದೇನೆಯಿರಲಿ, ದೇವರ ಈ ಲೀಲೆ ಮುಂದೆ ಎಲ್ಲವೂ ಶೂನ್ಯವಾಗಿ ಕಾಡುತದೆ..

LEAVE A REPLY

Please enter your comment!
Please enter your name here