ಕಿಸ್ ಆಫ್ ಲವ್ ಖ್ಯಾತಿಯ ರೆಹನಾ ಫಾತಿಮಾ, ಪೊಲೀಸರ ಭದ್ರತೆಯೊಂದಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಮಾಡಲು ಇಂದು ಪ್ರಯತ್ನ ಪಟ್ಟಿದ್ದಾರೆ. ಹೆಲ್ಮೆಟ್ ಹಾಕಿಕೊಂಡು ಪೊಲೀಸ್ ಭದ್ರತೆಯೊಂದಿಗೆ ಅಯ್ಯಪ್ಪ ದರ್ಶನದ ವಿಫಲ ಯತ್ನ ಮಾಡಿದ ಬಳಿಕ, ರೆಹನಾ ಫಾತಿಮಾ, ಮಾಲೆ ಧರಿಸಿ ದರ್ಶನಕ್ಕೆ ಸಿದ್ಧವಾಗಿದ್ದ ಫೋಟೊ ತನ್ನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು…
ರೆಹನಾ ಅವರು ತೆಗೆಸಿಕೊಂಡ ಭಂಗಿಯನ್ನು ನವರಸನಾಯಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿನಾಶಕಾಲೆ ವಿಪರೀತ ಬುದ್ಧಿ ಎಂದು ಬರೆದುಕೊಂಡಿದ್ದಾರೆ. ನಟ ಜಗ್ಗೇಶ್ ತಮ್ಮ ಟಿಟ್ಟರ್ ಖಾತೆಯಲ್ಲಿ ರೆಹನಾ ಕುರಿತು ಹೀಗೆ ಬರೆದುಕೊಂಡಿದ್ದಾರೆ..ಅನ್ಯಧರ್ಮಿಯಳು ಈ ಅವತಾರದಲ್ಲಿ ಪೊಲೀಸರ ಬೆಂಗಾವಲಿನಲ್ಲಿ ಅಯ್ಯಪ್ಪನ ದರ್ಶನಮಾಡಿ ಸಾಧಿಸಿ ಬಣ್ಣದ ವೇಶತೊಟ್ಟು ಜಾಲತಾಣದಲ್ಲಿ ಹಾಕಿರುವ ಪೋಸ್ಟ್..
ಇದು ನಮ್ಮ ಸಂಪ್ರದಾಯಕ್ಕೆ ಕೊಡಲಿಪೆಟ್ಟಲ್ಲವೆ! ವಿನಾಶಕಾಲೆ ವಿಪರೀತ ಬುದ್ಧಿ!ಇಂಥವರ ಸಂತೈಸಿ ವಿಕೃತ ಆನಂದ ಪಡುತ್ತಿರುವ ಕೇರಳ ಸರ್ಕಾರ!ಬ್ರಿಟಿಷರು ಮೊಘಲ್ ಗಳಿಗೆ ಬಗ್ಗದ ಹಿಂದೂಧರ್ಮ ಇಂಥವರಿಗಾ? ಜೈಹಿಂದ್ ಎಂದು ತಮ್ಮ ಟ್ವಿಟರ್ರ್ನಲ್ಲಿ ಬರೆದುಕೊಂಡಿದ್ದಾರೆ.ಶಬರಿಮಲೆಗೆ ಮಹಿಳೆರಿಗೆ ಪ್ರವೇಶ ನೀಡಿದಕ್ಕೆ ಅಲ್ಲಿನ ಭಕ್ತರ ಆಕ್ರೋಶ ತಾರಕಕ್ಕೇರಿದೆ. ಇಂದು ಕೊಚ್ಚಿನ್ ಮೂಲದ ರೆಹೆನಾ ಹಾಗೂ ತೆಲಂಗಾಣ ಮೂಲದ ಪತ್ರಕರ್ತೆ ಕವಿತಾ ಇಬ್ಬರು ಮಹಿಳೆಯರು ಪೊಲೀಸರ ದೇವಾಲಯ ಪ್ರವೇಶಕ್ಕೆ ಮುಂದಾಗಿದ್ದರಿಂದ ಪ್ರತಿಭಟನಾಕಾರರು ಮತ್ತಷ್ಚು ಆಕ್ರೋಶ ವ್ಯಕ್ತಪಡಿಸಿದ್ರೂ,
ಈ ವೇಳೆ ಸಂಪ್ರದಾಯವಾದಿಗಳಿಗೆ ತಲೆ ಬಾಗಿದ ಕೇರಳ ಸರ್ಕಾರ ಇಬ್ಬರು ಮಹಿಳಾ ಭಕ್ತರನ್ನು ವಾಪಸ್ ಕರೆಸುವಂತೆ ಸೂಚನೆ ನೀಡಿದ ಹಿನ್ನೆಲೆ ಇಬ್ಬರನ್ನು ವಾಪಸ್ ಕರೆಸಿಕೊಳ್ಳಲಾಗಿದೆ, ಇನ್ನೂ ಒತ್ತಾಯಪೂರ್ವಕವಾಗಿ ದೇವಸ್ಥಾನ ಪ್ರವೇಶ ಬೇಡ, ಎಂದು ಮನವಿ ಮಾಡಲಾಗಿದೆ,. ಇನ್ನೂ ಮಹಿಳೆಯರ ಪ್ರವೇಶ ವಿರೋಧಿಸಿ ಶಬರಿಮಲೆಯ ಪ್ರಧಾನ ಅರ್ಚಕರು ಅಯ್ಯಪ್ಪನಿಗೆ ಪೂಜೆ ಸಹಾ ನಿಲ್ಲಿಸುವುದಾಗಿ ಹೇಳಿದ್ದಾರೆ, ಇನ್ನೂ ಈ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ ತಿರುವನಂತಪುರದಲ್ಲಿ ಸಿಪಿಎಂ ಮಹತ್ವದ ಸಭೆ ನಡೆಸಿದ್ದಾರೆ, ಸಭೆಯಲ್ಲಿ ಶಬರಿಮಲೆಯ ಸದ್ಯದ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇದೇ ವೇಳೆ ಕೇರಳ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ನಿರ್ಧಾರವನ್ನು ಮಾಡಿದೆ.