Home District ಜನಾರ್ದನ್ ರೆಡ್ಡಿಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ..!? ನಿಮ್ಮ ಸಂಸದರೇ ಬರೆದಿರೋ ಪುಸ್ತಕವನ್ನು ಓದಿ, ಜೈಲಿಗೆ ಹೋಗೋ...

ಜನಾರ್ದನ್ ರೆಡ್ಡಿಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ..!? ನಿಮ್ಮ ಸಂಸದರೇ ಬರೆದಿರೋ ಪುಸ್ತಕವನ್ನು ಓದಿ, ಜೈಲಿಗೆ ಹೋಗೋ ಪಾಪ ಏನ್ ಮಾಡಿದ್ದೀರಿ ಎಂದು ಗೊತ್ತಾಗುತ್ತೆ”…

2002
0
SHARE

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರ ಕಾವೇರತೊಡಗಿದ್ದು, ಬಿಜೆಪಿ, ಕಾಂಗ್ರೆಸ್ ಮುಖಂಡರು ವಾಕ್ಸಮರದಲ್ಲಿ ತೊಡಗಿದ್ದಾರೆ. ಜನಾರ್ದನ ರೆಡ್ಡಿಯ ಆರೋಪಕ್ಕೆ ಟ್ವೀಟ್ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ…

“ಸಿದ್ದರಾಮಯ್ಯನವರು ಅನಾವಶ್ಯಕವಾಗಿ ತನ್ನನ್ನು ನಾಲ್ಕು ವರ್ಷ ಜೈಲಿಗೆ ಹಾಕಿಸಿದ್ದರು ಎಂದು ಕಣ್ಣೀರು ಹಾಕುತ್ತಿರುವ ಜನಾರ್ದನ ರೆಡ್ಡಿಯವರೇ, ದಯವಿಟ್ಟು ನಿಮ್ಮ ಪಕ್ಷದ ಸಂಸದರೇ ಬರೆದಿದ್ದ ಈ ಪುಸ್ತಕ ಓದಿ…

ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಎಂದು ಗೊತ್ತಾಗುತ್ತೆ ಎಂದು ಸಂಸದ ಪ್ರತಾಪ್ ಸಿಂಹ ಬರೆದಿರುವ ಮೈನಿಂಗ್ ಮಾಫಿಯಾ ಪುಸ್ತಕದ ಮುಖಪುಟ ಟ್ಯಾಗ್ ಮಾಡಿ ಟಾಂಗ್ ನೀಡಿದ್ದಾರೆ…

ಸಿದ್ದರಾಮಯ್ಯನವರು ತನ್ನ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇಲ್ಲ,ಸಲ್ಲದ ಆರೋಪ ಮಾಡಿ ಜೈಲಿಗೆ ಕಳುಹಿಸಿ ನನ್ನ ಅಮೂಲ್ಯವಾದ ನಾಲ್ಕು ವರ್ಷಗಳನ್ನು ಹಾಳು ಮಾಡಿದ್ದರು. ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯನವರು ಸಾಧಿಸಿದ್ದಾದರೂ ಏನು ಎಂದು ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದರು…

 

LEAVE A REPLY

Please enter your comment!
Please enter your name here