Home District ಜನಾರ್ದನ್ ರೆಡ್ಡಿಗೆ ಶಾಕ್ ಕೊಟ್ಟ BSY..?! ಸಿದ್ದರಾಮಯ್ಯರನ್ನು ಕ್ಷಮೆಯಾಚಿಸಬೇಕೆಂದು ರೆಡ್ಡಿಗೆ BSY ಆಗ್ರಹ..!

ಜನಾರ್ದನ್ ರೆಡ್ಡಿಗೆ ಶಾಕ್ ಕೊಟ್ಟ BSY..?! ಸಿದ್ದರಾಮಯ್ಯರನ್ನು ಕ್ಷಮೆಯಾಚಿಸಬೇಕೆಂದು ರೆಡ್ಡಿಗೆ BSY ಆಗ್ರಹ..!

677
0
SHARE

ಸಿದ್ದರಾಮಯ್ಯನ ಮಗನ ಸಾವು ಕುರಿತು ಹೇಳಿಕೆ ನೀಡಿರುವ ಜನಾರ್ದನ ರೆಡ್ಡಿ ವಿರುದ್ಧ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಜನಾರ್ದನ ರೆಡ್ಡಿ ಹೇಳಿಕೆಗೆ ಶೋಭೆ ತರೋದಿಲ್ಲ… ಅವರ ಹೇಳಿಕೆಯನ್ನು ಖಂಡಿಸುತ್ತೇನೆ.

ಏನೇ ಆದ್ರೂ ಜನಾರ್ದನ ರೆಡ್ಡಿ ಸಿದ್ದರಾಮಯ್ಯರಿಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಶಾಸಕ ಶ್ರೀರಾಮುಲು ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರೂ ಸಹ ಹಗುರವಾಗಿ ಮಾತನಾಡೋದನ್ನ ನಿಲ್ಲಿಸಬೇಕೆಂದು ಯಡಿಯೂರಪ್ಪ ಹೇಳಿದ್ದಾರೆ.ಸಿದ್ದರಾಮಯ್ಯ ಕುಟುಂಬದ ವಿಚಾರದ ಬಗ್ಗೆ ಜನಾರ್ದನ ರೆಡ್ಡಿ ಮಾತನಾಡಿರುವುದು ತಪ್ಪು,

ಇದು ಅವರಿಗೆ ಶೋಭೆ ತರುವಂತದ್ದಲ್ಲ ಕೂಡಲೇ ಸಿದ್ದರಾಮಯ್ಯ ಅವರ ಬಳಿ ಕ್ಷಮೆ ಯಾಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ರಾಜಕೀಯದಲ್ಲಿ ಮೌಲ್ಯಯುತ ಚರ್ಚೆ ನಡೆಯಬೇಕೇ ಹೊರತು ವೈಯಕ್ತಿಕ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಬಾರದು ಮಾಜಿ ಡಿಸಿಎಂ ಆಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೊಂದೆಡೆ, ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ಸಚಿವ ದೇಶಪಾಂಡೆ, ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ, ಸುರೇಶ್ ಕುಮಾರ್ ಸೇರಿದಂತೆ ಹಲವು ನಾಯಕರು ರೆಡ್ಡಿ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದಾರೆ… ಚುನಾವಣೆಯಲ್ಲಿ ಅದರಲ್ಲೂ ಬಳ್ಳಾರಿ ಫಲಿತಾಂಶದ ಮೇಲೆ ರೆಡ್ಡಿ ಹೇಳಿಕೆ ಪರಿಣಾಮ ಬೀರುವ ಸಾಧ್ಯತೆ ಇದೆ.. ಇದನ್ನು ಮನಗಂಡಂತೆ ಕಾಣುವ ಬಿಜೆಪಿ ನಾಯಕರು ಇದೀಗ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ…

LEAVE A REPLY

Please enter your comment!
Please enter your name here