Home Crime ಜನಾರ್ದನ ರೆಡ್ಡಿಗೆ ಮತ್ತೆ ಬಂಧನ ಭೀತಿ..!? ಗಣಿಧಣಿಗಾಗಿ ಸಿಸಿಬಿ ಪೊಲೀಸರ ಜಾಲ..! ಸಾರ್ವಜನಿಕರಿಗೆ ವಂಚಿಸಿದ ಕಂಪನಿ...

ಜನಾರ್ದನ ರೆಡ್ಡಿಗೆ ಮತ್ತೆ ಬಂಧನ ಭೀತಿ..!? ಗಣಿಧಣಿಗಾಗಿ ಸಿಸಿಬಿ ಪೊಲೀಸರ ಜಾಲ..! ಸಾರ್ವಜನಿಕರಿಗೆ ವಂಚಿಸಿದ ಕಂಪನಿ ಜೊತೆ ಕೈಜೋಡಿಸಿದ ಆರೋಪ…

1501
0
SHARE

ಮಾಜಿ ಸಜಿವ ಜನಾರ್ದನ ರೆಡ್ಡಿಗಾಗಿ ಬೆಂಗಳೂರಿನ ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ ವಂಚಿಸಿದ ಕಂಪನಿ ಜೊತೆ ಕೈಜೋಡಿಸಿದ ಆರೋಪದಡಿ ಜನಾರ್ದನ ರೆಡ್ಡಿಯನ್ನು ವಶಕ್ಕೆ ಪಡೆಯಲು ಜಾಲ ಬೀಸಿದ್ದಾರೆ. ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ರೆಡ್ಡಿಗಾಗಿ ಶೋಧ ನಡೆಸಲಾಗುತ್ತಿದೆ.

ರೆಡ್ಡಿ ಆಪ್ತ ಅಲಿಖಾನ್‌ಗೂ ಕೂಡ ಹುಟುಕಾಟ ನಡೆಸಲಾಗುತ್ತಿದೆ. ಬೆಂಗಳೂರು, ಹೈದ್ರಾಬಾದ್, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ರೆಡ್ಡಿಗಾಗಿ ಶೋಧ ನಡೆಸಲಾಗುತ್ತಿದೆ. ರೆಡ್ಡಿ ಈಗ ಸಂಪರ್ಕಕ್ಕೂ ಕೂಡ ಸಿಗುತ್ತಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ.

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯಿಂದ ಅಂತರ ಕಾಯ್ದುಕೊಳ್ಳುವಂತೆ ಬಿಜೆಪಿ ಹೈ ಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಬಳ್ಳಾರಿ ಉಪಚುನಾವಣೆ ಸೋಲಿಗೆ ಜನಾರ್ದನ ರೆಡ್ಡಿಯೇ ಕಾರಣ ಎಂದು ಹೈ ಕಮಾಂಡ್ ಗೆ ವರದಿ ನೀಡಿರುವ ಬಿಜೆಪಿ ಚುನಾವಣಾ ವೀಕ್ಷಕರು.

ಉಪಚುನಾವಣೆ ಬಳಿಕ ಆಪರೇಷನ್ ಕಮಲ ನಡೆಸಿ, ಕನಿಷ್ಟ 18 ಶಾಸಕರನ್ನು ಬಿಜೆಪಿಗೆ ಸೆಳೆಯುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಭರವಸೆ ನೀಡಿದ್ದ ಜನಾರ್ದನ ರೆಡ್ಡಿ. ಇದರಿಂದಾಗಿ ಬಿಜೆಪಿ ವರಿಷ್ಟರ ಎಚ್ಚರಿಕೆಯನ್ನೂ ಕಡೆಗಣಿಸಿ ಉಪಚುನಾವಣೆಯಲ್ಲಿ ಜನಾರ್ದನ ರೆಡ್ಡಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.

ಉಪಚುನಾವಣೆಯಲ್ಲಿ ಫಲಿತಾಂಶ ಉಲ್ಟಾ ಆಗುತ್ತಿದ್ದಂತೆಯೇ ಜನಾರ್ದನ ರೆಡ್ಡಿಯವರ ಆಪರೇಷನ್ ಕಮಲದ ತಂತ್ರವೂ ಉಲ್ಟಾ ಹೊಡೆದಿದೆ. ಮಾತುಕತೆಗೆ ಸಿದ್ದರಾಗಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ಹಿಂದೆ ಸರಿದಿದ್ದಾರೆ.ಇದು ಯಡಿಯೂರಪ್ಪನವರನ್ನೂ ಕೆರಳಿಸಿದೆ. ಅದೇ ಸಂದರ್ಭದಲ್ಲಿ ರಾಜ್ಯ ಚುನಾವಣಾ ವೀಕ್ಷಕರಿಂದ ವರದಿ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಜನಾರ್ದನ ರೆಡ್ಡಿಯಿಂದ ಅಂತರ ಕಾಯ್ದುಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here