Home District “ಜನಾರ್ದನ ರೆಡ್ಡಿ ಕುಟುಂಬ ರಕ್ಷಣೆಗೆ ನಿಂತಿರೋ ಮೋದಿ”? ಲೋಕಸಭೆಯಲ್ಲಿ ಗಾಲಿ ಜರ್ನಾದನ್ ರೆಡ್ಡಿ ಭ್ರಷ್ಟಾಚಾರ ಪ್ರಸ್ತಾಪ…

“ಜನಾರ್ದನ ರೆಡ್ಡಿ ಕುಟುಂಬ ರಕ್ಷಣೆಗೆ ನಿಂತಿರೋ ಮೋದಿ”? ಲೋಕಸಭೆಯಲ್ಲಿ ಗಾಲಿ ಜರ್ನಾದನ್ ರೆಡ್ಡಿ ಭ್ರಷ್ಟಾಚಾರ ಪ್ರಸ್ತಾಪ…

302
0
SHARE

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆಯಲ್ಲಿ ಭಾಗವಹಿಸಿದ್ದ ತೆಲುಗುದೇಶಂ ಪಾರ್ಟಿ ಸಂಸದ ಗಲ್ಲಾ ಜಯದೇವ ಮಾತನಾಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಗ್ಗೆ ಪ್ರಸ್ತಾಪಿಸಿದರು. ಬಿಜೆಪಿಯು ಗಾಲಿ ಜನಾರ್ದನ ರೆಡ್ಡಿ ಕುಟುಂಬ ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು. ಜನಾರ್ದನ ರೆಡ್ಡಿ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ…

ಅಂತವರ ರಕ್ಷಣೆಗೆ ನೀವು ನಿಂತಿದ್ದೀರಿ ಎಂದು ಮೋದಿ ವಿರುದ್ಧ ಗಲ್ಲಾ ಆರೋಪಿಸಿದರು. ಸರ್ಕಾರ ಸರ್ಕಾರ ಹಿತವರನ್ನು ಮಾತ್ರ ಕಾಯುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವವರ ಪರ ನಿಂತಿದೆ ಎಂದು ಗುಡುಗಿದರು. ನೀವು ಸೀಮಾಂಧ್ರವನ್ನು ಸ್ಕ್ಯಾಮ್ ಆಂದ್ರ ಎಂದು ಟೀಕಿಸಿದಿರಿ…

ಆದ್ರೆ, ನೀವೇಕೆ ಜನಾರ್ದನ ರೆಡ್ಡಿ ಪರ ನಿಂತಿದ್ರಿ ಎಂದು ಪ್ರಶ್ನಿಸಿದರು. ಲೋಕಸಭೆಯಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಣ್ಣೀರು ಹಾಕಿದ ವಿಚಾರ ಪ್ರಸ್ತಾಪವಾಯ್ತು. ಮಧ್ಯಪ್ರದೇಶದ ಎಂ.ಪಿ.ರಾಕೇಶ್ ಸಿಂಗ್ ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ…

ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ್ದನ್ನ ಇಡೀ ದೇಶವೇ ನೋಡಿದೆ.ನಿಮ್ಮ ಜೊತೆ ಸಹವಾಸ ಮಾಡಿದವರು ಕಣ್ಣೀರು ಹಾಕಿದ್ದಾರೆ. ಕಾಂಗ್ರೆಸ್ ಜೊತೆಗೂಡಿ ಇನ್ನೆಷ್ಟು ಪಕ್ಷಗಳು ವಿಷ ಕುಡಿಯಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ…

LEAVE A REPLY

Please enter your comment!
Please enter your name here