Home Crime ರೆಡ್ಡಿ ಟೀಂ ವಿರುದ್ಧ ಕಾಂಗ್ರೆಸ್ ವೀಡಿಯೋ ರಿಲೀಸ್…ಭ್ರಷ್ಟಾಚಾರ ಮುಕ್ತ ಪಕ್ಷದಲ್ಲಿ ಭಾರೀ ಭ್ರಷ್ಟಾಚಾರ..!! ಓಬಳಾಪುರಂ ಪರ...

ರೆಡ್ಡಿ ಟೀಂ ವಿರುದ್ಧ ಕಾಂಗ್ರೆಸ್ ವೀಡಿಯೋ ರಿಲೀಸ್…ಭ್ರಷ್ಟಾಚಾರ ಮುಕ್ತ ಪಕ್ಷದಲ್ಲಿ ಭಾರೀ ಭ್ರಷ್ಟಾಚಾರ..!! ಓಬಳಾಪುರಂ ಪರ ತೀರ್ಪಿಗೆ ಸಿಜೆಐಗೆ 160 ಕೋಟಿ ಡೀಲ್..?

1883
0
SHARE

ಓಬಳಾಪುರಂ ಮೈನಿಂಗ್ ಕಂಪನಿ ನಿಲ್ಲಿಸುವಂತೆ ಆಂಧ್ರಪ್ರದೇಶ ಸರ್ಕಾರ ಹೊರಡಿಸಿದ್ದ ಆದೇಶಕ್ಕ ಹೈಕೋರ್ಟ್ ನೀಡಿದ್ದ ತಡೆ ಆದೇಶವನ್ನು ಎತ್ತಿಹಿಡಿಯಲು ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನೇ 160 ಕೋಟಿಗೆ ಡೀಲ್ ಮಾಡಿಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ…

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಓಬಳಾಪುರಂ ಮೈನಿಂಗ್ ಕಂಪನಿ ನಿಲ್ಲಿಸಲು ಆಂಧ್ರಪ್ರದೇಶ ಸರ್ಕಾರ ನೀಡಿದ್ದ ಆದೇಶಕ್ಕೆಅಲ್ಲಿನ ಹೈಕೋರ್ಟ್ ಗೆ ಹೋಗಿ ತಡೆ ತಂದಿದ್ದರು, ನಂತರ ಅಲ್ಲಿನ ಸರ್ಕಾರ ಸುಪ್ರೀಂ ಮೊರೆ ಹೋಗಿತ್ತು. ಆದರೆ ಅಂದಿನ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿಗೂ ಒಂದು ದಿನ ಮೊದಲು ಹೈಕೋರ್ಟ್ ಆದೇಶ ಎತ್ತಿಹಿಡಿದು ಆದೇಶ ಹೊರಡಿಸಿದ್ದರು,ಆದರೆ ಇದರ ಹಿಂದ ಡೀಲಿಂಗ್ ನಡೆದಿದೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ ಎಂದರು…
ಸುಪ್ರೀಂ ಕೋರ್ಟ್ ಈ ರೀತಿ ಆದೇಶ ನೀಡಲು ಮೂರು ತಿಂಗಳು ಚರ್ಚೆ ನಡೆದಿದೆ, ಅಂದಿನ‌ ಸಚಿವ ಶ್ರೀ ರಾಮುಲು ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ, ಅಧಿಕೃತ ನಿವಾಸದಲ್ಲೇ ಈ ಡೀಲ್ ನಡೆದಿದೆ, ಶ್ರೀರಾಮುಲು, ಸಿಜೆಐ ಬಾಲಕೃಷ್ಣ ಅವರ ಅಳಿಯ, ಸ್ವಾಮೀಜಿ, ಹಾಗು ಮಧ್ಯವರ್ತಿ ಪುಬಾಲನ್ ಮಾತುಕತೆ ವೀಡಿಯೋ ಬಹಿರಂಗವಾಗಿದೆ.ಹೈಕೋರ್ಟ್ ತೀರ್ಪು ಎತ್ತಿಹಿಡಿಯಲು 160 ಕೋಟಿಗೆ ಡೀಲ್ ಮಾಡಿಕೊಂಡಿದ್ದಾರೆ ಎಂದು ವೀಡಿಯೋ ರಿಲೀಸ್ ಮಾಡಿ ಆರೋಪ ಮಾಡಿದರು…

ನಮಗೆ ಪೂರ್ತಿ ಹಣ ಸಿಕ್ಕಿಲ್ಲ, ನೂರು ಕೋಟಿ ಸಿಕ್ಕಿದೆ, ಇನ್ನೂ ಅರವತ್ತು ಕೋಟಿ ಸಿಕ್ಕಿಲ್ಲ ಎಂದು ಸಿಜೆಐ ಅಳಿಯ ಹೇಳುತ್ತಿದ್ದರೆ ಪೂರ್ತಿ ಕೊಟ್ಟಿದ್ದೇವೆ, ನಿಮಗೆ ಏಕೆ ತಲುಪಿಲ್ಲ ಗೊತ್ತಾಗುತ್ತಿಲ್ಲ ಎಂದು ರೆಡ್ಡಿ ಹೇಳುತ್ತಿದ್ದಾರೆ.ಇದಕ್ಕೆ ಪ್ರತಿಯಾಗಿ ನಮ್ಮ ಮಾವ ನಿವೃತ್ತಿಯಾದರೂ ಈಗಲೂ ನಿಮ್ಮನ್ನು ಫಿಕ್ಸ್ ಮಾಡುತ್ತೇವೆ, ನ್ಯಾಯಮೂರ್ತಿಗಳು ಪರಿಚಯ ಇದ್ದಾರೆ ಎಂದು ಹೇಳಿಕೆ ನೀಡಿರುವ ವೀಡಿಯೋ ಇದೆ.ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ…

ನೂರು ಕೋಟಿಯಲ್ಲಿ ಮಧ್ಯವರ್ತಿ ಕ್ಯಾ.ರೆಡ್ಡಿ ಅವರು ಬಿನ್ನಿ ಅವರಿಗೆ 60 ಕೋಟಿ, 40 ಕೋಟಿ ಶ್ರೀನಿಜನ್ ಗೆ ಕೊಟ್ಟಿದ್ದಾರೆ ಎನ್ನವ ಮಾತು ಆಡಿಯೋದಲ್ಲಿ ಇದೆ, ಇದರ ಬಗ್ಗೆ ತನಿಖೆ ನಡೆಯಬೇಕು, ದೊಡ್ಡ ಮಟ್ಟದ ತನಿಖೆ ನಡೆಯಬೇಕು, ಭ್ರಷ್ಟಾಚಾರ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.ಬಿಜೆಪಿಯವರದ್ದು ಭ್ರಷ್ಟಾಚಾರದ ಮುಖ ಪ್ರಧಾನಿ ಮೋದಿ,ಶಾ ಭ್ರಷ್ಟಾಚಾರಿಗಳ ರಕ್ಷಣೆ ಮಾಡುತ್ತಿದ್ದಾರೆ, ಸಿಬಿಐ ಖುಲಾಸೆ ಮಾಡಿಸುತ್ತಿದ್ದಾರೆ…

ಸುಪ್ರೀಂ ಜಡ್ಜ್ ಗಳೇ ಬೀದಿಗೆ ಬಂದು ಅಸಮಧಾನ ವ್ಯಕ್ತಪಡಿಸುವ ಸ್ಥಿತಿ ಎದುರಾಗಿದೆ. ಎಲ್ಲವನ್ನೂ ನಿಯಂತ್ರಿಸಿ ಸರ್ವಾಧಿಕಾರಿಯಂತೆ ಮೋದಿ,ಶಾ ನಡೆದುಕೊಳ್ಳುತ್ತಿದ್ದಾರೆ. ತಮಗೆ ಆಗದವರ ವಿರುದ್ಧ ಕೇಸು, ಐಟಿ ದಾಳಿ, ಮಾಧ್ಯಮಗಳ ವಿರುದ್ಧವೂ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಟೀಕಿಸಿದರು. ಮಾಫಿಯಾ ರಾಜಕಾರಣ ರೀತಿ ಆಗಿದೆ,ದೇಶವನ್ನು ಡಾನ್ ರೀತಿ ಮೋದಿ ನಡೆಸುತ್ತಿದ್ದಾರೆ, ಈಗಲಾದರೂ ಬಿಜೆಪಿ ಕ್ರಮ ಕೈಗೊಳ್ಳುತ್ತದೆಯಾ, ಚುನಾವಣಾ ಕಣದಿಂದ ಅಭ್ಯರ್ಥಿಯನ್ನು ಹಿಂದೆ ಪಡೆಯುತ್ತದಾ..?

ಕೇವಲ ಭಾಷಣ ಮಾಡಲು ಪಿಎಂ ಆಗಬಾರದು,ಈ ವಿಚಾರದಲ್ಲಿ ನಿಮ್ಮ ಪ್ರತಿಕ್ರಿಯೆ ಏನು? ಇಂದೇ ಕ್ರಮದ ಬಗ್ಗೆ ಮೋದಿ‌ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದರು.ಇಷ್ಟಾದರೂ ರಾಮುಲು ಎರಡು ಕಡೆ ಸ್ಪರ್ಧೆ ಮಾಡಿದ್ದಾರೆ, ನೈತಿಕತೆಯ ಅಧಃಪತನಕ್ಕೆ ಇವರು ಹೋಗಿದ್ದಾರೆ.ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೀವು ಇದಕ್ಕೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು…

LEAVE A REPLY

Please enter your comment!
Please enter your name here