Home Crime ಜಮೀನು ವಿಚಾರಕ್ಕೆ ಹೆತ್ತತಾಯಿಯನ್ನೇ ಕೊಂದ ಮಗ…! ಉಸಿರುಗಟ್ಟಿ ಸಾಯಿಸಿ,ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಪಾಪಿ…!

ಜಮೀನು ವಿಚಾರಕ್ಕೆ ಹೆತ್ತತಾಯಿಯನ್ನೇ ಕೊಂದ ಮಗ…! ಉಸಿರುಗಟ್ಟಿ ಸಾಯಿಸಿ,ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಪಾಪಿ…!

282
0
SHARE

ಜಮೀನು ವಿಚಾರಕ್ಕೆ ಮಗನಿಂದಲೇ ಮೃತಪಟ್ಟ ನತದೃಷ್ಟ ತಾಯಿ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ಸಂಭವಿಸಿರುವ ಘಟನೆ ಇದು. 15ಗುಂಟೆ ಜಮೀನು ವಿಚಾರವಾಗಿ ನಾಗಮ್ಮನನ್ನ ಪಾಪಿ ಮಗ ಸುರೇಶ್ ಬೆಡ್ ಶೀಟ್ ನಿಂದ ಉಸಿರುಗಟ್ಟಿಸಿ ಸಾಯಿಸಿ, ನಂತ್ರ ಮನೆಯ ಹಿಂಭಾಗದಲ್ಲಿದ್ದ ಶೌಚಾಲಯ ಗುಂಡಿ ಒಳಗೆ ಹಾಕಿ ನಂತ್ರ ಅದನ್ನ ಮುಚ್ಚಿದ್ದಾನೆ.

ಬಳಿಕ ಏನೂ ಗೊತ್ತಿಲ್ಲದಂತೆ ವರ್ತಿಸಿದ್ದಾನೆ. ಜುಲೈ 26ರಂದು ಈ ಪ್ರಕರಣ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.ಅಂದಹಾಗೆ, ಮೃತ ನಾಗಮ್ಮನಿಗೆ ಮೂವರು ಮಕ್ಕಳು…. ಅದರಲ್ಲಿ ಕೊಲೆ ಮಾಡಿರುವ ಸುರೇಶ್ ಮೊದಲನೇ ಮಗ… ಗ್ರಾಮದಲ್ಲಿಯೇ ಮಟನ್ ಶಾಪ್ ಇಟ್ಟುಕೊಂಡಿದ್ದ ಸುರೇಶ್ ಸಾಕಷ್ಟು ಸಾಲ ಮಾಡಿಕೊಂಡಿದ್ದ. ತಾಯಿಯ ಹೆಸರಿನಲ್ಲಿದ್ದ 15ಗುಂಟೆ ಜಮೀನನ್ನ ಬರೆದುಕೊಡುವಂತೆ ಕೇಳಿದ್ದಾನೆ.

ಅಲ್ಲದೇ, ನಾಗಮ್ಮಳಿಗೆ ಪ್ರಧಾನಮಂತ್ರಿ ಆವಾಜ್ ಯೋಜನೆ ಅಡಿ ಹಣ ಕೂಡಾ ಬಂದಿತ್ತು.ಆ ಹಣವನ್ನೂ ಕೊಡುವಂತೆ ಪೀಡಿಸಿದ್ದಾನೆ. ಆದ್ರೆ, ನಾಗಮ್ಮ ನಿರಾಕರಿಸಿದ್ದಾರೆ. ಹೀಗಾಗಿ ಜುಲೈ 26ರಂದು ನಾಗಮ್ಮಳ್ಳನ್ನ ಪುಸಲಾಯಿಸಿ, ಮಗಳ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ವಾಪಸ್​ ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಮನೆಗೆ ಕರೆದುಕೊಂಡು ಬಂದಿದ್ದಾನೆ.

ಈ ವೇಳೆ ಮನೆಯಲ್ಲಿದ್ದ ಬೆಡ್ ಶೀಟ್ ನಿಂದ ಉಸಿರುಗಟ್ಟಿಸಿ ಸಾಯಿಸಿ, ನಂತರ ಶೌಚಾಲಯ ಗುಂಡಿಯಲ್ಲಿ ಹಾಕಿ ಏನು ಗೊತ್ತಿಲ್ಲದ ರೀತಿಯಲ್ಲಿ ನಟಿಸಿದ್ದಾನೆ. ನಂತರ 2 ದಿನಗಳು ನಾಗಮ್ಮ ಕಾಣದಿದ್ದಾಗ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ತಾನೆ ಎಂ.ಕೆ.ಪೊಲೀಸ್ ಠಾಣೆಯಲ್ಲಿ ತಾಯಿ ನಾಪತ್ತೆಯಾಗಿರುವ ಬಗ್ಗೆ ದೂರು ಸಹ ನೀಡಿದ್ದಾನೆ.ಆದ್ರೆ, ಈತನ ನಡವಳಿಕೆಯಿಂದ ಅನುಮಾನಗೊಂಡ ಸಂಬಂಧಿಕರು, ಸುರೇಶ್‌ನ ಪುಸಲಾಯಿಸಿ ಕೇಳಿದಾಗ ನಡೆದ ಘಟನೆಯನ್ನೆಲ್ಲಾ ತಿಳಿಸಿದ್ದಾನೆ.

ಈ ವಿಚಾರವನ್ನ ಪೊಲೀಸರಿಗೆ ಸಂಬಂಧಿಕರು ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಎಂ.ಕೆ.ದೊಡ್ಡಿ ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸಿ ಆರೋಪಿಯನ್ನ ವಶಕ್ಕೆ ಪಡೆದು, ತಹಶೀಲ್ದಾರ್ ಸಮ್ಮುಖದಲ್ಲಿ ಶೌಚಾಲಯದಿಂದ ಮೃತದೇಹವನ್ನ ಹೊರ ತೆಗೆದಿದ್ದಾರೆ.ಒಟ್ಟಾರೆ ಜಮೀನು ವಿಚಾರವಾಗಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ್ದಾನೆ ಈ ವಿಚಾರ ಗ್ರಾಮಸ್ಥರ ಆಕ್ರೋಶಕ್ಕೂ ಕೂಡಾ ಕಾರಣವಾಗಿದೆ.

LEAVE A REPLY

Please enter your comment!
Please enter your name here